ಫ್ಯಾಕ್ಟ್ಚೆಕ್: ರಷ್ಯಾದ ನಡೆಸಿದ ದಾಳಿಯಲ್ಲಿ ವಿಶ್ವದ ಅತಿ ದೊಡ್ಡ ಕಾರ್ಗೋ ವಿಮಾನ ಎಎನ್-225 ನಾಶವಾಗಿದೆ
ರಷ್ಯಾದ ನಡೆಸಿದ ದಾಳಿಯಲ್ಲಿ ವಿಶ್ವದ ಅತಿ ದೊಡ್ಡ ಕಾರ್ಗೋ ವಿಮಾನ ಎಎನ್-225 ನಾಶವಾಗಿದೆ
Claim :
ರಷ್ಯಾದ ಅತಿದೊಡ್ಡ ಕಾರ್ಗೋ ವಿಮಾನ AN-225 ಇರಾನ್ಗೆ ಬಂದಿಳಿದಿದೆFact :
ವಿಶ್ವದ ಅತಿದೊಡ್ಡ ಕಾರ್ಗೋ ವಿಮಾನ AN-225 ಅನ್ನು ಉಕ್ರೇನ್ ತಯಾರಿಸಿತ್ತು, ಆದರೆ ಕೈವ್ ಮೇಲೆ ರಷ್ಯಾದ ದಾಳಿಯಲ್ಲಿ ಆ ವಿಮಾನ ನಾಶವಾಯಿತು.
ಇರಾನ್ ತನ್ನ ಮೊಹಜರ್-10 ಡ್ರೋನ್ಗಳನ್ನು ರಷ್ಯಾ ಆರ್ಮಿ 2024 ಫೋರಂನಲ್ಲಿ ಪ್ರದರ್ಶಿಸಿತ್ತು. ಇದು ವಾರ್ಷಿಕ ಅಂತಾರಾಷ್ಟ್ರೀಯ ಮಿಲಿಟರಿ-ತಾಂತ್ರಿಕ ಕಾರ್ಯಕ್ರಮವಾಗಿದೆ. Mohajer-10 ಸುಧಾರಿತ ವಿಮಾನ ಸರಣಿಯ ಭಾಗವಷ್ಟೇ ಅಲ್ಲ, ದೊಡ್ಡ ಪೇಲೋಡ್ ಅನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ರಷ್ಯಾಗೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಕಳುಹಿಸದಂತೆ ಇರಾನ್ಗೆ ಅಮೆರಿಕ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು. ಇರಾನ್ ನೂರಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ರಷ್ಯಾಕ್ಕೆ ತಲುಪಿಸಲು ಯೋಚಿಸುತ್ತಿದೆ ಎಂದು ವರದಿಯಾಗುತ್ತಿದ್ದಂತೆ ಯುಎಸ್ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ವೇದಾಂತ್ ಪಟೇಲ್ ಹೇಳಿದ್ದಾರೆ.
ರಷ್ಯಾಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪೂರೈಸಲು ಮುಂದಾದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇರಾನ್ಗೆ ಅಮೆರಿಕ ಎಚ್ಚರಿಕೆ ನೀಡಿದೆ. ಶೀಘ್ರದಲ್ಲೇ ಇರಾನ್ ರಷ್ಯಾಗೆ ನೂರಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪೂರೈಸಲು ಯೋಜಿಸುತ್ತಿದೆ ಹಾಗೆ ಅಮೆರಿಕ ಯುರೋಪಿಯನ್ ದೇಶಗಳೊಂದಿಗೆ ಸಂಪರ್ಕದಲ್ಲಿದೆ ಎಂದು ವೇದಾಂತ್ ಹೇಳಿದ್ದರು. ಇರಾನ್ ರಷ್ಯಾಕ್ಕೆ ಕ್ಷಿಪಣಿಗಳನ್ನು ಕಳುಹಿಸಲು ನಿರ್ಧರಿಸಿದರೆ, ಅದು ಅಮೆರಿಕದಿಂದ ತೀವ್ರ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಅಷ್ಟರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಮುಖ್ಯವಾದ ಎಕ್ಸ್ (ಟ್ವಿಟರ್) ನಲ್ಲಿ ಖಾತೆಯಲ್ಲಿ ಕಾರ್ಗೋ ವಿಮಾನದ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ವೈರಲ್ ಆದ ಫೋಟೋವಿನಲ್ಲಿ ರಷ್ಯಾದ AN-225 ಮಿಲಿಟರಿ ವಿಮಾನವಿರುವುದನ್ನು ನಾವು ನೋಡಬಹುದು. ಈ ವಿಮಾನ ವಿಶ್ವದ ಅತಿ ದೊಡ್ಡ ಕಾರ್ಗೋ ವಿಮಾನ ಇರಾನ್ನಲ್ಲಿ ಲ್ಯಾಂಡ್ ಆಗಿದೆ. ರಷ್ಯಾ ಮತ್ತು ಇರಾನ್ ನಡುವೆ ಬೆಳೆಯುತ್ತಿರುವ ಬಾಂಧವ್ಯದ ಊಹಾಪೋಹಗಳ ನಡುವೆ ಪೋಸ್ಟ್ಗಳು ವೈರಲ್ ಆಗುತ್ತಿವೆ.
Russia's An-225 military aircraft, the largest cargo plane in the world, has landed in Iran. pic.twitter.com/efxibYIKfW
— Military Matters (@MiliMatters) August 14, 2024
Breaking: I wonder what Russia is delivering to Iran ? And I wonder if Iran has been waiting for this delivery before they start their attacks?
— tiredofthebs (@DexterHonore) August 14, 2024
Russia's An-225 military aircraft, the largest cargo plane in the world, has landed in Iran. pic.twitter.com/Ofb6J3YEP1
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಿಶ್ವದ ಅತಿದೊಡ್ಡ ಕಾರ್ಗೋ ವಿಮಾನ ಆಂಟೊನೊವ್ ಎಎನ್ -225ನ್ನು 2022 ರಲ್ಲಿ ನಾಶಪಡಿಸಲಾಯಿತು. ನಾವು AN 225 ವಿಮಾನದ ಕೀವರ್ಡ್ಗಳನ್ನು ಬಳಸಿ ಹುಡುಕಿದೆವು. ಹುಡುಕಾಟದಲ್ಲಿ ನಮಗೆ ಈ ವಿಮಾನವು ಅಸ್ತಿತ್ವದಲ್ಲಿಲ್ಲ ಎಂದು ದೃಢೀಕರಿಸುವ ಹಲವಾರು ಲೇಖನಗಳನ್ನು ನಾವು ಕಂಡುಕೊಂಡೆವು. ಅಷ್ಟೇ ಅಲ್ಲ, AN-225 ವಿಮಾನವು ಉಕ್ರೇನಿಯನ್ ವಿಮಾನವಾಗಿದೆ, ರಷ್ಯಾದದ್ದಲ್ಲ.
ಫೆಬ್ರವರಿ 2022ರಲ್ಲಿ ಸಿಎನ್ಎನ್ ಪ್ರಕಟಿಸಿದ ಲೇಖನದ ಪ್ರಕಾರ , ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ಸಮಯದಲ್ಲಿ ವಿಶ್ವದ ಅತಿದೊಡ್ಡ ಕಾರ್ಗೋ ವಿಮಾನವಾದ ಆಂಟೊನೊವ್ ಎಎನ್ -225 ನಾಶವಾಯಿತು ಎಂದು ಉಕ್ರೇನ್ ಅಧಿಕಾರಿಗಳು ಹೇಳಿದರು. ಉಕ್ರೇನಿಯನ್ ಭಾಷೆಯಲ್ಲಿ "ಮ್ರಿಯಾ" ಅಥವಾ "ಡ್ರೀಮ್" ಎಂದು ಕರೆಯಲ್ಪಡುವ ಈ ವಿಮಾನವು ಕೈವ್ ಬಳಿಯ ವಾಯುನೆಲೆಯಲ್ಲಿ ನಿಲುಗಡೆ ಮಾಡುವಾಗ ರಷ್ಯಾದ ವೈಮಾನಿಕ ದಾಳಿಯಿಂದ ನಾಶವಾಯಿತು. ಉಕ್ರೇನಿಯನ್ ಅಧಿಕಾರಿಗಳು ಈ ವಿಮಾನವನ್ನು ಮರುನಿರ್ಮಾಣ ಮಾಡಡುತ್ತೇವೆ ಎಂದು ಆ ಸಮಯದಲ್ಲಿ ಹೇಳಿದ್ದರು.
ಬ್ಯುಸಿನೆಸ್ ಇನ್ಸೈಡರ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ , ಫೆಬ್ರವರಿ 2022 ರಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ, ವಿಶ್ವದ ಅತಿದೊಡ್ಡ ವಿಮಾನವನ್ನು ನಾಶಪಡಿಸಲಾಗಿದೆ. ವಿಮಾನ ಮೊದಲ ಬಾರಿ An-225, ಡಿಸೆಂಬರ್ 1988 ರಲ್ಲಿ, "Mryaವಿನಲ್ಲಿ ಹಾರಾಟ ಮಾಡಿದ್ದರು. Mrya ಅಂದರೆ, ಉಕ್ರೇನಿಯನ್ ಭಾಷೆಯಲ್ಲಿ "ಕನಸು" ಎಂದರ್ಥ. ಸೋವಿಯತ್ ಆಡಳಿತದ ಅವಧಿಯಲ್ಲಿ, ಕೈವ್ಗೆ ಸಂಬಂಧಿಸಿದ್ದ, ಆಂಟೊನೊವ್ ಕಂಪನಿಯು ಯುಎಸ್ಎಸ್ಆರ್ ಬುರಾನ್ ಬಾಹ್ಯಾಕಾಶ ನೌಕೆಯನ್ನು ಸಾಗಿಸಲು ಬೋಯಿಂಗ್ 747 ವಿಮಾನದಂತೆಯೇ ಈ ವಿಮಾನವನ್ನು ನಿರ್ಮಿಸಿತ್ತು. ಎರಡನೇ ಮ್ರಿಯಾವನ್ನು ಸಹ ಆರ್ಡರ್ ಮಾಡಿದ್ದರು. ಆದರೆ, 1991 ರಲ್ಲಿ ಸೋವಿಯತ್ ಒಕ್ಕೂಟದ ಪತನದ ನಂತರ, 2009 ರ ವೇಳೆಗೆ ಜೆಟ್ 70% ಪೂರ್ಣಗೊಂಡಿತ್ತು. ಆದರೆ ಇನ್ನೂ ಪೂರ್ಣಗೊಂಡಿಲ್ಲ
ಸಿಎನ್ಬಿಸಿ ವರದಿಯು ರಷ್ಯಾ ಉಕ್ರೇನ್ನ್ನು ಆಕ್ರಮಿಸಿದ ನಂತರ ವಿಶ್ವದ ಅತಿದೊಡ್ಡ ಕಾರ್ಗೋ ವಿಮಾನವಾದ ಆಂಟೊನೊವ್ ಆನ್ -225 ಪತನಗೊಂಡಿದೆ ಎಂದು ವರದಿ ಮಾಡಿದ್ದಾರೆ.
ರಾಯಿಟರ್ಸ್ ವರದಿಯ ಪ್ರಕಾರ, ದೇಶದ ಮಿಲಿಟರಿಯನ್ನು ಅಡ್ಡಿಪಡಿಸಲು, ಪೂರ್ಣ ಪ್ರಮಾಣದ ಯುದ್ಧದ ಆರಂಭದಲ್ಲಿ "ಮ್ರಿಯಾ" ಕಾರ್ಗೋ ವಿಮಾನವನ್ನು ನಾಶಮಾಡಲು ರರ್ಷ್ಯಾ ಸಂಕಲ್ಪಸಿತ್ತು. ಇದರ ಭಾಗವಾಗಿಯೇ ರಷ್ಯಾ ಕೈವ್ನಲ್ಲಿ ವಿಮಾನವನ್ನು ನಾಶಪಡಿಸಿತು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯೋಜಿತ ದಾಳಿಯಲ್ಲಿ ವಿಶ್ವದ ಅತಿದೊಡ್ಡ ಕಾರ್ಗೋ ವಿಮಾನ ಆಂಟೊನೊವ್ ಆನ್-225 ನಾಶವಾಗಿತ್ತು. ಉಕ್ರೇನಿಯನ್ ನಿರ್ಮಿತ "ಮ್ರಿಯಾ" ವಿಮಾನವು ಸುಮಾರು 705 ಟನ್ ತೂಕ ಮತ್ತು 290 ಅಡಿಯ ರೆಕ್ಕೆಗಳನ್ನು ಹೊಂದಿತ್ತು. ಕೈವ್ ವಿಮಾನ ನಿಲ್ದಾಣವನ್ನು ವಶಪಡಿಸಿಕೊಳ್ಳಲು ರಷ್ಯಾದ ಪಡೆಗಳು ನಡೆಸಿದ ದಾಳಿಯಲ್ಲಿ ವಿಮಾನವು ನಾಶವಾಯಿತು.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾಭೀತಾಗಿದೆ. ವಿಶ್ವದ ಅತಿ ದೊಡ್ಡ ಕಾರ್ಗೋ ವಿಮಾನ ಎಎನ್-225 ಇರಾನ್ಗೆ ಬಂದಿಳಿದಿದೆ ಎಂಬ ಹೇಳಿಕೆಯಲ್ಲಿ ಯಾವುದೇ ನಿಜಾಂಶವಿಲ್ಲ. ಈ ವಿಮಾನ ತಯಾರಿಸಿದ್ದು ಉಕ್ರೇನ್, ರಷ್ಯಾ ಅಲ್ಲ. ಉಕ್ರೇನ್ ಮೇಲೆ ರಷ್ಯಾದ ದಾಳಿಯಲ್ಲಿ ಎಎನ್-225 ವಿಮಾನವೊಂದೆ ನಾಶವಾಯಿತು.