ಫ್ಯಾಕ್ಟ್‌ಚೆಕ್‌: ಬಿಜೆಪಿಗೆ ಮತ ಹಾಕಬೇಡಿ ಎಂದು ಬೆಂಗಾಲಿ ಪ್ರಜೆಗಳು ಹೇಳುತ್ತಿದ್ದಾರೆಂಬ ವಿಡಿಯೋವಿನ ಅಸಲಿಯತ್ತೇನು?

ಬಿಜೆಪಿಗೆ ಮತ ಹಾಕಬೇಡಿ ಎಂದು ಬೆಂಗಾಲಿ ಪ್ರಜೆಗಳು ಹೇಳುತ್ತಿದ್ದಾರೆಂಬ ವಿಡಿಯೋವಿನ ಅಸಲಿಯತ್ತೇನು?

Update: 2024-04-02 18:51 GMT

NoVoteToBJP

ಇತ್ತೀಚೆಗೆ 2024 ರ ಲೋಕಸಭಾ ಚುನಾವಣೆಯ ಕುರಿತು ಮುಖ್ಯ ಚುನಾವಣಾ ಆಯುಕ್ತರು ವೇಳಾಪಟ್ಟಿಯನ್ನು ಪ್ರಕಟಿಸಿದರು. ಏಪ್ರಿಲ್ 19 ರಿಂದ 7 ಹಂತಗಳಲ್ಲಿ ಚುನಾವಣೆಗಳು ನಡೆಯಲಿದ್ದು, ಜೂನ್ 1, 2024 ರಂದು ಕೊನೆಗೊಳ್ಳಲಿದೆ. ದೇಶದಲ್ಲಿನ ಮತ್ತಷ್ಟು ಪ್ರದೇಶಗಳೊಂದಿಗೆ ಜೂನ್ 4, 2024 ರಂದು ಫಲಿತಾಂಶಗಳನ್ನು ಘೋಷಿಸಲಾಗುತ್ತದೆ.

ಕೆಲವು ಪಕ್ಷಗಳು ಈಗಾಗಲೇ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡೆವೆ. ಇನ್ನು ಕೆಲವು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಈ ಸಮಯದಲ್ಲಿ, ಸುಳ್ಳು ಹೇಳಿಕೆಗಳೊಂದಿಗೆ ಸಾಕಷ್ಟು ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ‘ಬಿಜೆಪಿಗೆ ಮತ ಹಾಕಬೇಡಿ’ ಎಂಬ ಪೋಸ್ಟರ್‌ಗಳನ್ನು ಹಿಡಿದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. "#NoVoteToBJP" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

Full View 


ಫ್ಯಾಕ್ಟ್‌ಚೆಕ್‌:

ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋ 2021ರದ್ದು, ವೈರಲ್‌ ಆದ ವಿಡಿಯೋ 2024ರ ಸಾವ್ರರ್ತಿಕ ಚುನಾವಣೆಗೆ ಸಂಬಂಧಿಸಿದಲ್ಲ.

ನಾವು ಈ ಕುರಿತು ಮತ್ತಷ್ಟು ಮಾಹಿತಿಯನ್ನು ತಿಳಿಯಲು ""ಬಿಜೆಪಿಗೆ ಮತ ಹಾಕಬೇಡಿ" ಎಂಬ ಕೀವರ್ಡ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ 2021 ರಲ್ಲಿ ಹಲವಾರು ಮಾಧ್ಯಮ ಸಂಸ್ಥೆಗಳು ಆನ್‌ಲೈನ್‌ನಲ್ಲಿ ಪ್ರಕಟಿಸಿದ ಲೇಖನಗಳನ್ನು ನಾವು ಕಂಡುಕೊಂಡೆವು.

wire.in ವರದಿಯ ಪ್ರಕಾರ, ನವೆಂಬರ್ 2020 ರಲ್ಲಿ, ಚಳುವಳಿಗಳ ಭಾಗವಾಗಿ ಸಾಕಷ್ಟು ಜನ ರಸ್ತೆಗಿಳಿದು ಪ್ರತಿಭಟನೆಯನ್ನು ನಡೆಸುತ್ತಿದ್ದರು. ಅಷ್ಟೇ ಅಲ್ಲ, ಫ್ಯಾಸಿಸ್ಟ್ ಆರೆಸ್ಸೆಸ್-ಬಿಜೆಪಿ ವಿರುದ್ಧ ಹೋರಾಡಲು ಬಂಗಾಳದ ಜನತೆಗೆ ಕರೆ ನೀಡಿದ್ದನು ನಾವು ನೋಡಬಹುದು. “Bengal against Fascist RSS-BJP’ ಎಂಬ ವೇದಿಕೆಯನ್ನೂ ಸಹ ಕಾಣಬಹುದು.

ನಮಗೆ ನೋ ವೋಟ್‌ ಟು ಬಿಜೆಪಿ ಎಂಬ ಯೂಟ್ಯೂಬ್‌ ಖಾತೆಯೊಂದು ಕಾಣೀಸಿತು. ಆ ಯೂಟ್ಯೂಬ್‌ ಚಾನೆಲ್‌ನಲ್ಲಿ, ಫೆಬ್ರವರಿ 13, 2021 ರಂದು ‘ನೋ ವೋಟ್ ಟು ಬಿಜೆಪಿ’ No Vote to BJP । বিজেপিকে একটিও ভোট নয়। ಎಂಬ ಶೀರ್ಷಿಕೆಯ ಯೂಟ್ಯೂಬ್ ವಿಡಿಯೋವನ್ನೂ ಅಪ್‌ಲೋಡ್‌ ಮಾಡಲಾಗಿತ್ತು.

Full View 

ಇದೇ ವಿಡಿಯೋವನ್ನು ಫೆಬ್ರವರಿ 16, 2021ರಂದು 'No Vote to BJP' ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದರು. #BengalElections 2021, #No Vote to BJP ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್‌ ಮಾಡಲಾಗಿತ್ತು.

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಸಾಭೀತಾಗಿದೆ. ವೈರಲ್‌ ಆದ ವಿಡಿಯೋ ಇತ್ತೀಚಿನದಲ್ಲ, 2021ರದ್ದು. ವೈರಲ್‌ ಆದ ವಿಡಿಯೋ 2024ರ ಸಾವರ್ತಿಕ ಚುನಾವಣೆಗೆ ಸಂಬಂಧಿಸಿದಲ್ಲ ಎಂದು ನಾವು ಕಂಡುಕೊಂಡಿದ್ದೇವೆ.

Claim :  A viral video showing people from West Bengal saying “No vote to BJP” is a recent one, shot ahead of the 2024 Lok Sabha elections
Claimed By :  Social Media Users
Fact Check :  False
Tags:    

Similar News