ಫ್ಯಾಕ್ಟ್ಚೆಕ್: ಗರ್ಬಾ ಕಾರ್ಯಕ್ರಮವೊಂದರಲ್ಲಿ ನರೇಂದ್ರ ಮೋದಿಯವರು ನೃತ್ಯ ಮಾಡುತ್ತಿದ್ದಾರೆ ಎಂದು ವೀಡಿಯೋ ವೈರಲ್ ಆಗಿದೆ. ಈ ವೀಡಿಯೋದ ಅಸಲಿಯತ್ತೇನು?
ಗರ್ಬಾ ಕಾರ್ಯಕ್ರಮವೊಂದರಲ್ಲಿ ನರೇಂದ್ರ ಮೋದಿಯವರು ನೃತ್ಯ ಮಾಡುತ್ತಿದ್ದಾರೆ ಎಂದು ವೀಡಿಯೋ ವೈರಲ್ ಆಗಿದೆ. ಈ ವೀಡಿಯೋದ ಅಸಲಿಯತ್ತೇನು?
Claim :
ಗಾರ್ಬಾ ನೃತ್ಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಡ್ಯಾನ್ಸ್ ಮಾಡಿದ್ದಾರೆ.Fact :
ಗಾರ್ಬಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವವರು ಪ್ರಧಾನಿ ನರೇಂದ್ರ ಮೋದಿ ಅಲ್ಲ ಬದಲಿಗೆ ವೀಡಿಯೋದಲ್ಲಿ ಕಾಣುವ ವ್ಯಕ್ತಿ ನಟ ವಿಕಾಸ್ ಮಹಾಂತೇ
ನಮ್ಮ ಭಾರತದಲ್ಲಿ ಗರ್ಬಾ ಎಂಬುವ ಸಾಂಪ್ರದಾಯಕ ನೃತ್ಯ ಪ್ರಕಾರವನ್ನು ನವರಾತ್ರಿಯ ಹಬ್ಬದ ಪ್ರದರ್ಶಿಸಲಾಗುತ್ತದೆ. ಅಕ್ಟೋಬರ್ 15 ರಂದು, ನರೇಂದ್ರ ಮೋದಿ ತಮ್ಮ X ಖಾತೆಯಲ್ಲಿ "ಮಾಡಿ" ಎಂಬ ಗರ್ಬಾ ಹಾಡಿನ ವೀಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ಮಂಗಳಕರವಾದ ದಿನದಂದು ನಿಮ್ಮೆಲ್ಲರ ಬದುಕಿನಲ್ಲಿ ಬೆಳಕು ತುಂಬಲಿ! ನನ್ನ ಗರ್ಬಾ ಹಾಡಿಗೆ ಧ್ವನಿ ನೀಡಿದ @meetbro, ದಿವ್ಯಾ ಕುಮಾರ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ” ಎಂಬ ಶೀರ್ಷಿಕೆಯನ್ನೊಳಗೊಂಡ ವೀಡಿಯೋ ವೈರಲ್ ಆಗಿದೆ.
ಸ್ಕೂಲ್ ಆಫ್ ವೇದಿಕ್ ಸೈನ್ಸ್ ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡು "ಮೋದಿಜಿ ಕೆಲವು ಹೆಣ್ಣು ಮಕ್ಕಳೊಂದಿಗೆ ನೃತ್ಯ ಮಾಡುತ್ತಿರುವುದನ್ನು ನಾವು ನೋಡಬಹುದು ವಾ ಮೋದಿ ಜಿ ವಾಹ್" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
Instagram ಖಾತೆದಾರರಾದ ಡಾ. Nandinibjp ಈ ವೈರಲ್ ವೀಡಿಯೊವನ್ನು ಪೋಸ್ಟ್ ಮಾಡಿ "ನಮ್ಮ ಪ್ರಧಾನಿಯ ಡ್ಯಾನ್ಸ್ ಮಾಡುತ್ತಾರೆಂದು ಯಾರಿಗಾದರೂ ಗೊತ್ತಿತ್ತಾ.. ವೀಡಿಯೋವಿನಲ್ಲಿ ಮೋದಿಯವರ ನೃತ್ಯವನ್ನು ನೋಡಿ ಆನಂದಿಸಿ" ಎಂದು ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
NOISE ಎಂಬ X ಬಳಕೆದಾರ 30-ಸೆಕೆಂಡ್ಗಳ ವೀಡಿಯೋವೊಂದನ್ನು ಪೋಸ್ಟ್ ಮಾಡಿ " ಪ್ರಧಾನ ಮಂತ್ರಿ ಮೋದಿ ಗಾರ್ಬಾ ಬೀಟ್ಸ್ಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ಈ ವೀಡಿಯೋದಲ್ಲಿ ಕಾನುತ್ತಿರುವುದು ಮೋದಿಯವರಾ ಅಥವಾ ಡೀಪ್ ಫೇಕ್ ನಕಲಿ ವೀಡಿಯೋ? ನೈಸ್ ಮೂವ್ಸ್, ಮಿಸ್ಟರ್ 2024 ಜೊತೆಗೆ ಎಮೋಜಿ” ಎಂದು ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಫ್ರೀ ಬರ್ಡ್ ಎಂಬ ಫೇಸ್ಬುಕ್ ಬಳಕೆದಾರ ತನ್ನ ಖಾತೆಯಲ್ಲಿ "ಎಲ್ಲರೂ ನೋಡಲೇ ಬೇಕಾದ ವೀಡಿಯೀವಿದು. ಪ್ರಧಾನಿ ಮೋದಿ ಸುಂದರವಾದ ಗಾರ್ಬಾ ನೃತ್ಯ ಮಾಡುತ್ತಿದ್ದಾರೆ" ಎಂದು ಶೀರ್ಷಿಕೆನ್ನು ನೀಡಿ ವೀಡಿಯೋವನ್ನು ಪೋಸ್ಟ್ ಮಾಡಿದ್ದರು.
ಫ್ಯಾಕ್ಟ್ಚೆಕ್
ವೈರಲ್ ಆದ ವೀಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ.
ಗೂಗಲ್ನಲ್ಲಿ ಈ ಕುರಿತು ಮಾಹಿತಿ ಏನಾದರೂ ಸಿಗಬಹುದಾ ಎಂದು ಹುಡುಕಲು ಪ್ರಾರಂಭಿಸಿದಾಗ ಗಾರ್ಬಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಡ್ಯಾನ್ಸ್ ಮಾಡಿದ ಬಗ್ಗೆ ನಮಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ವಿಡಿಯೋದಲ್ಲಿರುವ ವ್ಯಕ್ತಿ ಮೋದಿ ಅಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದರು.
X ಬಳಕೆದಾರ ಪ್ರೊ. ಎಂಬ ಖಾತೆದಾರ ವೀಡಿಯೊಗೆ ಪ್ರತಿಕ್ರಿಯಿಸಿದರು " ಪ್ರಧಾನಿ ನರೇಂದ್ರ ಮೋದಿಯಂತೆ ಕಾಣುವ ಈ ವ್ಯಕ್ತಿ ವಿಕಾಸ್ ಮಹಂತೆ ಈತ ಒಬ್ಬ ಉದ್ಯಮಿ ಮತ್ತು ನಟ" ಎಂದು ಮಹಂತೆಯ ಇನ್ಸ್ಟ್ರಾಗ್ರಾಮ್ ಖಾತೆಯ ಕೆಲವು ಸ್ಕ್ರೀನ್ಶಾಟ್ಗಳನ್ನು ಸೇರಿಸಿ ಪೋಸ್ಟ್ ಮಾಡಿದ್ದರು.
ವಿಕಾಸ್ ಮಹಂತೆಯ ಇನ್ಸ್ಟ್ರಾಗ್ರಾಮ್ ಖಾತೆಯಲ್ಲಿ ನವೆಂಬರ್ 7, 2023 ರಂದು ಹಂಚಿಕೊಳ್ಳಲಾದ ವೀಡಿಯೊವೊಂದನ್ನು ನಾವು ಕಂಡುಕೊಂಡಿದ್ದೇವೆ. ಆ ವೀಡಿಯೊದಲ್ಲಿ, ಲಂಡನ್ನಲ್ಲಿ ನಡೆದ “ದೀಪಾವಳಿ ಮೇಳ” ಕ್ಕೆ ಮುಖ್ಯ ಅತಿಥಿಯಾಗಿ ನನನ್ನು ಆಹ್ವಾನಿಸಿದ್ದಾರೆ ಎಂದು ಅವರು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದರು.
ಗರ್ಬಾ ಸಮಾರಂಭದಲ್ಲಿ, ವಿಕಾಸ್ ಮಹಾಂತೇ ಪ್ರಧಾನಿ ಮೋದಿಯಂತೆಯೆ ಉಡುಪುಗಳನ್ನು ತೊಟ್ಟಿದ್ದರು.
ವಿಕಾಸ್ ಮಹಾಂತೆಯನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದ್ದ ಲಂಡನ್ ದೀಪಾವಳಿ ಮೇಳ ಕಾರ್ಯಕ್ರಮಕ್ಕೆ ಸಂಬಂಧಿಸಿದ ಫೇಸ್ಬುಕ್ ಪೋಸ್ಟ್ವೊಂದು ಗರ್ಬಾ ಆಯೋಜಕರ ಖಾತೆಯಲ್ಲಿ ಕಂಡುಕೊಂಡೆವು. ಈ ಪೋಸ್ಟ್ನಲ್ಲಿ, ಪ್ರಧಾನಿ ಮೋದಿ ಮತ್ತು ಸಲ್ಮಾನ್ ಖಾನ್ ಅವರ ಡ್ಯೂಪ್ "ದೀಪಾವಳಿ ಶಾಪಿಂಗ್ ಬಜಾರ್ 2023" ನಲ್ಲಿ ಭಾಗವಹಿಸಲಿದ್ದಾರೆ ಎಂದು ಪೋಸ್ಟ್ರ್ನಲ್ಲಿ ಬರೆದಿದ್ದರು .
ಹೀಗಾಗಿ, ವೈರಲ್ ವೀಡಿಯೋದಲ್ಲಿ ಪ್ರಧಾನಿ ಮೋದಿ ಗಾರ್ಬಾ ಹಾಡಿಗೆ ನೃತ್ಯ ಮಾಡುತ್ತಿಲ್ಲ. ವೈರಲ್ ಆದ ವೀಡಿಯೋದಲ್ಲಿ ಹಂಡು ಬರುವ ವ್ಯಕ್ತಿ ನಟ ವಿಕಾಸ್ ಮಹಾಂತೆ.