ಫ್ಯಾಕ್ಟ್ಚೆಕ್: ಹೈದರಾಬಾದ್ನಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಶ್ರೀರಾಮನ ಭಕ್ತರು ಪಾಲ್ಗೊಂಡಿದ್ದರು ಎಂಬ ವಿಡಿಯೋವಿನ ಅಸಲಿಯತ್ತೇನು?
ಹೈದರಾಬಾದ್ನಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಶ್ರೀರಾಮನ ಭಕ್ತರು ಪಾಲ್ಗೊಂಡಿದ್ದರು ಎಂಬ ವಿಡಿಯೋವಿನ ಅಸಲಿಯತ್ತೇನು?
Claim :
ವೈರಲ್ ಆದ ವಿಡಿಯೋ ಹೈದರಾಬಾದ್ನಲ್ಲಿ ಅಯೋಧ್ಯೆಗೆ ಸೇರಿದ ಅಕ್ಷತ ಕಲಶ ಯಾತ್ರೆಗೆ ಸಂಬಂಧಿಸಿದ್ದು.Fact :
ವೈರಲ್ ಆದ ವಿಡಿಯೋ ಹೈದರಾಬಾದ್ಗೆ ಸಂಬಂಧಿಸಿದಲ್ಲ. ಭಾಗೇಶ್ವರ್ ಧಾಮ್ನಲ್ಲಿ ಹನುಮಂತನ ಕಥೆ ಪ್ರಾರಂಭವಾದ ನಂತರ ಕಲಶ ಯಾತ್ರೆಯನ್ನು ಈ ವಿಡಿಯೋ ತೋರಿಸುತ್ತಿದೆ.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರವೊಂದು ಜನವರಿ 22, 2024ರಂದು ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿಷ್ಠಾಪನೆಯ ಭಾಗವಾಗಿ ದೇಶದ ವಿವಿಧ ಪ್ರಾಂತಗಳಿಂದ ಅಕ್ಷತಾ ಕಲಶ ಯಾತ್ರೆಯಲ್ಲಿ ಸಾವಿರಾರು ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದರು. ಇತ್ತಿಚಿಗೆ ಹೈದರಾಬಾದ್ನಲ್ಲಿಯೂ ಇದೇ ರೀತಿ ಮೆರವಣಿಗೆ ನಡೆಯಿತು.
ಸಾವಿರಾರು ಮಹಿಳೆಯರು ಕಲಶವನ್ನು ಹೊತ್ತೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋವಿಗೆ ಶೀರ್ಷಿಕೆಯಾಗಿ ಇದು ಹೈದರಾಬಾದ್ನಲ್ಲಿರುವ ಭಾಗ್ಯಾನಗರದಲ್ಲಿ ಅಕ್ಷತ ಕಲಶ ಯಾತ್ರೆಗೆ ಸಂಬಂಧಿಸಿದೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
‘Ayodhya ||अयोध्या के लिए भक्तों का प्रवाह ||’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.
ಮತ್ತೊಂದು ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋವನ್ನು ಹಂಚಿಕೊಂಡು ತಮಿಳಿನಲ್ಲಿ ಶೀರ್ಷಿಕೆಯಾಗಿ ‘அயோத்தியில் பெண்களின் தீர்த்த ஊர்வலம் ஜெய் ஸ்ரீ ராம் ಬರೆದು ಪೊಸ್ಟ್ ಮಾಡಿದ್ದರು.
ಫೇಸ್ಬುಕ್ ಖಾತೆದಾರ ಅಮರೇಂದ್ರ ಮೆಹಟೋ ಎಂಬ ಖಾತೆದಾರ ತನ್ನ ಖಾತೆಯಲ್ಲಿ ‘जय श्रीराम..अक्षता कलश यात्रा, भाग्यनगर (हैदराबाद )’ ಬರೆದು ಪೋಸ್ಟ್ ಮಾಡಿದ್ದರು.
ಫ್ಯಾಕ್ಟ್ಚೆಕ್
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವಿಡಿಯೋ ಚಿತ್ರೀಕರಿಸಿರುವುದು ಹೈದರಾಬಾದ್ನಲ್ಲಿ ಅಲ್ಲ. ಬದಲಿಗೆ ಈ ವಿಡಿಯೋ ಡಿಲ್ಲಿಯಲ್ಲಿನ ನೋಯಡಾ ಎಂಬ ಸ್ಥಳದಲ್ಲಿ ನಡೆದ ಕಲಶ ಯಾತ್ರೆಗೆ ಸಂಬಂಧಿಸಿದ್ದು. ಈ ವಿಡಿಯೋವನ್ನು 2023ರ ಜುಲೈ ತಿಂಗಳಲ್ಲಿ ಚಿತ್ರೀಕರಿಸಿರುವುದು.
ನಾವು ವಿಡಿಯೋವಿನಲ್ಲಿರುವ ಕೆಲವು ಕೀ ಫ್ರೇಮ್ಗಳನ್ನು ಉಪಯೋಗಿಸಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಹುಡುಕಾಟದ ಫಲಿತಾಂಶವಾಗಿ ನಮಗೆ 2023ರಲ್ಲಿ ಅಪ್ಲೋಡ್ ಮಾಡಿರುವ ಕೆಲವು ವಿಡಿಯೋಗಳು ಕಂಡುಬಂದಿತು.
2023ರಲ್ಲಿ ಪೋಸ್ಟ್ ಮಾಡಿರುವ ವಿಡಿಯೋಗೆ ‘Devo ki Nagri devbhoomi Baba Bageswar Dham Sarkar I Jai Shree Ram #Bhageshwardham #delhi’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು.
ನವಭಾರತ್ ಟೈಮ್ಸ್.ಕಾಂ ವರದಿಯ ಪ್ರಕಾರ ವೈರಲ್ ಆದ ವಿಡಿಯೋವಿನಲ್ಲಿರುವ ಕೆಲವು ಸ್ಕ್ರೀನ್ ಶಾಟ್ಗಳನ್ನು ನಾವು ಗಮನಿಸೆದೆವು. "ದರ್ಬಾರ್ ನಡೆಸುವ ಮುನ್ನ ಕಲಶ ಯಾತ್ರೆ ಕೈಗೊಳ್ಳಲಾಯಿತು. ಭಾನುವಾರ ಗ್ರೇಟರ್ ನೋಯ್ಡಾದಲ್ಲಿ ದಿವ್ಯ ದರ್ಬಾರ್ ಆಚರಣೆಗೆ ಮುನ್ನ ದೊಡ್ಡ ಪ್ರಮಾಣದಲ್ಲಿ ಕಲಶ ಯಾತ್ರೆ ಆಯೋಜಿಸಲಾಗಿತ್ತು. ಮೂರು ಸಾವಿರ ಕಿಲೋ ಮೀಟರ್ ಉದ್ದದ ಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.
ಆಪ್ಇಂಡಿಯಾ.ಕಾಂ ವರದಿಯ ಪ್ರಕಾರ ಬಾಬಾ ಧೀರೇಂದ್ರ ಕೃಷ್ಣ ಶಾಸ್ತ್ರಿ ಹನುಮಾನ್ ಕಥಾ ಪಾರಾಯಣದ ಮೊದಲ ದಿನದಂದು ಹನ್ನೊಂದು ಸಾವಿರ ಜನರು ಭಾಗವಹಿಸಿದ್ದರು. ಈ ವಿಡಿಯೋಗೂ ಹೈದರಾಬಾದ್ನ ಬಿಜೆಪಿ ಸಂಸದ ಕೆ.ಲಕ್ಷ್ಮಣ್ ಹಂಚಿಕೊಂಡಿದ್ದ ವಿಡಿಯೋಗೂ ಯಾವುದೇ ದೃಶ್ಯಗಳು ತಾಳೆಯಾಗಲಿಲ್ಲ.
ಹೀಗಾಗಿ ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಯೋ ಅಯೋಧ್ಯೆಗೆ ತೆಗೆದುಕೊಂಡು ಹೊಗೋ ಅಕ್ಷತಾ ಕಲಶದ್ದು ಅಲ್ಲ. ವೈರಲ್ ಆದ ವಿಡಿಯೋವನ್ನು 2023 ಜುಲೈನಲ್ಲಿ ಚಿತ್ರೀಕರಿಸಿರುವುದು ಮತ್ತು ಈ ವಿಡಯೋವನ್ನು ದೆಹಲಿಯ ನೋಯ್ಡಾದಲ್ಲಿ ಚಿತ್ರೀಕರಿಸಿರುವುದು.