ಫ್ಯಾಕ್ಟ್ ಚೆಕ್: ಕರ್ನಾಟಕದಲ್ಲಿ ನಡೆದ ಮೆರವಣಿಗೆಯನ್ನು ಉಜ್ಜಯಿನಿ ಮಸೀದಿಯ ಮುಂದೆ ನಡೆದಿದೆ ಎಂಬ ಸುಳ್ಳು ಸುದ್ದಿ ವೈರಲ್
ಕರ್ನಾಟಕದಲ್ಲಿ ನಡೆದ ಮೆರವಣಿಗೆಯನ್ನು ಉಜ್ಜಯಿನಿ ಮಸೀದಿಯ ಮುಂದೆ ನಡೆದಿದೆ ಎಂಬ ಸುಳ್ಳು ಸುದ್ದಿ ವೈರಲ್
Claim :
ಉಜ್ಜನಿಯ ಮಸೀದಿಯೊಂದರ ಮುಂದೆ ಮುಸ್ಲೀಮರು ಪಾಕಿಸ್ತಾನಿ ಜಿಂದಾಬಾಬ್ ಎಂಬ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆFact :
ಈ ವೀಡಿಯೋದಲ್ಲಿ ಕಂಡುಬರುವ ದೃಶ್ಯ ಉಜ್ಜನಿಯದ್ದು ಅಲ್ಲ, 2018ರಲ್ಲಿ ಕರ್ನಾಟಕದ ಗುಲ್ಬರ್ಗದಲ್ಲಿ ರಾಮನವಮಿಯ ರ್ಯಾಲಿಯಲ್ಲಿ ತೆಗೆದಂತಹ ವೀಡಿಯೋ
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಂತಹ ಮೊಹರಾಂ ಮೆರವಣಿಗೆಯ ವೇಳೆ ಹಿಂದೂಗಳು ಕೇಸರಿ ಧ್ವಜವನ್ನು ಹಿಡಿದು ಮಸೀದಿಯ ಬಳಿ ಪಾಕಿಸ್ತಾನದ ವಿರುದ್ದ ಘೋಷಣೆಯನ್ನು ಕೂಗುತ್ತಿರುವ 30ಸೆಕೆಂಡ್ ವೀಡಿಯೋ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಕೆಲವು ಹಲವು ಸಮುದಾಯಗಳ ಗುಂಪು ಧಾರ್ಮಿಕ ಸ್ಥಳದ ಮುಂದೆ ಕೇಸರಿ ಧ್ವಜವನ್ನು ಹಿಡಿದು ಪಾಕಿಸ್ತಾನಿ ಜಿಂದಾಬಾದ್ ಎಂದು ಕೂಗುತ್ತಿರುವ ವೀಡಿಯೋ ವೈರಲ್ ಆಗಿದೆ.
ಶ್ರೀ ಆಶಿಶ್ ಕುಮಾರ್ ಪಯಾಸಿ ಎನ್ನುವ ಫೇಸ್ಬುಕ್ ಖಾತೆದಾರ ನವಂಬರ್ 5ರಂದು ಇಮ್ಮ ಫೇಸ್ಬುಕ್ನಲ್ಲಿ ಒಂದು ವೀಡಿಯೋವನ್ನು ಅಪ್ಲೋಡ್ ಮಾಡಿ ಆ ವೀಡಿಯೋಗೆ "ಉಜ್ಜಯಿನಿಯ ಮಕ್ಕರಂನಲ್ಲಿ ನಡೆದ ಮೆರವಣಿಗೆಯಲ್ಲಿ ಮುಸ್ಲಿಮರು ಪಾಕಿಸ್ತಾನಿ ಜಿಂದಾಬಾದ್ ಎಂಬ ಘೋಷಣೆ ಕೂಗಿದರು. ಮರುದಿನ ನಗರದ ಎಲ್ಲಾ ಹಿಂದೂಗಳು ಕೇಸರಿಧ್ವಜವನ್ನು ಹಿಡಿದು ಮಸೀದಿಯ ಮುಂದೆ ಪ್ರತಿಭಟನೆಯನ್ನು ನಡೆಸಿದರು" ಎಂದು ಕ್ಯಾಪ್ಷನ್ ನೀಡಿದ್ದರು.
ಇದೀಗ ಇದೇ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಫ್ಯಾಕ್ಟ್ ಚೆಕ್
ವೈರಲ್ ಆದ ವೀಡಿಯೋದಲ್ಲಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವೀಡಿಯೋದಲ್ಲಿನ ಕೆಲವೊಂದು ಕೀ ಫ್ರೇಮ್ಗಳನ್ನು ಇನ್ವಿಡ್ ಟೂಲ್ನ ಸಹಾಯದಿಂದ ಹೊರತೆಗೆಯಲಾಗಿತು. ನಂತರ ಗೂಗಲ್ ಲೆನ್ಸ್ನ ಮೂಲಕ ಹುಡುಕಿದಾಗ ನಮಗೆ "NCB creations" ಎಂಬ ಯ್ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದಂತಹ ವೀಡಿಯೋವೊಂದು ಕಾಣಿಸಿತು. 2018ರಲ್ಲಿ ಕರ್ನಾಟಕದ ಗುಲ್ಬರ್ಗಾದಲ್ಲಿ ಶ್ರೀರಾಮ ನವಮಿಯ ಪ್ರಯುಕ್ತ ನಡೆದ ರ್ಯಾಲಿಯಲ್ಲಿ ತೆಗೆದಂತಹ ವೀಡಿಯೋವನ್ನು ಕಂಡುಕೊಂಡೆವು.
ವೈರಲ್ ಆದ ವೀಡಿಯೋ ಮತ್ತು ಯ್ಯೂಟ್ಯೂಬ್ನಲ್ಲಿ ಸಿಕ್ಕಂತಹ ವೀಡಿಯೋಗೂ ಹಲವು ಸಾಮ್ಯತೆಯಿದೆ. ವೀಡಿಯೋದಲ್ಲಿ ಬಿಳಿ ಬಣ್ಣದ ಕಟ್ಟಡ ಮತ್ತು ಕೆಲವೊಂದಷ್ಟು ಅಂಗಡಿಗಳನ್ನು ಎರಡೂ ವಿಡಿಯೋದಲ್ಲೂ ನೋಡಬಹುದು. ಜೊತೆಗೆ ವೀಡಿಯೋದಲ್ಲಿ ಕಾಣಿಸುವ ದರ್ಗಾವನ್ನೂ ಸಹ ನೋಡಬಹುದು.
ವೈರಲ್ ಆದ ವೀಡಿಯೋದಲ್ಲಿ ಪಾಕಿಸ್ತಾನದ ವಿರುದ್ದ ಘೋಷಣೆ ಕೂಗುವ ಆಡಿಯೋ ಎಲ್ಲಿಂದ ಬಂತು ಎಂದದು ಕೆಲವೊಂದಷ್ಟು ಕೇವರ್ಡ್ಗಳನ್ನು ಉಪಯೋಗಿಸಿ ನೋಡಿದಾಗ ನಮಗೆ LIMRA TIMES ಯ್ಯೂಟ್ಯೂಬ್ ಖಾತೆಯಲ್ಲಿ 5 ವರ್ಷಗಳ ಹಿಂದೆ ಅಪ್ಲೋಡ್ ಮಾಡಿರುವಂತಹ ವೀಡಿಯೋವೊಂದರಲ್ಲಿ ಪಾಕಿಸ್ತಾನಿ ವಿರುದ್ದ ಘೋಷಣೆಯನ್ನು ಮಹಾರಾಷ್ಟ್ರದ ಥಾಣೆಯಲ್ಲಿ ನಡೆದ ಮೆರವಣಿಗೆಯಲ್ಲಿ ಜನರು ಕೂಗುವ ವೀಡಿಯೋವೊಂದು ಕಾಣಿಸಿತು. ಇದರಲ್ಲಿ ಬರುವ ಆಡಿಯೋ ಮತ್ತು ವೈರಲ್ ಆದ ವೀಡಿಯೋವಿನಲ್ಲಿರು ಆಡಿಯೋ ಎರಡೂ ಒಂದೇ ಎಂದು ಸಾಬೀತಾಗಿದೆ.
ಹೀಗಾಗಿ ವೈರಲ್ ಆದ ವಿಡಿಯೋ ಮಹಾರಾಷ್ಟ್ರದ ಉಜ್ಜಯಿನಿದಲ್ಲ ಬದಲಿಗೆ 2018ರಲ್ಲಿ ಕರ್ನಾಟಕದ ಗುಲ್ಬರ್ಗಾದಲ್ಲಿ ರಾಮನವಮಿಯ ಪ್ರಯುಕ್ತ ನಡೆದ ಮೆರವಣಿಗೆಯದ್ದು ಎಂದು ಸಾಬೀತಾಗಿದೆ.