ಫ್ಯಾಕ್ಟ್ಚೆಕ್: ರಾಹುಲ್ ಗಾಂಧಿ ಸಾರ್ವಜನಿಕ ಸಭೆಯಲ್ಲಿ ಬ್ರಾಹ್ಮಣ ಸಮುದಾಯವನ್ನು ಮೆಚ್ಚಿಸಲು ತಾನು ತೊಟ್ಟ ಜನಿವಾರವನ್ನು ತೋರಿಸುತ್ತಿದ್ದಾರೆ ಎಂಬ ಫೋಟೋ ವೈರಲ್
ರಾಹುಲ್ ಗಾಂಧಿ ಸಾರ್ವಜನಿಕ ಸಭೆಯಲ್ಲಿ ಬ್ರಾಹ್ಮಣ ಸಮುದಾಯವನ್ನು ಮೆಚ್ಚಿಸಲು ತಾನು ತೊಟ್ಟ ಜನಿವಾರವನ್ನು ತೋರಿಸುತ್ತಿದ್ದಾರೆ ಎಂಬ ಫೋಟೋ ವೈರಲ್
Claim :
ರಾಹುಲ್ ಗಾಂಧಿ ಸಾರ್ವಜನಿಕ ಸಭೆಯಲ್ಲಿ ಬ್ರಾಹ್ಮಣ ಸಮುದಾಯವನ್ನು ಮೆಚ್ಚಿಸಲು ತಾನು ತೊಟ್ಟ ಜನಿವಾರವನ್ನು ಎಲ್ಲರಿಗೂ ತೋರಿಸುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.Fact :
ವೈರಲ್ ಆದ ಚಿತ್ರ 2017ರದ್ದು. ಚಿತ್ರವನ್ನು ಎಡಿಡ್ ಮಾಡಲಾಗಿದೆ. ವಾಸ್ತವವಾಗಿ ರಾಹುಲ್ ಗಾಂಧಿ ತನ್ನ ಹರಿದ ಕುರ್ತಾವನ್ನು ತೋರಿಸುತ್ತಿದ್ದರು, ದಾರವನ್ನಲ್ಲ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ಚಿತ್ರಕ್ಕೆ ಅರ್ಚನ ಸೊಂಟಿ ಎನ್ನುವ X ಖಾತೆದಾರರು ಕಾಂಗ್ರೆಸ್ ಆಡಳಿತವು ಬ್ರಾಹ್ಮಣರ ಆಳ್ವಿಕೆ, ಬಿಜೆಪಿ ಆಡಳಿತ ಬ್ರಾಹ್ಮಣರ ಆಡಳಿತ, ಯಾವುದು ಬೇಕೋ ನೀವೇ ಆರಿಸಿಕೊಳ್ಳಿ ಎಂಬ ಶೀರ್ಷಿಕೆಯೊಂದಿಗೆ ಫೋಟೋವೊಂದನ್ನು ಹಂಚಿಕೊಂಡಿದ್ದರು.
ವೈರಲ್ ಆದ ಚಿತ್ರದಲ್ಲಿ, ರಾಹುಲ್ ಗಾಂಧಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಎಂದು ಸೂಚಿಸುವ ಜನಿವಾರವನ್ನು ಹಾಕಿಕೊಂಡಿರುವುದನ್ನು ನಾವು ನೋಡಬಹುದು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಬ್ರಾಹ್ಮಣ ಸಮುದಾಯದ ಪರವಾಗಿದೆ, ಹೀಗಾಗಿ ಜನರು ತಮ್ಮ ನಾಯಕರನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಾಗುತ್ತದೆ ಎಂದು ಪೋಸ್ಟ್ಗಳು ಸೂಚಿಸುತ್ತವೆ.
Congress rule is Brahmin rule!
— Archana Sonti (@ArchanaSonti) November 27, 2023
Bjp rule is Brahmin rule!
Choose alternative pic.twitter.com/O1TFVG0mM4
Congress rule is Brahmin rule!
— BALINDER KARNAL ( हरियाणा)🇮🇳巴林德·卡爾納爾(哈里亞納邦) (@GroverBalinder) November 28, 2023
Bjp rule is Brahmin rule!
Choose alternative
Only BSP 🐘 pic.twitter.com/iIeGarFGqQ
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಚಿತ್ರದಲ್ಲಿ ಕಾಣುವುದು ಹರಿದಿರುವ ಕುರ್ತಾ, ಜನಿವಾರವಲ್ಲ.
ವೈರಲ್ ಆದ ಚಿತ್ರದ ಕುರಿತು ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಿದೆವು. ಹುಡುಕಿದಾಗ ವೈರಲ್ ಆದ ಚಿತ್ರ 2017ರಲ್ಲಿ ಕ್ಲಿಕ್ಕಿಸಿರುವ ಚಿತ್ರವೆಂದು ಸಾಭೀತಾಯಿತು. ಖುಷಿಕೇಶದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ತನ್ನ ಹರಿದಿರುವ ಕುರ್ತಾ ಬಗ್ಗೆ ಮಾತನಾಡುತ್ತಿರುವುದನ್ನು ನೋಡಬಹುದು. ನನ್ನ ಕುರ್ತಾ ಹರಿದೋಗಿದೆ ಆದರೂ ನಾನು ಅದೇ ಖುರ್ತಾವನ್ನು ಬಳಸುತ್ತೇನೆ ಆದರೆ ಮಾನ್ಯ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರ ಬಟ್ಟೆ ಹರಿದುಹೋಗುವುದಿಲ್ಲ. ಯಾಕೆಂದರೆ ಅವರು ಬಡವರ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಅಪ್ಲೋಡ್ ಮಾಡಲಾಗಿತ್ತು.
ಒನ್ ಇಂಡಿಯಾ ನ್ಯೂಸ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಜನವರಿ 16,2017ರಲ್ಲಿ ಅಪ್ಲೋಡ್ ಮಾಡಿರುವಂತಹ ವಿಡಿಯೋವನ್ನು ನಾವು ಕಂಡುಕೊಂಡೆವು. ವಿಡಿಯೋಗೆ ಶೀರ್ಷಿಕೆಯಾಗಿ "ರಾಹುಲ್ ಗಾಂಧಿ ಸ್ಪೋರ್ಟ್ಸ್ ʼಡೋರನ್ ಕುರ್ತಾʼ ಡ್ಯೂರಿಂಗ್ ರಿಷಿಕೇಶ್ ರ್ಯಾಲಿ ಎಂದು ನೀಡಲಾಗಿತ್ತು. ಅಷ್ಟೇ ಅಲ್ಲ ಮೋದಿ ಮಹಾತ್ಮಗಾಂಧಿಯನ್ನು ಕಾಡಿಗ್ರಾಮ್ ಕ್ಯಾಲಂಡರ್ನಿಂದ ದೂರವಿರಿಸಿದ್ದಕ್ಕೆ ರಾಹುಲ್ ಟೀಕಿಸಿದ್ದರು.
"ಮೇರಾ ಪಾಕೆಟ್/ಕುರ್ತಾ ಫಟಾ ಹೋ ತೋ ಮುಝೆ ನಹೀ ಡಿಫರೆನ್ಸ್ ಪದಾ ಹೈ, ಲೇಕಿನ್ ಮೋದಿ ಜಿ ಕಾ ಕಪಡಾ ಕಭಿ ನಹೀ ಹೋಗಾ ಔರ್ ವೋ ಗರೀಬ್ ಕಿ ರಾಜನೀತಿ ಹೈ: ಆರ್ಜಿ" ಎಂಬ ಶೀರ್ಷಿಕೆಯೊಂದಿಗೆ ಸಾರ್ವಜನಿಕ ಸಭೆಯಿಂದ ರಾಹುಲ್ ಗಾಂಧಿಯವರ ಚಿತ್ರವನ್ನು ಎಎನ್ಐ ಪ್ರಕಟಿಸಿದೆ.
Mera pocket/kurta phata ho toh mujhe farak nahi padta,lekin Modi Ji ka kapda kabhi nahi phata hoga aur vo gareeb ki rajneeti karte hain:RG pic.twitter.com/oDLEIICai0
— ANI (@ANI) January 16, 2017
ವೈರಲ್ ಆದ ಸುದ್ದಿಗೆ ಸಂಬಂಧಿಸಿದ ಕೆಲವು ಮಾಧ್ಯಮ ಲೇಖನಗಳನ್ನು ಡಿಎನ್ಎ ಇಂಡಿಯಾ ಮತ್ತು ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದೆ.
ಹೀಗಾಗಿ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಚಿತ್ರ 2017ರದ್ದು. ಚಿತ್ರವನ್ನು ಎಡಿಡ್ ಮಾಡಲಾಗಿದೆ. ವಾಸ್ತವವಾಗಿ ರಾಹುಲ್ ಗಾಂಧಿ ತನ್ನ ಹರಿದ ಕುರ್ತಾವನ್ನು ತೋರಿಸುತ್ತಿದ್ದರು, ದಾರವನ್ನಲ್ಲ.