ಫ್ಯಾಕ್ಟ್‌ಚೆಕ್: ರಾಮಜನ್ಮ ಭೂಮಿ ಅಯೋಧ್ಯೆಗೆ ಸಾಕಷ್ಟು ಜಟಾಯು ಪಕ್ಷಿಗಳು ಬಂದಿವೆ ಎಂಬ ಸುದ್ದಿಯ ಅಸಲಿಯತ್ತೇನು?
ರಾಮಜನ್ಮ ಭೂಮಿ ಅಯೋಧ್ಯೆಗೆ ಸಾಕಷ್ಟು ಜಟಾಯು ಪಕ್ಷಿಗಳು ಬಂದಿವೆ ಎಂಬ ಸುದ್ದಿಯ ಅಸಲಿಯತ್ತೇನು?
ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ, ದಿವ್ಯವಾದ ರಾಮ ಮಂದಿರದ ಉದ್ಘಾಟನೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದಲ್ಲಿನ ಅಸಂಖ್ಯಾತ ಭಕ್ತರು,ಕಾದು ಕುಳಿತ್ತಿದ್ದಾರೆ. ಇನ್ನು ರಾಮಾಯಣದಲ್ಲಿ ಜಟಾಯುವಿನ ಪಾತ್ರ ಏನಿತ್ತು ಎಂದು ನಿಮ್ಮೆಲ್ಲರಿಗೂ ಗೊತ್ತೆ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಅಯೋಧ್ಯೆಯ ಸುದ್ದಿ ಜೊಋಾಗಿರುವಾಗಲೇ ಇದೀಗ ಜಟಾಯುವಿನ ಬಗ್ಗೆಗೂ ಸುದ್ದಿ ಹೊರಬರುತ್ತಿದೆ.ವೈರಲ್ ಆದ ವಿಡಿಯೋದಲ್ಲಿ ರಾಮಾಯಣದಲ್ಲಿ ಉಲ್ಲೇಖವಾಗಿರುವ ಜಟಾಯು ಪಕ್ಷಿಗಳು ಅಯೋಧ್ಯೆಗೆ ಬಂದಿವೆ ಎಂದು ಪೋಸ್ಟ್‌ಗೆ ಕ್ಯಾಪ್ಷನ್ ನೀಡಿ ವೈರಲ್ ಮಾಡಲಾಗಿದೆ.
ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಇನ್ನ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿ ಶೀರ್ಷಿಕೆಯಾಗಿ "ಇದೊಂದು ಅದ್ಭುತವಾದ ಪವಾಡ, ಜೈ ಸನಾತನ ಧರ್ಮ. ಜೈ ಶ್ರೀ ರಾಮ್ , ಜೈ ಗೋವಿಂದ" ಎಂದು ಬರೆದು ಪೊಸ್ಟ್ ಮಾಡಿದ್ದಾರೆ. ಮುಖ್ಯಮಂತ್ರಿ ಪೋಸ್ಟ್ ಮಾಡಲಾದ ವಿಡಿಯೋಗೆ ಈಗಾಗಲೇ ಲಕ್ಷಕ್ಕೂ ಅಧಿಕ ವೀಕ್ಷಣೆ ಮತ್ತು ಸಾವಿರಾರು ಲೈಕ್ಸ್ ಮತ್ತು ರೀಟ್ವಿಟ್ಸ್ ಪಡೆದುಕೊಂಡಿದೆ.
कई वर्षो बाद अयोध्या मे जटायु का झुण्ड दिखाई दिया यह चमत्कार से कम नही है 🙏🚩
— #अक्षय Dn ✨ backup a/c (@sanatani_6) January 7, 2024
जयतु सनातन,जय श्री राम,जय गोविंद 🚩 pic.twitter.com/FAH2UIhdHS
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ.
ಸತ್ಯಾಂಶವನ್ನು ತಿಳಿಯಲು ನಾವು ಇನ್‌ವಿಡ್ ಟೂಲ್‌ನ್ನು ಬಳಸಿಕೊಂಡು ವಿಡಿಯೋವಿನ ಅಸಲಿಯತ್ತನ್ನು ಹುಡುಕಲು ಪ್ರಾರಂಭಿಸಿದೆವು. ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ 2021ರಲ್ಲಿ ಅಪ್‌ಲೋಡ್ ಆಗಿದ್ದ ಫೇಸ್‌ಬುಕ್ ಪೋಸ್ಟೊಂದು ಕಾಣಿಸಿತು. ಡಾಸ್ ಡಾಸ್ ಎಂಬ ಫೇಸ್‌ಬುಕ್ ಖಾತೆದಾರರ ತನ್ನ ಖಾತೆಯಲ್ಲಿ ಅಕ್ಟೊಬರ್ 8,2021ರಂದು ಹಂಚಿಕೊಂಡಿದ್ದ ವಿಡಿಯೋವೊಂದು ಕಂಡುಬಂದಿತು. ವಿಡಿಯೋವಿಗೆ ಶೀರ್ಷಿಕೆಯಾಗಿ "ಈ ಪಕ್ಷಿಯ ಹೆಸರು ನಿಮಗೆ ಗೊತ್ತಾ" ಎಂದು ಬರೆದು ಪೋಸ್ಟ್ ಮಾಡಿದ್ದರು.
2022ರಲ್ಲಿ ದೀಪಾಂಶು ಕಬ್ರಾ ಎಂಬ ಎಕ್ಸ್ ಖಾತೆದಾರರರಾದ ಐಪಿಎಸ್ ಅಧಿಕಾರಿ ತನ್ನ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು ವಿಡಿಯೋವಿಗೆ ಶೀರ್ಷಿಕೆಯಾಗಿ "ಯಾವುದೋ ತುರ್ತು ಸಭೆಯಿರಬೇಕು" ಎಂದು ಪೋಸ್ಟ್ ಮಾಡಿದ್ದರು.
ज़रूर किसी गंभीर विषय पर आपात बैठक बुलाई गई है 😅 pic.twitter.com/75VqGYzktu
— Dipanshu Kabra (@ipskabra) March 23, 2022
ಟಿವಿ9 ಮರಾಠಿಯಲ್ಲಿ 2022ರಲ್ಲಿ ಕಾಣಿಸುವ ಜಟಾಯುವನ್ನು ನೋಡಿ ಎಂದು ಶೀರ್ಷಿಕೆಯಲ್ಲಿ ಬರೆದು ಪೋಸ್ಟ್ ಮಾಡಿದ್ದರು.
ರಸ್ತೆ ಪಕ್ಕದಲ್ಲಿ ಕೆಲವು ಜಟಾಯು ಪಕ್ಷಿಗಳ ಗುಂಪೊಂದು ಇರುವುದನ್ನು ವಿಡಿಯೋದಲ್ಲಿ ಕಾಣಬಹುದು.ವೈರಲ್ ಅದ ವಿಡಿಯೋ ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ನಮಗೆ ನಿಖರವಾಗಿ ತಿಳಿದಿಲ್ಲ.
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೂ, ವೈರಲ್ ಆದ ವಿಡಿಯೋದಲ್ಲಿ ಕಾಣುವ ಜಟಾಯುವಿಗೂ ಯಾವುದೇ ಸಂಬಂಧವಿಲ್ಲ. ವೈರಲ್ ಆದ ವಿಡಿಯೋ ಸಹ ಇತ್ತೀಚಿನದಲ್ಲ, ಹಳೆಯದ್ದು