ಫ್ಯಾಕ್ಟ್ಚೆಕ್: ಅಯೋಧ್ಯೆಯಲ್ಲಿರುವ ರಸ್ತೆಗಳನ್ನು ಹಾಳು ಮಾಡಲಾಗಿದೆ ಎಂಬ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ
ಅಯೋಧ್ಯೆಯಲ್ಲಿರುವ ರಸ್ತೆಗಳನ್ನು ಹಾಳು ಮಾಡಲಾಗಿದೆ ಎಂಬ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ
Claim :
ಅಯೋಧ್ಯೆಯಲ್ಲಿರುವ ರಾಮಮಂದಿರದ ರಸ್ತೆಗಳು ಹಾಳಾಗಿದೆFact :
ವೈರಲ್ ಆಗಿರುವ ವಿಡಿಯೋ ಅಯೋಧ್ಯೆಗೆ ಸಂಬಂಧವಿಲ್ಲ. ಮೂಲ ವಿಡಿಯೋ ದುಬೈನದ್ದು.
ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ಸುಮಾರು 11 ಮಂದಿ ಸಾವನ್ನಪ್ಪಿದ್ದಾರೆ. ಅಯೋಧ್ಯೆಯಲ್ಲಿಯೂ ಸಹ ಮಳೆಯಿಂದಾಗಿ ಜನರು ಪರದಾಡುವ ಪರಿಸ್ಥಿತಿ ನೆಲೆಗೊಂಡಿದೆ. ಅಷ್ಟೇ ಅಲ್ಲ, ಸರಯೂ ನದಿಯ ನೀರಿನ ಮಟ್ಟ ಅಪಾಯಕಾರಿ ಮಟ್ಟ ತಲುಪಿದೆ. ರಾಂಪತ್ನಲ್ಲಿ ಹೊಸದಾಗಿ ನಿರ್ಮಿಸಿದ ರಸ್ತೆಗಳು ಮಳೆಯಿಂದಾಗಿ ಹಳ್ಳಗಳಾಗಿವೆ, ಅಧಿಕಾರಿಗಳು ಹಳ್ಳಗಳಿಗೆ ಪ್ಯಾಚ್ಗಳನ್ನು ಹಾಕಿದ್ದಾರೆ. ಆದರೆ, ಈ ಪ್ರದೇಶದ ರಸ್ತೆಗಳ ಗುಣಮಟ್ಟಕ್ಕೆ ಸಂಬಂಧಿಸಿದ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ರಸ್ತೆಯು ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ರಸ್ತೆ. ಈ ರಸ್ತೆಯು ನಿರಂತರ ಮಳೆಯಿಂದಾಗಿ ಹಾಳಾಗಿದೆ ಎಂದು ಯೂಟ್ಯೂಬ್ನಲ್ಲಿ ಹೇಳಿಕೆಯನ್ನಿಡಿದ್ದಾರೆ.
ಅಷ್ಟೇ ಅಲ್ಲ ಅಯೋಧ್ಯೆಯಲ್ಲಿರುವ ರಸ್ತೆಗಳು ತುಂಬಾ ಕಳಪೆ ಗುಣಮಟ್ಟದಿಂದ ಕೂಡಿವೆ, ಕೇವಲ ಎರಡು ಬಾರಿ ಮಳೆಯಿಂದಾಗಿ ಹೊಸದಾಗಿ ನಿರ್ಮಿಸಲಾದ ರಸ್ತೆಗಳು ನಾಶವಾಗಿದೆ ಎಂದು ಯೂಟ್ಯೂಬ್ನಲ್ಲಿ ವಿಡಿಯೋವನ್ನು ಮಾಡಿ ಹಂಚಿಕೊಂಡಿದ್ದರು.
विकास पगला गया है अयोध्या हमारे के बाद...😜
— जुमलों की बौछार (@Mfeku_) July 22, 2024
100 स्मार्ट सिटी में से एक ये भी है...😉
Kamala • Lando •Trump pic.twitter.com/M28mBNdIb8
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಿಡಿಯೋ ಅಯೋಧ್ಯೆಗೆ ಸಂಬಂಧಿಸಿದ್ದಲ್ಲ, ವೈರಲ್ ಆಗಿರುವ ವಿಡಿಯೋದಲ್ಲಿರುವ ಕಾಣುವ ರಸ್ತೆಗಳು ದುಬೈಗೆ ಸಂಬಂಧಿಸಿದ್ದು.
ವೈರಲ್ ವೀಡಿಯೊದಿಂದ ಹೊರತೆಗೆಯಲಾದ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ನಾವು ಗೂಗಲ್ನ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ವೀಡಿಯೊವನ್ನು ಬಳಕೆದಾರರು X, ಧ್ರುವ ರಥಿ ಅವರು ಹಂಚಿಕೊಂಡಿರುವುದು ಕಂಡುಬಂದಿತು. ನಂತರ ಆ ಟ್ವಿಟ್ನ್ನು ಡಿಲೇಟ್ ಮಾಡಲಾಯಿತು. ಆದರೆ ಈ ಟ್ವಿಟ್ಗೆ ಸಾಕಷ್ಟು ಬಳಕೆದಾರರು ಈ ವಿಡಿಯೋ ದುಬೈನಲ್ಲಿ ಚಿತ್ರಿಸಿರುವುದು ಎಂದು ಪ್ರತಿಕ್ರಿಯೆ ನೀಡಿದ್ದರು
ಟ್ವೀಟ್ನಲ್ಲಿ ಕಾಣುವ ವಿಡಿಯೋ ಅಯೋಧ್ಯೆಯದ್ದಲ್ಲ ಎಂದು ಅಯೋಧ್ಯೆ ಪೊಲೀಸರು ಸಹ ವೈರಲ್ ಆದ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಹಾಗೆ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧವೂ ಪ್ರಕರಣವನ್ನು ದಾಖಲಿಸಿದ್ದಾರೆ ಎನ್ನಲಾಗಿದೆ.
कतिपय ट्विटर हैंडल एवं सोशल मीडिया पर प्रसारित असत्य खबर का #Ayodhyapolice खंडन करती है।
— AYODHYA POLICE (@ayodhya_police) July 21, 2024
ट्वीट में दिखाया गया वीडियो अयोध्या का नहीं है। भ्रामक खबर फैलाने वाले व्यक्ति के विरुद्ध अभियोग पंजीकृत किया गया है। #UPPolice pic.twitter.com/A7sR7IAKtL
ಮತ್ತಷ್ಟು ಹುಡುಕಾಟದಲ್ಲಿ ನಮಗೆ ಏಪ್ರಿಲ್ 2024ರಲ್ಲಿ ಹಂಚಿಕೊಂಡಿರುವ ವಿಡಿಯೋವಿಗೆ ದುಬಾಯ್AEAEAE ಎಂಬ ಶೀರ್ಷಿಕೆಯೊಂದಿಗಿರುವ ವಿಡಿಯೋವೊಂದು ಯೂಟ್ಯೂಬ್ನಲ್ಲಿ ಕಾಣಿಸಿತು.
ದುಬೈನಲ್ಲಿ ದೇವಸ್ಥಾನ ತೆರೆದರೆ ಏನು ಉಪಯೋಗ ಎಂಬ ಶೀರ್ಷಿಕೆಯೊಂದಿಗೆ ಮತ್ತೊಂದು ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.
ವೈರಲ್ ಆದ ವಿಡಿಯೋ ನಿಜವಾಗಿಯೂ ದುಬೈಗೆ ಸಂಬಂಧಿಸಿದ್ದಾ ಇಲ್ಲವಾ ಎಂದು ನಮಗೆ ತಿಳಿಯದಾದರೂ, ಈ ವಿಡಿಯೋ ಮಾತ್ರ ಉತ್ತರಪ್ರದೇಶದಲ್ಲಿರುವ ಅಯೋಧ್ಯೆಗೆ ಸಂಬಂಧಿಸಿದ್ದಂತೂ ಅಲ್ಲ ಎಂದು ನಾವು ಖಚಿತಪಡಿಸಿಕೊಂಡೆವು.