ಫ್ಯಾಕ್ಟ್ಚೆಕ್: ಭಾರತದಲ್ಲಿನ ದೇವಾಲಯಕ್ಕೆ ಬಂದಂತಹ ದೇಣಿಗೆಯ ಹಣವನ್ನು ಮುಸ್ಲಿಮರು ಎಣಿಸುತ್ತಿದ್ದಾರೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ
ಭಾರತದಲ್ಲಿನ ದೇವಾಲಯಕ್ಕೆ ಬಂದಂತಹ ದೇಣಿಗೆಯ ಹಣವನ್ನು ಮುಸ್ಲಿಮರು ಎಣಿಸುತ್ತಿದ್ದಾರೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ
Claim :
ಭಾರತದ ದೇವಾಲಯಕ್ಕೆ ಬಂದಂತಹ ಹಣವನ್ನು ಮುಸ್ಲಿಮರು ಮಸೀದಿಯಲ್ಲಿ ಎಣಿಸುತ್ತಿದ್ದಾರೆFact :
ಬಾಂಗ್ಲಾದೇಶದ ಕಿಶೋರ್ಗಂಜ್ನಲ್ಲಿರುವ ಪಾಗ್ಲಾ ಮಸೀದಿಯಲ್ಲಿ ಬಂದಂತಹ ದೇಣಿಗೆಯದು. ವೈರಲ್ ಆದ ದೃಶ್ಯ ಭಾರತದಲ್ಲ.
ಸಾಮಾಜಿಕ ಜಾಲತಾಣದಲ್ಲಿ ಶಿರಿಡಿ ಸಾಯಿ ಮಂದಿರದ ದೇನಿಗೆಯ ಕುರಿತಾದಂತಹ ವಿಡಿಯೋವೊಂದನ್ನು ಸಾಮಾಜಿಕ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ವಿಡಿಯೋವನ್ನು ನೋಡಿದರೆ, ಕುರ್ತಾ-ಪೈಜಾಮ ಮತ್ತು ಕ್ಯಾಪನ್ನು ಧರಿಸಿರುವ ಕೆಲವು ವ್ಯಕ್ತಿಗಳು, ಒಂದು ಚೀಲದಲ್ಲಿ ಹಣವನ್ನು ತುಂಬುತ್ತಿರುವುದನ್ನು ನಾವು ಕಾಣಬಹುದು. ತುಂಬಿದ ಹಣವನ್ನು ಮಸೀದಿಯ ಆವರಣದಲ್ಲಿ ಸುರಿಯುತ್ತಾರೆ. ಅಲ್ಲಿರುವ ಮುಸ್ಲಿಂ ಮಕ್ಕಳು ಈ ಹಣವನ್ನು ಎಣಿಸುತ್ತಿರುವ ದೃಶ್ಯವನ್ನು ನಾವು ಈ ವಿಡಿಯೋವಿನಲ್ಲಿ ನೋಡಬಹುದು.
ಅಕ್ಟೋಬರ್ 6, 2024ರಂದು ಅರುಣ್ ಕುಮಾರ್ ಹಿಂದೂ ಎಂಬ ಎಕ್ಸ್ ಖಾತೆದಾರ ಇದೇ ವಿಡಿಯೋವನ್ನು ಹಂಚಿಕೊಂಡು, ವಿಡಿಯೋವಿಗೆ ಶೀರ್ಷಿಕೆಯಾಗಿ ʼಶಿರಡಿ ಸಾಯಿಯವರ ಹುಂಡಿಗೆ ಹಿಂದೂಗಳ ಹಾಕಿರುವ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ನೀವೇ ನೋಡಿ!. ಈ ಮುಸ್ಲಿಮರು ಇದನ್ನು ಯಾವುದಕ್ಕೆಲ್ಲಾ ಉಪಯೋಗಿಸುತ್ತಾರೋ... ಕಣ್ಣಿದ್ದರೂ ಕುರುಡರಾದ ದೇಶದ ಪ್ರತಿಯೊಬ್ಬ ಹಿಂದೂಗಳಿಗೂ ಇದು ತಲುಪುವಷ್ಟು ವೈರಲ್ ಮಾಡಿ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದೇ ವಿಡಿಯೋವನ್ನು ಮೋದಿ ಫ್ಯಾನ್ಸ್ ಎಂಬ ಫೇಸ್ಬುಕ್ ಖಾತೆದಾರ "ಇನ್ನಾದರೂ ಅಯ್ಯಪ್ಪ ಮಾಲಾಧಾರಿಗಳು ಇದನ್ನು ನಿಲ್ಲಿಸಿ ಬಿಡಿ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿನಲ್ಲಿ "ಅಯ್ಯಪ್ಪ ಮಾಲಾಧಾರಿ ಸ್ವಾಮಿಗಳು ಕೇರಳದ ವಾವರ ಮಸೀದಿಗೆ ಹೋಗಿ ಹರಕೆ ಹಾಕಿದ ಹಣ ನೋಡಿ, ಇವೆಲ್ಲವೂ ನಮ್ಮ ಧರ್ಮದ ವಿರುದ್ದ ಕೆಲಸ ಮಾಡುವ ಕೈಗಳಿಗೆ ಸಹಾಯಕ್ಕೆ ಹೋಗುವ ಹಣ. ಇನ್ನಾದರೂ ಮಾಲಾಧಾರಿಗಳು ಇದನ್ನು ನಿಲ್ಲಿಸಿಬಿಡಿ" ಎಂಬ ಕ್ಯಾಪ್ಷನ್ನೊಂಡಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ವಿಡಿಯೋ ಶಿರಡಿ ಸಾಯಿ ಬಾಬಾ ಮಂದಿರಕ್ಕೆ ಸಂಬಂಧಿಸಿದ್ದಾಗಲೀ ಅಥವಾ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದಲ್ಲ. ವೈರಲ್ ಆದ ವಿಡಿಯೋ ಬಾಂಗ್ಲಾದೇಶದ ಕಿಶೋರ್ಗಂಜ್ನಲ್ಲಿರುವ ಪಾಗ್ಲಾ ಮಸೀದಿಯಲ್ಲಿ ಬಂದಂತಹ ದೇಣಿಗೆಯದು.
ನಾವು ವೈರಲ್ ಆದ ವಿಡಿಯೋವಿನಲ್ಲಿಂದ ಕೆಲವು ಪ್ರಮುಖ ಫ್ರೇಮ್ಗಳನ್ನು ನಾವು ಜೂಮ್ ಮಾಡಿ ನೋಡಿದೆವು. ಹುಡುಕಾಟದಲ್ಲಿ ನಮಗೆ, ಹಣವನ್ನು ಹೊತ್ತು ತಂದ ಪ್ಲಾಸ್ಟಿಕ್ ಬ್ಯಾಗ್ನ ಮೇಲೆ ಇರುವ ಅಕ್ಷರವನ್ನು ನಾವು ಗಮನಿಸಿದೆವು. ವಿಡಿಯೋದಲ್ಲಿ ಕಂಡುಬಂದಂತಹ ಅಕ್ಷರಗಳನ್ನು ನಾವು ಗೂಗಲ್ ಲೆನ್ಸ್ ಬಳಸಿ ಯಾವ ಭಾಷೆ ಎಂದು ನಾವು ಕಂಡುಕೊಂಡಾಗ ಅದು ಬಾಂಗ್ಲಾ ಭಾಷೆ ಎಂದು ಸ್ಪಷ್ಟವಾಯಿತು. ಮೂಟೆಯ ಮೇಲೆ কয়লা, ব্রয়লার ও বি.জি ಎಂದು ಬೆಂಗಾಲ್ನಲ್ಲಿ ಬರೆದಿತ್ತು. ʼIn coal, Broiler and BGʼ ಎಂಬುವುದು ಈ ಪದದ ಅರ್ಥ.
ಅಷ್ಟೇ ಅಲ್ಲ ನಾವು ಹಣವನ್ನು ಸುರಿಯುವ ದೃಶ್ಯಗಳನ್ನು ಗಮನಿಸಿದೆವು. ವೈರಲ್ ವಿಡಿಯೋದಲ್ಲಿ ಕಂಡುಬಂದಂತಹ ನೋಟನ್ನು ನಾವು ಗಮನಿಸಿದೆವು. ಅದು ಯಾವ ದೇಶದ ಕರೆನ್ಸಿ ಎಂದು ನಾವು ಗೂಗಲ್ನಲ್ಲಿ ಹುಡುಕಾಡಿದಾಗ ನಮಗೆ ʼಇಂಟರ್ನ್ಯಾಷನಲ್ ಬ್ಯಾಂಕ್ ನೋಟ್ ಸೊಸೈಟಿʼ ವೆಬ್ಸೈಟ್ನಲ್ಲಿ ಬಾಂಗ್ಲಾದೇಶದ 200ರೂ ನೋಟೋಂದನ್ನು ನಾವು ಕಂಡುಕೊಂಡೆವು.
ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದಾಗ ನಮಗೆ ʼಖ್ವಾಜಾ ಇ ಹಿಂದ್ʼ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದು ಕಂಡುಬಂದಿತು. ವಿಡಿಯೋವಿನಲ್ಲಿ ಹೆಡ್ಲೈನ್ ಆಗಿ "ಬಾಂಗ್ಲಾ ದೇಶದ ಮಸೀದ್ʼ ಎಂದು ಇರುವುದನ್ನು ನಾವು ನೋಡಬಹುದು. ವಿಡಿಯೋಗೆ ಶಿರ್ಷಿಕೆಯಾಗಿ "Bangla Desh ke ek Masjid me nikla 50000000 #shortvideo #viral #trending" ಎಂದು ಬರೆದು ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಬಾಂಗ್ಲಾದೇಶದ ಒಂದು ಮಸೀದಿಯಲ್ಲಿ 50000000 ಹಣ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಜೂನ್ 8,2024ರಂದು ʼಮಿನಿ ರಾಝ್ದಾನ್ʼ ಎಂಬ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು "Watch it till the End. See, how much donation money comes in mosques, & Peer Dargahs. Thousands of Hindus also contribute in it as well. Mosque donations are not taxed by the government. Whereas, Hindu temple donations are taxed. Government gives salary and pension to clerics from temple money..However, we all know very well that for what kind of activities , the donations given to mosque are used. Hindu is living in casteism with closed eyes. This video must open your eyes before it is too late" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು.
ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ " ಇಲ್ಲಿ ನೋಡಿ, ಮಸೀದಿಗಳಲ್ಲಿ ಮತ್ತು ದರ್ಗಾಗಳಲ್ಲಿ ಎಷ್ಟು ದೇಣಿಗೆ ಹಣ ಬರುತ್ತದೆ ಎಂದು. ಸಾವಿರಾರು ಹಿಂದೂಗಳು ಸಹ ಇಲ್ಲಿ ದೇಣಿಗೆಯನ್ನು ನೀಡುತ್ತಾರೆ. ಇಲ್ಲಿ ಮಸೀದಿ ದೇಣಿಗೆಗೆ ಸರ್ಕಾರ ತೆರಿಗೆ ವಿಧಿಸುವುದಿಲ್ಲ. ಆದರೆ, ಹಿಂದೂ ದೇವಸ್ಥಾನಕ್ಕೆ ಬರುವ ದೇಣಿಗೆಗೆ ತೆರಿಗೆ ವಿಧಿಸಲಾಗುತ್ತದೆ. ದೇವಸ್ಥಾನದ ಹಣದಿಂದ ಧರ್ಮಗುರುಗಳಿಗೆ ಸರ್ಕಾರ ಸಂಬಳ ಹಾಗೂ ಪಿಂಚಣಿಯನ್ನು ನೀಡುತ್ತದೆ. ಆದರೆ, ಮಸೀದಿಗೆ ನೀಡುವ ದೇಣಿಗೆಯನ್ನು ಯಾವ ರೀತಿಯ ಕಾರ್ಯಗಳಿಗೆ ಬಳಸುತ್ತಾರೆ ಎಂಬುದು ನಮಗೆಲ್ಲರಿಗೂ ಚೆನ್ನಾಗಿ ಗೊತ್ತು. ಹಿಂದುಗಳು ಇನ್ನು ಕಣ್ಣು ಮುಚ್ಚಿಕೊಂಡು ಜಾತಿವಾದದಲ್ಲಿ ಬದುಕುತ್ತಿದ್ದಾರೆ. ಇನ್ನು ತಡವಾಗುವ ಮೊದಲೇ ಈ ವಿಡಿಯೋವನ್ನು ನೋಡಿ ಈಗಲಾದರೂ ನಿಮ್ಮ ಕಣ್ಣು ತೆರೆಯಲಿ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು.
ನಮಗೆ ಕನ್ನಡ ಮಾಧ್ಯಮ ಸಂಸ್ಥೆಯಾದ ಟಿವಿ9 ಕನ್ನಡ ವೆಬ್ಸೈಟ್ನಲ್ಲಿ ಜೂನ್ 8,2023ರಂದು ಇದೇ ಸುದ್ದಿಗೆ ಕುರಿತು ಫ್ಯಾಕ್ಟ್ಚೆಕ್ ಮಾಡಿರುವುದನ್ನು ನಾವು ಕಂಡುಕೊಂಡೆವು. ವರದಿಗೆ ಶೀರ್ಷಿಕೆಯಾಗಿ ‘ಮಸೀದಿಗಳಲ್ಲಿ ಸಂಗ್ರಹವಾದ ಹಣಕ್ಕೆ ತೆರಿಗೆ ಇಲ್ಲ’, ಚೀಲಗಳಲ್ಲಿ ನೋಟು ತುಂಬುತ್ತಿರುವ ವಿಡಿಯೊ ಭಾರತದ್ದಲ್ಲ" ಎಂದು ಬರೆದು ವರದಿಯನ್ನು ಹಂಚಿಕೊಳ್ಳಲಾಗಿದೆ.
ಬಾಂಗ್ಲಾದೇಶದ ಮೂಲದ ಸುದ್ದಿವಾಹಿನಿ ಜಾಗೂ ನ್ಯೂಸ್ 24 ಮತ್ತು ಜಮುನಾ ಟಿವಿ ತಮ್ಮ ಯೂಟ್ಯೂಬ್ ಖಾತೆಯಲ್ಲಿ ಇದೇ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಾಣಬಹುದು. "পাগলা মসজিদের দানবাক্সে আবারও চমক! এবার মিললো ১৯ বস্তা টাকা | Kishoreganj Pagla Mosque | Jamuna TV" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ
ಶೀರ್ಷಿಕೆಗಳ ಪ್ರಕಾರ, ಈ ವೀಡಿಯೊವು ಬಾಂಗ್ಲಾದೇಶದ ಕಿಶೋರೆಗಂಜ್ನಲ್ಲಿರುವ ಪಾಗ್ಲಾ ಮಸೀದಿಗೆ ಸಂಬಂಧಿಸಿದ್ದು, ಅಲ್ಲಿರುವ ಮಸೀದಿಯ ದೇಣಿಗೆ ಪೆಟ್ಟಿಗೆಯಿಂದ ಹಣವನ್ನು ಎಣಿಕೆ ಮಾಡಲಾಗುತ್ತಿದೆ" ಎಂದು ಬರೆದು ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು.
ದಿ ಬ್ಯುಸಿನ್ಸ್ ಸ್ಟ್ಯಾಂಡರ್ಡ್ನ ವರದಿಯ ಪ್ರಕಾರ ಬಾಂಗ್ಲಾದೇಶದ ಪಾಗ್ಲಾ ಮಸೀದಿ ಅತ್ಯಂತ ಲಾಭದಾಯಕ ಧಾರ್ಮಿಕ ಸಂಸ್ಥೆಗಳಲ್ಲಿ ಒಂದು. ಹೀಗಾಗಿ ಮಸೀದಿಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಅಲ್ಲಿರುವ ದೇಣಿಗೆ ಪೆಟ್ಟಿಗೆಗಳನ್ನು ತೆರೆಯಲಾಗುತ್ತದೆ.ಹಾಗೆ ಬಂದಂತಹ ಹಣವನ್ನು ಪಗ್ಲಾ ಮಸೀದಿ, ಮದ್ರಸಾಗಳು, ಅನಾಥಾಶ್ರಮಗಳು ಮತ್ತು ಸಮಾಜ ಕಲ್ಯಾಣ ಉಪಕ್ರಮಗಳು ಸೇರಿದಂತೆ ವಿವಿಧ ಮಸೀದಿಗಳ ನಿರ್ವಹಣೆಗೆಗಅಗಿ ಖರ್ಚು ಮಾಡಲಾಗುತ್ತದೆ ಎಂದು ವರದಿಯಾಗಿರುವುದನ್ನು ನಾವು ಗಮನಿಸಬಹುದು.
ಹೀಗಾಗಿ, ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ವಿಡಿಯೋ ಶಿರಡಿ ಸಾಯಿ ಬಾಬಾ ಮಂದಿರಕ್ಕೆ ಸಂಬಂಧಿಸಿದ್ದಾಗಲೀ ಅಥವಾ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದಲ್ಲ. ವೈರಲ್ ಆದ ವಿಡಿಯೋ ಬಾಂಗ್ಲಾದೇಶದ ಕಿಶೋರ್ಗಂಜ್ನಲ್ಲಿರುವ ಪಾಗ್ಲಾ ಮಸೀದಿಯಲ್ಲಿ ಬಂದಂತಹ ದೇಣಿಗೆಯದು.