ಫ್ಯಾಕ್ಟ್ಚೆಕ್: ಕರ್ನಾಟಕದಲ್ಲಿ ಶ್ರೀರಾಮನ ವಿಗ್ರಹವನ್ನು ಟ್ರಾಕ್ಟರ್ನಿಂದ ಉರುಳಿಸಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ
ಕರ್ನಾಟಕದಲ್ಲಿ ಶ್ರೀರಾಮನ ವಿಗ್ರಹವನ್ನು ಟ್ರಾಕ್ಟರ್ನಿಂದ ಉರುಳಿಸಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ
Claim :
ಕರ್ನಾಟಕದಲ್ಲಿ ಶ್ರೀರಾಮನ ವಿಗ್ರಹವನ್ನು ಟ್ರಾಕ್ಟರ್ನಿಂದ ಉರುಳಿಸಿ, ಅವಮಾನಿಸಿದ್ದಾರೆ.Fact :
ವೈರಲ್ ಆದ ವಿಡಿಯೋ ಕರ್ನಾಟಕಕ್ಕೆ ಸಂಬಂಧಿಸಿದಲ್ಲ. 2024 ಜನವರಿಯಲ್ಲಿ ಉಜ್ಜಯಿನಿಯಲ್ಲಿ ಎರಡು ಗುಂಪುಗಳ ನಡುವೆ ನಡೆದ ವಿವಾದಕ್ಕೆ ಸಂಬಂಧಿಸಿದ್ದು.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ 58 ಸೆಕೆಂಡ್ಗಳ ವಿಡಿಯೋವೊಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋವಿನಲ್ಲಿ ಟ್ರಾಕ್ಟರ್ ಒಂದು ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ನೋಡಬಹುದು. ಪುತ್ಥಳಿಯ ಹಿಂದೆ ಶ್ರೀರಾಮನ ಕಟ್ಔಟ್ ಇರುವುದನ್ನೂ ಸಹ ನಾವು ನೋಡಬಹುದು.
ಸೆಪ್ಟಂಬರ್ 7ರಂದು, ಮನೋಜ್ ಜೋಷಿ ಎಂಬ ಎಕ್ಸ್ ಖಾತೆದಾರ ವಿಡಿಯೋವನ್ನು ಶೇರ್ ಮಾಡಿ ಹಿಂದಿಯಲ್ಲಿ ಶೀರ್ಷಿಕೆಯಾಗಿ "कर्नाटक के हिन्दुओं ने बीजेपी सरकार को हराकर कांग्रेस पार्टी की सरकार बनाई थी। अब कांग्रेस सरकार की हरकतों और मुस्लिम तुष्टिकरण की पराकाष्ठा के कारण पछता रहे हैं। Think again and again.??"ಎಂಬ ಬರೆದು ಹಂಚಿಕೊಂಡಿರುವುದನ್ನು ಕಂಡುಕೊಂಡೆವು.
ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಕರ್ನಾಟಕದಲ್ಲಿರುವ ಹಿಂದೂಗಳು ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಸರ್ಕಾರಕ್ಕೆ ತಮ್ಮ ತಮ್ಮ ಮತಗಳನ್ನು ಹಾಕಿ ಗೆಲ್ಲಿಸಿದರು. ಆದರೆ ಇದೀಗ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಡೆ ಹಾಗೆ ಮುಸ್ಲಿಂರ ತುಷ್ಟೀಕರಣದ ಪರಮಾವಧಿಯಿಂದಾಗಿ ಪಶ್ಚಾತ್ತಾಪ ಪಡುತ್ತಿದ್ದಂತೆ ಕಾಣುತ್ತಿದೆ" " ಎಂದು ಬರೆದದಿರುವುದನ್ನು ಕಂಡುಕೊಂಡೆವು
ಸೆಪ್ಟಂಬರ್ 3, 2024ರಂದು ಚಂದ್ರದೇವ್ ಬಿ ಸಿಂಗ್ ತೋಮರ್ ಎಂಬ ಫೇಸ್ಬುಕ್ ಖಾತೆದಾರ ತನ್ನ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು "ಕರ್ನಾಟಕದಲ್ಲಿರುವ ಹಿಂದೂಗಳು ಬಿಜೆಪಿ ಸರ್ಕಾರವನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಸರ್ಕಾರವನ್ನು ರಚಿಸಿದ್ದಾರೆ. ಆದರೆ ಈಗ ಮತಹಾಕಿ ಗೆಲ್ಲಿಸಿದ ಮತದಾರರು ಕಾಂಗ್ರೆಸ್ ಸರ್ಕಾರದ ನಡೆ ಮತ್ತು ಮುಸಲ್ಮಾನರ ಓಲೈಕೆಗೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಇವತ್ತು ನೀವು ಗಮನ ಕೊಡದಿದ್ದರೆ ಮುಂದೊಂದು ದಿನ ನಿನಗೂ ಇದೇ ಆಗುತ್ತದೆ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಾಗಿದೆ
ವಿಜಯೇಂದ್ರ ಅಗರ್ವಾಲ್ ಎಂಬ ಖಾತೆದಾರನೂ ಸಹ ತನ್ನ ಎಕ್ಸ್ ಖಾತೆಯಲ್ಲಿ ಇದೇ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ಕರ್ನಾಟಕದಲ್ಲ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 2024ರಲ್ಲಿ ನಡೆದ ಘಟನೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಸರ್ಚ್ನಲ್ಲಿ ಹುಉಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ಸುದ್ದಿಗೆ ಸಂಬಂಧಿಸಿದ ಸಾಕಷ್ಟು ಮಾಧ್ಯಮ ವರದಿಗಳು ಹಾಗೂ ಕೆಲವು ವಿಡಿಯೋ ಕ್ಲಿಪ್ಗಳು ಕಂಡುಬಂದಿತು.
ನಾನು ಗೌರಿ ಎಂಬ ವೆಬ್ಸೈಟ್ನಲ್ಲಿ ಜನವರಿ 26, 2024ರಂದು ವೆಬ್ಸೈಟ್ನಲ್ಲಿ "ಮಧ್ಯಪ್ರದೇಶ: ಅಂಬೇಡ್ಕರ್-ಪಟೇಲ್ ಪ್ರತಿಮೆ ವಿವಾದ; ದಲಿತರು-ಪಾಟೀದಾರ್ ಸಮುದಾಯಗಳ ನಡುವೆ ಘರ್ಷಣೆ" ಎಂಬ ಶೀರ್ಷಿಕೆಯೊಂದಿಗೆ ವರದಿಯಿರುವುದನ್ನು ನಾವು ಕಾಣಬಹುದು
ಜನವರಿ 24,2024ರಂದು ಐಎಎನ್ಎಸ್ ಟಿವಿ ಯೂಟ್ಯೂಬ್ ಚಾನೆಲ್ನಲ್ಲಿ "Ujjain में Sardar Patel की Statue को स्थापित करने पर आपस में भिड़े दो पक्ष, जमकर हुआ पथराव" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದು ಅಪ್ಲೋಡ್ ಮಾಡಲಾಗಿತ್ತು. ವಿಡಿಯೋವನ ವರದಿಯಲ್ಲಿ ನೋಡುವುದಾದರೆ, ಈ ಪ್ರಕರಣವು "ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮ ಸೇನೆ ಮತ್ತು ಪಾಟೀದಾರ್ ಸಮುದಾಯಗಳ ನಡುವೆ ಭಾರೀ ಸಂಘರ್ಷ ನಡೆದಿದೆ. ಹಾಗೆ ಈ ಘಟನೆಯು ವಿವಾದಿತ ಪ್ರದೇಶದಲ್ಲಿ ಪ್ರತಿಮೆಗಳನ್ನು ಸ್ಥಾಪಿಸುವುದರ ಬಗ್ಗೆ ವಿವಿಧ ಸಮುದಾಯಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆಯನ್ನು ತೋರಿಸುತ್ತದೆ. ಎಂಬುದು ತಿಳಿದು ಬಂದಿದೆ.
ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಈ ವಿಡಿಯೋವಿಗೆ ಸಿನ್ಹಾ ಎಂಬ ಎಕ್ಸ್ ಖಾತೆದಾರ " ಸುಳ್ಳು ಸುದ್ದಿಯನ್ನು ಹರಡಬೇಡಿ, ಸರ್ದಾರ್ ವಲ್ಲಭಾಯಿ ಪಟೇಲ್ರವರ ಪುತ್ಥಳಿಯನ್ನು ʼಭೀಮ್ ಆರ್ಮಿʼ ಸಮುದಾಯದ ಜನರು ಕೆಡವಿ, ಬಿ.ಆರ್ ಅಂಬೇಡ್ಕರ್ರವರ ಪ್ರತಿಮೆಯನ್ನು ಸ್ಥಾಪಿಸಿದರು. ವಿಡಿಯೋವಿನಲ್ಲಿ ಜೈ ಶ್ರೀರಾಮ್ ಎಂದು ಘೋಷಣೆಯನ್ನು ಕೂಗುತ್ತಿದ್ದಾರೆ ಎಂದು ಸುಳ್ಳುಸುದ್ದಿಯನ್ನು ಹಬ್ಬಿಸಬೇಡಿ ಎಂದು ಬರೆದು ಪೋಸ್ಟ್ ಮಾಡಿರುವುದನ್ನು ನಾವು ಕಾಣಬಹುದು.
ಫ್ರೀ ಪ್ರೆಸ್ ಜರ್ನಲ್ ವೆಬ್ಸೈಟ್ನಲ್ಲಿ MP: Sardar Patel's Statue Vandalised, Uprooted In Ujjain; Violent Bhim Army Demands Baba Ambedkar's Idol (WATCH) ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವು ಕಾಣಬಹುದು ವರದಿಯಲ್ಲಿ "ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮ ಸೇನೆ ಮತ್ತು ಪಾಟೀದಾರ್ ಸಮುದಾಯಗಳ ನಡುವೆ ಭಾರೀ ಸಂಘರ್ಷ ನಡೆದಿದೆ. ಡಾ. ಬಿ. ಆರ್. ಅಂಬೇಡ್ಕರ್ ಅವರ ಪುತ್ಥಳಿಯನ್ನು ತನ್ನ ಜಾಗದಲ್ಲಿ ಪ್ರತಿಷ್ಠಾಪಿಸುವಂತೆ ಒತ್ತಾಯಿಸಿ ಪಟೇಲ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಯಿತು. ಉಜ್ಜಯಿನಿಯ ಕಲೆಕ್ಟರ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಗೊಳಿಸಿದ್ದರು. ಮೂರ್ತಿಯನ್ನು ಇರಿಸಿದ್ದ ಜಾಗದ ಮಾಲೀಕತ್ವದ ಬಗ್ಗೆ ಸುದೀರ್ಘ ಕಾಲದ ವಿವಾದ ಇದ್ದ ಕಾರಣ ಈ ವಿವಾದ ಉಂಟಾಗಿದೆ ಎಂಬುವುದನ್ನು ಈ ವರದಿಯಲ್ಲಿ ನೋಡಬಹುದು.
ಉಜ್ಜಯಿನಿಯ ಎಸ್ಪಿ ಗುರು ಪ್ರಸಾದ್ ಪರಶಾರ್ ಮೇಕಡ್ನಲ್ಲಿ ನಡೆದ ಘಟನೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವುದನ್ನು ನಾವು ಆನಿ (ANI) ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವುದನ್ನು ನೋಡಬಹುದು.
ಹೀಗಾಗಿ ವೈರಲ್ ಆದ ಸುದ್ದಿಗೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸುತ್ತಿರುವ ವಿಡಿಯೋಕ್ಕೆ ಸಂಬಂಧಿಸಿದ್ದು. ಈ ಗಲಭೆಗೆ ಕೋಮು ಬಣ್ಣ ಬಳಿದು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ತಪ್ಪು ದಾರಿಗೆಳೆಯುವ ಕೆಲಸ ಮಾಡುತ್ತಿದ್ದಾರೆ.