ಫ್ಯಾಕ್ಟ್ಚೆಕ್ : ಶಾರುಖ್ ಖಾನ್ ಅಭಿನಯದ ಜವಾನ್ ಟ್ರೇಲರ್ ಸಂಭ್ರಮಿಸುತ್ತಿರುವ ವಿಡಿಯೋ ನಕಲಿ
ಇದೊಂದು ಎಡಿಟ್ ಮಾಡಲಾದ ವಿಡಿಯೋ ಆಗಿದ್ದು, ಇಲ್ಲಿರುವುದು ಶಾರುಖ್ ಖಾನ್ ಅಭಿಮಾನಿಗಳ, ಟ್ರೇಲರ್ ಪ್ರದರ್ಶನವೂ ನಡೆದಿಲ್ಲ
Claim :
ಕ್ಲಬ್ವೊಂದರಲ್ಲಿ ಜವಾನ್ ಟ್ರೇಲರ್ ನೋಡಿ ಸಂಭ್ರಮಿಸುತ್ತಿರುವ ಶಾರುಖ್ಖಾನ್ ಅಭಿಮಾನಿಗಳ ವಿಡಿಯೋFact :
ಇದೊಂದು ಎಡಿಟ್ ಮಾಡಲಾದ ವಿಡಿಯೋ ಆಗಿದ್ದು, ಇಲ್ಲಿರುವುದು ಶಾರುಖ್ ಖಾನ್ ಅಭಿಮಾನಿಗಳ, ಟ್ರೇಲರ್ ಪ್ರದರ್ಶನವೂ ನಡೆದಿಲ್ಲ
ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಲಾಗಿದ್ದು, ಕ್ಲಬ್ವೊಂದರಲ್ಲಿ ಜವಾನ್ ಚಿತ್ರದ ಟ್ರೇಲರ್ ವೀಕ್ಷಿಸಿದ ಜನರು ಸಂಭ್ರಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಬಳಕೆದಾರರು ಇದನ್ನು ಶಾರುಖ್ ಖಾನ್ ಅಭಿಮಾನಿಗಳ ಸಂಭ್ರಮವೆಂದು ಪ್ರತಿಪಾದಿಸಿದ್ದಾರೆ.
ಅಜುಭಾಯ್ ಎಂದು ಶಾರುಖ್ ಖಾನ್ ಅಭಿಮಾನಿಯೊಬ್ಬರ ಎಕ್ಸ್ (ಈ ಹಿಂದೆ ಟ್ವಿಟರ್) ಖಾತೆಯಲ್ಲಿ ಈ ವಿಡಿಯೋ ತುಣುಕನ್ನು, ಹಂಚಿಕೊಳ್ಳಲಾಗಿದ್ದು, "ಇದು ಬರಿಯ ಟ್ರೇಲರ್, ಪಿಕ್ಚರ್ ಇನ್ನೂ ಬಾಕಿ ಇದೆ ದೋಸ್ತ್, ಸೆಪ್ಟೆಂಬರ್ 7ರಂದು ಚಿತ್ರಮಂದಿರಗಳಲ್ಲಿ ಮನರಂಜನೆಯ ಆಸ್ಫೋಟವಾಗಲಿದೆ' ಎಂದು ಬರೆಯಲಾಗಿದೆ.
ಅನ್ಷುಲ್ ಎಂಬ ಎಕ್ಸ್ ಖಾತೆಯಿಂದಲೂ ಇದೇ ಸಾಲುಗಳೊಂದಿಗೆ ವಿಡಿಯೋ ಪೋಸ್ಟ್ ಮಾಡಲಾಗಿದೆ.
ಫೇಸ್ಬುಕ್ನಲ್ಲಿ ಲಿಬರಲ್ ಟಿವಿಯ ಅಧಿಕೃತ ಪೇಜ್ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್ಚೆಕ್
ಇದೊಂದು ಎಡಿಟ್ ಮಾಡಲಾದ ವಿಡಿಯೋ ಆಗಿದ್ದು, ಜವಾನ್ ಟ್ರೇಲರ್ ನೋಡಿದ ಅಭಿಮಾನಿಗಳ ಸಂಭ್ರಮ ಎಂದು ತಪ್ಪಾಗಿ ಬಿಂಬಿಸಲಾಗಿದೆ.
ನಾವು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇದೊಂದು ಕ್ಲಬ್ನ ದೃಶ್ಯವೆಂದು ತಿಳಿಯಿತು. ದೃಶ್ಯದ ಒಂದು ಬದಿಯಲ್ಲಿ ಫುಟ್ಬಾಲ್ನ ಚಿತ್ರಗಳಿರುವುದನ್ನು ಗಮನಿಸಬಹುದು.
ಮೇಲ್ನೋಟಕ್ಕೆ ಇದು ವಿದೇಶದ ಕ್ಲಬ್ವೊಂದರ ದೃಶ್ಯವೆಂದು ತಿಳಿಯುತ್ತದೆ. ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಈ ವಿಡಿಯೋ ಹಲವು ಆವೃತ್ತಿಗಳು ದೊರೆತವು.
ಜವಾನ್ ಟ್ರೇಲರ್ ಇರುವ ಜಾಗದಲ್ಲಿ ಸಿನಿಮಾ ಆಡು, ಆನಿಮೇಷನ್, ಕಾಮಿಡಿ ದೃಶ್ಯ ಸೇರಿದಂತೆ ಹಲವು ರೀತಿಯಲ್ಲಿ ಇದು ಎಡಿಟ್ ಆಗಿರುವುದನ್ನು ಗಮನಿಸಿದೆವು. 6 ವರ್ಷಗಳಿಗೂ ಹೆಚ್ಚು ಕಾಲದಿಂದ ಈ ವಿಡಿಯೋ ವಿವಿಧ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
ವಾಸ್ತವದಲ್ಲಿ ಇದು ಇಂಗ್ಲೆಂಡಿನ ಬ್ರಿಸ್ಟಲ್ನಲ್ಲಿರುವ ಆಸ್ಟನ್ ಗೇಟ್ ಸ್ಟೇಡಿಯಂನಲ್ಲಿ, 2016ರಲ್ಲಿ ಸೆರೆಹಿಡಿದ ದೃಶ್ಯ. ಯುರೊ 2016 ಪಂದ್ಯಾವಳಿಯಲ್ಲಿ ವೇಲ್ಸ್ ವಿರುದ್ಧ ಇಂಗ್ಲೆಂಡ್ ಜಯಗಳಿಸಿದಾಗ ಸೆರೆಹಿಡಿದ ದೃಶ್ಯವಿದು.
ಬ್ರಿಸ್ಟಲ್247.ಕಾಮ್ ಮೂಲ ವಿಡಿಯೋವನ್ನು ಪ್ರಕಟಿಸಿದೆ. ಇದೇ ವಿಡಿಯೋವನ್ನು ಬಳಸಿಕೊಂಡು ವೈರಲ್ ವಿಡಿಯೋ ಸೃಷ್ಟಿಸಿರುವುದನ್ನು ಗಮನಿಸಿದೆವು.
ಇನ್ನಷ್ಟು ಹುಡುಕಿದಾಗ, ಬ್ರಿಡ್ಜಸ್ಟೋನ್ ಸಿಟಿ ಫುಟ್ಬಾಲ್ ಕ್ಲಬ್ನ ವೆಬ್ಸೈಟ್ನಲ್ಲಿ ವೈರಲ್ ವಿಡಿಯೋದಲ್ಲಿರುವ ದೃಶ್ಯವನ್ನು ಹೋಲುವ ಚಿತ್ರವೊಂದನ್ನು ಪ್ರಕಟಿಸಿರುವುದನ್ನು ಗುರುತಿಸಿದೆವು.
ಈ ಹಿನ್ನೆಲೆಯಲ್ಲಿ ವೈರಲ್ ವಿಡಿಯೋ ಮತ್ತು ವಾಸ್ತವದ ವಿಡಿಯೋದೊಂದಿಗೆ ಹೋಲಿಸಿದಾಗ, ಪರದೆಯ ದೃಶ್ಯವನ್ನು ಮಾತ್ರ ಎಡಿಟ್ ಮಾಡಿ, ವಿವಿಧ ಸಂದರ್ಭಗಳಲ್ಲಿ ಬಳಸಿದ್ದು, ಜವಾನ್ ಟ್ರೇಲರ್ ಕೂಡ ಅದೇ ರೀತಿಯಲ್ಲಿ ಪ್ರಚಾರದ ಉದ್ದೇಶಕ್ಕೆ ಬಳಸಲಾಗಿದೆ ಎಂಬುದು ಸ್ಪಷ್ಟವಾಯಿತು. ಹಾಗಾಗಿ ಈ ವಿಡಿಯೋ ನಕಲಿ.