ಫ್ಯಾಕ್ಟ್ಚೆಕ್: ಜಪಾನ್ನಲ್ಲಿ ಜನವರಿ ಒಂದರಂದು ಸುನಾಮಿ ಸಂಭವಿಸಿದೆ ಎಂಬ ಸುದ್ದಿಯ ಅಸಲಿಯತ್ತೇನು?
ಜಪಾನ್ನಲ್ಲಿ ಜನವರಿ ಒಂದರಂದು ಸುನಾಮಿ ಸಂಭವಿಸಿದೆ ಎಂಬ ಸುದ್ದಿಯ ಅಸಲಿಯತ್ತೇನು?
Claim :
ವೈರಲ್ ಆದ ವಿಡಿಯೋ ಜನವರಿ ಒಂದರಂದು ಜಪಾನ್ನಲ್ಲಿ ಸುನಾಮಿ ಸಂಭವಿಸಿದೆ.Fact :
ವೈರಲ್ ಆದ ವಿಡಿಯೋ ಇತ್ತೀಚಿನಿದಲ್ಲ, ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ.
ಈ ವರ್ಷ ಅಂದರೆ 2024, ಜನವರಿ 1ರಂದು ಜಪಾನ್ನಲ್ಲಿ ಸರಣ ಭೂಕಂಪ ಸಂಭವಿಸಿದೆ. ಭೂಕಂಪದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಹಾಗೂ ಬಹಳಷ್ಟು ಕಟ್ಟಡಗಳು ನೆಲಸಮಗೊಂಡಿದ್ದವು. ಜೊತೆಗೆ ವಿದ್ಯುತ್ ಸಂಪರ್ಕವೂ ಲಭ್ಯವಿಲ್ಲ. ಜಪಾನಿನ ಸೂಕ್ಷ್ಮ ಪ್ರದೇಶಗಳಲ್ಲಿ ಸುಮಾರು 3 ಮೀಟರ್ರಷ್ಟು ಅಲೆಗಳು ಅಪ್ಪಲಿಸುವ ಸಾಧ್ಯತೆಯಿದೆ ಎಂದು ವರದಿಗಲು ಹೇಳಿವೆ.
ವೈರಲ್ ಆದ ವಿಡಿಯೋದಲ್ಲಿ ಜಪಾನ್ನಲ್ಲಿ ಜನವರಿ 1,2024ರಂದು ಸುನಾಮಿ ಸಂಭವಿಸಿದ. ವಿಡಿಯೋದಲ್ಲಿ ಸಮುದ್ರದ ಅಲೆಗಳಿಗೆ ಕೊಚ್ಚಿ ಹೋಗುತ್ತಿರುವ ಗುಡಿಸಲುಗಳನ್ನು ನಾವು ನೋಡಬಹುದು. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫ್ಯಾಕ್ಟ್ಚೆಕ್
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ಜಪಾನ್ನಲ್ಲಿ ಇತ್ತೀಚಿಗೆ ಯಾವುದೇ ಸುನಾಮಿ ಸಂಭವಿಸಿಲ್ಲ. ವೈರಲ್ ಆದ ವಿಡಿಯೋದಲ್ಲಿ ಕಂಡುಬರುವ ದೃಶ್ಯ ಹಳೆಯದ್ದು.
ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಮಶವನ್ನು ತಿಳಿಯಲು ನಾವು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೇಮ್ಗಳನ್ನು ಬಳಸಿ ಮೂರರಿಂದ ನಾಲ್ಕು ಚಿತ್ರಗಳನ್ನು ಉಪಯೋಗಿಸಿಕೊಂಡು ಹುಡುಕಾಟ ನಡೆಸಿದೆವು.
ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ನಮಗೆ ಈ ವಿಡಿಯೋ 2011ರಲ್ಲಿ ಜಪಾನ್ನಲ್ಲಿ ಸಂಭವಿಸಿದಂತಹ ಸುನಾಮಿಯ ವಿಡಿಯೋವನ್ನು ತೋರಿಸಲಾಗಿದೆ. ಇಂಪ್ಯಾಕ್ಟೋ ಮರೆನೋ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಮಾರ್ಚ್ 29,2011ರಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋವೊಂದು ಕಂಡುಬಂದಿತು.
ಈ ವಿಡಿಯೋವನ್ನು ಮಾರ್ಚ್ 2011ರಲ್ಲಿ ಬೇರೊಂದು ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಲಾಗಿದೆ.
ಎರಡನೇ ಕೀಫ್ರೇಮ್ನ್ನು ಬಳಸಿ ಹುಡುಕಿದಾಗ ನಮಗೆ ಬ್ರೌನ್ ಹೌಸ್ನ ಹಿಂದೆ ಭೂಕುಸಿತವಾಗುತ್ತಿರುವ ದೃಶ್ಯದ ಜೊತೆಗೆ ರಭಸವಾಗಿ ನೀರುಬರುವುದು ಮತ್ತು ಅಲ್ಲಿರುವ ಮನೆಗಳನ್ನು ಕೊಚ್ಚಿಕೊಂಡು ಹೋಗುವುದು ಮತ್ತು ಕಾರುಗಳೆಲ್ಲಾ ತೇಲಿ ಹೋಗುತ್ತಿರುವ ದೃಶ್ಯವನ್ನು ನಾವು ನೋಡಬಹುದು. ಈ ವಿಡಿಯೋ ಜಪಾನ್ನಲ್ಲಿ 2021ರಲ್ಲಿ ಭೂಕುಸಿತದ ಸಂರ್ಭದಲ್ಲಿ ಚಿತ್ರೀಕರಿಸಿರುವುದು ಎಂದುಕಂಡು ಹಿಡಿದೆವು.
ಸನ್.ಕಂ.ಯುಕೆ ವರದಿಯ ಪ್ರಕಾರ ಜಪಾನ್ನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸಾಕಷ್ಟು ನಗರಗಳು ಧ್ವಂಸವಾಗಿದ್ದವು, 20ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದರು ಜೊತೆಗೆ ಇಬ್ಬರು ಸಾವನಪ್ಪಿದ್ದರು.
ಮೂರನೇ ಕೀಫ್ರೇನ್ನು ಬಳಸಿ ಹುಡುಕಾಟ ನಡೆಸಿದಾಗ ನಮಗೆ ಪಬ್ಲಿಕ್ ಬ್ರಾಡ್ಕಾಸ್ಟರ್ ಎನ್ಹೆಚ್ಕೆ ಪ್ರಕಾರ,ಜಪಾನ್ನ ಮಧ್ಯ ಭಾಗವಾಗ ಶಿಜುವೋಕಾ ನಗರದಲ್ಲಿ ಬಾರಿ ಮಳೆಯೊಂದಾಗಿ ಇಬ್ಬರು ಸಾವನ್ನಪ್ಪಿದ್ದರು ಮತ್ತು ಹಲವರು ಕಾಣೆಯಾಗಿದ್ದರು ಎಂದು ಅಲ್ಜಜೀರಾದಲ್ಲಿ ವರದಿ ಮಾಡಲಾಗಿದೆ.
ನಝಾಹರಾಡ್.ಕಂ.ಎನ್ಝೀ ವರದಿಯ ಪ್ರಕಾರ ಟೋಕ್ಯಾದ ಪಶ್ಚಿಮದಲ್ಲಿರುವ ಪಟ್ಟಣದಲ್ಲಿ ಭಾರೀ ಮಳೆಯಿಂದಾಗಿ ಕೊಚ್ಚೆಯ ಜೊತೆಗೆ ಸಾಕಷ್ಟು ಮನೆಗಳು ಅಲೆಗಳಲ್ಲಿ ಕೊಚ್ಚಿಕೊಂಡು ಹೋಗಿದ್ದವು ಎಂದು ಶಿಜುವೋಕಾ ನಗರದ ವಕ್ತಾರ ಮಾಹಿತಿಯನ್ನು ನೀಡಿದ್ದಾನೆ.
ಹೀಗಾಗಿ ವೈರಲ್ ಆದ ವಿಡಿಯೋದಲ್ಲಿ ಮತ್ತು ಸುದ್ದಿಯಲ್ಲಿ ಯಾವುದೇ ಸಂಬಂದವಿಲ್ಲ. ಜನವರಿ 1,2024ರಲ್ಲಿ ಜಪಾನ್ನಲ್ಲಿ ಸುನಾಮಿ ಸಂಭವಿಸಿ ಸಾಕಷ್ಟು ಹಾನಿಯನ್ನುಂಟು ಮಾಡಿದೆ ಎಂಬ ಸುದ್ದಿ ಸುಳ್ಳು. ವೈರಲ್ ಆದ ವಿಡಯೋ ಇತ್ತೀಚಿನದಲ್ಲ, 2021ರದ್ದು ಎಂದು ಸಾಭೀತಾಗಿದೆ