ಫ್ಯಾಕ್ಟ್ಚೆಕ್: ಟಿಡಿಪಿಗೆ ಮತಹಾಕಿ ಎಂದು ನಟಿ ಸಮಂತ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರಾ?
ಟಿಡಿಪಿಗೆ ಮತಹಾಕಿ ಎಂದು ನಟಿ ಸಮಂತ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರಾ?
Claim :
ನಟಿ ಸಮಂತ ಟಿಡಿಪಿ ಪಾರ್ಟಿಯ ಚಿಹಹ್ನೆಗೆ ಮತ ಹಾಕುವಂತೆ ಮತದಾರರಲ್ಲಿ ವಿನಂತಿಸಿ ಕೊಂಡಿದ್ದಾರೆFact :
ವೈರಲ್ ಆದ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಬೇರೆ ಬೇರೆ ವಿಡಿಯೋವನ್ನು ಒಂದೇ ವಿಡಿಯೋದಲ್ಲಿ ಜೋಡಿಸಿ ನಟಿ ಸಮಂತ ಟಿಡಿಪಿಗೆ ವೋಟ್ ಹಾಕಿ ಎಂದು ಮನವಿ ಮಾಡಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಆಂಧ್ರಪ್ರದೇಶದಲ್ಲಿ 2024ರಲ್ಲಿ ನಡೆಯುವ ಅಸೆಂಬ್ಲಿ ಮತ್ತು ಸಾರ್ವತ್ರಿಕ ಚುನಾವಣೆಗೂ ಮುನ್ನವೇ, ನಟಿ ಸಮಂತಾ ರೂತ್ ಪ್ರಭುರವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ರಾಜ್ಯ ಬೆಳವಣಿಗೆಯಾಗ ಬೇಕೆಂದರೆ ಅದು ಕೇವಲ ಟಿಡಿಪಿ ಪಕ್ಷದಿಂದ ಮಾತ್ರ ಸಾದ್ಯ ಹೀಗಾಗಿ ಮತದಾರರೆಲ್ಲರೂ ಸೈಕಲ್ ಚಿಹ್ನೆಗೆ ಮತ ಹಾಕಬೇಕು ಎಂದು ನಟಿ ಮನವಿ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಸಮಂತಾ ಮನವಿ ಮಾಡಿರುವಂತಹ ವಿಡಿಯೋವನ್ನು ಹಂಚಿಕೊಂಡು ವಿಡಿಯೋವಿಗೆ ತೆಲುಗಿನಲ್ಲಿ ಶೀರ್ಷಿಕೆಯಾಗಿ "నేను మీ సమంత .. అభివృద్ధి కి వోట్ చేయండి . సైకిల్ గుర్తుకే మీ ఓటు.. జై తెలుగుదేశం.." ಎಂಬ ಕ್ಯಾಪ್ಷನೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ
ಫ್ಯಾಕ್ಟ್ಚೆಕ್
ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ.
ಆಂಧ್ರಪ್ರದೇಶದ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡುರವರ ಪಕ್ಷ ಟಿಡಿಪಿಗೆ ವೋಟ್ ಹಾಕಿ ಎಂದು ನಟಿ ಸಮಂತ ಮತದಾರರಿಗೆ ಯಾವುದೇ ಮನವಿ ಮಾಡಿಲ್ಲ. ವೈರಲ್ ಆದ ವಿಡಿಯೋವನ್ನು ಹಳೆಯ ಕೆಲವು ವಿಡಿಯೋವಿನ ತುಣುಕುಗಳನ್ನು ಸೇರಿಸಿ ಎಡಿಟ್ ಮಾಡಲಾಗಿದೆ.
ನಾವು ಮತ್ತಷ್ಟು ವಿವರಗಳಿಗಾಗಿ 'Samantha Prabhu vote for Telugu Desam Party (TDP) ಎಂದು ಗೂಗಲ್ನಲ್ಲಿ ಹುಡುಕಾಟ ನಡೆಸಿದಾಗ ನಮ ಏಪ್ರಿಲ್ 10ರಂದು ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ನಾವು ಕಂಡುಕೊಂಡೆವು. ಆ ಲೇಖನದ ಪ್ರಕಾರ ಸಮಂತಾ ಬಾಪಟ್ಲ ಜಿಲ್ಲೆಯ ರೆಪಲ್ಲೆ ಮತದಾರರಿಗೆ ಅನಾಗನಿ ಸತ್ಯ ಪ್ರಸಾದ್ರವರಿಗೆ ವೋಟ್ ಹಾಕಿ ಆಯ್ಕೆ ಮಾಡಿಕೊಳ್ಳಿ ಎಂದು ಒತ್ತಾಯಿಸಿದ್ದರು.
2019ರಲ್ಲಿ ಚಿತ್ರೀಕರಿಸಿದ ವಿಡಿಯೋವಿನ ಆವೃತ್ತಿಯನ್ನು ನಾವು ಯೂಟ್ಯೂಬ್ನಲ್ಲಿ ಕಂಡುಕೊಂಡೆವು. ಈ ವಿಡಿಯೋದಲ್ಲಿ ನಟಿ ಸಮಂತಾ ಅನಾಗನಿ ಸತ್ಯ ಪ್ರಸಾದ್ರವರಿಗೆ ವೋಟ್ ಹಾಕಿ ಆಯ್ಕೆ ಮಾಡಿಕೊಳ್ಳಿ ಎಂದು ಹೇಈರಿವದನ್ನು ನಾವು ಕಂಡುಕೊಂಡೆವು. ಸಮಂತಾ ಸ್ಥಾಪಿಸಿದಂತಹ ಪ್ರತ್ಯೂಷ ಫೌಂಡೇಷನ್ನ ಸಹ ಸಂಸ್ಥಾಪಕರಾಗಿರುವ ಅನಾಗನಿ ಸತ್ಯ ಪ್ರಸಾದ್ ಮತ್ತು ಆತನ ಸಹೋದರಿ ಡಾ. ಮಂಜುಳ ಸಮಂತಾರವರ ಜೊತೆ ಒಳ್ಳೆಯ ಒಡನಾಟ ಹೊಂದಿರುವುದು ಈ ಕ್ಯಾಂಪೇನ್ಗೆ ಕಾರಣವಾಗಿರಬಹುದು
ವೈರಲ್ ಆದ ವಿಡಿಯೋ ಇತ್ತೀಚಿನದಲ್ಲ. 2019ರಲ್ಲಿ ನಡೆದ ಚುನಾವಣೆಯದ್ದು. ಆಗ ಚಿತ್ರೀಕರಿಸಿದ ವಿಡಿಯೋವಿನ ತುಣುಕನ್ನು ಈಗ ವೈರಲ್ ಮಾಡಲಾಗುತ್ತಿದೆ.
ಗೂಗಲ್ನಲ್ಲಿ ಹುಡುಕಾಡಿದಾಗ ನಮಗೆ ಏಪ್ರಿಲ್ 11,2019ರಂದು ಇಂಡಿಯಾ ಟುಡೆಯಲ್ಲಿ ಪ್ರಕಟವಾಗಿದ್ದ ಲೇಖನವನ್ನು ನಾವು ಕಂಡುಕೊಂಡೆವು. ಈ ವೇಖಲನದ ಪ್ರಕಾರ ನಟಿ ಸಮಂತ ಟಿಡಿಪಿ ಪಾರ್ಟಿಯನ್ನು ಬೆಂಬಲಿಸಿ. ನಾನು ಹೈದರಾಬಾದ್ಗೆ ಬಂದಾಗಿನಿಂದಲೂ ನನಗೆ ಅನಾಗನಿ ಸತ್ಯ ಪ್ರಸಾದ್ ಮತ್ತು ಆತನ ಸಹೋದರಿ ಡಾ. ಮಂಜುಳರವರು ನನಗೆ ವೈಯುಕ್ತಿಕವಾಗಿ ಗೊತ್ತು ಎಂದು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ನಟಿ ಮುಂಬರುವ ಚುನಾವಣೆಯನ್ನು ಉದ್ದೇಶಿಸಿ ಸೈಕಲ್ ಚಿಹ್ನೆಗೆ ನಿಮ್ಮ ಮತವನ್ನು ಚಲಾಯಿಸಿ ಎಂದು ಹೇಳಿಲ್ಲ. ವೈರಲ್ ಆದ ವಿಡಿಯೋ ಹಳೆಯದ್ದು ಇತ್ತೀಚಿನಿದಲ್ಲ. ಕೆಲವು ಹಳೆಯ ವಿಡಿಯೋಈವನ್ನು ತಿರುಚಿ ಕೆಲವು ಶಾಟ್ಗಳನ್ನು ಬದಲಿಸಿ ಎಡಿಟ್ ಮಾಡಲಾಗಿದೆ ಎಂದು ನಾವು ಕಂಡುಕೊಂಡೆವು