ಫ್ಯಾಕ್ಟ್ ಚೆಕ್ : ರಸ್ತೆಯಲ್ಲಿ ಹುಲಿ ನಡೆದು ಹೋಗುತ್ತಿರುವ ವಿಡಿಯೋ ಆಂಧ್ರದಲ್ಲ, ಮಧ್ಯಪ್ರದೇಶದ್ದು
ವೈರಲ್ ವೀಡಿಯೋ ಹಳೆಯದಷ್ಟೇ ಅಲ್ಲ, ತಪ್ಪಾದ ಸ್ಥಳವನ್ನು ಆರೋಪಿಸಿ ವೈರಲ್ ಮಾಡಲಾಗಿದೆ. ಇದು ಆಂಧ್ರಪ್ರದೇಶದಲ್ಲಿ ನಡೆದ ಘಟನೆಯಲ್ಲ.
Claim :
ಆಂಧ್ರಪ್ರದೇಶದ ಮಚೆರ್ಲಾ-ಯೆರ್ರಗೊಂಡಪಾಲೆಮ್ ರಸ್ತೆಯಲ್ಲಿ ಅಲೆದಾಡುತ್ತಿರುವ ಕಂಡ ಹುಲಿFact :
ಮಧ್ಯಪ್ರದೆಶದ ಪೆಂಚ್ ಹುಲಿ ಅಭಯಾರಣ್ಯದಲ್ಲಿ ಹುಲಿಯೊಂದು ರಸ್ತೆ ದಾಟುತ್ತಿರುವ 2022ರ ವಿಡಿಯೋ
ಆಂಧ್ರಪ್ರದೇಶದ ಮಚೆರ್ಲ- ಯೆರ್ರಗೊಂಡಪಾಲೆಮ್ ನಡುವಿನ ರಸ್ತೆಯಲ್ಲಿ ರಾತ್ರಿ ಹುಲಿಯೊಂದು ಓಡಾಡುತ್ತಿರುವುದಾಗಿ ಪ್ರತಿಪಾದಿಸುವ ವಿಡಿಯೋವೊಂದು ವಾಟ್ಸ್ಆಪ್ನಲ್ಲಿ ಹರಿದಾಡುತ್ತಿದೆ. ವಿಡಿಯೋದೊಂದಿಗೆ ನೀಡಲಾಗಿರುವ ಅಡಿಟಿಪ್ಪಣಿಯಲ್ಲಿ ರಾಜ್ಯದ ನಾಗರಿಕರು ಜಾಗ್ರತೆಯಿಂದ ಇರಬೇಕೆಂದು ಎಚ್ಚರಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಫ್ಯಾಕ್ಟ್ಚೆಕ್
ಮೊದಲನೆಯದಾಗಿ, ಈ ವಿಡಿಯೋ ಕಳೆದೊಂದು ವರ್ಷದಿಂದ ಇಂಟರ್ನೆಟ್ನಲ್ಲಿದೆ. ಇದೇ ವಿಡಿಯೋ ಬೇರೆ ಬೇರೆ ಊರಿನ ಹೆಸರಿನೊಂದಿಗೆ ವೈರಲ್ ಮಾಡಲಾಗಿದೆ. ಕೆಲವರು ತೆಲಂಗಾಣದ ವಾಂಕಿಡಿ ಮಂಡಲ್ ಎಂದು ಹೇಳಿದ್ದರೆ, ಇನ್ನು ಕೆಲವರು ಕರ್ನಾಟಕದ ದಾಂಡೇಲಿ-ಖಾನಪುರ ಎಂದು ಸ್ಥಳವನ್ನು ಉಲ್ಲೇಖಿಸಿದ್ದಾರೆ.
ಈ ವಿಡಿಯೋ ಹೀಗೆ ಹರಿದಾಡಿದಾಗಲೆಲ್ಲಾ, ಅರಣ್ಯ ಅಧಿಕಾರಿಗಳು ಗಾಳಿ ಸುದ್ದಿಗಳನ್ನು ತಳ್ಳಿ ಹಾಕಿ, ಸ್ಪಷ್ಟನೆ ನೀಡುತ್ತಾ ಬಂದಿದ್ದಾರೆ. ವಾಂಕಿಡಿ ಮಂಡಲ್ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಮತ್ತು ಗಸ್ತುಪಡೆಯು ವೈರಲ್ ವೀಡಿಯೋ ತಮ್ಮ ಪ್ರದೇಶದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತೆಲಂಗಾಣ ಟುಡೆಯೊಂದಿಗೆ ಮಾತನಾಡಿರುವ ಅಧಿಕಾರಿಗಳು, "ದೇಶದ ಇನ್ನಾವುದೋ ಮೂಲೆಯಲ್ಲಿ ವೈರಲ್ ಆದ ವಿಡಿಯೋವನ್ನು ಆಯ್ದುಕೊಂಡು, ಸಾರ್ವಜನಿಕರ ಗಮನಸೆಳೆಯುವುದಕ್ಕೆ ಮತ್ತು ತಮ್ಮ ಖುಷಿಗೆ ಮತ್ತೆ ಹರಿಯಬಿಡುತ್ತಾರೆ" ಎಂದು ಹೇಳಿದ್ದಾರೆ.
ಇದು ಕರ್ನಾಟಕದ ವಿಡಿಯೋ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹಿರಿಯ ಅರಣ್ಯಾಧಿಕಾರಿ, ವಿ ಯೇಡುಕೊಂಡಲು ಅವರು, ಇದು ತಪ್ಪು ಮಾಹಿತಿ ಮತ್ತು ಇಂತಹ ತಪ್ಪು ಮಾಹಿತಿ ಹರಿಯಬಿಡುವವರನ್ನು ಐಟಿ ಕಾಯ್ದೆಯಡಿಬಂಧಿಸಬಹುದು ಎಂದು ಎಚ್ಚರಿಸಿರುವುದಾಗಿ ವರದಿಯಾಗಿದೆ.
ವಾಸ್ತವದಲ್ಲಿ ಈ ವಿಡಿಯೋ ಆಗಸ್ಟ್ 2022ರಲ್ಲಿ, ಮಧ್ಯ ಪ್ರದೇಶದ ಪೆಂಚ್ ಹುಲಿ ಅಭಯಾರಣ್ಯದಲ್ಲಿ ಸೆರೆ ಹಿಡಿದುದಾಗಿದೆ. ಹುಲಿಯೂ ಪೆಂಚ್ ಹುಲಿ ಅಭಯಾರಣ್ಯದಲ್ಲಿರುವ ರಸ್ತೆಯನ್ನು ದಾಟುತ್ತಿರುವ ದೃಶ್ಯವು ವಿಡಿಯೋದಲ್ಲಿದೆ. ಇದು ಪೆಂಚ್ ಅಭಯಾರಣ್ಯದ ಅಧಿಕೃತ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ.
ಹಾಗಾಗಿ, ವೈರಲ್ ವೀಡಿಯೋ ಹಳೆಯದಷ್ಟೇ ಅಲ್ಲ, ತಪ್ಪಾದ ಸ್ಥಳವನ್ನು ಆರೋಪಿಸಿ ವೈರಲ್ ಮಾಡಲಾಗಿದೆ. ಇದು ಆಂಧ್ರಪ್ರದೇಶದಲ್ಲಿ ನಡೆದ ಘಟನೆಯಲ್ಲ. ಬದಲಿಗೆ ಮಧ್ಯಪ್ರದೇಶದಲ್ಲಿ ಕಳೆದ ವರ್ಷ ನಡೆದ ಘಟನೆಯಾಗಿದೆ. ಹಾಗಾಗಿ ಈ ವಿಡಿಯೋದ ಪ್ರತಿಪಾದನೆ ಸುಳ್ಳು.