ಫ್ಯಾಕ್ಟ್ಚೆಕ್: ಮಕ್ಕಳೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿರುವ ರೊಬೊಟ್ನದ್ದು ಎಐ ವಿಡಿಯೋ
ಮನುಷ್ಯನೊಬ್ಬ, ಮಕ್ಕಳೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೋವನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಮಾರ್ಪಾಡು ಮಾಡಿ, ರೋಬೊಟನ್ನು ಸೇರಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
Claim :
ವಿಡಿಯೋದಲ್ಲಿ ರೊಬೊಟ್ವೊಂದು ಇಬ್ಬರು ಮಕ್ಕಳೊಂದಿಗೆ ಆಡುತ್ತಿದೆ.Fact :
ಇಬ್ಬರು ಮಕ್ಕಳೊಂದಿಗೆ ವ್ಯಕ್ತಿಯೊಬ್ಬ ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೋವನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಮಾರ್ಪಾಡು ಮಾಡಲಾಗಿದೆ.
'ಇಬ್ಬರು ಮಕ್ಕಳೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿರುವ ರೊಬೊಟ್ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ನೆಟಿಜನ್ಗಳು ಇದು ನಿಜಕ್ಕೂ ರೊಬೊಟ್ ಮತ್ತು ಮನುಷ್ಯರ ನಡುವೆ ನಡೆಯುತ್ತಿರುವ ಪಂದ್ಯವೆಂದೇ ಭಾವಿಸಿದ್ದಾರೆ.
ಫ್ಯಾಕ್ಟ್ಚೆಕ್
ವೈರಲ್ ಆಗಿರುವ ವಿಡಿಯೋವನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಸಿದ್ಧಪಡಿಸಲಾಗಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ವ್ಯಕ್ತಿಯೊಬ್ಬ ಮಕ್ಕಳೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೋವನ್ನು ಡಿಜಿಟಲ್ ಟೂಲ್ ಬಳಸಿ ಮಾರ್ಪಾಡು ಮಾಡಲಾಗಿದೆ ಎಂಬುದನ್ನು ನಾವು ಪತ್ತೆ ಹಚ್ಚಿದ್ದೇವೆ.
ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದಾಗ ಮೂಲ ವಿಡಿಯೋ ನಮಗೆ ಫೇಸ್ಬುಕ್ನಲ್ಲಿ ದೊರೆಯಿತು. 2021ರ ಅಕ್ಟೋಬರ್ನಲ್ಲಿ ಫೇಸ್ಬುಕ್ ಪೇಜ್ವೊಂದರಲ್ಲಿ ಇಬ್ಬರು ಮಕ್ಕಳೊಂದಿಗೆ ವ್ಯಕ್ತಿಯೊಬ್ಬರು ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೋ ಪ್ರಕಟವಾಗಿದೆ (ಲಿಂಕ್ ಇಲ್ಲಿದೆ).
ವೈರಲ್ ಆಗಿರುವ ವಿಡಿಯೋ ಮತ್ತು ಫೇಸ್ಬುಕ್ನಲ್ಲಿ ಪ್ರಕಟವಾಗಿರುವ ವಿಡಿಯೋದಲ್ಲಿರುವ ಹಿನ್ನೆಲೆಯನ್ನು ಗಮನಿಸಿದರೆ, ವೈರಲ್ ವಿಡಿಯೋದಲ್ಲಿರುವ ರೊಬೊಟನ್ನು ಮೂಲ ವಿಡಿಯೋದಲ್ಲಿರು ಮನುಷ್ಯನೊಂದಿಗೆ ಬದಲಾಯಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
ಇನ್ನಷ್ಟು ಹುಡುಕಿದಾಗ, ಟಿಕ್ಟಾಕ್ಲ್ಲಿ ಮಾರ್ಪಾಡಾದ ವಿಡಿಯೋ ಪ್ರಕಟಿಸಲಾಗಿದ್ದು, ಇದರಲ್ಲಿ ನೀಡಲಾಗಿರುವ ವಿವರಣೆಯಲ್ಲಿ ಎಐ ಬಳಸಿ ಸಿದ್ಧಪಡಿಸಿರುವ ವಿಡಿಯೋ ಎಂಬುದು ತಿಳಿದುಬರುತ್ತದೆ. ಜೊತೆಗೆ ಎಐ ಹ್ಯಾಷ್ಟ್ಯಾಗ್ ಬಳಸಿರುವುದು ಇದನ್ನು ದೃಢಪಡಿಸುತ್ತದೆ
ಈ ವಿಡಿಯೋದ ಸೃಷ್ಟಿಕರ್ತ ಯಾರು ಎಂಬುದನ್ನು ದೃಢಪಡಿಸಲಾಗದೆ ಇದ್ದರು, ಮನುಷ್ಯನೊಬ್ಬ, ಮಕ್ಕಳೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೋವನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಮಾರ್ಪಾಡು ಮಾಡಿ, ರೋಬೊಟನ್ನು ಸೇರಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ವೈರಲ್ ವಿಡಿಯೋದ ಪ್ರತಿಪಾದನೆ ತಪ್ಪು.