ಫ್ಯಾಕ್ಟ್ಚೆಕ್: ಎಪಿಜೆ ಅಬ್ದುಲ್ ಕಲಾಂ ಬಾಲ್ಯದ ಚಿತ್ರವಿದು ಎಂದು ಮರಿಯಾಲ ಶ್ರೀನಿವಾಸ್ರವರ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ
ಎಪಿಜೆ ಅಬ್ದುಲ್ ಕಲಾಂ ಬಾಲ್ಯದ ಚಿತ್ರವಿದು ಎಂದು ಮರಿಯಾಲ ಶ್ರೀನಿವಾಸ್ರವರ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ.
Claim :
ಎಪಿಜೆ ಅಬ್ದುಲ್ ಕಲಾಂರವರ ಬಾಲ್ಯದ ಚಿತ್ರ ವೈರಲ್Fact :
ವೈರಲ್ ಆದ ಚಿತ್ರ ಮರಿಯಾಲ ಶ್ರೀನಿವಾಸ್ರವರ ಕುಟುಂಬಕ್ಕೆ ಸೇರಿದ್ದು
ಭಾರತದ ರಾಷ್ಟ್ರಪತಿಯಾಗಿ ಜನಮನ ಗೆದ್ದಿದ್ದ ಅಬ್ದುಲ್ ಕಲಾಂರನ್ನು "ಮಿಸೈಲ್ ಮ್ಯಾನ್" ಎಂದೇ ಪ್ರಖ್ಯಾತರಾಗಿದ್ದರು. ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂರವರು ಅಕ್ಟೋಬರ್ 15, 1931ರಂದು ತಮಿಳುನಾಡಿನ ರಾಮೇಶ್ವರಂನ ಬಡ ಕುಟುಂಬದಲ್ಲಿ ಜನಿಸಿದರು. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಅಬ್ದುಲ್ ಕಲಾಂರವರು ತನ್ನ ತಾಯಿಯೊಂದಿಗೆ ಕುಳಿತಿರುವ ಬಾಲ್ಯದ ಫೋಟೋ ಎಂದು ಹೇಳುವ ಚಿತ್ರವೊಂದು ಹರಿದಾಡುತ್ತಿದೆ.
ಅಕ್ಟೋಬರ್ 2,2024ರಂದು ಹೆಲ್ತ್ಡೋಜ್ "ये है APJ अब्दुल कलाम की बचपन की तस्वीर कोई...?" ಫೋಟೋವಿನಲ್ಲಿ ಕ್ಯಾಪ್ಷನ್ ಆಗಿ "ये है APJ अब्दुल कलाम की बचपन की तस्वीर कोई देशद्रोही ही होगा जो बिना लाइक किये जाएगा।" ಎಂದು ಬರೆಯಲಾಗಿದೆ.
ಶೀರ್ಷಿಕೆ ಮತ್ತು ಕ್ಯಾಪ್ಷನ್ನ್ನು ಕನ್ನಡಕ್ಕೆ ಅನುವಾದಿಸಿದಾಗ "ಇದು ಎಪಿಜೆ ಅಬ್ದುಲ್ ಕಲಾಂರವರ ಬಾಲ್ಯ ದಿನಗಳ ಚಿತ್ರ" ಎಂದು ಬರೆಯಲಾಗಿದೆ ಹಾಗೆ "ಇದು ಎಪಿಜೆ ಅಬ್ದುಲ್ ಕಲಾಂರವರ ಬಾಲ್ಯ ದಿನಗಳ ಚಿತ್ರ. ದೇಶದ್ರೋಹಿಗಳು ಮಾತ್ರ ಈ ಚಿತ್ರಕ್ಕೆ ಲೈಕ್ ಕೊಡದೆ ಹೋಗುತ್ತಾರೆ" ಎಂದು ಕ್ಯಾಪ್ಷನ್ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ
ಮೂವಿ ಕ್ಲಬ್ ಎಂಬ ಫೇಸ್ಬುಕ್ ಬಳಕೆದಾರರು ತಮ್ಮ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಂಡು "बड़ी मुश्किल से मिली है ये APJ अब्दुल कलाम की बचपन की तस्वीर... कोई देशद्रोही ही होगा जो बिना लाइक किये जाएगा" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ತುಂಬಾ ಕಷ್ಟ ಪಟ್ಟಿದಕ್ಕೆ ನಮಗೆ ಎಪಿಜೆ ಅಬ್ದುಲ್ ಕಲಾಂ ಅವರ ಈ ಬಾಲ್ಯದ ಚಿತ್ರ ಸಿಕ್ಕಿತು. ಕೇವಲ ದೇಶದ್ರೋಹಿಗಳು ಮಾತ್ರ ಈ ಚಿತ್ರಕ್ಕೆ ಲೈಕ್ ಕೊಡದೆ ಹೋಗುತ್ತಾರೆ" ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ
ಇದೇ ಚಿತ್ರವನ್ನು ಸಾಕಷ್ಟು ಸಾಮಾಜಿಕ ಬಳಕೆದಾರರು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಜುಲೈ 27, 2024ರಂದು ತೆಲುಗು ಪ್ರಮುಖ ಮಾಧ್ಯಮ ಸಂಸ್ಥೆಯಲ್ಲಿ ಒಂದಾದ ʼಸಾಕ್ಷಿʼ ವೆಬ್ಸೈಟ್ನಲ್ಲಿ "డా. ఏపీజే అబ్దుల్ కలాం 9వ వర్ధంతి అరుదైన ఫోటోలు" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ಡಾ. ಎಪಿಜೆ ಅಬ್ದುಲ್ ಕಲಾಂರವರ ಅಪರೂಪದ ಫೋಟೋಗಳಿವು ಎಂಬ ಶೀರ್ಷಿಕೆಯೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಚಿತ್ರ ಅಬ್ದುಲ್ ಕಲಾಂರವರಿದ್ದಲ್ಲ. ಈ ಫೋಟೋ ಮರಿಯಾಲ ಶ್ರೀನಿವಾಸ್ರವರ ಕುಟುಂಬಕ್ಕೆ ಸಂಬಂಧಿಸಿದ್ದು ಎಂದು ಅವರೇ ಖುದ್ದಾಗಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಾವು ವೈರಲ್ ಆದ ಸುದ್ದಿಯಲ್ಲಿ ಕಾಣುವ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಮೇ3, 2020ರಂದು "ಮರಿಯಾಲ ಶ್ರೀನಿವಾಸ್" ಎಂಬುವವರ ಫೇಸ್ಬುಕ್ ಖಾತೆದಾರ ತಮ್ಮ ಖಾತೆಯಲ್ಲಿ ವೈರಲ್ ಆದ ಚಿತ್ರವು ತಮ್ಮ ಕುಟುಂಬಕ್ಕೆ ಸಂಬಂಧಿಸಿದ್ದು ಎಂದು ಬರೆದುಕೊಂಡಿರುವುದನ್ನು ನಾವು ಕಂಡುಕೊಂಡೆವು.
ಚಿತ್ರವನ್ನು ಹಂಚಿಕೊಂಡು ಶೀರ್ಷಿಕೆಯಾಗಿ "Everyone would have seen this photo. In those days this is Abdul Kalam's photo, the tribe has gone viral in social media. Again now, this is the childhood photo of Narendra Modi, the tribe is doing rounds in the house. This is literally our family photo. The cute boy sitting beside my mother holding a cup and smiling nicely is not Abdul Kalam, not Narendra Modi, but my younger brother Sridhar Maryala My sister is sitting beside my father after getting his baby cut Laxmi Pulluri. I am the one sitting in the middle with a chubby mind Maryala Srinivas. Posted this photo on Facebook in 2011. This photo idea is cellular people in an ad too. Used up. This photo was seen in the RX100 movie which came in this midday. Whatever it is, our family photo has become very famous...!! Again if anyone posts this photo as Narendra Modi, Trump's childhood photo, North Korea's childhood memory. No, no, tell that this photo is ours." ಎಂಬ ಬರೆದು ಹಂಚಿಕೊಂಡಿದ್ದಾರೆ.
ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ " ಎಲ್ಲರೂ ಈ ಫೋಟೋವನ್ನು ನೋಡಿರುತ್ತೀರಾ. ಸಾಮಾಜಿಕ ಜಾಲತಾಣದಲ್ಲಿ ಎಪಿಜೆ ಅಬ್ದುಲ್ ಕಲಾಂರವರ ಚಿತ್ರವಿದು, ಮೋದಿಯವರ ಬಾಲ್ಯದ ಚಿತ್ರವಿದು ಎಂಬ ಶೀರ್ಷಿಕೆಯೊಂದಿಗೆ ಹರಿದಾಡುತ್ತಿದೆ. ವಾಸ್ತವವಾಗಿ ಹೇಳುವುದಾದರೆ, ಈ ಚಿತ್ರ ನನ್ನ ಕುಟುಂಬದ್ದು. ಚಿತ್ರದಲ್ಲಿ ಮಹಿಳೆಯ ಪಕ್ಕ ಕೂತಿರುವ ಮುಗ್ಧ ಬಾಲಕ ಅಬ್ದುಲ್ ಕಲಾಂ ಅಥವಾ ಮೋದಿಯವರಲ್ಲ ನಮ್ಮ ಸಹೋದರ ಶ್ರೀಧರ್ ಮರಿಯಾಲ. ನನ್ನ ಸಹೋದರಿ ಲಕ್ಷ್ಮೀ ಪುಲ್ಲೂರಿ ನನ್ನ ತಂದೆಯ ಪಕ್ಕ ಕೂತಿದ್ದಾರೆ. ಮಧ್ಯದಲ್ಲಿ ಕುಳಿತಿರುವ ಮಗು ನಾನು ಮರಿಯಾಲ ಶ್ರೀನಿವಾಸ್. ಈ ಚಿತ್ರವನ್ನು ನಾವು 2011ರಲ್ಲಿ ಹಂಚಿಕೊಂಡಿದ್ದೆವು. ಈ ಚಿತ್ರವನ್ನು ನೀವು ಐಡಿಯಾ ಜಾಹಿರಾತಿನಲ್ಲೂ ಸಹ ನೋಡಬಹುದು" ಎಂದು ಬರೆದು ಪೋಸ್ಟ್ ಮಾಡಿರುವುದನ್ನು ನಾವು ಗಮನಿಸಬಹುದು.
ಇದರಿಂದ ಸಾಭೀತಾಗಿರುವುದೇನೆಂದರೆ, ವೈರಲ್ ಆದ ಚಿತ್ರ ಎಪಿಜೆ ಅಬ್ದುಲ್ ಕಲಾಂರವದಿದ್ದಲ್ಲ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಚಿತ್ರವು ವಾಸ್ತವವಾಗಿ ಮರಿಯಾಲ ಶ್ರೀನಿವಾಸ್ರವರದ್ದು