ಫ್ಯಾಕ್ಟ್‌ ಚೆಕ್‌ : ಮನುಷ್ಯನ ಜತೆ ಟೇಬಲ್‌ ಟೆನ್ನಿಸ್‌ ಆಡುತ್ತಿರುವ ರೊಬೊಟ್‌ ವಿಡಿಯೋ ನಕಲಿ

ಈ ವೈರಲ್ ವಿಡಿಯೋ ಡಿಜಿಟಲ್‌ ತಂತ್ರಜ್ಞಾನ ಬಳಸಿ ಮಾರ್ಪಾಡು ಮಾಡಲಾಗಿದೆ. ಮೂಲ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಟೇಬಲ್ ಟೆನಿಸ್‌ ಆಡುತ್ತಿದ್ದಾರೆ.

Update: 2023-08-04 03:50 GMT

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ರೊಬೊಟ್‌ವೊಂದು ಮನುಷ್ಯನೊಂದಿಗೆ ಟೇಬಲ್‌ ಟೆನಿಸ್‌ ಆಡುತ್ತಿದ್ದು, ತನ್ನ ಎದುರಾಳಿಯನ್ನು ಸೋಲಿಸಿದೆ. " ಕುತೂಹಲಕಾರಿ ಭವಿಷ್ಯ ನಮಗಾಗಿ ಕಾದಿದೆ. ಮನುಷ್ಯ 0, ರೊಬೊಟ್‌ 1: ನೋಡಿ ಸೋಲಿಸಲಸಾಧ್ಯವಾದ ರೊಬೊಟ್‌ನ ಟೇಬಲ್‌ ಟೆನಿಸ್‌ ಸ್ಪರ್ಧೆ".


ಇನ್ನು ಕೆಲ ಸೋಷಿಯಲ್‌ ಮೀಡಿಯಾ ಬಳಕೆದಾರರು, " ಟೇಬಲ್‌ ಟೆನ್ನಿಸ್‌ ಸ್ಪರ್ಧೆಯಲ್ಲಿ ಮನುಷ್ಯನನ್ನು ಸೋಲಿಸಿದ ರೋಬೊಟ್" ಎಂಬ ಶೀ‍ರ್ಷಿಕೆಯೊಂದಿಗೆ ಈ ವಿಡಿಯೋ ಹಂಚಿಕೊಂಡಿದ್ದಾರೆ.



ಫ್ಯಾಕ್ಟ್‌ ಚೆಕ್‌

ಇದು ಸುಳ್ಳು. ಮೂಲ ವಿಡಿಯೋವನ್ನು ಡಿಜಿಟಲ್‌ ತಂತ್ರಜ್ಞಾನ ಬಳಸಿ ಮಾರ್ಪಾಡು ಮಾಡಲಾಗಿದೆ.

ನಾವು ವಿಡಿಯೋದಿಂದ ಕೆಲವು ಸ್ಥಿರ ಚಿತ್ರಗಳನ್ನು ಪಡೆದುಕೊಂಡು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಯೂಟ್ಯೂಬ್‌ನಲ್ಲಿ ಇದೇ ರೀತಿಯ ಹಲವು ವಿಡಿಯೋ ಪ್ರಕಟವಾಗಿರುವುದನ್ನು ಗಮನಿಸಿದೆವು. ಈ ಪೈಕಿ ಜಾನ್‌ ವಲೆಂಟ್‌ ಹೆಸರಿನ ಯೂಟ್ಯೂಬ್‌ ಚಾನೆಲ್‌ನಲ್ಲಿ ಶಾರ್ಟ್ ವಿಡಿಯೋ ಪ್ರಕಟವಾಗಿತ್ತು. ಅದು 2023ರ ಮಾರ್ಚ್‌ 24ರಂದು ನಡೆದ ಟೇಬಲ್‌ ಟೆನ್ನಿಸ್‌ ಪಂದ್ಯದ ವಿಡಿಯೋ. ವಿಡಿಯೋದ ಶೀರ್ಷಿಕೆಯು, " ಹುಚ್ಚು ಹಿಡಿಸುವಂತಹ ರಕ್ಷಣಾತ್ಮಕ ಟೇಬಲ್‌ ಟೆನ್ನಿಸ್‌ ಆಟವಾಡಿದ ಯಾಂಗ್‌ವಾಂಗ್‌" ಎಂದಿತ್ತು.

ಅದೇ ರೀತಿಯ ಶಾರ್ಟ್ ವಿಡಿಯೋ ಟೇಬಲ್ ಟೆನ್ನಿಸ್ ಡೈಲಿ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾರ್ಚ್‌ 28, 2023ರಂದು ಪ್ರಕಟವಾಗಿತ್ತು.

ವೈರಲ್‌ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ರೊಬೊಟ್‌ನ ಆಟದ ವಿಧಾನ ಮತ್ತು ದೈಹಿಕ ಚಲನೆಯು ಮೂಲ ವಿಡಿಯೋದ ಆಟಗಾರನ ಚಲನೆಯನ್ನೇ ಹೋಲುತ್ತಿದ್ದವು. ಇನ್ನು ವೈರಲ್ ವಿಡಿಯೋದಲ್ಲಿರುವ ವೀಕ್ಷಕ ವಿವರಣೆಯೂ ಮೂಲ ವಿಡಿಯೋದಲ್ಲಿರುವ ವಿವರಣೆಯನ್ನೇ ಹೋಲುತ್ತದೆ.

ಇದು ಜೆಕ್‌ ಗಣರಾಜ್ಯ ಮತ್ತು ಸ್ಲೋವೇನಿಯಾದ ನಡುವೆ ನಡೆದ ಅರ್ಹತಾ ಪಂದ್ಯಗಳು ನಡೆದವು. ಇಲ್ಲಿಂದಲೇ ವೈರಲ್ ವಿಡಿಯೋದ ಭಾಗವನ್ನು ಆಯ್ದುಕೊಳ್ಳಲಾಗಿದೆ ಎಂಬುದು ತಿಳಿದು ಬಂತು. ಪಂದ್ಯ ಮುಖ್ಯಾಂಶಗಳ ವಿಡಿಯೋವನ್ನು ಇಲ್ಲಿ ನೋಡಬಹುದು.

Full View

ಮಾಹಿತಿ ಖಚಿತಪಡಿಸಿಕೊಳ್ಳಲು ಇನ್ನಷ್ಟು ಹುಡುಕಾಡಿದಾಗ, ರೊಬೊಟ್‌ ಮತ್ತು ಮನುಷ್ಯನ ನಡುವೆ ಟೇಬಲ್‌ ಟೆನ್ನಿಸ್ ಪಂದ್ಯ ನಡೆದ ಯಾವುದೇ ವರದಿ ಗಮನಕ್ಕೆ ಬರಲಿಲ್ಲ.

ಹಾಗಾಗಿ ವೈರಲ್‌ ಆಗಿರುವ ವಿಡಿಯೋ, ಡಿಜಿಟಲ್‌ ಮಾರ್ಪಾಡು ಮಾಡುವ ಮೂಲಕ ಮನುಷ್ಯನ ಆಟಗಾರ ಬದಲು, ರೊಬೊಟ್‌ ಅನ್ನು ಸೇರಿಸಿದ ವಿಡಿಯೋ ಎಂಬುದು ದೃಢಪಟ್ಟಿತು. ಹಾಗಾಗಿ ಈ ವಿಡಿಯೋ ನಕಲಿ. 

Claim :  The viral video is digitally altered. The original video has two people playing a table tennis match.
Claimed By :  Social Media Users
Fact Check :  False
Tags:    

Similar News