ಫ್ಯಾಕ್ಟ್‌ಚೆಕ್: ಶಶಿ ತರೂರ್‌ರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು 2022ರ ಚಿತ್ರವನ್ನು ಹಂಚಿಕೆ
ಶಶಿ ತರೂರ್‌ರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು 2022ರ ಚಿತ್ರವನ್ನು ಹಂಚಿಕೆ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ವಿದೇಶಾಂಗ ಖಾತೆ ರಾಜ್ಯ ಸಚಿವ ಶಶಿ ತರೂರ್‌ಗೆ ಸಂಬಂಧಿಸಿದ ಫೊಟೋವೊಂದು ಹರಿದಾಡುತ್ತಿದೆ. ಚಿತ್ರವನ್ನು ನೋಡಿದರೆ, ಶಶಿ ತರೂರ್ ಅವರ ಎಡಗಾಲಿಗೆ ಗಾಯವಾಗಿದೆ, ಅವರು ಬೆಡ್ ಮೇಲೆ ಮಲಗಿರುವುದನ್ನು ನಾವು ನೋಡಬಹುದು. ಈ ಚಿತ್ರವನ್ನು ಸಾಮಾಜಿಕ ಬಳಕೆದಾರರು ವ್ಯಾಪಕವಾಗಿ ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ
ಡಿಸಂಬರ್ 14, 2024ರಂದು ʼಎಮ್ ಎಸ್ ನೇಗಿʼ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ಶಶಿ ತರೂರ್‌ರವರು ಬೆಡ್ ಮೇಲೆ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡು ʼWe are entangled in Pushpa2.. There the leg of "Love-Guru" broke. Guru ji is injured. God take care of the staffʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼನಾವೆಲ್ಲಾ ಪುಷ್ಪಾ-2 ಸಿನಿಮಾನಲ್ಲಿ ನಿರತರಾಗಿದ್ದೇವೆ. ಇನ್ನೊಂದಡೆ. ನಮ್ಮ “ಲವ್-ಗುರು” ಶರಿ ತರೂರ್‌ರವರ ಕಾಲು ಮುರಿದಿದೆ. ಗುರು ಜಿ ಗಾಯಗೊಂಡಿದ್ದಾರೆ. ಸಿಬ್ಬಂದಿಗಳು ಶಶಿಯವರನ್ನು ಹುಷಾರಾಗಿ ನೋಡಿಕೊಳ್ಳಿʼ ಎಂಬ ಶಿರ್ಷಿಕೆಯನ್ನೀಡಿ ಚಿತ್ರವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ಪೋಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ಡಿಸಂಬರ್ 11, 2024ರಂದು ʼಅಮನ್ ಕುಮಾರ್ ರೇʼ ಎಂಬ ಫೇಸ್‌ಬುಕ್ ಖಾತೆದಾರ ತನ್ನ ಖಾತೆಯಲ್ಲಿ ʼहम लोग Pushpa2 में उलझे रहे है..उधर "लव-गुरू" का पैर टूट गया | गुरु जी घायल है | देखभाल करने वाले "" स्टॉफ का भगवान ख्याल रखे| ʼ ಎಂಬ ಶೀರ್ಷಿಕೆಯನ್ನೀಡಿ ಶಶಿ ತರೂರ್‌ರವರು ಬೆಡ್ ಮೇಲೆ ಮಲಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ಚಿತ್ರ ಇತ್ತೀಚಿನದಲ್ಲ 2022ರದ್ದು.
ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ಚಿತ್ರದನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಡಿಸಂಬರ್ 16, 2022ರಲ್ಲಿ ʼಶಶಿ ತರೂರ್ʼರವರ ಎಕ್ಸ್ ಖಾತೆಯಲ್ಲಿ ವೈರಲ್ ಆದ ಚಿತ್ರವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು. ಈ ಪೋಸ್ಟ್‌ಗೆ ಶೀರ್ಷಿಕೆಯಾಗಿ ʼA bit of an inconvenience: I badly sprained my left foot in missing a step in Parliament yesterday. After ignoring it for a few hours the pain had become so acute that I had to go to hospital. Am now immobilised w/a cast, missing Parliament today&cancelled wknd constituency plansʼ ಎಂಬ ಶೀರ್ಷಿಕೆಯನ್ನೀಡಿ ಚಿತ್ರವನ್ನು ಪೋಸ್ಟ್ ಮಾಡಿರುವುದನ್ನು ನಾವು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼನಿನ್ನೆ ಸಂಸತ್ತಿನಲ್ಲಿ ಹೆಜ್ಜೆ ತಪ್ಪಿದ ಕಾರಣ ನನ್ನ ಎಡಗಾಲು ಉಳುಕಿದೆ. ಕೆಲವು ಗಂಟೆಗಳ ಕಾಲ ಅದನ್ನು ನಿರ್ಲಕ್ಷಿಸಿದ ನಂತರ ನೋವು ತುಂಬಾ ಹೆಚ್ಚಾಯಿತು, ಹೀಗಾಗಿ ನಾನು ಆಸ್ಪತ್ರೆಗೆ ಹೋಗಬೇಕಾಯಿತು. ಈಗ ನಾನು ಚೆನ್ನಾಗದ್ದೇನೆ. ಇವತ್ತಿನ ಸಂಸತ್ತಿನ ಸಭೆಯನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇನೆʼ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿರುವುದನ್ನು ನಾವು ನೋಡಬಹುದು.
ಡಿಸಂಬರ್ 16, 2022ರಂದು ʼಹಿಂದೂಸ್ತಾನ್ ಟೈಮ್ಸ್ʼ ವೆಬ್‌ಸೈಟ್‌ನಲ್ಲಿ ʼShashi Tharoor injured 'in action', sprains ankle after missing step at Parliamentʼ ಎಂಬ ಶಿರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವು ನೋಡಬಹುದು.
'ಎನ್‌ಡಿಟಿವಿ' ವೆಬ್‌ಸೈಟ್‌ನಲ್ಲಿ ʼShashi Tharoor "Immobilised", Cancels "Weekend Constituency Plans" ಎಂಬ ಶಿರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವು ನೋಡಬಹುದು
'ಮನಿ ಕಂಟ್ರೋಲ್' ಎಂಬ ವೆಬ್‌ಸೈಟ್‌ನಲ್ಲಿ ʼShashi Tharoor ‘immobilised’ after spraining foot in Parliamentʼ ಎಂಬ ಹೆಡ್‌ಲೈನ್‌ನೊಂದಿಗೆ ವರದಿ ಮಾಡಿರುವುದನ್ನು ನಾವು ನೋಡಬಹುದು
ಮತ್ತಷ್ಟು ನಿಜಾಂಶವನ್ನು ತಿಳಿಯಲು ನಾವು ಕೆಲವು ಕೀವರ್ಡ್‌ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಇತ್ತೀಚಿಗೆ ಶಶಿ ತರೂರ್‌ರವರು ನೀಡಿರುವ ಸಂದರ್ಶನವೊಂದು ಕಂಡುಬಂದಿತು. ಡಿಸಂಬರ್ 13, 2024ರಂದು ಪಿಟಿಐ ತನ್ನ ಎಕ್ಸ್ ಖಾತೆಯಲ್ಲಿ ಶಶಿ ತರೂರ್‌ರವರ ಸಂದರ್ಶನವನ್ನು ಕಂಡುಕೊಂಡೆವು. ಈ ಸಂದರ್ಶವದಲ್ಲಿ ಶಶಿ ತರೂರ್‌ರವರು ಆರೋಗ್ಯವಾಗಿರುವುದನ್ನು ನಾವು ನೋಡಬಹುದು.
ಖುದ್ದು ಶಶಿ ತರೂರ್‌ರವರೇ ಡಿಸಂಬರ್ 12, 2024ರಂದು ತಮ್ಮ ಎಕ್ಸ್ ಖಾತೆಯಲ್ಲಿ ವೈರಲ್ ಆದ ಸುದ್ದಿಯ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. When the usual troll factory is reduced to circulating a two year old picture of mine with a sprain led foot, accompanied by picayune comments, one realises how desperate they are for a distraction! For all those expressing concern about my well-being, I am pleased to say that not only is my leg alright, but I have been attending parliament daily and spoke in the debate on the national disaster management bill yesterday ಎಂದು ಬರೆದು ಪೋಸ್ಟ್ ಮಾಡಿರುವುದನ್ನು ನೋಡಬಹುದು. ಈ ಪೋಸ್ಟ್‌ನ್ನು ಕನ್ನಡಕ್ಕೆ ಅನುವಾದಿಸಿದಾಗ ಎರಡು ವರ್ಷಗಳ ಹಳೆಯ ಚಿತ್ರವನ್ನು ಇತ್ತೀಚಿನದ್ದು ಎಂದು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಹಾಗೆ ಪೋಸ್ಟ್‌ಗಲಿಗೆ ಬರುತ್ತಿರುವ ಕಮೆಂಟ್‌ಗಳ ವಿರುದ್ದವೂ ಸಹ ಕಿಡಿ ಕಾರಿರುವುದನ್ನು ನಾವು ನೋಡಬಹುದು. ಅಷ್ಟೇ ಅಲ್ಲ ಶಶಿ ತರೂರ್‌ರವರು ಇನ್ನ ಯೋಗಕ್ಷೇಮದ ಬಗ್ಗೆ ಕಳವಳ ವ್ಯಕ್ತಪಡಿಸುವ ಎಲ್ಲರಿಗೂ ಹೇಳುವುದೇನೆಂದರೆ, ನನ್ನ ಕಾಲು ತುಂಬಾ ಸರಿಯಾಗಿದೆ ಎಂದು ಹೇಳಲು ನಾನು ಸಂತೋಷಪಡುತ್ತೇನೆ, ನಾನು ಪ್ರತಿದಿನ ಸಂಸತ್ತಿಗೆ ಹಾಜರಾಗುತ್ತಿದ್ದೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಸೂದೆಯ ಬಗ್ಗೆ ಚರ್ಚೆಯನ್ನೂ ಸಹ ಮಾಡುತ್ತೇನೆʼ ಎಂದು ಬರೆದಿರುವುದನ್ನು ನೋಡಬಹುದು.
ಹೀಗಾಗಿ ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ಚಿತ್ರ ಇತ್ತೀಚಿನದಲ್ಲ ಎರಡು ವರ್ಷ ಹಳೆಯದ್ದು ಅಂದರೆ 2022ರದ್ದು.