ಫ್ಯಾಕ್ಟ್ಚೆಕ್: ಮಹಿಳೆಯೊಬ್ಬಳ ಮೇಲೆ ಮೊಸಳೆ ದಾಳಿ ನಡೆಸಿರುವ ಸುದ್ದಿಯ ಅಸಲಿಯತ್ತೇನು?
ಮಹಿಳೆಯೊಬ್ಬಳ ಮೇಲೆ ಮೊಸಳೆ ದಾಳಿ ನಡೆಸಿರುವ ಸುದ್ದಿಯ ಅಸಲಿಯತ್ತೇನು?
Claim :
ಮಹಿಳೆಯೊಬ್ಬರು ವಿಡಿಯೋಗೆ ಪೋಸ್ ನೀಡುತ್ತಿರುವಾಗ ಮೊಸಳೆಯೊಂದು ದಾಳಿ ಮಾಡಿದೆFact :
ವೈರಲ್ ವಿಡಿಯೋದಲ್ಲಿ ಕಾಣುವುದು ನೈಜ ಘಟನೆಯಲ್ಲ, ಈ ವಿಡಿಯೋ ಪ್ರಿವ್ಯೂವ್ ಮ್ಯಾಗಜೀನ್ನ ಜಾಗೃತಿ ಅಭಿಯಾನದ ಭಾಗವಾಗಿದೆ
ಭಾರತದಲ್ಲಿ ಟಿಕ್ಟಾಕ್ ನಿಷೇಧದ ನಂತರ, ಯುವಕರು ರೀಲ್ಗಳನ್ನು ಮಾಡಲು Instagramನ್ನು ಬಳಸಲು ಶುರುಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಜನರು ವಿಭಿನ್ನ ಆಹಾರವನ್ನು, ವಿಭಿನ್ನ ಪ್ರದೇಶಗಳ ಜೊತೆಗೆ ಹೊಸ ಸ್ಥಳಗಳನ್ನು ಅನ್ವೇಷಿಸಿ ಅದನ್ನು ರೀಲ್ಸ್ ಮುಖಾಂತರ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತಿದ್ದಾರೆ. ಅವರಲ್ಲಿ ಕೆಲವರು ಹೆಚ್ಚು ಲೈಕ್ಗಳನ್ನು ಪಡೆಯಲು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯರಾಗಲು ವಿಭೀನ್ನ ಸಾಹಸಗಳನ್ನು ಮಾಡಲುತ್ತಿದ್ದಾರೆ. ಪ್ರತಿದಿನ, ರೀಲ್ಗಳನ್ನು ಮಾಡುವಾಗ ಯಾರಾದರೂ ತಮ್ಮ ಜೀವವನ್ನು ಕಳೆದುಕೊಳ್ಳುವ ಅಥವಾ ಏನಾದರೂ ತೊಂದರೆ ಉಂಟುಮಾಡಿಕೊಳ್ಳುತ್ತಿರುವ ವರದಿಗಳನ್ನು ನಾವು ನೋಡಬಹುದು.
ಜನರ ಸುರಕ್ಷತೆಗಾಗಿ, ಅದರಲ್ಲೂ ವಿಶೇಷವಾಗಿ ಪ್ರವಾಸಿ ಸ್ಥಳಗಳಲ್ಲಿ, ಸ್ಥಳೀಯ ಅಧಿಕಾರಿಗಳು ರೀಲ್ಗಳನ್ನು ಮಾಡುವ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸಾಹಸಗಳನ್ನು ಪ್ರದರ್ಶಿಸುವವರ ವಿರುದ್ಧ ಎಚ್ಚರಿಕೆ ಫಲಕಗಳನ್ನು ಹಾಕಿದ್ದಾರೆ.
ಇತ್ತೀಚೆಗೆ, 29 ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ಅದರಲ್ಲಿ ಮಹಿಳೆಯೊಬ್ಬರು ಫೋಟೋಗಳಿಗೆ ಪೋಸ್ ನೀಡುತ್ತಿರುವಾಗ ಮೊಸಳೆ ದಾಳಿ ಮಾಡಿರುವುದನ್ನು ನಾವು ನೋಡಬಹುದು. ಇದೇ ವಿಡಿಯೋವನ್ನು ಹಲವು ಸಾಮಾಜಿಕ ಬಳಕೆದಾರರು ವಿಭಿನ್ನ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ "Don't get too carried away with making reels" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ
रील बनाने के चक्कर में बिलकुल भी मदहोश ना हो
— ABDUS SALAM (@ABDUSSALAM2025) June 20, 2024
Don't get too carried away with making reels@ABDUSSALAM2025 #StrayKids #NintendoDirect #PAKvsSL #SCOENG #iPhone15Pro #PokemonScarletViolet #vunzigewoensdag #bbtvi #VMAs #PMQshttps://t.co/PRTmEcQiaj pic.twitter.com/wBk3ZoBLVr
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ನೈಜವಾದದ್ದು ಅಲ್ಲ. ಇದು ಪ್ರಿವ್ಯೂವ್ ಮ್ಯಾಗಜೀನ್ನ ಜಾಗೃತಿ ಅಭಿಯಾನದ ಭಾಗವಾಗಿದೆ.
ನಾವು ವೈರಲ್ ಆದ ವಿಡಿಯೋವಿನಲ್ಲಿ ಸತ್ಯಾಂಶವನ್ನು ತಿಳಿಯಲು ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಲಿದಾಗ ನಮಗೆ 456K ಚಂದಾದಾರರನ್ನು ಹೊಂದಿರುವ ಯೂಟ್ಯೂಬ್ ಚಾನಲ್ನಲ್ಲಿ ಅಕ್ಟೋಬರ್ 3, 2013 ರಂದು ಪ್ರಿವ್ಯೂ PH ಇನ್ನ ಖಾತೆಯಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿರುವುದನ್ನು ಕಂಡುಕೊಂಡೆವು. ವೀಡಿಯೊವಿಗೆ ಶಿರ್ಷಿಕೆಯಾಗಿ "how not to Instagram" ಎಂದು ಬರೆದು ಪೋಸ್ಟ್ ಮಾಡಿದ್ದರು.
ವಿಡಿಯೋವಿಗೆ ವಿವರಣೆಯಲ್ಲಿ "how not to Instagram, ಪ್ರಿವ್ಯೂವ್ ಮ್ಯಾಗಜೀನ್ನ #imapreviewgirl ಅಭಿಯಾನದ ಭಾಗ, ಇದು ಪ್ರಿವ್ಯೂವ್ನಲ್ಲಿ ಸೆಪ್ಟೆಂಬರ್ 2013 ಸಂಚಿಕೆಯೊಂದಿಗೆ ಪ್ರಾರಂಭವಾಯಿತು. ನಾವು ಚಲನಚಿತ್ರೋದ್ಯಮದ ನಮ್ಮ ಸ್ನೇಹಿತರಿಗೆ ಪ್ರಿವ್ಯೂವ್ ಹುಡುಗಿ ಎಂದರೆ ಏನು ಎಂದು ಅರ್ಥ ಮಾಡಿಸಲು ಕೇಳಿದೆವು; ಅವರಿಗೆ ಇಷ್ಟ ಬಂದಹಾಗೆ ಏನಾದರೂ ಮಾಡುಬಹುದು ಎಂದು ನಾವು ಹೇಳಿದ್ದೆವು. ಇನ್ನೂ ಹೀಗೆ ಹೆಚ್ಚಿನ ವೀಡಿಯೊಗಳು ಬರಲಿವೆ, ಹೆಚ್ಚಿನ ವಿಡಿಯೋವಿಗಾಗಿ ನಮ್ಮ ಚಾನಲ್ಗೆ ಟ್ಯೂನ್ ಮಾಡಿ ಮತ್ತು #imapreviewgirl ಎಂದರೇನು ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಕ್ಯಾಪ್ಷನ್ ನೀಡಿ ಪೋಸ್ಟ್ ಮಾಡಿದ್ದರು.
ವಿವರಣೆಯ ಕೊನೆಯಲ್ಲಿ, ನಾವು ಈ ಚಿತ್ರದಲ್ಲಿರುವ ಸಿಬ್ಬಂದಿ ಪಟ್ಟಿಯನ್ನು ಸಹ ಕಂಡುಕೊಂಡೆವು.
ಇನ್ನು ನಾವು ಗೂಗಲ್ನಲ್ಲಿ "I'm a Preview Girl by Preview PH" ಎಂಬ ಕೀವರ್ಡ್ನ ಮೂಲಕ ಹುಡುಕಾಟ ನಡೆಸಿದಾಗ ನಮಗೆ ಸಾಕಷ್ಟು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ವಿಡಿಯೋಗಳನ್ನು ವಿಭಿನ್ನ ಸಂದೇಶಗಳೊಂದಿಗೆ ಹಂಚಿಕೊಂಡಿದ್ದನ್ನು ನಾವು ಕಂಡುಕೊಂಡೆವು.
ಅಷ್ಟೇ ಅಲ್ಲ, ನಾವು ಕಿಡ್ಲಾಟ್ ಪ್ರಶಸ್ತಿಯ ಪಟ್ಟಿಯನ್ನು ಸಹ ನಾವು ಕಂಡುಕೊಂಡೆವು. ಈ ಅಭಿಯಾನದ ವೀಡಿಯೊವನ್ನು ನಾವು ಫಿಲಂ ಇಂಟರ್ನೆಟ್ ಮತ್ತು ಮೊಬೈಲ್ ವೀಡಿಯೊ ವಿಭಾಗಗಳಲ್ಲಿ ನೋಡಬಹುದು.
ಹಾಗೆ ಈ ವೀಡಿಯೊವನ್ನು ಹೆಚ್ಚುವರಿಯಾಗಿ ಮೂರು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. Models Aryn Cristobal and Chal Lontoc, and Acting Director Christine ಬ್ಲ್ಯಾಂಡೊ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋನ್ನು ಹಂಚಿಕೊಳ್ಳಲಾಗಿತ್ತು
ಹೀಗಾಗಿ, ವೈರಲ್ ಆದ ಸುದ್ದಿಯಲ್ಲಿ ಯಾವುಧೇ ಸತ್ಯಾಂಶವಿಲ್ಲವೆಂದು ನಾವು ಕಂಡುಕೊಂಡೆವು. ವೈರಲ್ ಆದ ವಿಡಿಯೋ ನೈಜ ಘಟನೆಯದಲ್ಲ, ಇದು ಪ್ರಿವ್ಯೂವ್ ಮ್ಯಾಗಜೀನ್ನ ಜಾಗೃತಿ ಅಭಿಯಾನದ ಭಾಗವಾಗಿದೆ.