ಫ್ಯಾಕ್ಟ್‌ಚೆಕ್: ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ಗೆದ್ದಾಗ ಅಭಿಮಾನಿಗಳು ಪಟಾಕಿಯನ್ನು ಸಿಡಿಸುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ವೈರಲ್, ಈ ಸುದ್ದಿಯ ಅಸಲಿಯತ್ತೇನು?
ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ಗೆದ್ದಾಗ ಅಭಿಮಾನಿಗಳು ಪಟಾಕಿಯನ್ನು ಸಿಡಿಸುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ವೈರಲ್, ಈ ಸುದ್ದಿಯ ಅಸಲಿಯತ್ತೇನು?
ಡಿಲ್ಲಿಯಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ 2024 ರ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಟು ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ನ್ನು ಸೋಲಿಸಿತು. ಫ್ರಾಂಚೈಸಿ ಸ್ಥಾಪನೆಯಾದ ನಂತರ ಆರ್‌ಸಿಬಿ ಗೆದ್ದ ಮೊದಲ ಪ್ರಶಸ್ತಿ ಇದು.
ಕ್ರಿಕೆಟ್‌ನಲ್ಲಿ ಆರ್‌ಸಿಬಿ ಗೆಲುವನ್ನು ಸಂಭ್ರಮಿಸುತ್ತಿದ್ದ Instagram ಬಳಕೆದಾರ ತನ್ನ ಖಾತೆಯಲ್ಲಿ "RCB Win Celebration Begins" ಎಂಬ ಶೀರ್ಷಿಕೆಯೊಂದಿಗೆ ಪಟಾಕಿ ಹೊಡೆಯುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದರು. ಪಟಾಕಿ ಸಿಡಿಸುವುದರಿಂದ ರಸ್ತೆಯಲ್ಲಿ ಭಾರೀ ಹೊಗೆ ಬರುತ್ತಿರುವುದನ್ನೂ ಸಹ ವೀಡಿಯೊವಿನಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್:
WPL ಗೆಲುವಿನ ನಂತರ RCB ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿರುವ ವೈರಲ್ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ಇತ್ತೀಚಿನಲ್ಲ ಅಷ್ಟೇ ಅಲ್ಲ ಈ ವಿಡಿಯೋ ಭಾರತದ್ದೂ ಅಲ್ಲ.
ವೈರಲ್ ವಿಡಿಯೋವಿನ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯಲು ನಾವು ವಿಡಿಯೋವಿನಲ್ಲಿ ಕಾಣುವ ಕೆಲವು ಪ್ರಮುಖ ಫ್ರೇಮ್‌ಗಳನ್ನು ಉಪಯೋಗಿಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಹುಡುಕಾಟದಲ್ಲಿ ನಮಗೆ 2014ರಲ್ಲಿ ನೆಲ್ಸನ್ ಫಂಗ್ ಎಂಬ ಯೂಟ್ಯೂಬ್ ಖಾತೆದಾರ ವೈರಲ್ ಆದ ವಿಡಿಯೋವಿನ ಪೂರ್ತಿ ವಿಡಿಯೋವನ್ನು ಹಂಚಿಕೊಂಡಿದ್ದರು. ವಿಡಿಯೋವಿಗೆ ಶೀರ್ಷಿಕೆಯಾಗಿ “Most powerful way to set off firecrackers” ಎಂದು ಬರೆದು ಪೋಸ್ಟ್ ಮಾಡಿದ್ದರು
ಇದೇ ವಿಡಿಯೋವನ್ನು ಸಾಕಷ್ಟು ಸಾಮಾಜಿಕ ಮಾದ್ಯಮದ ಬಳಕೆದಾರರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು
ಡಿಸೆಂಬರ್ 31, 2014 ರಂದು ಡೆಕ್ಕನ್ ಕ್ರಾನಿಕಲ್ ಪ್ರಕಟಿಸಿದ ವರದಿಯಲ್ಲಿ ವೈರಲ್ ಆದ ವಿಡಿಯೋವಿನಲ್ಲಿರುವ ಸ್ಕ್ರೀನ್‌ಶಾಟ್‌ನ್ನು ಹಂಚಿಕೊಂಡು ಈ ಚೀನಾದಲ್ಲಿನ ತಂಡವೊಂದು ಏಕಕಾಲದಲ್ಲಿ ಲಕ್ಷಾಂತರ ಪಟಾಕಿಗಳನ್ನು ಸಿಡಿಸಿತು ಎಂದು ವರದಿಯನ್ನು ಪ್ರಕಟಿಸಿತ್ತು.
ಯಾವ ಕಾರಣಕ್ಕೆ ಪಟಾಕಿಯನ್ನು ಚೀನಾದವರು ಸಿಡಿಸಿದ್ದರು ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದರೆ ಈ ವೀಡಿಯೊ 2014ರಿಂದಲೂ ಸಹ ಇಂಟರ್ನೆಟ್‌ನಲ್ಲಿದೆ. ಅಷ್ಟೇ ಅಲ್ಲ ಈ ವಿಡಿಯೋಗೂ ಇತ್ತೀಚಿಕೆ ನಡೆದ ವುಮೆನ್ಸ್ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೂ ಯಾವುದೇ ಸಂಬಂಧವಿಲ್ಲ.