ಫ್ಯಾಕ್ಟ್ಚೆಕ್: 2024 ರ ಚುನಾವಣೆಗಳಲ್ಲಿ ಟಾಲಿವುಡ್ ನಟರು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಿಲ್ಲ.
2024 ರ ಚುನಾವಣೆಗಳಲ್ಲಿ ಟಾಲಿವುಡ್ ನಟರು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಿಲ್ಲ.
Claim :
ತೆಲುಗು ಚಿತ್ರರಂಗದ ನಟರು ಮತ್ತು ನಿರ್ದೇಶಕರು ವೈಎಸ್ಆರ್ಸಿಪಿ ಪಕ್ಷಕ್ಕೆ ಬೆಂಬಲ ನೀಡಿದ್ದಾರೆFact :
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಚಿತ್ರಗಳನ್ನು ಎಡಿಟ್ ಮಾಡಿ ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಎಪಿಯಲ್ಲಿ ದಾಖಲೆ ಮಟ್ಟದಲ್ಲಿ ಮತದಾನ ದಾಖಲಾಗಿದೆ ಎಂದು ಸಿಇಒ ಮುಖೇಶ್ ಕುಮಾರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಒಟ್ಟು ಶೇ.81.86ರಷ್ಟು ಮತದಾನ ದಾಖಲಾಗಿದ್ದು, ಶೇ.80.59ರಷ್ಟು ಮತದಾನ ಇವಿಎಂ ಹಾಗೂ ಶೇ.1.10ರಷ್ಟು ಅಂಚೆ ಮತಪತ್ರಗಳ ಮೂಲಕ ದಾಖಲಾಗಿದೆ. ವಿಶಾಖಪಟ್ಟಣಂನಲ್ಲಿ ಅತಿ ಕಡಿಮೆ ಶೇಕಡಾ 68.63 ಮತದಾನವಾಗಿದೆ. ಇನ್ನು ಕ್ಷೇತ್ರಗಳ ಪೈಕಿ ನೋಡುವದಾದರೆ, ದರ್ಶಿಯಲ್ಲಿ ಅತಿ ಹೆಚ್ಚು ಅಂದರೆ ಶೇ.90.91ರಷ್ಟು ಮತದಾನವಾಗಿದೆ. ತಿರುಪತಿ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.63.32ರಷ್ಟು ಮತದಾನ ನೋಂದಣಿಯಾಗಿದೆ ಎಂದು ಮುಕೇಶ್ ಕುಮಾರ್ ತಿಳಿಸಿದರು.
ಚುನಾವಣಾ ಫಲಿತಾಂಶಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಲವು ನಕಲಿ ಪೋಸ್ಟ್ಗಳು ಹರಿದಾಡುತ್ತಿವೆ. ಟಾಲಿವುಡ್ ಹೀರೋಗಳಾದ ಜೂನಿಯರ್ ಎನ್ಟಿಆರ್, ಮಹೇಶ್ ಬಾಬು, ಸೂರ್ಯ, ಪ್ರಭಾಸ್ ಮುಂತಾದವರ ಚಿತ್ರಗಳಿರುವ ಪೋಸ್ಟ್ಗಳಲ್ಲಿ ನಟರು ವೈಸಿಪಿಯನ್ನು ಬೆಂಬಲಿಸುವ ವಿಭಿನ್ನ ಸಂದೇಶಗಳೊಂದಿಗೆ ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
VOTE FOR FAN
''ಗುಂಟೂರು ಕಾರಂ ಸಿನಿಮಾ ಚಿತ್ರೀಕರಣದ ವೇಳೆ ಗುಂಟೂರಿನ ಕಾಳುಮೆಣಸು ರೈತರನ್ನು ಹಲವು ಬಾರಿ ನಾನು ಭೇಟಿಯಾಗಿದ್ದೆ. ಕಲ್ಯಾಣ ಯೋಜನೆಗಳಿಂದ ಧೈರ್ಯವಾಗಿ ಕೃಷಿ ಮಾಡುತ್ತಿದ್ದೇವೆ ಎಂದು ಅವರೆಲ್ಲ ಹೇಳಿದಾಗ ನನಗೆ ತುಂಬಾ ಖುಷಿಯಾಯಿತು. ಆದರೆ ವೈಎಸ್ಆರ್ಸಿಪಿ ಪಕ್ಷವನ್ನು ಸೋಲಿಸಲು ಟಿ.ಡಿ.ಪಿ. ರೈತರಿಗೆ ಸಕಾಲದಲ್ಲಿ ದೊರೆಯುತ್ತಿದ್ದ ಇನ್ಪುಟ್ ಸಬ್ಸಿಡಿಯನ್ನು ಬಿಜೆಪಿ ಇದೀಗ ನಿಲ್ಲಿಸಿದೆ, ಹೀಗಾಗಿ ರೈತರೆಲ್ಲರೂ ವೈಎಸ್ಆರ್ಸಿಪಿಗೆ ಮತ ಹಾಕಿ" - MAHESH BABU ದ್ದಾರೆ ಎಂದ ಪೋಸ್ಟ್ ಮಾಡಿದ್ದಾರೆ.
ಜೂನಿಯರ್ ಎನ್ಟಿಆರ್ ಅವರ ಹೆಸರಿನಲ್ಲೂ ಪೋಸ್ಟ್ವೊಂದು ವೈರಲ್ ಆಗಿತ್ತು. ವೈರಲ್ ಪೋಸ್ಟ್ನಲ್ಲಿ ''ನನ್ನ ತಂದೆಯ ಮರಣದ ನಂತರ ನಾನು ರಾಜಕೀಯದಿಂದ ದೂರ ಉಳಿದಿದ್ದೇನೆ. ಆದರೆ, ತಮ್ಮ ರಾಜಕೀಯ ಲಾಭಕ್ಕಾಗಿ ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿಯನ್ನು ತೆಗೆದು ಹಾಕಲು ಮುಂದಾಗಿರುವ ಬಿಜೆಪಿ, ಮುಸ್ಲಿಂ ಅಲ್ಪಸಂಖ್ಯಾತರಿಗೆ ದ್ರೋಹ ಬಗೆದಿರುವುದು ಸರಿಯಲ್ಲ. ಇದರಿಂದಾಗಿ ವೈಎಸ್ಆರ್ಸಿಪಿ ಪಕ್ಷಕ್ಕೆ ಗೆಲುವು ಬಹುತೇಕ ಖಚಿತವಾಗಿದೆ" ಎಂದು ಪೋಸ್ಟ್ ಮಾಡಿದ್ದರು.
ಫ್ಯಾಕ್ಟ್ಚೆಕ್
ವೈರಲ್ ಪೋಸ್ಟ್ಗಳಲ್ಲಿ ಯಾವುದೇ ಸತ್ಯಾಂವಿಲ್ಲ. ಈ ಚಿತ್ರಗಳನ್ನು ಎಡಿಟ್ ಮಾಡಲಾಗಿದೆ. ಚಿತ್ರರಂಗದ ಗಣ್ಯರು ವೈಸಿಪಿಯನ್ನು ಬೆಂಬಲಿಸುವ ಯಾವುದೇ ಹೇಳಿಕೆಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿಲ್ಲ.
ನಾವು ವೈರಲ್ ಆದ ಜಾಹೀರಾತುಗಳ ಕುರಿತ ವರದಿಗಳಿಗಾಗಿ ಆನ್ಲೈನ್ನಲ್ಲಿ ಹುಡುಕಿದಾಗ, ನಮಗೆ ಈ ವರದಿಗೆ ಸಂಬಂಧಿಸಿದ ಯಾವುದೇ ಪುರಾವೆಗಳು ಸಿಗಲಿಲ್ಲ.
ಡಾರ್ಲಿಂಗ್ ಪ್ರಭಾಸ್ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದಾಗ, ಅವರು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವ ಪೋಸ್ಟ್ಗಳನ್ನು ಹಂಚಿಕೊಂಡಿರುವುದು ನಮಗೆ ಕಂಡುಬಂದಿಲ್ಲ.
Our MIGHTY REBEL STAR #Prabhas has commenced shooting for #Kannappa. 🔥🔥🔥#PrabhasJoinsKannappa pic.twitter.com/L7hgtTMJdT
— Prabhas FC (@PrabhasRaju) May 9, 2024
ನಟ ಸೂರ್ಯ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲೂ ಯಾವುದೇ ರಾಜಕೀಯ ಪಾರ್ಟಿಗೆ ಬೆಂಬಲಿಸುವ ಪೋಸ್ಟ್ ಕಂಡುಬಂದಿಲ್ಲ.. ಅವರ ಇತ್ತೀಚಿನ ಹೊಸ ಚಿತ್ರದ ಪೋಸ್ಟರ್ ಇಲ್ಲಿರುವುದನ್ನು ನಾವು ಕಂಡುಕೊಂಡೆವು.
ನಾವು ಜೂನಿಯರ್ ಎನ್ಟಿಆರ್ ಅವರ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳನ್ನು ಹುಡುಕಿದಾಗ , ನಮಗೆ ರಾಜಕೀಯಕ್ಕೆ ಸಂಬಂಧಿಸಿದ ಪೋಸ್ಟ್ ಕಂಡುಬಂದಿಲ್ಲ.
ಟಾಲಿವುಡ್ ಹೀರೋ ಮಹೇಶ್ ಬಾಬು ಅವರ ಸೋಷಿಯಲ್ ಮೀಡಿಯಾ ಖಾತೆಗಳನ್ನೂ ಪರಿಶೀಲಿಸಿದಾಗ, ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವ ಪೋಸ್ಟ್ಗಳು ಕಂಡುಬಂದಿಲ್ಲ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಆಂಧ್ರಪ್ರದೇಶದ ಚುನಾವಣೆಯ ವೇಳೆ ಚಿತ್ರರಂಗದ ನಟರು ಯಾವ ರಾಜಕೀಯ ಪಕ್ಷಕ್ಕೂ ಬೆಂಬಲ ನೀಡಲು ಸೂಚಿಸಿಲ್ಲ. ಪೋಸ್ಟ್ಗಳನ್ನು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಆಂಧ್ರಪ್ರದೇಶ ಚುನಾವಣೆ ವೇಳೆ ಹಲವು ಚಿತ್ರರಂಗದ ಸೆಲೆಬ್ರಿಟಿಗಳು ವೈಸಿಪಿಗೆ ಬೆಂಬಲ ನೀಡಿದ್ದಾರೆ ಎಂಬ ಮಾತು ಸುಳ್ಳು. ವೈರಲ್ ಚಿತ್ರಗಳು ಜನರನ್ನು ದಾರಿ ತಪ್ಪಿಸುವ ಉದ್ದೇಶವನ್ನು ಹೊಂದಿವೆ.