ಫ್ಯಾಕ್ಟ್ಚೆಕ್: ತಮಿಳುನಾಡಿನಲ್ಲಿ ಮಹಿಳೆಯರು ಮಧ್ಯವನ್ನು ಸೇವಿಸುತ್ತಿದ್ದಾರೆ ಎಂಬ ಸುದ್ದಿ ಸುಳ್ಳು ವೈರಲ್ ಆದ ವೀಡಿಯೋದಲ್ಲಿ ಕಾಣುವ ಮಹಿಳೆಯರು ತೆಲಂಗಾಣದವರು.
ತಮಿಳುನಾಡಿನಲ್ಲಿ ಮಹಿಳೆಯರು ಮಧ್ಯವನ್ನು ಸೇವಿಸುತ್ತಿದ್ದಾರೆ ಎಂಬ ಸುದ್ದಿ ಸುಳ್ಳು ವೈರಲ್ ಆದ ವೀಡಿಯೋದಲ್ಲಿ ಕಾಣುವ ಮಹಿಳೆಯರು ತೆಲಂಗಾಣದವರು.
Claim :
ವೈರಲ್ ಆದ ವಿಡಿಯೋದಲ್ಲಿ ಕಾಣುವ ಮಹಿಳೆಯರು ತಮಿಳುನಾಡಿನವರುFact :
ವೈರಲ್ ಆದ ವೀಡಿಯೋವನ್ನು ದಸರಾ ಸಂದರ್ಭದಲ್ಲಿ ಚಿತ್ರೀಕರರಿಸಲಾಗಿದ್ದು, ವಿಡಿಯೋದಲ್ಲಿ ಕಾಣುವ ಮಹಿಳೆಯರು ತೆಲಂಗಾಣದವರು.
ವೈರಲ್ ಆದ ವೀಡಿಯೋದಲ್ಲಿ ಮಹಿಳೆಯರು ಮಧ್ಯವನ್ನು ಸೇವಿಸುತ್ತಾ ಹರಟೆ ಹೊಡೆಯುತ್ತಾ, ತಂಪುಪಾನಿಯವನ್ನು ಸೇವಿಸುತ್ತಿರುವ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ವೀಡಿಯೋಗೆ ಅಭಿಷೇಕ್ ಕುಮಾರ್ ಕುಷ್ವಹಾ ಎನ್ನುವ X ಖಾತೆದಾರ "ಮಕ್ಕಳನ್ನು ಬೆಳೆಸಬೇಕಾದ ಮಹಿಳೆಯರು ಪಾಶ್ಚಾತ್ಯ ಸಂಸ್ಕೃತಿಯ ಭಾಗವಾಗಿದ್ದಾರೆ" ಎಂದು ಕ್ಯಾಪ್ಷನ್ನ್ನು ನೀಡಿ ವೀಡಿಯೋವನ್ನು ಪೋಸ್ಟ್ ಮಾಡಿದ್ದರು.
“तमिलनाडु: परिवार में महिलाओं की महत्वपूर्ण भूमिका होती हैं। अगर महिलाएं ऐसी होंगी तो बच्चों का पालन-पोषण कैसे होगा।“ಎಂದು ಹಿಂದಿಯಲ್ಲಿ ಕ್ಯಾಪ್ಷನ್ ನೀಡಿ ಪೋಸ್ಟ್ ಮಾಡಿದ್ದಾರೆ.
ಒಂದು ಕುಟುಂಬದ ಅಭಿವೃದ್ದಿ ಮತ್ತು ಏಳಿಗೆಗೆ ಮಹಿಳೆಯರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. ಹೆಂಗಸರೇ ಹೀಗಾದರೆ ಮಕ್ಕಳನ್ನು ಸಾಕುವುದು ಹೇಗೆ? ಎಂಬ ಪ್ರಶ್ನೆಯನ್ನು ತನ್ನ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
तमिलनाडु: परिवार में महिलाओं की महत्वपूर्ण भूमिका होती हैं। अगर महिलाएं ऐसी होंगी तो बच्चों का पालन-पोषण कैसे होगा। pic.twitter.com/FgyfmD5JY5
— Abhishek Kumar Kushwaha (@TheAbhishek_IND) November 21, ೨೦೨೩
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವ ಮಹಿಳೆಯರು ತಮಿಳುನಾಡಿನವರು ಅಲ್ಲ, ತೆಲಂಗಾಣದ ಮಹಿಳೆಯರು.
ವಿಡಿಯೋವಿನಲ್ಲಿರುವ ಕೆಲವು ಕೀ ಫ್ರೇಮ್ಸ್ಗಳನ್ನು ಉಪಯೋಗಿಸಿ ಗೂಗಲ್ನಲ್ಲಿ ಉಡುಕಾಟ ನಡೆಸಿದಾಗ ನಮಗೆ "ಬಂಜಾರಾ ಅಶ್ವತಾ" ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಅಕ್ಟೊಬರ್ 25,2023ರಂದು "ದಸರಾ ದಾವತ್"ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋವನ್ನು ರೀಲ್ನ ರೀತಿ ಅಪ್ಲೋಡ್ ಮಾಡಿರುವಂತಹ ವೀಡಿಯೋವನ್ನು ನಾವು ಕಂಡುಕೊಂಡವು. ಉದ್ದವಾದ ವಿಡಿಯೋವನ್ನು ನವಂಬರ್ 4,2023ರಂದು ಅಪ್ಲೋಡ್ ಮಾಡಲಾಗಿತ್ತು.
ಈ ವಿಡಿಯೋಗಳ ಜೊತೆಗೆ ಇತರೆ ವಿಡಿಯೋಗಳನ್ನು ಸಹ ನಾವು ಕಂಡುಕೊಂಡೆವು. ವೈರಲ್ ಆದ ವಿಡಿಯೋದಲ್ಲಿರುವ ಮಹಿಳೆಯರು ಸ್ಥಳೀಯ ಹಾಡುಗಳಿಗೆ ನೃತ್ಯ ಮಾಡುತ್ತಿರುವುದನ್ನು ನಾವು ಕಂಡುಕೊಂಡೆವು.
ಈ ಯೂಟ್ಯೂಬ್ ಚಾನೆಲ್ ತೆಲಂಗಾಣದ ನಾಗರ್ಕರ್ನೂಲ್ನ ಸಣ್ಣ ಹಳ್ಳಿಯ ಬಂಜಾರಾ ಅಶ್ವಿತಾ ಎಂಬ ಮಹಿಳೆಗೆ ಹೆಸರಿನಲ್ಲಿದೆ. ಬಂಜಾರ ಬುಡಕಟ್ಟಿಗೆ ಸೇರಿರುವ ಅಶ್ವಿತಾ ಅಲ್ಲಿನ ಸ್ಥಳೀಯ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ತೋರಿಸುವ ಅನೇಕ ವೀಡಿಯೊಗಳನ್ನು ತನ್ನ ಚಾನಲ್ನಲ್ಲಿ ಅಪ್ಲೋಡ್ ಮಾಡಿದ್ದಳು.
ಈ ಮೂಲಕ ಸಾಭೀತಾಗಿರುವುದೇನೆಂದರೆ ವೈರಲ್ ಆದ ವೀಡಿಯೋವನ್ನು ದಸರಾ ಸಂದರ್ಭದಲ್ಲಿ ಚಿತ್ರೀಕರರಿಸಲಾಗಿದ್ದು, ವಿಡಿಯೋದಲ್ಲಿ ಕಾಣುವ ಮಹಿಳೆಯರು ತಮಿಳುನಾಡಿನವರಲ್ಲ ಬದಲಿಗೆ ವಿಡಿಯೋದಲ್ಲಿ ಕಾಣುವ ಮಹಿಳೆಯರು ತೆಲಂಗಾಣದವರು.