ಫ್ಯಾಕ್ಟ್ಚೆಕ್: ಸಿಲ್ಕ್ಯಾರಾ ಸುರಂಗದಿಂದ ಕಾರ್ಮಿಕರನ್ನು ರಕ್ಷಿಸಲ್ಪಟ್ಟ ಚಿತ್ರವನ್ನು ಏಐ ಮೂಲಕ ರಚಿಸಲಾಗಿದೆ
ಸಿಲ್ಕ್ಯಾರಾ ಸುರಂಗದಿಂದ ಕಾರ್ಮಿಕರನ್ನು ರಕ್ಷಿಸಲ್ಪಟ್ಟ ಚಿತ್ರವನ್ನು ಏಐ ಮೂಲಕ ರಚಿಸಲಾಗಿದೆ
Claim :
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರ ಚಿತ್ರFact :
ವೈರಲ್ ಆದ ಚಿತ್ರ ನಿಜವಾಗಿದ್ದಲ್ಲ. ಈ ಚಿತ್ರವನ್ನು ಏಐ ಮೂಲಕ ರಚಿಸಲಾಗಿದೆ.
ಉತ್ತರಾಖಂಡದ ಚಾರ್ಧಾಮ್ ಯೋಜನೆಯ ಭಾಗವಾಗಿ 4.5ಕಿಮೀ ಉದ್ದದ ಸಿಲ್ಕ್ಯಾರಾ ಸುರಂಗ ಮಾರ್ಗದ ಯೋಜನೆ ಪ್ರಗತಿಯಲ್ಲಿದೆ. ನಾಲ್ಕು ಪುಣ್ಯಕ್ಷೇತ್ರಗಳಿಗೆ ಸಂಪರ್ಕವನ್ನು ಒದಗಿಸಲು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ನವೆಂಬರ್ 12, 2023 ರಂದು, ಭೂಕುಸಿತದಿಂದಾಗಿ 41 ಕಾರ್ಮಿಕರು ಸುರಂಗದಲ್ಲೇ ಸಿಲುಕಿದ್ದರು. ಕೆಲವು ಕೊಳವೆಗಳ ಮೂಲಕ ಸಿಲುಕಿದ್ದ ಕಾರ್ಮಿಕರಿಗೆ ಆಹಾರ ಮತ್ತು ಆಮ್ಲಜನಕವನ್ನು ಒದಗಿಸಿದ್ದರು ಹೀಗಾಗಿ ಅಲ್ಲಿ ಸಿಲುಕಿದ್ದ ಕಾರ್ಮಿಕರು ಬದುಕುಳಿಯಲು ಸಾಧ್ಯವಾಯಿತು.
ಸತತ 17ದಿನಗಳ ಕಾಲ ಶ್ರಮದ ನಂತರ ಕಾರ್ಮಿಕರನ್ನು ಹೊರತೆಗೆಯಲು ಸಾಧ್ಯವಾಯಿತು. ಈ ಸುದ್ದಿ ಕೇಳಿ ಭಾರತೀಯರೆಲ್ಲಾ ಸಂತೋಷಗೊಂಡಿದ್ದರು.
ರಕ್ಷಣೆಯ ಕಾರ್ಯಾಚಾರಣೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಕಾರ್ಮಿಕರು ಭಾರತದ ಧ್ವಜವನ್ನು ಹಿಡಿದುಕೊಂಡಿರುವ ಚಿತ್ರವೊಂದು ವೈರಲ್ ಆಗಿತ್ತು. ಅದೇ ಚಿತ್ರವನ್ನು ಸಾಕಷ್ಟು ಮಂದಿ ತಮ್ಮ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.
“Pic of the Day..!!! Uttarakhand tunnel rescue Mission finally successful Om Namah Shivaya “ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ವ್ಯಾಪಕವಾಗಿ ಹಂಚಿಕೊಂಡಿದ್ದರು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಮತ್ತು ಫೋಟೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಚಿತ್ರವನ್ನು AI ಮೂಲಕ ರಚಿಸಲಾಗಿದೆ.
ಫೊಟೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಚಿತ್ರದಲ್ಲಿರುವ ವ್ಯತ್ಯಾಸವನ್ನು ನಾವು ಸ್ಪಷ್ಟವಾಗಿ ಕಂಡುಹಿಡಿಯಬಹುದು. ಧ್ವಜವನ್ನು ಹಿಡಿದಿರುವ ವ್ಯಕ್ತಿಯ ಹೆಬ್ಬೆರಳು ಮತ್ತು ಕೆಲವು ವ್ಯಕ್ತಿಗಳ ಕಣ್ಣುಗಳು, ಕೆಲವರ ಬೆರಳುಗಳು ಅಸಹಜವಾಗಿರುವುದನ್ನು ನಾವು ನೋಡಬಹುದು.
AI ಮೂಲಕ ಈ ಚಿತ್ರವನ್ನು ರಚಿಸಲಾಗಿದೆಯಾ ಎಂದು ತಿಳಿದುಕೊಳ್ಳಲು ನಾವು AI ಟೂಲ್ನ ಮೂಲಕ ಚಿತ್ರವನ್ನು ಪರಿಶೀಲಿಸಿದಾಗ 99.9% ಈಚಿತ್ರವನ್ನು AI ಮೂಲಕ ರಚಿಸಲಾಗಿದೆ ಎಂದು ನಾವು ತಿಳಿದುಕೊಂಡೆವು.
ಮತ್ತಷ್ಟು ಮಾಹಿತಿಯನ್ನು ತಿಳಿಯಲು ನಾವು ಸುರಂಗ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ AI-ಚಿತ್ರಗಳನ್ನು ಪೋಸ್ಟ್ ಮಾಡಿದ @Exclusive Minds ಎಂಬ X ಖಾತೆಯನ್ನು ಪರಿಶೀಲಿಸಿದೆವು.
ಈ ಚಿತ್ರಕ್ಕೆ ಶೀರ್ಷಿಕೆಯಾಗಿ AI ರಚಿತ ಚಿತ್ರವಿದು ಎಂದು ಬರೆದಿದ್ದನ್ನು ನಾವು ಕಂಡುಕೊಂಡೆವು.
News18.com ತನ್ನ X (Twitter) ಖಾತೆಯಲ್ಲಿ ರಕ್ಷಿಸಲ್ಪಟ್ಟ ಕಾರ್ಮಿಕರ ವೀಡಿಯೊವನ್ನು ಅಪ್ಲೋಡ್ ಮಾಡಿರುವುದನ್ನು ನೋಡಬಹುದು. ಕಾರ್ಮಿಕರು ಸುರಂಗದಿಂದ ಹೊರಬಂದ ಮೇಲೆ ಕ್ಯಾಮೆರಾಗೆ ಪೋಸ್ ಕೊಡುವ ಮೂಲ ದೃಶ್ಯಗಳನ್ನು ನಾವು ನೋಡಬಹುದು.how rat miners, and other heroes conducted the great rescue ಎಂಬ ಶೀರ್ಷಿಕೆಯೊಂದಿಗೆ ಫೊಟೋವನ್ನು ಹಂಚಿಕೊಂಡಿದ್ದರು.
ಹೀಗಾಗಿ ವೈರಲ್ ಆದ ಫೋಟೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಚಿತ್ರ AI ಮೂಲಕ ರಚಿಸಲ್ಪಟ್ಟಿದೆ.