ಫ್ಯಾಕ್ಟ್‌ಚೆಕ್‌: ಪತಿ, ಪತ್ನಿ ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಿರುವ ವಿಡಿಯೋವನ್ನು ಟ್ರೈನರ್‌ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾನೆ ಎಂದು ಹಂಚಿಕೊಳ್ಳಲಾಗುತ್ತಿದೆ

ಪತಿ, ಪತ್ನಿ ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಿರುವ ವಿಡಿಯೋವನ್ನು ಟ್ರೈನರ್‌ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾನೆ ಎಂದು ಹಂಚಿಕೊಳ್ಳಲಾಗುತ್ತಿದೆ

Update: 2024-11-30 10:57 GMT

ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಪೋಸ್ಟ್‌ಗಳು, ಮಾರ್ಫಿಂಗ್ ವಿಡಿಯೋಗಳು ಮತ್ತು ಕಾಮೆಂಟ್‌ಗಳನ್ನು ಮಾಡಿ, ಅಮಾಯಕರ ಸಾವಿಗೆ ಕಾರಣರಾದವರಿಗೆ BNSನ ಸೆಕ್ಷನ್ 111(2)(A) ಅಡಿಯಲ್ಲಿ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಇದರ ಜೊತೆಗೆ ರೂ.10 ಲಕ್ಷ ದಂಡ ಹಾಕಲಾಗುತ್ತದೆ. ನಾವು ಎಷ್ಟೇ ಅಶ್ಲೀಲ ಪೋಸ್ಟ್​ಗಳನ್ನು ಹಂಚಿಕೊಂಡರೂ ಪೊಲೀಸರು ಮತ್ತು ಕಾನೂನು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ದಿನದಿಂದ ದಿನಕ್ಕೆ ಕಿಡಿಗೇಡಿಗಳು ಹೆಚ್ಚು ಮಾಡುತ್ತಲೇ ಇದ್ದಾರೆ.

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ದೆಹಲಿಯಲ್ಲಿ ಜಿಮ್‌ ಟ್ರೈನರ್‌, ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂಬ ಶೀರ್ಷಿಕೆಯೊಂದಿಗಿರುವ 44 ಸೆಕೆಂಡ್‌ಗಳನ್ನು ಒಳಗೊಂಡಿರುವ ವಿಡಿಯೋವೊಂದು ಹರಿದಾಡುತ್ತಿದೆ. ವಿಡಿಯೋದಲ್ಲಿ ನಾವು ಟ್ರೈನರ್‌ ಮಹಿಳೆಯೊಬ್ಬರಿಗೆ ತರಬೇತಿ ನೀಡುವುದು ಮತ್ತು ಆಕೆಯೊಂದಿಗೆ ಅಶ್ಲೀಲವಾಗಿ ವರ್ತಿಸುವುದನ್ನು ಕಾಣಬಹುದು.

ನವಂಬರ್‌ 18, 2024ರಂದು ʼಶ್ರೇಯಾ ಸನಾತನಿʼ ಎಂಬ ಎಕ್ಸ್‌ ಖಾತೆಯಲ್ಲಿ ʼಬಿಲಾಲ್ ಅಹ್ಮದ್ ಜಿಮ್‌ನಲ್ಲಿ ಹಿಂದೂ ಹೆಣ್ಣುಮಕ್ಕಳ ದೇಹದೊಂದಿಗೆ ಆಟವಾಡುತ್ತಿದ್ದಾನೆ. ನಮ್ಮ ಹಿಂದೂಗಳಿಗೆ ಯಾವಾಗ ಬುದ್ಧಿ ಬರುತ್ತೋ ಏನೋ" ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.


ಅಪ್ಪು ಗುಬ್ಯಾಡ್‌ ಹಿಂದೂ ಎಂಬ ಫೇಸ್‌ಬುಕ್‌ ಖಾತೆದಾರ ʼ‘ನಮ್ಮ ಹಿಂದೂಗಳಿಗೆ ಯಾವಾಗ್ ಬುದ್ಧಿ ಬರುತ್ತೋ ಏನೋ. ಬಿಲಾಲ್ ಅಹ್ಮದ್ ಜಿಮ್‌ನಲ್ಲಿ ಹಿಂದೂ ಹೆಣ್ಣುಮಕ್ಕಳ ದೇಹದೊಂದಿಗೆ ಆಟವಾಡುತ್ತಿದ್ದಾನೆʼ ಎಂ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಾಣಬಹುದು.

Full View


ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ಈ ವಿಡಿಯೋ 2017ರದ್ದು ಇದರಲ್ಲಿ ಕಾಣುವ ಟ್ರೈನರ್‌ ಮತ್ತು ಮಹಿಳೆ ಗಂಡ-ಹೆಂಡತಿ. ಈ ವಿಡಿಯೋ ದೆಹಲಿಯದ್ದಲ್ಲ ಟ್ರಿನಿಡಾಡ್ ಮತ್ತು ಟೊಬಾಗೋದ್ದು.

ನಾವು ವಿಡಿಯೋದಲ್ಲಿರುವ ಸತ್ಯಾಂಶವನ್ನು ತಿಳಿಯುಲು ಗೂಗಲ್‌ನಲ್ಲಿ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ ಟೂಲ್‌ನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ರಷ್ಯಾದ ಯೂಟ್ಯೂಬ್‌ ಚಾನೆಲ್‌ ʼಒಎಸ್‌ ಅಟೆಂಡೋಸ್‌ʼನಲ್ಲಿ ಪೋರ್ಚುಗಲ್‌ ಭಾಷೆಯಲ್ಲಿ ʼDeixa sua mina ir na academia kkkkkkkkʼ ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಪೋಸ್ಟ್‌ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾದ ʼನಿಮ್ಮ ಹುಡುಗಿಯೂ ಜಿಮ್‌ಗೆ ಹೋಗಲಿʼ ಎಂದು ಬರೆದಿರುವುದನ್ನು ನೋಡಬಹುದು.

Full View

ʼಟಿನ್‌ಐʼ ಹುಡುಕಾಟ ನಡೆಸಿದಾಗ ನಮಗೆ ಹಲವಾರು ವೆಬ್‌ಸೈಟ್‌ಗಳಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು.


ವೈರಲ್‌ ಆದ ವೀಡಿಯೊವನ್ನು 2017ರಲ್ಲಿ 'ಬಾಡಿ ಬೈ ಇಮ್ರಾನ್' ಎಂಬ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ʼHOW TRAINERS SPOT THEIR CLIENTS IN ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.

Full View


ʼಬಾಡಿ ಬೈ ಇಮ್ರಾನ್‌ʼ ಫೇಸ್‌ಬುಕ್‌ ಖಾತೆಯಲ್ಲಿ ಇಬರಿಬ್ಬರೂ ಮಾಡಿರುವ ಸಾಕಷ್ಟು ವರ್ಕ್‌ಔಟ್‌ ವಿಡಿಯೋಗಳನ್ನು ನೋಡಬಹುದು. ಒಂದು ವಿಡಿಯೋವಿನಲ್ಲಿ ಇಮ್ರಾನ್ ರಜಾಕ್ ಜಿಮ್‌ನಲ್ಲಿ ತನ್ನ ಪತ್ನಿ ರೇಷ್ಮಾ ರಜಾಕ್‌ಗೆ ಜಿಮ್‌ನಲ್ಲಿ ಟ್ರೈನಿಂಗ್‌ ನೀಡುತ್ತಿರುವ ದೃಶ್ಯಗಳನ್ನು ಹಂಚಿಕೊಂಡು ಕ್ಯಾಪ್ಷನ್‌ನಲ್ಲಿ "THE ONLY WOMAN THAT CAN BE MY #WCW IS MY SUPER HOTT , GORGEOUS,BEAUTIFUL,ADORABLE WIFE. @reshmarazac_lifestyle" ಎಂದು ರೇಷ್ಮಾರನ್ನು ಟ್ಯಾಗ್‌ ಮಾಡಿರುವುದನ್ನು ಕಾಣಬಹುದು.

Full View

ರೇಷ್ಮಾ ತನ್ನ ಹತ್ತನೇ ಮದುವೇ ವಾರ್ಷಿಕೊತ್ಸವದ ವಿಡಿಯೋ ಮತ್ತು ಅವರ ಮಗುವಿನೊಂದಿಗಿರುವ ಕೆಲವು ಫೊಟೋಗಳನ್ನು ಹಂಚಿಕೊಂಡಿದ್ದಾರೆ.


ಈ ವೈರಲ್‌ ಆದ ವಿಡಿಯೋದಲ್ಲಿ ದೆಹಲಿಯ ಟ್ರೈನರ್‌ ಇಮ್ರಾನ್ ರಜಾಕ್ ಜಿಮ್‌ ಎಂದು ಪೋಸ್ಟ್‌ ಮಾಡಿದ್ದರು. ಆದರೆ ವಿಡಿಯೊದಲ್ಲಿರುವ ಜಿಮ್ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿದೆ, ಭಾರತದಲ್ಲಿ ಅಲ್ಲ. ಟ್ರಿನಿಡಾಡ್ ಮತ್ತು ಟೊಬೆಗೋ ದಕ್ಷಿಣ ಕೆರಿಬ್ಬಿಯನ್‍‍ನಲ್ಲಿರುವ ವೆನೆಜುವೆಲಾ ಬಳಿ ಇದೆ. ವೈರಲ್‌ ಪೋಸ್ಟ್‌ಗಳಲ್ಲಿ ನೋಡುವುದಾದರೆ ʼLong Circular Gymʼ ಎಂಬ ಲೋಕೆಷನ್‌ನ್ನು ಟ್ಯಾಗ್‌ ಮಾಡಿರುವುದನ್ನು ನೋಡಬಹುದು. ಈ ಜಿಮ್‌ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಈ ಜಿಮ್ ಎಂಬುದು ಇಲ್ಲಿ ತಿಳಿಯುತ್ತದೆ.



Full View

ಹೀಗಾಗಿ ವೈರಲ್‌ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ಈ ವಿಡಿಯೋ 2017ರದ್ದು ಇದರಲ್ಲಿ ಕಾಣುವ ಟ್ರೈನರ್‌ ಮತ್ತು ಮಹಿಳೆ ಗಂಡ-ಹೆಂಡತಿ. ಈ ವಿಡಿಯೋ ದೆಹಲಿಯದ್ದಲ್ಲ ಟ್ರಿನಿಡಾಡ್ ಮತ್ತು ಟೊಬಾಗೋದ್ದು ಎಂದು ಸಾಭೀತಾಗಿದೆ.

Claim :  ಪತಿ, ಪತ್ನಿ ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಿರುವ ವಿಡಿಯೋವನ್ನು ಟ್ರೈನರ್‌ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾನೆ ಎಂದು ಹಂಚಿಕೊಳ್ಳಲಾಗುತ್ತಿದೆ
Claimed By :  Social Media Users
Fact Check :  False
Tags:    

Similar News