ಫ್ಯಾಕ್ಟ್ಚೆಕ್: 2018ರ ವಿಡಿಯೋವನ್ನು ಇತ್ತೀಚಿನದ್ದೆಂದು ಹಂಚಿಕೊಳ್ಳಲಾಗುತ್ತಿದೆ
2018ರ ವಿಡಿಯೋವನ್ನು ಇತ್ತೀಚಿನದ್ದೆಂದು ಹಂಚಿಕೊಳ್ಳಲಾಗುತ್ತಿದೆ

Claim :
ಯುಪಿಯ ಜಲಾಲಾಬಾದ್ನಲ್ಲಿ, ರೌಡಿಗಳು ಮನೆಗೆ ನುಗ್ಗಿ ನೇತ್ರಮ್ ಕುಶ್ವಾಹಾ ಮತ್ತು ಅವರ ಕುಟುಂಬವನ್ನು ಥಳಿಸಿದ್ದಾರೆFact :
ವೈರಲ್ ಆದ ವಿಡಿಯೋ 2018ರದ್ದು
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಮಕ್ಕಳು ವ್ಯಕ್ತಿಯ ಪಕ್ಕದಲ್ಲಿ ಕೂತು ಅಳುತ್ತಿರುವುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗಿದೆ. ಪ್ರಗ್ಯಾ ಖುಷಿ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇಬ್ಬರು ಮಕ್ಕಳು ರಸ್ತೆಯಲ್ಲಿ ಬಿದ್ದಿರುವ ತಂತೆಯನ್ನು ಹಿಡಿದು ಅಳುತ್ತಿರುವ ಒಂದು ವಿಡಿಯೋವನ್ನು ಹಂಚಿಕೊಂಡು ʼजलालाबाद के गांव एतमातपुर में आज सुबह 6 बजे दबंगों ने घर में घुसकर नेतराम कुशवाहा व् उसके परिवार को वेहरैमी से पीटा जब घायल अवस्था में थाने पहुंचा तो पुलिसकर्मियों ने भी नहीं सुनी मेडिकल के बहाने थाने के गेट पर किस तरह बच्चे अपने पिता को उठा रहे हैं यह तमाशा देख रहे थे तमाम लोगो व् पुलिस कर्मियो को भी दिल नहीं पिघला कभी देर वाद में हालात को देखते हुए रिक्सा से पीड़ित को अस्पताल भेजा गयाʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ ಇಂದು ಬೆಳಿಗ್ಗೆ 6 ಗಂಟೆಗೆ, ಜಲಾಲಾಬಾದ್ನ ಎತಮತ್ಪುರ ಗ್ರಾಮದಲ್ಲಿ, ಗೂಂಡಾಗಳು ಮನೆಗೆ ನುಗ್ಗಿ ನೇತ್ರಮ್ ಕುಶ್ವಾಹ ಮತ್ತು ಅವರ ಕುಟುಂಬವನ್ನು ಕ್ರೂರವಾಗಿ ಥಳಿಸಿದ್ದಾರೆ. ಗಾಯಗೊಂಡ ಸ್ಥಿತಿಯಲ್ಲಿ ಅವರು ಪೊಲೀಸ್ ಠಾಣೆಗೆ ಬಂದಾಗ, ಪೊಲೀಸರು ಸಹ ಅವರ ಮಾತನ್ನು ಕೇಳಲಿಲ್ಲ. ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ಮಕ್ಕಳು ತಮ್ಮ ತಂದೆಯನ್ನು ಪೊಲೀಸ್ ಠಾಣೆಯ ಗೇಟ್ನಿಂದ ಹೇಗೆ ಕರೆದುಕೊಂಡು ಹೋಗುತ್ತಿದ್ದರು. ನೆರೆದಿದ್ದ ಜನರು ಈ ದೃಶ್ಯವನ್ನು ನೋಡುತ್ತಿದ್ದರು ಮತ್ತು ಪೊಲೀಸ್ ಸಿಬ್ಬಂದಿಯ ಹೃದಯವೂ ಕರಗಲಿಲ್ಲ. ಸ್ವಲ್ಪ ಸಮಯದ ನಂತರ, ಪರಿಸ್ಥಿತಿಯನ್ನು ನೋಡಿ ಅವರನ್ನು ರಿಕ್ಷಾದಲ್ಲಿ ಆಸ್ಪತ್ರೆಗೆ ಕಳುಹಿಸಲಾಯಿತುʼ ಎಂದು ಬರೆದಿರುವುದನ್ನು ನೋಡಬಹುದು. ವೈರಲ್ ಪೋಸ್ಟ್ನಲ್ಲಿ ಈ ಘಟನೆಯು ಜನವರಿ 24, 2025 ರಂದು ಸಂಭವಿಸಿದೆ ಎಂದು ವಿವರಿಸಲಾಗಿದೆ. ಯುಪಿಯ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ವೀಡಿಯೊಗಳ ಮೂಲಕ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ
ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನಾವಿಲ್ಲಿ ನೋಡಬಹುದು.
ಜನವರಿ 24, 2025ರಂದು ʼನೆಟ್ವರ್ಕ್ ಟೈಮ್ಸ್ʼ ಎಂಬ ಯೂಟ್ಯೂಬ್ ಖಾತೆಯಲ್ಲಿ "जलालाबाद: दबंगों की दबंगई, पीड़ित की गुहार पर पुलिस की बेरुखीʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ಇಬ್ಬರು ಬಾಲಕರು ಕೂತು ಅಳುತ್ತಿರುವುದನ್ನು ನಾವಿಲ್ಲಿ ನೋಡಬಹುದು.
ಜನವರಿ 24, 2025 ʼಸರೋಜ್ ಯಾದದ್ʼ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ʼमा० मुख्यमंत्री जी एवं मा० पुलिस महानिदेशक Up जलालाबाद थाना क्षेत्र के गाँव एतमातपुर में नेतराम कुशवाहा व उसके परिवार को दबंगो द्वारा घर में पीटा गया जब ये शिकायत करने थाने गया तो पुलिस ने थाने के गेट पर इसको घायल अवस्था में छोड़ दियाʼ ಎಂಬ ಶೀರ್ಷಿಕೆಯನ್ನಿಡಿ ವಿಡಿಯೋವನ್ನು ಪೋಸ್ಟ್ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ ಮಾನ್ಯ ಮುಖ್ಯಮಂತ್ರಗಳೇ, ಪೊಲೀಸ್ ಮಹಾನಿರ್ದೇಶಕರೇ, ಜಲಾಲಾಬಾದ್ನ ಎತಮತ್ಪುರ ಗ್ರಾಮದಲ್ಲಿ, ಗೂಂಡಾಗಳು ಮನೆಗೆ ನುಗ್ಗಿ ನೇತ್ರಮ್ ಕುಶ್ವಾಹ ಮತ್ತು ಅವರ ಕುಟುಂಬವನ್ನು ಕ್ರೂರವಾಗಿ ಥಳಿಸಿದರು. ಈ ಕುರಿತು ಗಾಯಗೊಂಡ ಸ್ಥಿತಿಯಲ್ಲಿ ಅವರು ಪೊಲೀಸರಿಗೆ ದೂರು ಕೊಡಲು ಹೋದಾಗ ಪೊಲೀಸರು ಸಹ ಅವರ ಮಾತನ್ನು ಕೇಳಲಿಲ್ಲ ಪೊಲೀಸರು ಅವರನ್ನು ಪೊಲೀಸ್ ಠಾಣೆಯ ಗೇಟ್ನಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಬಿಟ್ಟು ಹೋದರು ಎಂಬ ಶೀರ್ಷಿಕೆಯೊಂದಿಗಿರುವುದನ್ನು ನಾವಿಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಈ ಘಟನೆ ನಡೆದದ್ದು ಇತ್ತೀಚಿಗಲ್ಲ 2018ರ ವಿಡಿಯೋ ಇದಾಗಿದೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೂವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಮೇ 5,2018ರಲ್ಲಿ ʼಪರಶುರಾಮ್ಪರ ಸಮಾಚಾರʼ ಎಂಬ ಫೇಸ್ಬುಕ್ ಖಾತೆದಾರ ತನ್ನ ಖಾತೆಯಲ್ಲಿ ʼಇಂದು ಬೆಳಿಗ್ಗೆ 6 ಗಂಟೆಗೆ, ಜಲಾಲಾಬಾದ್ನ ಎತಮತ್ಪುರ ಗ್ರಾಮದಲ್ಲಿ, ಗೂಂಡಾಗಳು ಮನೆಗೆ ನುಗ್ಗಿ ನೇತ್ರಮ್ ಕುಶ್ವಾಹ ಮತ್ತು ಅವರ ಕುಟುಂಬವನ್ನು ಕ್ರೂರವಾಗಿ ಥಳಿಸಿದ್ದಾರೆ. ಗಾಯಗೊಂಡ ಸ್ಥಿತಿಯಲ್ಲಿ ಅವರು ಪೊಲೀಸ್ ಠಾಣೆಗೆ ಬಂದಾಗ, ಪೊಲೀಸರು ಸಹ ಅವರ ಮಾತನ್ನು ಕೇಳಲಿಲ್ಲ. . ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ಮಕ್ಕಳು ತಮ್ಮ ತಂದೆಯನ್ನು ಪೊಲೀಸ್ ಠಾಣೆಯ ಗೇಟ್ನಿಂದ ಹೇಗೆ ಕರೆದುಕೊಂಡು ಹೋಗುತ್ತಿದ್ದರು. ನೆರೆದಿದ್ದ ಜನರು ಈ ದೃಶ್ಯವನ್ನು ನೋಡುತ್ತಿದ್ದರು ಮತ್ತು ಪೊಲೀಸ್ ಸಿಬ್ಬಂದಿಯ ಹೃದಯವೂ ಕರಗಲಿಲ್ಲ. ಸ್ವಲ್ಪ ಸಮಯದ ನಂತರ, ಪರಿಸ್ಥಿತಿಯನ್ನು ನೋಡಿ ಅವರನ್ನು ರಿಕ್ಷಾದಲ್ಲಿ ಆಸ್ಪತ್ರೆಗೆ ಕಳುಹಿಸಲಾಯಿತುʼ ಎಂಬ ಶೀರ್ಷಿಕೆಯನ್ನೀಡಿ ಪೋಸ್ಟ್ ಮಾಡಿರುವುದನ್ನು ನೋಡಬಹುದು. ಇದೇ ಶೀರ್ಷಿಕೆಯನ್ನು ಇತ್ತೀಚಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವಿಗೂ ಸಹ ನೀಡಿ ಪೋಸ್ಟ್ ಮಾಡಲಾಗುತ್ತಿದೆ.
जागो भाई जागो| "अब देखना है की इस बेसहारा (गरीब)को कौन नेता मंत्री (सत्ता मे बैठा)व समाजिक सगठंन मद्दत करने पहुँचेगा" इसी लिए कहता हूँ अपना घर (जन अधिकार पार्टी)को मज़बूत करो ताकि आपकोभी न्याय के लिए न भटकना पड़े| ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಎದ್ದೇಳು ಸಹೋದರ ಎದ್ದೇಳು. "ಈಗ ನಾವು ಯಾವ ನಾಯಕ, ಯಾವ ಸಚಿವರು, ಯಾವ ಸಾಮಾಜಿಕ ಸಂಘಟನೆಯವರು ಈ ಅಸಹಾಯಕ ಬಡ ವ್ಯಕ್ತಿಗೆ ಸಹಾಯ ಮಾಡಲು ಬರುತ್ತಾರೆಂದು ನೋಡಬೇಕು" ಅದಕ್ಕಾಗಿಯೇ ನಾನು ಹೇಳುತ್ತಿರುವುದು ನಿಮ್ಮ ಮನೆಯನ್ನು (ಜನ ಅಧಿಕಾರ್ ಪಕ್ಷ) ಬಲಪಡಿಸಿಕೊಳ್ಳಿ, ಇದರಿಂದ ನೀವು ಕೂಡ ನ್ಯಾಯಕ್ಕಾಗಿ ಅಲೆದಾಡಬೇಕಾಗಿಲ್ಲʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಅಮರ್ ಉಜಾಲಾ ಎಂಬ ವೆಬ್ಸೈಟ್ನಲ್ಲಿ ʼधारदार हथियार से प्रहार कर भांजे की हत्याʼ ಎಂಬ ಹೆಡ್ಲೈನ್ನೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು.
ಜನವರಿ 24, 2025ರಂದು ʼಶಹಜಹಾನ್ಪುರ್ ಪೊಲೀಸ್ರ ಅಧಿಕೃತ ಎಕ್ಸ್ ಖಾತೆಯಲ್ಲಿ ʼआज दिनांक 24.01.25 को थाना जलालाबाद क्षेत्र के गांव एतमातपुर की वायरल हो रहे ट्वीट/वीडियो में लगाये गये आरोप असत्य व निराधार है,शाहजहांपपुर पुलिस उक्त आरोपों का खंड़न करती है।ʼ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿರುವುದನ್ನು ನೋಡಬಹುದು. ʼಜಲಾಲಾಬಾದ್ ಪೊಲೀಸ್ ಠಾಣೆ ಪ್ರದೇಶದ ಎತಮತ್ಪುರ ಗ್ರಾಮದಲ್ಲಿ ಇಂದು 24.01.25 ರಂದು ವೈರಲ್ ಆಗುತ್ತಿರುವ ಟ್ವೀಟ್/ವೀಡಿಯೊದಲ್ಲಿ ಮಾಡಲಾದ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿವೆ ಎಂದು ಶಹಜಹಾನ್ಪುರ ಪೊಲೀಸರು ಈ ಆರೋಪಗಳನ್ನು ನಿರಾಕರಿಸಿದ್ದಾರೆ.ʼ ಎಂಬ ಶೀರ್ಷಿಕೆಯನ್ನು ನೋಡಬಹುದು. ಪೋಸ್ಟ್ನಲ್ಲಿ ಕಾಣುವ ಶಹಜಹಾನ್ಪುರ ವರದಿಯಲ್ಲಿ ʼಜಲಾಲಾಬಾದ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಈ ವಿಡಿಯೋವನ್ನು ತನಿಖೆ ಮಾಡಿದ್ದಾರೆ ಮತ್ತು ಇದು 2018 ರಲ್ಲಿ ನಡೆದ ಘಟನೆಗೆ ಸಂಬಂಧಿಸಿದೆ ಎಂದು ಅವರು ವಿವರವಾದ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ. ಈ ವಿಡಿಯೋ ರಣವೀರ್ ಮತ್ತು ಮದನ್ ಪಾಲ್ ಮತ್ತು ನೇತ್ರಮ್ ಎಂಬ ಇಬ್ಬರು ವ್ಯಕ್ತಿಗಳ ನಡುವಿನ ಜಗಳಕ್ಕೆ ಸಂಬಂಧಿಸಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಉತ್ತರ ಪ್ರದೇಶದ ಶಹಜಹಾನ್ಪುರದ ಎತ್ಮಾದ್ಪುರ, ಜಲಾಲಾಬಾದ್ನಲ್ಲಿ ಈ ಘಟನೆ ನಡೆದಿದೆ. ಈ ಜಗಳದ ವೇಳೆ ನೇತ್ರಮ್ ರವೀರ್ ಅವರ ಮಗ ಸರೋಜ್ ಕುಮಾರ್ ಗೆ ಸಲಿಕೆಯಿಂದ ಹೊಡೆದಿದ್ದಾನೆ. ಎಫ್ಐಆರ್ ಸಂಖ್ಯೆ 230/2018 ನೊಂದಿಗೆ ಪೊಲೀಸ್ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆʼ ಎಂದು ವರದಿಯಾಗಿರುವುದನ್ನು ನೋಡಬಹುದು.
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಈ ಘಟನೆ ನಡೆದದ್ದು ಇತ್ತೀಚಿಗಲ್ಲ 2018ರ ವಿಡಿಯೋ ಇದಾಗಿದೆ. ನೇತ್ರಮ್ ಎಂಬಾತ ತನ್ನ ಕುಟುಂಬ ಸದಸ್ಯರೊಂದಿಗೆ ಜಗಳವಾದ ಸಮಯದಲ್ಲಿ ಅವನು ತನ್ನ ಸೋದರಳಿಯನನ್ನು ಸಲಿಕೆಯಿಂದ ಹೊಡೆದಿದ್ದಾನೆ, ಇದರ ಪರಿಣಾಮವಾಗಿ ಆತ ಸಾವನ್ನಪ್ಪಿದ್ದನು.