ಫ್ಯಾಕ್ಟ್ಚೆಕ್: ವೈರಲ್ ಚಿತ್ರದಲ್ಲಿ ಕಾಣುವ ಮಹಿಳೆ ಯುಎಸ್ ಸುವಾರ್ತಾಭೋದಕ ಡೇನಿಯಲ್ ಸ್ಟೀಫನ್ ಕರ್ನಿಯ ಪತ್ನಿಯಲ್ಲ
ವೈರಲ್ ಚಿತ್ರದಲ್ಲಿ ಕಾಣುವ ಮಹಿಳೆ ಯುಎಸ್ ಸುವಾರ್ತಾಭೋದಕ ಡೇನಿಯಲ್ ಸ್ಟೀಫನ್ ಕರ್ನಿಯ ಪತ್ನಿಯಲ್ಲ
Claim :
ಯುಎಸ್ ಸುವಾರ್ತಾಭೋದಕ ಡೇನಿಯಲ್ ಸ್ಟೀಫನ್ ಕರ್ನಿಯ ಪತ್ನಿ ಐಎನ್ಸಿ ನಾಯಕ ರಾಹುಲ್ ಗಾಂಧಿಯೊಂದಿಗಿರು ಚಿತ್ರ ವೈರಲ್Fact :
ವೈರಲ್ ಆದ ಚಿತ್ರದಲ್ಲಿ ಕಾಣುವ ಮಹಿಳೆ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಅನುಷಾ ಪುಲ್ಲಯ್ಯ ಈ ಸುದ್ದಿಯನ್ನು ಖುದ್ದು ಅವರೆ ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ
ನವಂಬರ್ 21, 2024ರಂದು ಬಾಂಗ್ಲಾದೇಶದ ಪತ್ರಕರ್ತ ಮತ್ತು ಬ್ಲಿಟ್ಸ್ ವೆಬ್ಸೈಟ್ನ ಸಂಪಾದಕ ʼಸಲಾವುದ್ದೀನ್ ಶೋಯೆಬ್ ಚೌಧರಿʼ ತನ್ನ ಎಕ್ಸ್ ಖಾತೆಯಲ್ಲಿ ಎರಡು ಪೊಸ್ಟ್ನ್ನು ಹಂಚಿಕೊಂಡಿದ್ದರು. ಮೊದಲನೇ ಪೊಸ್ಟ್ನಲ್ಲಿ "Raul Vinci's Christian Conversion Mission! Anusha, wife of Daniel Stephen Courney, the kingpin of religious conversion racket who has been converting thousands of Hindus into Christianity every year is Secretary, Youth Congress Committee, and "Research specializing in running election War rooms for INC". Doesn't it prove - Antonio Albina Maino's Indian National Congress is converting Hindus into Christianity? Any doubt?" ಎಂಬ ಶೀರ್ಷಿಕೆಯೊಂದಿಗೆ ಅನುಷಾ ಫೋಟೋವನ್ನು ಹಂಚಿಕೊಂಡಿದ್ದಾರೆ.
ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ರಾಹುಲ್ ವಿನ್ಸಿಯ ಕ್ರಿಶ್ಚಿಯನ್ ಮತಾಂತರ ಮಿಷನ್! ಪ್ರತೀ ವರ್ಷ ಸಾವಿರಾರು ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಧಾರ್ಮಿಕ ಮತಾಂತರ ಜಾಲದ ಮುಖ್ಯಸ್ಥ ಡ್ಯಾನಿಯಲ್ ಸ್ಟೀಫನ್ ಕೌರ್ನಿಯ ಪತ್ನಿ ಅನುಷಾ, ಯುವ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿದ್ದಾರೆ. ಅವರು ಐಎನ್ಸಿ ಚುನಾವಣಾ ವಾರ್ ರೂಮ್ನ್ನು ನಿಭಾಯಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಆಂಟೋನಿಯೊ ಅಲ್ಬಿನಾ ಮೈನೋನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದೆ ಎಂಬುದು ಇಲ್ಲಿ ಸಾಭೀತಾಗುವುದಿಲ್ಲವೇ? ಇನ್ನು ನಿಮಗೆ ಸಂದೇಹವಿದೆಯಾ?ʼ ಎಂಬ ಶೀರ್ಷಿಕೆಯನ್ನೀಡಿ ಅನುಷಾ ಎಕ್ಸ್ನ ಬಯೋವನ್ನು ಸ್ಕ್ರೀನ್ಶಾಟ್ನೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ "Is INC A Religious Conversion Cult? Meet Anusha (@AnushaS25), wife of Daniel Stephen Courney, the kingpin of religious conversion racket who has been converting thousands of Hindus into Christianity every year. Anusha is Secretary of Karnataka Pradesh Youth Congress Committee and specializes in running election war-rooms of Indian National Congress. With this documented evidence, can't we say - INC is actually involved in numerous crimes being a religious conversion cult? Please ask Antonio Albina Maino, Raul Vinci and Bianca to prove this photo wrong" ಎಂಬ ಶೀರ್ಷಿಕೆಯೊಂದಿಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
"ಕಾಂಗ್ರೆಸ್ ಪಕ್ಷ ಧಾರ್ಮಿಕ ಮತಾಂತರ ಸಂಘವೇ? ಸಾವಿರಾರು ಹಿಂದೂಗಳನ್ನು ಪ್ರತೀ ವರ್ಷ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಧಾರ್ಮಿಕ ಮತಾಂತರ ಜಾಲದ ಮುಖ್ಯಸ್ಥ ಡ್ಯಾನಿಯಲ್ ಸ್ಟೀಫನ್ ಕೌರ್ನಿನ ಪತ್ನಿ ಅನುಷಾರನ್ನ ಈ ಚಿತ್ರದಲ್ಲಿ ನೀವು ನೋಡಬಹುದು. ಅನುಷಾ ಕರ್ನಾಟಕ ಯುವ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಪಕ್ಷದ ಚುನಾವಣೆ ಕಾರ್ಯಗಳನ್ನ ನಿಭಾಯಿಸುತ್ತಾರೆ. ಕಾಂಗ್ರೆಸ್ ಪಕ್ಷ ಧಾರ್ಮಿಕ ಮತಾಂತರ ಮಾಡುವಲ್ಲಿ ತೊಡಗಿಸಿಕೊಂಡಿದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಈ ಚಿತ್ರಗಳು ಸುಳ್ಳಾಗಿದ್ದಲ್ಲಿ ಇದನ್ನು ಆಂಟೋನಿಯೊ ಅಲ್ಬಿನಾ ಮೈನೋ, ರಾಹುಲ್ ವಿನ್ಸಿ ಮತ್ತು ಬಿಯಾಂಕಾಗೆ ಕೇಳಿರಿ." ಎಂಬ ಶೀರ್ಷಿಕೆಯೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಮತ್ತೊಂದು ಟ್ವಿಟ್ನಲ್ಲಿ ಸಲಾವುದ್ದೀನ್ ಶೋಯೆಬ್ ಚೌಧರಿ, ನೇಪಾಳದ ಗಾರ್ಡನ್ ಗೆಸ್ಟ್ ಹೌಸ್ನಲ್ಲಿ ಡ್ಯಾನಿಯಲ್ ಸ್ಟೀಫನ್ ಕಾರ್ನಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದಾರೆ. ಈ ಚಿತ್ರದಲ್ಲಿ ಕಾಣುವ ಮಹಿಳೆ ಡೇನಿಯಲ್ ಸ್ಟೀಫನ್ ಕಾರ್ನಿಯ ಪತ್ನಿ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್ ಮಾಡಿದ್ದಾರೆ.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಈ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್ ಚಿತ್ರದಲ್ಲಿ ಕಾಣುವ ಮಹಿಳೆ ಡ್ಯಾನಿಯಲ್ ಸ್ಟೀಫನ್ ಕೌರ್ನಿನ ಪತ್ನಿ ಅನುಷಾ ಅಲ್ಲ. ಚಿತ್ರದಲ್ಲಿ ಕಾಣುವ ಮಹಿಳೆ ಕರ್ನಾಟಕ ಯುವ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಅನುಷಾ ಪುಲ್ಲಯ್ಯ ಈ ಸುದ್ದಿಯನ್ನು ಖುದ್ದು ಅವರೆ ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಾವವು ವೈರಲ್ ಆದ ಸುದ್ದಿಯಲ್ಲಿನ ಸತ್ಯಾಂಶವನ್ನು ತಿಳಿಯಲು ಗೂಗಲ್ನಲ್ಲಿ ಕಾಂಗ್ರೆಸ್ನ ಯುವ ಕಾರ್ಯಕರ್ತೆ ಅನುಷಾ ಪುಲ್ಲಯ್ಯ ಎಂಬ ಕೀವರ್ಡ್ನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಅನುಷಾ ಪುಲ್ಲಯ್ಯ ತನ್ನ ಎಕ್ಸ್ ಖಾತೆಯಲ್ಲಿ ಶೋಯೆಬ್ ಚೌಧರಿ ಪೋಸ್ಟ್ ಮಾಡಿರುವ ಚಿತ್ರಗಳ ಸ್ಕ್ರೀನ್ಶಾಟ್ಗಳನ್ನು ಹಾಗೂ ಎಫ್ಐಆರ್ ಕಾಪಿಯನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. @salah_shoaib Please do a fact-check before posting content. You have referenced me incorrectly in your posts. I am not the Anusha you are talking about (wife of Daniel Courney). I am Anusha Pullaiah, a resident of Bengaluru. I have also filed an FIR with @BlrCityPolice ಎಂಬ ಶೀರ್ಷಿಕೆಯೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನಾವು ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದೆವು. ಅನುಷಾ ಪುಲ್ಲಯ್ಯ, ಶೋಯಬ್ರನ್ನು ಟ್ಯಾಗ್ ಮಾಡಿ ʼದಯವಿಟ್ಟು ನೀವು ಯಾವುದೇ ವಿಷಯವನ್ನು ಪೋಸ್ಟ್ ಮಾಡುವ ಮೊದಲು ಸತ್ಯ ಪರಿಶೀಲನೆ ಮಾಡಿ. ನಾನು ಡ್ಯಾನಿಯಲ್ ಕೌರ್ನಿಯ ಪತ್ನಿ ಅನುಷಾ ಅಲ್ಲ, ನಾನು ಬೆಂಗಳೂರು ನಿವಾಸಿಯಾದ ಅನುಷಾ ಪುಲ್ಲಯ್ಯ. ನೀವು ನಿಮ್ಮ ಪೋಸ್ಟ್ಗಳಲ್ಲಿ ನನ್ನನ್ನು ತಪ್ಪಾಗಿ ಉಲ್ಲೇಖಿಸಿದ್ದೀರಿ ಎಂದು ಕ್ಯಾಪ್ಷನನ್ನು ನೀಡಿ, ಎಫ್ಐಆರ್ ಕಾಪಿಯನ್ನು ನಾನು ಬೆಂಗಳೂರು ಸಿಟಿ ಪೋಲಿಸರಿಗೆ ಸಲ್ಲಿಸಿದ್ದೇನೆʼ ಎಂದು ಶೀರ್ಷಿಕೆಯನ್ನು ನೀಡಿ ಎಫ್ಐಆರ್ ಕಾಪಿಯೊಂದಿಗೆ ಹಂಚಿಕೊಂಡಿರುವುದನ್ನು ನೋಡಬಹುದು.
ಎಕ್ಸ್ ಖಾತೆಯಲ್ಲಿ ಅನುಷಾ ಪುಲ್ಲಯ್ಯ ಪೊಸ್ಟ್ವೊಂದನ್ನು ಹಂಚಿಕೊಂಡಿದ್ದರು. ʼಒಬ್ಬ ಪ್ರಶಸ್ತಿ ವಿಜೇತ ಪತ್ರಕರ್ತನಾಗಿರುವ ಸಲಾವುದ್ದೀನ್ ಶೋಯೆಬ್ ಚೌಧರಿ ನನ್ನ ಮೇಲೆ ಆಧಾರರಹಿತ ಮತ್ತು ಕೆಲವು ಆರೋಪಗಳನ್ನು ಮಾಡುವುದು ನಿಜವಾಗಿಯೂ ನೋವುಂಟುಮಾಡುತ್ತದೆ. ನಾನು ಧರ್ಮದ ಮತಾಂತರ ಮಾಡುತ್ತಿದ್ದೇನೆ ಎಂದು ಆರೋಪಿಸಿದ್ದೀರಾ. ನನಗೆ ಡ್ಯಾನಿಯಲ್ ಸ್ಟೀಫನ್ ಕೌರ್ನಿ ಮತ್ತು ಅನುಷಾ ಯಾರೆಂದೇ ನನಗೆ ಗೊತ್ತಿಲ್ಲ. ನನ್ನ ಚಿತ್ರಗಳನ್ನು ದುರುಪುಯೋಗಿಸಿಕೊಂಡಿದ್ದೀರಾ. ಇದರಿಂದ ನಾನು ಖಿನ್ನತೆಗೆ ಒಳಗಾಗಿದ್ದೇನೆ. ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿಯ ಮೇಲೆ ನಿಮ್ಮ ದಾಳಿ ತೀರಾ ಅಸಹ್ಯಕರವಾಗಿದೆ. ರಾಹುಲ್ ಗಾಂಧಿ ಗೌರವಾನ್ವಿತ ನಾಯಕ. ಪಕ್ಷದ ವಿರುದ್ದದ ಆರೋಪಗಳನ್ನು ಸಂಪೂರ್ಣ ತಿರಸ್ಕರಿಸುತ್ತೇನೆ. ಎಂದು ಬರೆದು ಪೊಸ್ಟ್ ಮಾಡಿರುವುದನ್ನು ನಾವು ನೋಡಬಹುದು.
ವೆಬ್ಸೈಟ್ BLiTZನಲ್ಲಿ ಪ್ರಕಟವಾದ ಸುದ್ದಿಯನ್ನು ಮತ್ತು ಅದರ ಸಂಪಾದಕ ಸಲಾವುದ್ದೀನ್ ಶೋಯೆಬ್ ಚೌಧರಿ ಅವರ ಟ್ವೀಟ್ಗೆ ಸಂಬಂಧಿಸಿದಂತೆ ಅನುಷಾ ಪೊಲೀಸರಿಗೆ ನೀಡಿದ ಎಫ್ಐಆರ್ನಲ್ಲಿ ನೋಡಬಹುದು.
ಮತ್ತಷ್ಟು ಹುಡುಕಾಟದಲ್ಲಿ ನಮಗೆ ಜೂನ್ 4,2024ರಂದು ಅನುಷಾ ಪುಲ್ಲಯ್ಯ ರಾಹುಲ್ ಗಾಂಧಿಯನ್ನು ಭೇಟಿ ಮಾಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದೇ ಚಿತ್ರವನ್ನು ನಾವು ವೈರಲ್ ಪೊಸ್ಟ್ನಲ್ಲಿ ನೋಡಬಹುದು.
ಡೇನಿಯಲ್ ಸ್ಟೀಫನ್ ಕಾರ್ನಿ ಪತ್ನಿ ಅನುಷಾ ಅವರ ಚಿತ್ರವನ್ನು ಕಾಂಗ್ರೆಸ್ ಕಾರ್ಯಕರ್ತೆ ಅನುಷಾ ಅವರ ಚಿತ್ರದೊಂದಿಗೆ ಹೋಲಿಸಿದಾಗ, ಇಬ್ಬರ ಮುಖದಲ್ಲಿ ಮೂಗು, ಹುಬ್ಬು, ಗಲ್ಲದಂತಹ ಸಾಕಷ್ಟು ವ್ಯತ್ಯಾಸಗಳು ಕಂಡುಬಂದವು
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತದೆ. ವಾಸ್ತವಾಗಿ ವೈರಲ್ ಚಿತ್ರದಲ್ಲಿ ಕಾಣುವ ಮಹಿಳೆ ಡ್ಯಾನಿಯಲ್ ಸ್ಟೀಫನ್ ಕೌರ್ನಿನ ಪತ್ನಿ ಅನುಷಾ ಅಲ್ಲ. ಚಿತ್ರದಲ್ಲಿ ಕಾಣುವ ಮಹಿಳೆ ಕರ್ನಾಟಕ ಯುವ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಅನುಷಾ ಪುಲ್ಲಯ್ಯ ಈ ಸುದ್ದಿಯನ್ನು ಖುದ್ದು ಅವರೆ ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ