ಫ್ಯಾಕ್ಟ್ಚೆಕ್: ಕೊಲ್ಕತ್ತಾ ಅತ್ಯಾಚಾರದ ಘಟನೆಯನ್ನು ಕುರಿತು ವಿರಾಟ್ ಕೊಹ್ಲಿ ಯಾವುದೇ ಹೇಳಿಕೆಯನ್ನು ನೀಡಿಲ್ಲ
ಕೊಲ್ಕತ್ತಾ ಅತ್ಯಾಚಾರದ ಘಟನೆಯನ್ನು ಕುರಿತು ವಿರಾಟ್ ಕೊಹ್ಲಿ ಯಾವುದೇ ಹೇಳಿಕೆಯನ್ನು ನೀಡಿಲ್ಲ
Claim :
ಕೊಲ್ಕತ್ತಾ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಭಾರತ ಕ್ರಿಕೆಟರ್ ವಿರಾಟ್ ಕೊಹ್ಲಿ ಆಕ್ರೋಶವನ್ನು ಹೊರಹಾಕಿದ್ದಾರೆFact :
ವೈರಲ್ ಆದ ವಿಡಿಯೋ ಕೊಲ್ಕತ್ತಾ ಘಟನೆಗೆ ಸಂಬಂಧಿಸಿದ್ದಲ್ಲ. 2017ರಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ವಿರಾಟ್ ಮಾತನಾಡಿರುವ ವಿಡಿಯೋವದು.
ಭಾರತವನ್ನು ಬೆಚ್ಚಿಬೀಳಿಸಿದ ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ 31 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆ, ಮುಷ್ಕರ, ಆಕ್ರೋಶ ಎಲ್ಲವು ವ್ಯಕ್ತವಾಗುತ್ತಿದೆ.
ಕೋಲ್ಕತ್ತಾದ ಆರ್ಜಿ ಕರ್ ಕಾಲೇಜಿನಲ್ಲಿ ನಡೆದ ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತ ಪಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಾಮಾಜಿಕ ಮಾದ್ಯಮದಲ್ಲಿ ಹರದಾಡುತ್ತಿರುವ ವಿಡಿಯೋವಿನಲ್ಲಿ ಕಿಂಗ್ ಕೊಹ್ಲಿ "ಈ ಘಟನೆ ಬಹಳ ನೋವಿನ ವಿಚಾರ. ಈ ವಿಚಾರವನ್ನು ಕೇಳಿ ನನಗೆ ಆಘಾತವಾಗಿದೆ. ನಾನು ಈ ಸಮಾಜದಲ್ಲಿ ಭಾಗಿಯಾಗಿರುವುದಕ್ಕೆ ನಾಚಿಕೆ ಪಡುತ್ತೇನೆ. ನಾವು ನಮ್ಮ ಆಲೋಚನೆಯನ್ನು ಬದಲಾಯಿಸಬೇಕು. ಪುರುಷರು ಮಹಿಳೆಯರನ್ನು ಗೌರವದಿಂದ ನೋಡಬೇಕು. ಮಹಿಳೆಯರನ್ನು ಸ್ವಲ್ಪ ಸಹಾನುಭೂತಿಯಿಂದ ನೋಡಿಕೊಳ್ಳಿ. ಈ ರೀತಿಯ ಘಟನೆಗಳು ಸಂಭವಿಸಿದಾಗ ನೋಡಿಕೊಂಡು ಸುಮ್ಮನೆ ಕೂರುವವರು, ಈನು ಪ್ರತಿಕ್ರಿಯಿಸದೆ ಇರುವವರು ನನ್ನ ಪ್ರಕಾರ ಅವರು ಪುರುಷರೇ ಅಲ್ಲ, ಹೇಡಿಗಳು. ಇಂತಹ ಘಟನೆಯೆ ನಿಮ್ಮ ಮನೆಯಲ್ಲಿ ನಡೆದರೆ ನೀವು ಹೀಗೆ ನೋಡಿಕೊಂಡು ಸುಮ್ಮನೆ ಕೂರುತ್ತೀರಾ, ಸುಮ್ಮನೆ ನಿಂತು ನೋಡುತ್ತೀರಾ ಅಥವಾ ಸಹಾಯ ಮಾಡುತ್ತೀರಾ? ಎಂದು ವಿರಾಟ್ ಕೊಹ್ಲಿ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.
We want #JusticeForMoumita
— Stranger (@amarDgreat) August 18, 2024
PM Narendra Modi, pls. impose President Rules in Bengal.#ViratKohli #KolkataDoctorDeathCase pic.twitter.com/33mOtUFtlP
ಆಗಸ್ಟ್ 18, 2024ರಂದು ಮೂಡಲ ಮನೆ ಎಂಬ ಫೇಸ್ಬುಕ್ ಖಾತೆದಾರರ ತನ್ನ ಖಾತೆಯಲ್ಲಿ ಕೊಹ್ಲಿ ಚಿತ್ರದೊಂದಿಗೆ ಪಠ್ಯವೊಂದನ್ನು ಹಂಚಿಕೊಂಡಿದ್ದರು. ಈ ರೀಲಿಗೆ "ಕೊಲ್ಲತ್ತಾ ವೈದ್ಯೆ ಕೇಸ್ ನನಗೆ ನಾಚಿಕೆ ಆಗುತ್ತಿದೆ. ವಿರಾಟ್ ಕೊಹ್ಲಿ ಭಾವನಾತ್ಮಕ ಪ್ಲಸ್ ಆಕ್ರೋಶದ ವಿಡಿಯೋ ವೈರಲ್" ಎಂಬ ಶೀರ್ಷಿಕೆಯೊಂದಿಗೆ ರೀಲ್ನ್ನು ಹಂಚಿಕೊಂಡಿದ್ದಾರೆ
https://www.facebook.com/reel/536216472290819
ನವ ಸಮಾಜ.ಕಾಂ ಎಂಬ ವೆಬ್ಸೈಟ್ನಲ್ಲೂ ಸಹ ಕೊಲ್ಕತ್ತಾ ಪ್ರಕರಣಕ್ಕೆ ಸಂಬಂಧಿಸಿ ವಿರಾಟ್ ಕೋಹ್ಲಿ ಮಾತನಾಡಿರುವ ಬಗ್ಗೆ ವರದಿಯನ್ನು ನಾವು ಕಂಡಕೊಂಡೆವು. ಕೊಲ್ಕತ್ತಾ ಹತ್ಯೆ ಪ್ರಕರಣ- ಆಕ್ರೋಶ ಹೊರಹಾಕಿದ ಕಿಂಗ್ ಕೊಹ್ಲಿ ಎಂಬ ಹೆಡ್ಲೈನ್ನೊಂದಿಗೆ ವರದಿಯಿರುವುದನ್ನು ನೋಡಬಹುದು.
ಹೊಸ ದಿಗಂತ ಎಂಬ ವೆಬ್ಸೈಟ್ನಲ್ಲಿ ʼವೈದ್ಯೆ ಕೊಲೆ ಪ್ರಕರಣ: ಈ ಕೆಟ್ಟ ಸಮಾಜದ ಭಾಗವಾಗಿದ್ದಕ್ಕೆ ನನಗೆ ನಾಚಿಕೆ ಆಗುತ್ತಿದೆ ಎಂದು ಆಕ್ರೋಶ ಹೊರಹಾಕಿದ ಕೊಹ್ಲಿ!ʼ ಎಂಬ ಶೀರ್ಷಿಕೆಯೊಂದಿಗೆ ವರದಿಯೊಂದನನ್ನು ಹಂಚಿಕೊಳ್ಳಾಗಿದೆ.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ಕೊಲ್ಕತ್ತಾ ಘಟನೆಗೆ ಸಂಬಂಧಿಸಿದ್ದಲ್ಲ. 2017ರಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ವಿರಾಟ್ ಮಾತನಾಡಿರುವ ವಿಡಿಯೋವದು.
ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಜನವರಿ 6, 2017ರಂದು ವಿರಾಟ್ ಕೊಹ್ಲಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ 2017ರ ಹೊಸ ವರ್ಷದ ಹಿಂದಿನ ದಿನದಂದು ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ವಿರಾಟ್ ಮಾತನಾಡಿದ್ದಾರೆ.
This country should be safe & equal for all. Women shouldn't be treated differently. Let's stand together & put an end to such pathetic acts pic.twitter.com/bD0vOV2I2P
— Virat Kohli (@imVkohli) January 6, 2017
Change your thinking and the world will change around you. pic.twitter.com/FinDIYv2aV
— Virat Kohli (@imVkohli) January 6, 2017
ಈ ಮಾಹಿತಿಯನ್ನು ಸುಳಿವಾಗಿ ತೆಗೆದುಕೊಂಡು ನಾವು ಗೂಗಲ್ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಜನವರಿ 6,2017 ರಂದು ಇಂಡಿಯಾ ಟುಡೇ, ಹಿಂದೂಸ್ತಾನ್ ಟೈಮ್ಸ್, ಮತ್ತು ಟೈಮ್ಸ್ ಆಫ್ ಇಂಡಿಯಾ ವೆಬ್ಸೈಟ್ನಲ್ಲಿ ವರದಿಗಳು ಕಂಡುಬಂದವು. ಈ ವರದಿಗಳಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ವಿರಾಟ್ ಪ್ರತಿಕ್ರಿಯಿಸಿರುವ ಬಗ್ಗೆ ಬರೆಯಲಾಗಿತ್ತು.
ಎನ್ಡಿಟಿವಿ ವರದಿಯ ಪ್ರಕಾರ ವಿರಾಟ್ ಕೊಹ್ಲಿ ಬೆಂಗಳೂರಿನ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ನಡೆದ ಕೆಲವು ಪುಂಡರು ಅಲ್ಲಿದ್ದ ಕೆಲವು ಮಹಿಳೆಯ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಕೊಹ್ಲಿ, 94 ಸೆಕೆಂಡುಗಳ ಅವಧಿಯ ಎರಡು ತುಣುಕುಗಳನ್ನು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವುದನ್ನು ನಾವು ಕಂಡುಕೊಂಡೆವು. ಪೋಸ್ಟ್ನಲ್ಲಿ ವಿರಾಟ್ “ಬೆಂಗಳೂರಿನಲ್ಲಿ ನಡೆದಿರುವ ಘಟನೆ ನಿಜಕ್ಕೂ ಆತಂಕಕಾರಿಯಾಗಿದೆ. ಹೆಣ್ಣುಮಕ್ಕಳಿಗೆ ಈ ರೀತಿ ಆಗುತ್ತಿರುವುದನ್ನು ನೋಡಿ ಜನ ನೋಡಿಕೊಂಡು ಏನೂ ಮಾಡದಿರುವುದು ಹೇಡಿತನದ ಕೆಲಸ. ಅಂತಹ ಜನರಿಗೆ ತಮ್ಮನ್ನು ತಾವು ಪುರುಷರು ಎಂದು ಕರೆಯಲು ಸಹ ಹಕ್ಕಿಲ್ಲ. ನಾನು ಒಂದು ಪ್ರಶ್ನೆಯನ್ನು ಕೇಳುತ್ತೇನೆ ಅದೇನಂದರೆ, ನಿಮ್ಮ ಕುಟುಂಬದಲ್ಲೂ ಯಾರಿಗಾದರೂ ಇಂತಹ ಸ್ಥಿತಿ ಎದುರಾದರೆ, ನೀವು ಹೀಗೆಯೇ ನಿಂತು ನೋಡುತ್ತೀರಾ ಅಥವಾ ಸಹಾಯ ಮಾಡುತ್ತೀರಾ? ಮಹಿಳೆ ಸಣ್ಣ ಬಟ್ಟೆ ಧರಿಸಿರುವುದರಿಂದ ಇಂತಹ ಘಟನೆ ನಡೆಯುತ್ತದೆ ಎಂದ ನೆಟ್ಟಿಗರಿಗೆ ಕೊಹ್ಲಿ "ನಾವು ನಮ್ಮ ಆಲೋಚನೆಯನ್ನು ಬದಲಾಯಿಸಬೇಕು. ಪುರುಷರು ಮಹಿಳೆಯರನ್ನು ಗೌರವದಿಂದ ನೋಡಬೇಕು. ಮಹಿಳೆಯರನ್ನು ಸ್ವಲ್ಪ ಸಹಾನುಭೂತಿಯಿಂದ ನೋಡಿಕೊಳ್ಳಿ. ಅದು ಬಿಟ್ಟು ನಿಮ್ಮನ್ನು ನೀವು ಸಮರ್ಥಿಸಿಕೊಳ್ಳುವುದು ನೋಡಿದರೆ ಭಯವಾಗುತ್ತದೆ. ಆಕೆ ನಿಮ್ಮ ಕುಟುಂಬದ ಸದಸ್ಯರಾಗಿದ್ದರೆ ಹೇಗೆ ಎಂದು ಯೋಚಿಸಬೇಕು ಎಂದು ಹೇಳುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು.
ಹಾಗೆ ನಾವು ಆರ್ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಅತ್ಯಾಚಾರದ ಬಗ್ಗೆ ವಿರಾಟ್ ಯಾವುದಾದರೂ ಹೇಳಿಕೆಯನ್ನು ನೀಡಿದ್ದಾರಾ ಎಂದು ಹುಡುಕಿದಾಗ ನಮಗೆ ಅವರ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಆಗಲಿ, ಈ ಘಟನೆಯನ್ನು ಉದ್ದೇಶಿಸಿ ನೀಡಿರುವ ವರದಿಗಳು ಅಥವಾ ಪೋಸ್ಟ್ಗಳು ಕಂಡುಬಂದಿಲ್ಲ.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾಭೀತಾಗಿದೆ. ವೈರಲ್ ಆದ ವಿಡಿಯೋ ಕೊಲ್ಕತ್ತಾ ಘಟನೆಗೆ ಸಂಬಂಧಿಸಿದ್ದಲ್ಲ. 2017ರಲ್ಲಿ ಬೆಂಗಳೂರಿನ ಎಂಜಿ ರಸ್ತೆ ಮತ್ತು ಬ್ರಿಗೇಡ್ ಅರ್ತೆಯಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಕ್ರಿಕೆಟರ್ ವಿರಾಟ್ ಕೊಹ್ಲಿ ಮಾತನಾಡಿರುವ ವಿಡಿಯೋವದು.