ಫ್ಯಾಕ್ಟ್ ಚೆಕ್ : ಮಹಿಳೆಗೆ ಗುಂಡಿಕ್ಕಿ ಕೊಂದ ವಿಡಿಯೋ ಮಣಿಪುರದ್ದಲ್ಲ, ಮ್ಯಾನ್ಮಾರ್ನದ್ದು
ಮಣಿಪುರದಲ್ಲಿ ನಡೆದ ಘಟನೆ ಎಂದು ಮಹಿಳೆಯನ್ನು ಗುಂಡಿಕ್ಕಿ ಕೊಂದ ವಿಡಿಯೋವೊಂದು ವೈರಲ್ ಆಗಿದೆ. ಆದರೆ ಇದು ಸುಳ್ಳು.
Claim :
ಮಣಿಪುರ ಹಿಂಸಾಚಾರದ ವೇಳೆ ಮತ್ತೊಬ್ಬ ಮಹಿಳೆ ಗುಂಡಿಕ್ಕಿ ಹತ್ಯೆFact :
ಈ ವೈರಲ್ ವಿಡಿಯೋ ಮ್ಯಾನ್ಮರ್ನದ್ದು
ಭಾರತದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಮೈತಿಗಳು ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ಭುಗಿಲೆದಿದ್ದೆ. ಈ ಹಿಂಸಾಚಾರದಲ್ಲಿ ಹಲವರ ಹತ್ಯೆಯಾಗಿದೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಇತ್ತೀಚೆಗೆ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆ ಮಾಡಿ, ಪುರುಷ ದೊಡ್ಡ ಗುಂಪೊಂದು ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆಗಿತ್ತು.
ಈಗ ಮತ್ತೊಂದು ವಿಡಿಯೋ ಹರಿದಾಡುತ್ತಿದ್ದು, ಇದರಲ್ಲಿ ಪುರುಷರ ಸಣ್ಣ ಗುಂಪು ಯುವತಿಯೊಬ್ಬಳನ್ನು ನಡುರಸ್ತೆಯಲ್ಲಿ ಹೊಡೆದದ್ದು ಅಲ್ಲದೆ, ಗುಂಡಿಕ್ಕಿ ಕೊಲ್ಲುವ ದೃಶ್ಯಗಳನ್ನು ಒಳಗೊಂಡಿದ್ದು, ಇದೂ ಮಣಿಪುರದಲ್ಲಿ ನಡೆದ ಘಟನೆ ಎಂದು ಹೇಳುತ್ತದೆ.
"ಮಣಿಪುರದ ಕುಕ್ಕಿ ಕ್ರಿಶ್ಚಿಯನ್ ಹುಡುಗಿಯ ಮೇಲೆ ಮಾರಣಾಂತಿಕ ಹಲ್ಲೆ ಮತ್ತು ಕೊಲೆಯ ಆಘಾತಕಾರಿ ವಿಡಿಯ. ಇದು ನಿಜಕ್ಕೂ ಅತ್ಯಂತ ಭಯಾನಕ. ದ್ವೇಷದ ಆಡಳಿತದಲ್ಲಿ ಮಣಿಪುರ ಮತ್ತು ಭಾರತದ ದುಃಖಕರ ವಾಸ್ತವ. ಮಣಿಪುರಕ್ಕಾಗಿ ಪ್ರಾರ್ಥಿಸಿ, ಭಾರತಕ್ಕಾಗಿ ಪ್ರಾರ್ಥಿಸಿ " ಎಂಬ ಅಡಿ ಶೀರ್ಷಿಕೆಯೊಂದಿಗೆ ಹರಿದಾಡುತ್ತಿದೆ.
ಫ್ಯಾಕ್ಟ್ ಚೆಕ್
ಈ ವಿಡಿಯೋ ಹೇಳಿಕೊಳ್ಳುವಂತೆ ಇದು ಮಣಿಪುರದಲ್ಲಿ ನಡೆದ ಘಟನೆಯಲ್ಲ. ಈ ವಿಡಿಯೋ ಮ್ಯಾನ್ಮಾರ್ನಲ್ಲಿ, 2022ರ ಡಿಸೆಂಬರ್ ನಲ್ಲಿ ನಡೆದ ಘಟನೆಗೆ ಸಂಬಂಧಿಸಿದ್ದು.
ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ನಮಗೆ ಒಂದು ಟ್ವಿಟರ್ ಖಾತೆಯಲ್ಲಿ ವೈರಲ್ ಆದ ವಿಡಿಯೋವನ್ನೇ ಹೋಲುವ ಇನ್ನೊಂದು ವಿಡಿಯೋ ಸಿಕ್ಕಿತು. ಇದು 2022ರ ಡಿಸೆಂಬರ್ 2ರಂದು ಬರ್ಮಾ ಭಾಷೆಯಲ್ಲಿ ಬರೆಯಲಾದ ಅಡಿ ಶೀರ್ಷಿಕೆಯೊಂದಿಗೆ ಪ್ರಕಟವಾಗಿತ್ತು. ಬರ್ಮಾ ಭಾಷೆಯಲ್ಲಿದ್ದ ಸಾಲಿನ ಅನುವಾದ ಹೀಗಿದೆ , "ಪಿಡಿಎಚ್ಗಳು ನಿಜಕ್ಕೂ ಕ್ರೂರಿಗಳು, ಮಹಿಳೆಯೊಬ್ಬಳಿಗೆ ಕೋಳ ತೊಡಿಸಿ, ದಾರುಣವಾಗಿ ಗುಂಡಿಕ್ಕಲಾಯಿತು".
ಈ ಮಾಹಿತಿ ಆಧರಿಸಿ ಇನ್ನಷ್ಟು ಹುಡುಕಾಟ ನಡೆಸಿದಾಗ ಬರ್ಮಾದಲ್ಲಿ ಡಿಸೆಂಬರ್ 2022ರಲ್ಲಿ ಪ್ರಕಟವಾದ ಹಲವು ವರದಿಗಳು ಸಿಕ್ಕವು.
ಎಲೆವನ್ಮ್ಯಾನ್ಮಾರ್.ಕಾಮ್ ವರದಿಯ ಪ್ರಕಾರ, 3 ನಿಮಿಷದ ವಿಡಿಯೋವೊಂದು ಮ್ಯಾನ್ಮಾರ್ನಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಪುರುಷರ ಗುಂಪೊಂದು ಯುವ ಮಹಿಳೆಯನ್ನು ಹೊಡೆದು, ತೀವ್ರವಾಗಿ ಹಲ್ಲೆ ನಡೆಸಿದ ದೃಶ್ಯಗಳನ್ನು ಒಳಗೊಂಡಿದೆ. ನಂತರ ನಾಲ್ಕು ಗುಂಡುಗಳನ್ನು ಹೊಡೆದು, ಆಕೆಯ ದೇಹವನ್ನು ನಡು ರಸ್ತೆಯಲ್ಲಿ ಬಿಟ್ಟಿದನ್ನು ದೃಶ್ಯದಲ್ಲಿ ಕಾಣಬಹುದಾಗಿತ್ತು.
ವರದಿಯ ಪ್ರಕಾರ, ವಿಡಿಯೋದಲ್ಲಿ ಘಟನೆ ನಡೆದ ಸ್ಥಳ ಸ್ಪಷ್ಟವಾಗಿಲ್ಲ. ಆದರೆ ವಿಡಿಯೋವನ್ನು ಹಂಚಿಕೊಂಡ ಅನೇಕರು ಇದು ಮ್ಯಾನ್ಮಾರ್ನ ಟಮುವಿನಲ್ಲಿ ನಡೆದಿದ್ದು, ದಾಳಿ ನಡೆದಿದ್ದು ಟಮು ಪಿಡಿಎಫ್ ( ಪೀಪಲ್ಸ್ ಡಿಫೆನ್ಸ್ ಫೋರ್ಸಸ್) ನಂ 4 ಬೆಟಾಲಿನ್. ಎಂದು ಬರೆದಿರುವುದಾಗಿ ತಿಳಿಸಿದೆ.
ಈ ಘಟನೆಯನ್ನು ಹಲವು ಬರ್ಮಾ ಮಾಧ್ಯಮಗಳು ವರದಿ ಮಾಡಿವೆ.
https://www.rfa.org/burmese/news/tamu-murder-12042022020211.ಹ್ತ್ಮ್ಲ್
http://www.daweiwatch.com/2022/12/10/news/48154/
ಈ ಅಂಶಗಳನ್ನು ಆಧರಿಸಿ ಯುವ ಮಹಿಳೆಯನ್ನು ಘೋರವಾಗಿ ನಡುರಸ್ತೆಯಲ್ಲಿ ಗುಂಡಿಟ್ಟು ಕೊಂದ ಮ್ಯಾನ್ಮಾರ್ನದ್ದಾಗಿದ್ದು, ಭಾರತದ ಮಣಿಪುರಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಿಸಿದ್ದಲ್ಲ. ಹಾಗಾಗಿ ಇದು ವಿಡಿಯೋ ಪ್ರತಿಪಾದನೆ ಸುಳ್ಳು.