Wed Jan 15 2025 05:25:58 GMT+0000 (Coordinated Universal Time)
ಫ್ಯಾಕ್ಟ್ ಚೆಕ್: ವಹೀದಾ ರೆಹಮಾನ್ ತಮ್ಮ 85ರ ವಯಸ್ಸಿನಲ್ಲಿ ನೃತ್ಯ ಮಾಡುತ್ತಿರುವ ವೀಡಿಯೊ ವೈರಲ್ ಆಗುತ್ತಿದ್ದು ಈ ವೀಡಿಯೋ ಸುಳ್ಳು
ಬಾಲಿವುಡ್ನ ಖ್ಯಾತ ನಟಿ, ನೃತ್ಯಗಾರ್ತಿ ವಹೀದಾ ರೆಹಮಾನ್ ಭಾರತೀಯ ಚಿತ್ರರಂಗಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.
Claim :
85ರ ನಟಿ ವಹೀದಾ ರೆಹಮಾನ್ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್Fact :
ವಿಡಿಯೋದಲ್ಲಿ ಕಾಣುತ್ತಿರುವ ಮಹಿಳೆ ವಹೀದಾ ರೆಹಮಾನ್ ಅಲ್ಲ, ಸುನೀಲಾ ಅಶೋಕ್ ಎಂಬ ನೃತ್ಯಗಾರ್ತಿ
ಬಾಲಿವುಡ್ನ ಖ್ಯಾತ ನಟಿ, ನೃತ್ಯಗಾರ್ತಿ ವಹೀದಾ ರೆಹಮಾನ್ ಭಾರತೀಯ ಚಿತ್ರರಂಗಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಮಾಹಿತಿಯನ್ನು ಖುದ್ದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದರು.
1965ರಲ್ಲಿ ತೆರೆ ಕಂಡಂತಹ ಗೈಡ್ ಚಿತ್ರದ ಹಾಡಿಗೆ ವಹೀದಾ ರೆಹಮಾನ್ ನೃತ್ಯ ಮಾಡಿದ್ದರು. ಅದೇ ಹಾಡಿಗೆ 85ರ ವಹೀದಾ ನೃತ್ಯ ಮಾಡಿದ್ದಾರೆ ಎಂಬುವ ವೀಡಿಯೋ ವೈರಲ್ ಆಗಿತ್ತು.
ಮುಂಬೈ ನ್ಯೂಸ್ ಎಂಬ X ಖಾತೆದಾರರು 85 ವರ್ಷದ ವಹೀದಾ ರೆಹಮಾನ್ ಗೈಡ್ ಚಿತ್ರದ ಆಜ್ ಫಿರ್ ಜೀನೆ ಕಿ ತಮನ್ನಾ ಹೈ ಎಂಬ ಹಾಡಿಗೆ ನೃತ್ಯ ಮಾಡಿದ್ದಾರೆ ಎಂಬ ವೀಡಿಯೋವೊಂದನ್ನ ಹಂಚಿಕೊಂಡಿದ್ದರು. ಮಾಯಾ ಚೋಪ್ರ ಎನ್ನುವವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ "ವಹೀದಾ ರೆಹಮಾನ್ ಭಾರತೀಯ ನಟಿ ಮತ್ತು ನೈಪುಣ್ಯತೆ ಹೊಂದಿರುವ ನರ್ತಕಿ, ತನ್ನ 28ನೇ ವಯಸ್ಸಿನಲ್ಲಿ ನಟಿಸಿದಂತಹ ಗೈಡ್ ಚಿತ್ರದ ಹಾಡಿಗೆ ತನ್ನ 85ನೇ ವಯಸ್ಸಿನಲ್ಲಿ ಅದೇ ಸೌಂದರ್ಯ ಮತ್ತು ಗಾಂಭಿರ್ಯದೊಂದಿಗೆ ನೃತ್ಯ ಮಾಡಿದ್ದಾರೆ. ಇವರ ನಟನೆಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಕೇಂದ್ರ ಸರ್ಕಾರ ಗೌರವಿಸಿತ್ತು ಎಂದು ಕ್ಯಾಪ್ಷನ್ ನೀಡಿದ್ದರು.
ಫ್ಯಾಕ್ಟ್ಚೆಕ್
ಆದರೆ ಈ ವಿಡಿಯೋದಲ್ಲಿ ಡ್ಯಾನ್ಸ್ ಮಾಡುತ್ತಿರುವ ಮಹಿಳೆ ವಹೀದಾ ರೆಹಮಾನ್ ಅಲ್ಲ, ಸುನೀಲ ಅಶೋಕ್ ಎಂಬ ಕಲಾವಿದೆ.
ಮಾಯಾ ಚೋಪ್ರ ಹಂಚಿಕೊಂಡಿದ್ದ ಪೋಸ್ಟ್ನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಕಮೆಂಟ್ ಒಂದರಲ್ಲಿ ಪಾಯಲ್ ಶ್ರೀವಾಸ್ತ ಎನ್ನುವವರು ಈ ವೀಡಿಯೊದಲ್ಲಿರುವ ಮಹಿಳೆ ವಹೀದಾ ರೆಹಮಾನ್ ಅಲ್ಲ ಎಂದು ಕಾಮೆಂಟ್ ಮಾಡಿದ್ದರು, ಅದರೊಂದಿಗೆ ಒಂದು ಯ್ಯೂಟ್ಯೂಬ್ ವೀಡಿಯೊ ಲಿಂಕ್ ಅನ್ನು ಸಹ ಹಂಚಿಕೊಂಡಿದ್ದರು.
ಶೇರ್ ಮಾಡಿದ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಮಯೂಖಾ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ, ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಯನ್ನು ಪಡೆದಿರುವ ಆಜ್ ಫಿರ್ ಜೀನೆ ಕಿ ತಮನ್ನಾ ಹೈ (Dance cover) ಎಂಬ ಶೀರ್ಷಿಕೆಯೊಂದಿರುವ ವೀಡಿಯೋವನ್ನ ನಾವು ಕಂಡುಕೊಂಡೆವು.
ನಾವು ಯ್ಯೂಟ್ಯೂಬ್ ಚಾನೆಲ್ ಅನ್ನು ಪರಿಶೀಲಿಸಿದಾಗ, ಚಾನೆಲ್ ಸುನೀಲ ಅಶೋಕ್ ಎಂಬುವವರ ಹೆಸರನಲ್ಲಿತ್ತು.
ಇದನ್ನೇ ಒಂದು ಸುಳಿವಾಗಿ ತೆಗೆದುಕೊಂಡು ಆಕೆಯ ಹೆಸರನ್ನ ಗೂಗಲ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಹುಡುಕಿದಾಗ @Mayookha_sunila ಎಂದ ಖಾತೆ ಸಿಕ್ಕಿತು.
ಈ ಖಾತೆಯ ಬಯೋವಿನಲ್ಲಿ ಆಕೆಯ ಹೆಸರನ್ನು ಸುನೀಲ ಅಶೋಕ್, ನರ್ತಕಿ, ನಾನು ವಹೀದಾ ರೆಹಮಾನ್ ಅಲ್ಲ ಎಂದು ಬರೆದುಕೊಂಡಿದ್ದರು. ಮಯೋಖಾ ಸುನಿಲಾ ವೈರಲ್ ಆದ ತನ್ನ ವೀಡಿಯೋಗೆ ಕ್ಯಾಪ್ಷನ್ ಆಗಿ "ಇಂದು ಬೆಳಗ್ಗೆ ನಾನು ನಿದ್ದೆಯಿಂದ ಎಚ್ಚರಗೊಂಡಿದ್ದು ನನ್ನ ಕುಟುಂಬದವರ ಮತ್ತು ಸ್ನೇಹಿತರ ಕೋಲಾಹಲದಿಂದಾಗಿ, ಇದಕ್ಕೆ ಕಾರಣ ನಾನು ಮಾಡದಂತಹ 'ಆಜ್ ಫಿರ್ ಜೀನೆ ಕಿ ತಮನ್ನಾ ಹೈ' ಎಂಬ ಯ್ಯೂಟ್ಯೂಬ್ ವೀಡಿಯೋ.
ನನ್ನ ಈ ನೃತ್ಯದ ವೀಡಿಯೋ ವಹೀದಾ ರೆಹಮಾನ್ ಮಾಡಿರುವ ನೃತ್ಯದ ವೀಡಿಯೋವಾಗಿ ವೈರಲ್ ಆಗಿದೆ. ಅಷ್ಟೇ ಅಲ್ಲದೇ ನನ್ನನ್ನ ಅವರೊಂದಿಗೆ ಹೋಲಿಸಿದ್ದಾರೆ. ಅವರನ್ನ ನನಗೆ ಹೋಲಿಸಿದ್ದು ನನಗೆ ಬಹಳ ಗೌರವದ ವಿಷಯ. ನನ್ನ ಈ ವೀಡಿಯೋಗೆ ವೀಕ್ಷಕರಿಂದ ಸಿಗುತ್ತಿರುವ ಪ್ರೀತಿ ಮತ್ತು ಮೆಚ್ಚುಗೆಗೆ ನಾನು ಚಿರಋಣಿ ಎಂದು ಬರೆದುಕೊಂಡಿದ್ದಾರೆ.
ವಹೀದಾ ಅವರೆ ನನ್ನ ಕಡೆಯಿಂದ ನಿಮಗೆ ಒಂದು ಸಂದೇಶವಿದೆ - ನೀವು ನಿಮ್ಮ ವಯಸ್ಸನ್ನು ಲೆಕ್ಕಿಸದೆ ನಿಮ್ಮ ಉತ್ಸಾಹವನ್ನು ಮುಂದುವರಿಸಿ. ಇದರಿಂದ ನಿಮಗೆ ಸಂತೋಷ ಮತ್ತು ತೃಪ್ತಿ ಸಿಗುತ್ತದೆ ಎಂದು ಕ್ಯಾಪ್ಷನ್ ನೀಡಿದ್ದರು.
ಹಾಗಾಗಿ ವೈರಲ್ ಆದ ವೀಡಿಯೋದಲ್ಲಿ ಬಾಲಿವುಡ್ ನಟಿ ವಹೀದಾ ರೆಹಮಾನ್ ಕಾಣಿಸಿಕೊಂಡಿಲ್ಲ. ವೈರಲ್ ಆದ ವೀಡಿಯೋ ಸುಳ್ಳು
Claim : A viral video shows a Bollywood actress dancing at the age of 85.
Claimed By : Social Media User
Claim Reviewed By : Telugupost FactCheck
Claim Source : Social Media
Fact Check : False
Next Story