ಫ್ಯಾಕ್ಟ್ಚೆಕ್: ಭಾರತೀಯ ನೌಕಾಪಡೆಯ ಯೋಧರಿಗೆ ನೀರಿನೊಳಗೆ ಕಸರತ್ತನ್ನು ಮಾಡಿಸಲಾಗುತ್ತಿದೆಯಾ? ವೈರಲ್ ಆದ ವಿಡಿಯೋವಿನ ಅಸಲಿಯತ್ತೇನು?
ಭಾರತೀಯ ನೌಕಾಪಡೆಯ ಯೋಧರಿಗೆ ನೀರಿನೊಳಗೆ ಕಸರತ್ತನ್ನು ಮಾಡಿಸಲಾಗುತ್ತಿದೆಯಾ? ವೈರಲ್ ಆದ ವಿಡಿಯೋವಿನ ಅಸಲಿಯತ್ತೇನು?
Claim :
ಭಾರತೀಯ ನೌಕಾಪಡೆಯ ಯೋಧರು ನೀರಿನೊಳಗೆ ಕಠಿಣ ವ್ಯಾಯಾಮ ಮಾಡುತ್ತಿರುವ ವಿಡಿಯೋವಿನ ಅಸಲಿಯತ್ತೇನು?Fact :
ವಿಡಿಯೋದಲ್ಲಿ ಕಾಣಿಸುತ್ತಿರುವುದು ಭಾರತದ ನೌಕಾಪಡೆಯ ಯೋಧರಲ್ಲ. ಈ ವಿಡಿಯೋ ಅಮೇರಿಕಾದ ಡಿಪ್ ಎಂಟ್ ಫಿಟ್ನೆಸ್ ಎಂಬ ಸಂಸ್ಥೆಗೆ ಸಂಬಂಧಿಸಿದ್ದು.
ಭಾರತೀಯ ನೌಕಾಪಡೆ ಭಾರತದ ಮೇಲೆ ಬರುವ ಉಗ್ರರನ್ನು ಮಡಿದಾಕಲು ಸಮುದ್ರದಲ್ಲಿ ಭಾರತದ ರಕ್ಷಣೆಗೆ ನಿಂತಿವೆ. ಕಡಲ ತೀರದ ಪ್ರದೇಶವನ್ನು ಮತ್ತು ಕಡಲ ತೀರದ ಮೂಲಕ ಬರುವ ನುಗ್ಗುವ ಉಗ್ರಗಾಮಿಗಳ ದಾಳಿಯನ್ನು ತಡೆಗಟ್ಟಲು ಮತ್ತು ರಕ್ಷಿಸಲು ಭಾರತದ ಸೇನಾ ಪಡೆ ಮಧ್ಯ ಮತ್ತು ಉತ್ತರ ಅರೇಬಿಯನ್ ಸಮುದ್ರದಲ್ಲಿ ವೈಮಾನಿಕ ಕಣ್ಗಾವಲು ಹೆಚ್ಚಿಸಿದೆ.
ಇತ್ತೀಚಿಗೆ ಭಾರತೀಯ ನೌಕಾಪಡೆಯಲ್ಲಿ ನಡೆಯುತ್ತಿರುವ ಮಾಡಿತ್ತಿರುವು ಕಠಿಣ ಶ್ರಮ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ಭಾರತೀಯ ನೌಕಾಪಡೆಯ ಯೋಧರು ನಾವು ಮಾಡುತ್ತಿರುವ ಕಸರತ್ತು ಎಂಬ ಶೀರ್ಷಿಕೊಂದಿಗೆ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣುವ ಪುರುಷರ ಕೈ-ಕಾಲಿಗೆ ಹಗ್ಗವನ್ನು ಕಟ್ಟಲಾಗಿದೆ. ನೀರಿನೊಳಗೆ ಇರುವ ವಸ್ತುವನ್ನು ಈಜುವ ಮೂಲಕ ಅದನ್ನು ತೆಗೆದುಕೊಂಡು ಮೇಲೆ ಬರುತ್ತಿರುವುದನ್ನು ನೋಡಬಹುದು. ವಿಡಿಯೋವಿಗೆ "ಭಾರತೀಯ ನೌಕಾಪಡೆಯ ತರಬೇತಿ" ಶೀರ್ಷಿಕೆಯೊಂದಿಗೆ ವೈರಲ್ ಮಾಡಲಾಗುತ್ತಿದೆ.
ಫ್ಯಾಕ್ಟ್ಚೆಕ್
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ಭಾರತದ ನೌಕಾಪಡೆಗೆ ಸಂಬಂಧಿಸಿದಲ್ಲ.
ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನಲ್ಲಿ ಬರುವ ಕೆಲವು ಪ್ರಮುಖ ಫ್ರೇಮ್ಗಳ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಭಾರತೀಯ ನೌಕಾಪಡೆಗೆ
ಸಂಬಂಧಿಸಿದ ಹಲವು ವಿಡಿಯೋಗಳು ಕಾಣಿಸಿತು. ಆದರೆ ನಮಗೆ ವೈರಲ್ ಆದ ವಿಡಿಯೋ ಎಲ್ಲೂ ಕಂಡುಬಂದಿಲ್ಲ.
ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ವಿಡಿಯೋವಿನ ಕೆಲವು ಫ್ರೇಮ್ಗಳಲ್ಲಿನ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ ನಮಗೆ ಡೀಪೆಂಡ್ ಫಿಟ್ನೆಸ್ ಯೂಟ್ಯೂಬ್ನಲ್ಲಿ "ಕ್ರೇಜಿ ಅಂಡರ್ವಾಟರ್ ಮಿಲಿಟರಿ ಟ್ರೈನಿಂಗ್" ಎಂಬ ಶೀರ್ಷಿಕೆಯೊಂದಿಗಿರುವ ವಿಡಿಯೋವೊಂದು ಕಂಡುಬಂದಿತು.
ಹೌಸ್ಫುಲ್ ಹೈಲೈಟ್ಸ್ ಇನ್ಸ್ಟಾಗ್ರಾಮ್ ಪೇಕ್ನಲ್ಲೂ ಯೂಟ್ಯೂಬ್ನಲ್ಲಿದ್ದ ವಿಡಿಯೋವನ್ನು ಅಪ್ಲೋಡ್ ಮಾಡಿ ಕ್ರೆಡಿಟ್ನ್ನು ನೀಡಲಾಗಿತ್ತು.
ಸಿಕ್ಕಂತಹ ವಿಡಿಯೋವನ್ನು ಸುಳಿವಾಗಿ ತೆಗೆದುಕೊಂಡು ನಾವು ಡಿಪೆಂಡ್ ಫಿಟ್ನೆಸ್ ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ಹುಡುಕಿದೆವು. ಹುಡುಕಾಟದಲ್ಲಿ ನಮಗೆ ನವಂಬರ್ 29,2023ರಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋವೊಂದು ಕಂಡುಬಂದಿತು. ವಿಡಿಯೋವಿದೆ ಕ್ಯಾಪ್ಷನ್ ಆಗಿ “As we express our gratitude, we must never forget that the highest appreciation is not to utter words but to live by them.” -JFK ಎಂದು ಬರೆದು ಪೋಸ್ಟ್ ಮಾಡಿದ್ದರು.
ಈ ಪೇಜಿಗೆ ಕುರಿತ ಖಾತೆಯನ್ನು ನಾವು ಫೇಸ್ಬುಕ್ನಲ್ಲೂ ಕಂಡು ಹಿಡಿದೆವು. ಆ ಖಾತೆಯಲ್ಲೂ ಸಹ ಹಲವಾರು ವಿಡಿಯೋಗಳಿತ್ತು.
ಫಿಟ್ನೆಸ್ ಸಂಸ್ಥೆಯೊಂದು ತರಬೇತಿದಾರರಿಗೆ ನೀರಿನೊಳಗೆ ತರಬೇತಿಯನ್ನು ನೀಡುತ್ತದೆ. ಈ ಫಿಟ್ನೆಸ್ ಕಾರ್ಯಕ್ರಮ ನಡೆಯುವುದು ಭಾರತದಲ್ಲಿ ಅಲ್ಲ ಬದಲಿಗೆ ಇದು US ಮಿಲಿಟರಿ ವಿಶೇಷ ನಿರ್ವಾಹಕರು ವಿನ್ಯಾಸಗೊಳಿಸಿದ ಫಿಟ್ನೆಸ್ ಕಾರ್ಯಕ್ರಮ. ಈ ತರಬೇತಿ ಪಡೆಯುವುದರಿಂದ ಮನುಷ್ಯನ ಮಾನಸಿಕ ಸ್ಥಿತಿ ಹತೋಟಿಯಲ್ಲಿರುತ್ತದೆ.
ಡೀಪೆಂಡ್ ಫಿಟ್ನೆಸ್ ವೆಬ್ಸೈಟ್ನಲ್ಲಿ ಈ ತರಬೇತಿಗೆ ಸಂಬಂಧಿಸಿದ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದರು. ಈ ತರಬೇತಿ ಪಡೆಯುವುದರಿಂದ ಮನುಷ್ಯನ ಉಸಿರಾಟದತ್ತ ಗಮನ ಹರಿಸಲು, ಮನಸ್ಸನ್ನು ಸದೃಢಗೊಳಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ ಸಾಕಷ್ಟು ಸಂಶೋಧಕರು ಮತ್ತು ವಿಜ್ಞಾನಿಗಳು ಅಭಿವೃದ್ದಿ ಪಡಿಸಿರುವ ತಂತ್ರಗಳನ್ನು ಇಲ್ಲಿ ಉಪಯೋಗಿಸಲಾಗುವುದು. ಈ ಸಂಸ್ಥೆ ಕಳೆದ 10 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ.
ಹೀಗಾಗಿ ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ಭಾರತಕ್ಕೆ ಸಂಬಂಧಿಸಿದಲ್ಲ, ಬದಲಿಗೆ ಇದು ಯುಎಸ್ಎದು. ಹಾಗೆ ಈ ವಿಡಿಯೋದಲ್ಲಿ ಕಾಣುವ ಯೋಧರು ಭಾರತದ ನೌಕಾಪಡೆಯ ಸಿಬ್ಬಂದಿಗಳಲ್ಲ. ವೈರಲ್ ಆದ ಸುದ್ದಿ ಅಕ್ಷರಶಃ ಸುಳ್ಳು