ಫ್ಯಾಕ್ಟ್ಚೆಕ್:ವಿದ್ಯಾವಂತರಿಗೆ ಮತ ಹಾಕಿ ಹೇಳಿಕೆ ವಿವಾದದ ಹಿನ್ನೆಲೆಯಲ್ಲಿ ಗಾಯಕ ಸೋನು ನಿಗಮ್ ಅನ್ಅಕಾಡೆಮಿಗೆ ಬೆಂಬಲಿಸಿ ಟ್ವೀಟ್ ಮಾಡಿಲ್ಲ
ಫ್ಯಾಕ್ಟ್ಚೆಕ್:ವಿದ್ಯಾವಂತರಿಗೆ ಮತ ಹಾಕಿ ವಿವಾದದ ಹಿನ್ನೆಲೆಯಲ್ಲಿ ಗಾಯಕ ಸೋನು ನಿಗಮ್ ಅನ್ಅಕಾಡೆಮಿಗೆ ಬೆಂಬಲಿಸಿ ಟ್ವೀಟ್ ಮಾಡಿಲ್ಲ
Claim :
ಕರಣ್ ಕಾಂಗ್ವಾನ್ ವಿವಾದ ಹಿನ್ನೆಲೆಯಲ್ಲಿ ಗಾಯಕ ಸೋನು ನಿಗಮ್ ಅನ್ಅಕಾಡೆಮಿ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.Fact :
ಸೋನು ನಿಗಮ್ ಹೆಸರಿನ ವ್ಯಕ್ತಿಯೊಬ್ಬರು ಅನ್ ಅಕಾಡೆಮಿ ಬೆಂಬಲಿಸಿರುವುದು ನಿಜ. ಆದರೆ ಆತ ಗಾಯಕ ಸೋನು ನಿಗಮ್ ಅಲ್ಲ
ಸೋನು ನಿಗಮ್ ಹೆಸರು ಹೊತ್ತ ಎಕ್ಸ್ನ (ಈ ಮೊದಲು ಟ್ವಿಟರ್) ಅಧಿಕೃತ ಖಾತೆಯಿಂದ ಪ್ರಕಟವಾಗಿರುವ ಟ್ವೀಟ್ವೊಂದು ಸೋಷಿಯಲ್ ಮೀಡಿಯಾದಲ್ಲಿ, ಗಾಯಕ ಸೋನು ನಿಗಮ್ ಅವರು ಶಿಕ್ಷಣ ಕಂಪನಿ ಅನ್ಅಕಾಡೆಮಿ ಬೆಂಬಲಿಸಿರುವುದಾಗಿ ಪ್ರತಿಪಾದಿಸಿ ವೈರಲ್ ಆಗಿದೆ. ಇದು ಇತ್ತೀಚೆಗೆ ಅನ್ಅಕಾಡೆಮಿಯ ಶಿಕ್ಷಕರೊಬ್ಬರು ಹೇಳಿಕೆ ನೀಡಿ, ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಮಾಡಿರುವ ಟ್ವೀಟ್ ಎಂದು ಹೇಳಲಾಗಿದೆ.
ಕರಣ್ ಸಾಂಗ್ವಾನ್ 'ವಿದ್ಯಾವಂತ ಅಭ್ಯರ್ಥಿಗಳಿಗೆ ಮತ ಹಾಕಿ' ಎಂದು ತಮ್ಮ ವಿದ್ಯಾರ್ಥಿಗಳಿಗೆ ಹೇಳಿದ ವಿಡಿಯೋ ಬಹಿರಂಗವಾಗಿ ವಿವಾದವಾಗಿತ್ತು.
ಟ್ವೀಟ್ನಲ್ಲಿ, ಕರಣ್ ಸಾಂಗ್ವಾನ್ ಅವರನ್ನು ಕೆಲಸದಿಂದ ವಜಾ ಮಾಡಿದ್ದಕ್ಕೆ ಧನ್ಯವಾದಗಳು ಅನ್ಅಕಾಡೆಮಿ. ಸುಮ್ಮನೆ ಟೀಕೆ ಮಾಡುವ ಬದಲು ವಿದ್ಯಾರ್ಥಿಗಳ ಸುಧಾರಣೆಗೆ ಹೆಚ್ಚು ಶ್ರಮಹಾಕುವತ್ತಾ ಗಮನಹರಿಸಬೇಕಿತ್ತು. ವಿದ್ಯಾರ್ಥಿಗಳಿಗೆ ಬೋಧಿಸುವುದ ಶಿಕ್ಷಕನ ಕೆಲಸವೇ ಹೊರತು, ಪ್ರವಚನ ನೀಡುವುದಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಪ್ರಜಾಪ್ರಭುತ್ವ ಮತ್ತು ದೇಶದ ಜನ ತಮ್ಮ ನಾಯಕನಾರು ಎಂಬುದನ್ನು ನಿರ್ಧರಿಸಲಿ' ಎಂದು ಟ್ವೀಟ್ನಲ್ಲಿ ಬರೆಯಲಾಗಿದೆ. (ಇಲ್ಲಿ ಓದಿ)
ಹಲವು ಮಾಧ್ಯಮ ಸಂಸ್ಥೆಗಳು ಬಾಲಿವುಡ್ ಹಿನ್ನೆಲೆಗಾಯಕ ಅನ್ ಅಕಾಡೆಮಿ ಬೆಂಬಲಿಸಿ, ಟ್ವೀಟ್ ಮಾಡಿದ್ದಾರೆ ಎಂದು ವರದಿ ಮಾಡಿದವು. ಭಾರತ್ ಟೈಮ್ಸ್ ಕೂಡ, "ಜನಪ್ರಿಯ ಗಾಯಕ ಸೋನು ನಿಗಮ್ ತಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಿದ್ದು, ಶಿಕ್ಷಕನನ್ನು ವಜಾ ಮಾಡಿದ್ದಕ್ಕೆ ಅನ್ಅಕಾಡೆಮಿಗೆ ಧನ್ಯವಾದ ಹೇಳಿದ್ದಾರೆ" ಎಂದು ವರದಿ ಮಾಡಿತ್ತು.
ಫ್ಯಾಕ್ಟ್ ಚೆಕ್
ಸೋನು ನಿಗಮ್ ಹೆಸರಿನ ಟ್ವೀಟರ್ ಖಾತೆ ಹೊಂದಿರುವ ವ್ಯಕ್ತಿಯ ಯೂಸರ್ ನೇಮ್, @sonunigamsingh. ಖಾತೆಯ ವ್ಯಕ್ತಿಗತ ವಿವರ ಹೇಳುವಂತೆ, ಬಿಹಾರದ ಕ್ರಿಮಿನಲ್ ವಕೀಲ. ಇನ್ಸ್ಟಾಗ್ರಾಮ್ ಖಾತೆಯನ್ನೂ ಟ್ಯಾಗ್ ಮಾಡಲಾಗಿದ್ದು, ಇದರಲ್ಲೂ ಗಾಯಕ ಸೋನು ನಿಗಮ್ ಕಾಣಸಿಗುವುದಿಲ್ಲ. ಇದು ಏನನ್ನು ಸಾಬೀತು ಮಾಡುತ್ತದೆಂದರೆ ಅನ್ಅಕಾಡೆಮಿ ಬೆಂಬಲಿಸಿ ಟ್ವೀಟ್ ಮಾಡಿರುವ ವ್ಯಕ್ತಿ ಗಾಯಕ ಸೋನು ನಿಗಮ್ ಅಲ್ಲ.
ಗಾಯಕ ಸೋನು ನಿಗಮ್ ಅವರ ವಿಷಯವನ್ನೇ ಮೊದಲು ನೋಡೋಣ. ಅಜಾನ್ ವಿಷಯದಲ್ಲಿ ವಿವಾದಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಗಾಯಕ ಸೋನು ನಿಗಮ್ 2017ರ ಮೇ 24ರಂದು ಸರಣಿ ಟ್ವೀಟ್ ಮಾಡಿ ತಮ್ಮ ಟ್ವಿಟರ್ ಖಾತೆ ಡಿಲೀಟ್ ಮಾಡುವುದಾಗಿ ಘೋಷಿಸಿದ್ದರು. ಅಭಿವ್ಯಕ್ತಿ ಸ್ವಾತಂತ್ಯ್ರಕ್ಕೆ ಗೌರವ ಇಲ್ಲದ ಕಾರಣ ಟ್ವಿಟರ್ ತೊರೆಯುವುದಾಗಿ ಘೋಷಿಸಿದ್ದರು. ಹಾಗಾಗಿ ಈ ಸುದ್ದಿ, ಸುಳ್ಳು. ಇನ್ನಷ್ಟು ಓದಲು, ಇಲ್ಲಿ ಮತ್ತು ಇಲ್ಲಿ ಕ್ಲಿಕ್ ಮಾಡಿ.