ಫ್ಯಾಕ್ಟ್ಚೆಕ್: 2025ರ ವೇಳೆಗೆ 87%ರಷ್ಟು ಭಾರತೀಯರು ಕಲಬೆರಕೆ ಹಾಲಿನಿಂದ ಕ್ಯಾನ್ಸರ್ ಅಪಾಯವನ್ನು ಎದುರಿಸಬಹುದು ಎಂಬ ಡಬ್ಲ್ಯುಎಚ್ಒ ಹೇಳಿಕೆಯನ್ನು ಭಾರತ ಸರ್ಕಾರ ನಿರಾಕರಿಸಿದೆಯಾ?
2025ರ ವೇಳೆಗೆ 87%ರಷ್ಟು ಭಾರತೀಯರು ಕಲಬೆರಕೆ ಹಾಲಿನಿಂದ ಕ್ಯಾನ್ಸರ್ ಅಪಾಯವನ್ನು ಎದುರಿಸಬಹುದು ಎಂಬ ಡಬ್ಲ್ಯುಎಚ್ಒ ಹೇಳಿಕೆಯನ್ನು ಭಾರತ ಸರ್ಕಾರ ನಿರಾಕರಿಸಿದೆಯಾ?
Claim :
ಕಲಬೆರಕೆ ಹಾಲಿನಿಂದ 2025 ರ ವೇಳೆಗೆ 87% ಭಾರತೀಯರು ಕ್ಯಾನ್ಸರ್ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.Fact :
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರವು 2025 ರ ವೇಳೆಗೆ 87% ಭಾರತೀಯರು ಕಲಬೆರಕೆ ಹಾಲಿನಿಂದ ಕ್ಯಾನ್ಸರ್ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂಬ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ.
2017ರಲ್ಲಿ ಮೊದಲಬಾರಿಗೆ ಟೆಡ್ರೋಸ್ ಅಧನಾಮ್ ಫುಭ್ರೆಯಸನಸ್ ಡಬ್ಲ್ಯುಎಚ್ಒ ಮಹಾನಿರ್ದೇಶಕರಾಗಿ ಜವಾಬ್ದಾರಿಯನ್ನು ನೀಡಲಾಗಿತ್ತು. ಅದಾದ ನಂತರ 2022ರಲ್ಲಿ ಮತ್ತೊಮ್ಮೆ ಅವರಿಗೆ ಜವಾಬ್ದಾರಿಯನ್ನು ವಹಿಸಲಾಯಿತು. ಕೊರೋನಾ ಮಹಾಮಾರಿಯಿಂದಾಗಿ ಜನರು ತತ್ತರಿಸುತ್ತಿದ್ದಾಗ ಸಾಕಷ್ಟು ಪ್ರಮುಖ ಸಲಹೆಯನ್ನು ನೀಡಿದ್ದರು.
ಕಲಬೆರಕೆ ಹಾಲಿನ ಸೇವನೆಯಿಂದ 2025 ರ ವೇಳೆಗೆ ಭಾರತದ ಜನಸಂಖ್ಯೆಯ 87% ರಷ್ಟು ಜನರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಭಾರತ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
87% ಭಾರತೀಯರಿಗೆ ಕ್ಯಾನ್ಸರ್!
2025ರ ವೇಳೆಗೆ ಶೇಕಡಾ 87ರಷ್ಟು ಭಾರತೀಯರು ಕ್ಯಾನ್ಸರ್ನಿಂದ ಬಳಲುತ್ತಾರೆ ಎಂದು WHO ಎಚ್ಚರಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಹಾಲು ಕಲಬೆರಕೆಯಾಗಿದೆ. ಈ ಹಾಲನ್ನು ಕುಡಿಯುವುದರಿಂದ ಕ್ಯಾನ್ಸರ್ ಬರುವ ಅಪಾಯವಿದೆ. ಈ ಕಲಬೆರಕೆಯನ್ನು ನಿಯಂತ್ರಿಸದಿದ್ದರೆ, ಭಾರತದಲ್ಲಿನ ಹೆಚ್ಚಿನ ಜನಸಂಖ್ಯೆಯ ಜನರು ಕ್ಯಾನ್ಸರ್ನಿಂದ ಬಳಲುತ್ತಾರೆ ಎಂದು ಎಚ್ಚರಿಕೆ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್ನಲ್ಲಿ "ಭಾರತದಲ್ಲಿ ಮಾರಾಟವಾಗುವ 68.7% ಹಾಲು ಅಥವಾ ಹಾಲಿನ ಉತ್ಪನ್ನಗಳು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮಾನದಂಡಗಳನ್ನು ಪೂರೈಸುವುದಿಲ್ಲ ಎಂದು ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯರು ಸರ್ಕಾರಕ್ಕೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್ ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ವೈರಲ್ ಆಗಿದೆ.
ಫ್ಯಾಕ್ಟ್ಚೆಕ್
ವೈರಲ್ ಆದ ಪೋಸ್ಟ್ನಲ್ಲಿ ಯಾವುದೇ ಸತ್ಯಾಂಶವಿಲ್ಲ.
ಡೆಬ್ಲ್ಯೂಹೆಚ್ಒ ಪತ್ರಿಕಾ ಗೋಷ್ಠಿಯಲ್ಲಿ ಭಾರತದಲ್ಲಿ ಕಲಬೆರಕೆಯಿಂದಾಗಿ ಕ್ಯಾನ್ಸರ್ ಸಂಭವಿಸುತ್ತದೆ ಎಂದು ಯಾವುದೇ ಹೇಳಿಕೆಯನ್ನು ನೀಡಿಲ್ಲವೆಂದು ಧೃಡೀಕರಿಸಿದೆ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಕಲಬೆರಕೆ ಮಾಡಲಾಗಿದೆ ಎಂಬ ವಿಚಾರದಲ್ಲಿ ಭಾರತ ಸರ್ಕಾರಕ್ಕೆ ಯಾವುದೇ ಸಲಹೆಯನ್ನು ನೀಡಿಲ್ಲವೆಂದು ಸ್ಪಷ್ಟೀಕರಿಸಿದೆ.
ವೈರಲ್ ಆದ ಹೇಳಿಕೆಗೆ ಪಿಐಬಿ ಬ್ಯೂರೋ ತನ್ನ ಟ್ವಿಟ್ನಲ್ಲಿ ಪ್ರತಿಕ್ರಯಿಸಿದೆ. ನವೆಂಬರ್ 22, 2019 ರಂದು, WHO 87% ಜನಸಂಖ್ಯೆಯು ಕಲಬೆರಕೆ ಹಾಲಿನ ಸೇವನೆಯಿಂದ ಭಾರತೀಯರು ಕ್ಯಾನ್ಸರ್ ಅಡಿಪಾಯದಲ್ಲಿದ್ದಾರೆ ಎಂದು ಸರ್ಕಾರಕ್ಕೆ ಸಲಹೆ ನೀಡಿತ್ತು ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಈ ಹೇಳಿಕೆಯನ್ನು WHO ತಳ್ಳಿಹಾಕಿ ಭಾರತ ಸರ್ಕಾರಕ್ಕೆ ಅಂತಹ ಯಾವುದೇ ಎಚ್ಚರಿಕೆಯನ್ನು ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅಂತಹ ಯಾವುದೇ ಸೂಚನೆ ನೀಡಿಲ್ಲ ಎಂದು ವಿವರಿಸಿದರು. ಹಾಲಿನ ಕಲಬೆರಕೆ ಬಗ್ಗೆ ಭಾರತ ಸರ್ಕಾರಕ್ಕೆ WHO ಯಾವುದೇ ಸಲಹೆ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
क्या विश्व स्वास्थ्य संगठन ने एडवाइजरी जारी कर कहा है कि भारत में उपलब्ध दूध में मिलवाट के कारण 8 सालों में 87% भारतीयों को कैंसर हो जाएगा❓#PIBFactCheck
— PIB Fact Check (@PIBFactCheck) October 18, 2022
▪️ नहीं ‼️
▪️ यह दावा फ़र्ज़ी है।
▪️ @WHO ने ऐसी कोई एडवाइजरी जारी नहीं की है।
🔗https://t.co/F1LYhcWQEn pic.twitter.com/1zXkgpHboH
ದೇಶದಲ್ಲಿ ಮಾರಾಟವಾಗುವ 68.7% ಹಾಲು ಮತ್ತು ಹಾಲಿನ ಉತ್ಪನ್ನಗಳು ಎಫ್ಎಸ್ಎಸ್ಎಐ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸಿಲ್ಲ ಎಂಬ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರ್ಷವರ್ಧನ್, “ಎಫ್ಎಸ್ಎಸ್ಎಐ 2018 ರಲ್ಲಿ ನಡೆಸಿದ ರಾಷ್ಟ್ರವ್ಯಾಪಿ ಹಾಲು ಸುರಕ್ಷತೆ ಮತ್ತು ಗುಣಮಟ್ಟ ಸಮೀಕ್ಷೆಯಲ್ಲಿ ಕೇವಲ 7% ಕಲಬೆರಕೆಯಾಗಿದೆ ಎಂದು ಸ್ಪಷ್ಟೀಕರಿಸಿದ್ದಾರೆ. ಇದರಲ್ಲಿ ಯಾಂಟಿಬಯಾಟಿಕ್ಸ್, ಕೀಟನಾಶಕಗಳು, ಅಫ್ಲಾಟಾಕ್ಸಿನ್ ಎಂ1 ಒಳಗೊಂಡಿದೆ. ಒಟ್ಟು 6,432 ಮಾದರಿಗಳಲ್ಲಿ, ಕೇವಲ 12 ಮಾತ್ರ ಹಾಲಿನ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಕಲಬೆರಕೆ ಎಂದು ಕಂಡುಬಂದಿದೆ. 3 ಮಾದರಿಗಳಲ್ಲಿ ಡಿಟರ್ಜೆಂಟ್ಗಳು, 2 ಮಾದರಿಗಳಲ್ಲಿ ಯೂರಿಯಾ ಕಲಬೆರಕೆ ಮತ್ತು ಒಂದು ಮಾದರಿಯಲ್ಲಿ ನ್ಯೂಟ್ರಾಲೈಸರ್ ಇರುವುದು ಪತ್ತೆಯಾಗಿದೆ,’’ ಎಂದು ಸ್ಪಷ್ಟಣೆ ನೀಡಿದ್ದಾರೆ.
ಆರ್ಥಿಕ ಸಮೀಕ್ಷೆ 2021-22 ರ ಪ್ರಕಾರ, 2021-22ರ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಒಟ್ಟು ಹಾಲು ಉತ್ಪಾದನೆಯು 209.96 ಮಿಲಿಯನ್ ಟನ್ಗಳು. 2021-22ರಲ್ಲಿ ದೇಶದಲ್ಲಿ ಒಟ್ಟು 18,460.67 ಕೋಟಿ ಲೀಟರ್ ಹಾಲು ಉತ್ಪಾದನೆಯಾಗಿದೆ. ಹಾಗಾಗಿ, 2020-21ನೇ ಹಣಕಾಸು ವರ್ಷದಲ್ಲಿ ಸರಾಸರಿ 50.58 ಕೋಟಿ ಲೀಟರ್ ಹಾಲು ಪ್ರತಿದಿನ ಉತ್ಪದನೆಯಾಗುತ್ತಿದೆ.
ವೈರಲ್ ಆದ ಹೇಳಿಕೆಯ ಕುರಿತು 2023ರಲ್ಲಿ ಸಾಕಷ್ಟು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಯಿದು ಎಂದು ಧೃಢೀಕರಿಸಿದೆ.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾಭೀತಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರವು 2025 ರ ವೇಳೆಗೆ 87% ಭಾರತೀಯರು ಕಲಬೆರಕೆ ಹಾಲಿನಿಂದ ಕ್ಯಾನ್ಸರ್ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂಬ ಹೇಳಿಕೆಯನ್ನು ನೀಡಿಲ್ಲ.