ಫ್ಯಾಕ್ಟ್‌ಚೆಕ್‌: ಸಾಗರ-ಭಟ್ಟಳ ರಸ್ತೆಯಲ್ಲಿ ಸಿಂಹಗಳ ಗುಂಪೊಂದು ಓಡಾಡುತ್ತಿಲ್ಲ

ಸಾಗರ-ಭಟ್ಟಳ ರಸ್ತೆಯಲ್ಲಿ ಸಿಂಹಗಳ ಗುಂಪೊಂದು ಓಡಾಡುತ್ತಿಲ್ಲ

Update: 2024-10-06 05:45 GMT

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಂಹವೊಂದು ಬೆಂಗಳೂರಿನ ರಾಜಾಜಿನಗರದಲ್ಲಿನ ದೇವಸ್ಥಾನದ ಮುಂದೆ ಹಾಗೂ ಕರ್ನಾಟಕದ ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ತಿರುಗಾಡುತ್ತಿದೆ ಎಂಬ ಎರಡು ವಿಡಿಯೋಗಳು ಹರಿದಾಡುತ್ತಿತ್ತು.

ಇದೀಗ ಸಿಂಹದ ಗುಂಪೊಂದು ಶಿವಮೊಗ್ಗದಲ್ಲಿರುವ ಸಾಗರ-ಭಟ್ಕಳ ರಸ್ತೆಯಲ್ಲಿ ಓಡಾಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದೆ. ವೈರಲ್‌ ಆದ ವಿಡಿಯೋದಲ್ಲಿ ರಸ್ತೆಯಲ್ಲಿ ಸಿಂಹಗಳು ತನ್ನ ಮರಿಗಳೊಂದಿಗೆ ರಸ್ತೆಯಲ್ಲಿ ಅಡ್ಡಾಡುತ್ತಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು.

ಇದೇ ವಿಡಿಯೋವನ್ನು ಸಾಮಾಜಿಕ ಮಾಧ್ಯಮವಾದ ವಾಟ್ಸಾಪ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿನಲ್ಲಿ ಶೀರ್ಷಿಕೆಯಾಗಿ "ಇಂದು ಶಿವಮೊಗ್ಗದ ಸಾಗರ ಭಟ್ಕಳದ ಸಾಗರ ರೋಡಿನಲ್ಲಿ ಕಂಡು ಬಂದು ದೃಶ್ಯವಿದು... ದಯವಿಟ್ಟು ಯುವಕರು ಸಂಜೆ ವೇಳೆ ಬೈಕ್‌ ಅಲ್ಲಿ ತಿರುಗಾಡುವ ಮುನ್ನ ಎಚ್ಚರಿಕೆವಹಿಸಿʼ ಎಂದು ವಾಟ್ಸ್‌ಆಪ್‌ಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.


ಸೆಪ್ಟಂಬರ್‌ 28, 2024 ʼAJHp_Kannadaʼ ಎಂಬ ಯೂಟ್ಯೂಬ್‌ ಖಾತೆಯಲ್ಲಿ ಸಿಂಹ ಜೊತೆಗೆ ಸಿಂಹದ ಮರಿಗಳು ರಸ್ತೆಯಲ್ಲಿ ಓಡಾಡುತ್ತಿರುವ ವಿಡಿಯೋವೊಂದನ್ನು ನಾವು ನೋಡಬಹುದು. ವಿಡಿಯೋಗೆ "Lion Family Spotted Near Sagar Karnataka. (i don't believe my eyes)ಸಿಂಹಗಳು ಮರಿಗಳು ಸಾಗರ- ಭಟ್ಕಳ ರೋಡಲ್ಲಿ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಸಿಂಹದ ಮರಿಗಳು ಕರ್ನಾಟಕದ ಸಾಗರದಲ್ಲಿ ಓಡಾಡುತ್ತಿದೆ. ನನ್ನ ಕಣ್ಣಲ್ಲಿ ನಾನೆ ನಮ್ಮಲಾಗಲಿಲ್ಲ, ಸಿಂಹಗಳು ಮರಿಗಳು ಸಾಗರ- ಭಟ್ಕಳ ರೋಡಲ್ಲಿ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು.

Full View 

ಇದೇ ವಿಡಿಯೋವನ್ನು ʼಒಳಗನ್ನಡಿʼ ಎಂಬ ಯೂಟ್ಯೂಬ್‌ ಖಾತೆಯಲ್ಲಿ "ಭಟ್ಕಳ, ಸಾಗರ ರಸ್ತೆಯಲ್ಲಿ ಕಂಡು ಬಂದ ದೃಶ್ಯ #lionking" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು.

Full View

ಪ್ರತಿಧ್ವನಿ ಎಂಬ ಯೂಟ್ಯೂಬ್‌ ಖಾತೆಯಲ್ಲಿ ಅಕ್ಟೋಬರ್‌ 2,2024ರಂದು ಇದೇ ವಿಡಿಯೋವನ್ನು ರಟ್ಟಹಳ್ಳಿ- ಮಾಸೂರು ರಸ್ತೆಯಲ್ಲಿ ಸಿಂಹಗಳು ಓಡಾಡುತ್ತಿದೆ ಎಂಬ ಸುದ್ದಿಯನ್ನು ನೋಡಬಹುದು. ವಿಡಿಯೋವಿಗೆ ʼರಟ್ಟಹಳ್ಳಿ - ಮಾಸೂರು ರೋಡಲ್ಲಿ ಸಿಂಹ ಸೈನ್ಯ! #lion #wildanimals #shimoga #viralanimals #forest #highwayʼ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಾಣಬಹುದು.

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಓದುಗರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಸಿಂಹಗಳು ತನ್ನ ಮರಿಗಳೊಂದಿಗೆ ಓಡಾಡುತ್ತಿರುವ ದೃಶ್ಯ ಕಂಡುಬಂದಿದ್ದು ಕರ್ನಾಟಕದ ಸಾಗರ-ಭಡ್ಕಳದಲ್ಲಿ ಅಲ್ಲ. ವಾಸ್ತವವಾಗಿ ಈ ವಿಡಿಯೋ ಗುಜರಾತ್‌ನದ್ದು.

ವೈರಲ್‌ ಆದ ವಿಡಿಯೋಗೆ ಸಂಬಂಧಿಸಿದ ಕೆಲವು ಕೀವರ್ಡ್‌ಗಳನ್ನು ಉಪಯೋಗಿಸಿ ನಾವು ಗೂಗಲ್‌ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಈ ಸುದ್ದಿಗೆ ಸಂಬಂಧಿಸಿದ ಯಾವುದೇ ಅಧಿಕೃತ ಮಾಹಿತಿ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ವರದಿಗಳು ಲಭ್ಯವಾಗಿಲ್ಲ.


ನಾವು ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ವೈರಲ್‌ ಆದ ವಿಡಿಯೋವಿನಲ್ಲಿರುವ ಕೆಲವು ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಸೆಪ್ಟಂಬರ್‌ 7, 2024ರಂದು amazingamreli ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಇದೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ಹಾಗೆ ಈ ಖಾತೆಯ ಬಯೋವಿನಲ್ಲಿ 𝐍𝐞𝐰𝐬 | 𝐏𝐡𝐨𝐭𝐨𝐠𝐫𝐚𝐩𝐡𝐲 | 𝐍𝐚𝐭𝐮𝐫𝐞 | 𝐒𝐡𝐚𝐲𝐫𝐢 | 𝐒𝐨𝐜𝐢𝐚𝐥 𝐌𝐞𝐝𝐢𝐚 𝐂𝐨𝐦𝐦𝐮𝐧𝐢𝐭𝐲 𝐎𝐟 𝐀𝐦𝐫𝐞𝐥𝐢 𝐃𝐢𝐬𝐭𝐫𝐢𝐜𝐭 ಎಂದು ಬರೆದಿರುವುದನ್ನು ನಾವು ನೋಡಬಹುದು. ಅಷ್ಟೇ ಅಲ್ಲ ನಮಗೆ ಸಿಕ್ಕ ಮಾಹಿತಿಯ ಪ್ರಕಾರ ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಬಿಟ್ಟರೆ, ಶಿವಮೊಗ್ಗದಲ್ಲಿ ಸಿಂಹಗಳ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಇದೇ ವಿಡಿಯೋವನ್ನು ನಾವು ಗುಜರಾತ್‌ ವೈಲ್ಡ್‌ ಲೈಫ್‌ ಅಫಿಶಿಯಲ್‌ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲೂ ಈ ವಿಡಿಯೋ ಲಭ್ಯವಿದೆ. ಸಿಂಹಗಳ ಗುಂಪು ಓಡಾಡುತ್ತಿರುವ ಈ ವಿಡಿಯೋ ದೇಶದೆಲ್ಲೆಡೆ ವೈರಲ್‌ ಆಗಿದ್ದಲ್ಲದೆ, ಆಯಾ ರಾಜ್ಯಗಳ ವಿವಿಧ ಸ್ಥಳಗಳಲ್ಲಿ ಓಡಾಡುತ್ತಿದೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿ ಸುದ್ದಿ ವೈರಲ್‌ ಆಗುತ್ತಿದೆ ಎಂದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಲು ಕಿಡಿಗೇಡಿಗಳು ಈ ವಿಡಿಯೋವನ್ನು ಸಾಗರ-ಭಟ್ಕಳ ರಸ್ತೆಯಲ್ಲಿ ಸಿಂಹಗಳ ಗುಂಪೊಂದು ಓಡಾಡುತ್ತಿವೆ ಎಂದು ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ಸುದ್ದಿ ಓದುಗರನ್ನು ತಪ್ಪು ದಾರಿಗೆಳೆಯುವ ಕೆಲಸ ಮಾಡುತ್ತಿದ್ದಾರೆ. ವಾಟ್ಸಾಪ್‌ನಲ್ಲಿ ಹಾಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೋ ಕರ್ನಾಟಕಕ್ಕೆ ಸಂಬಂಧಿಸಿದಲ್ಲವೆಂದು ಸಾಭೀತಾಗಿದೆ. ವಾಸ್ತವವಾಗಿ ಈ ವಿಡಿಯೋ ಗುಜರಾತಿನದ್ದು ಎಂಬುದು ಸ್ಪಷ್ಟವಾಗಿದೆ.

Claim :  ಸಾಗರ-ಭಟ್ಟಳ ರಸ್ತೆಯಲ್ಲಿ ಸಿಂಹಗಳ ಗುಂಪೊಂದು ಓಡಾಡುತ್ತಿಲ್ಲ
Claimed By :  Social Media Users
Fact Check :  False
Tags:    

Similar News