ಫ್ಯಾಕ್ಟ್‌ಚೆಕ್: ಅಯೋಧ್ಯೆಯಲ್ಲಿ ಜಟಾಯುವಿನ ಆಗಮನದಿಂದ ಭಯಭೀತರಾದ ಅಯೋಧ್ಯಾವಾಸಿಗಳು ವೈರಲ್ ಆದ ಸುದ್ದಿಯ ಅಸಲಿಯತ್ತೇನು?
ಅಯೋಧ್ಯೆಯಲ್ಲಿ ಜಟಾಯುವಿನ ಆಗಮನದಿಂದ ಭಯಭೀತರಾದ ಅಯೋಧ್ಯಾವಾಸಿಗಳು ವೈರಲ್ ಆದ ಸುದ್ದಿಯ ಅಸಲಿಯತ್ತೇನು?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಅಯೋಧ್ಯೆಯಲ್ಲಿ ಬಂದಂತಹ ರಣಹದ್ದುಗಳನ್ನು ನೋಡಿ ಅಯೋಧ್ಯಾವಾಸಿಗಳು ಭಯಭೀತರಾಗಿದ್ದಾರೆ. ಯಾಕೆಂದರೆ ಹಟ್ಟತ್ತಾಗಿ ರಣಹದ್ದುಗಳು ಕಾಣಿಸಿಕೊಂಡಿರುವುದು ಹಾಗೆ ರಾಮಾಯಣಕ್ಕೆ ಮತ್ತು ಜಟಾವಿಗೆ ಇರುವ ನಂಟಿನಿಂದ ಜನರು ಭಯದಲ್ಲಿದ್ದಾರೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ.
ವೈರಲ್ ಆದ ವಿಡಿಯೋವಿನಿಂದ ಕೆಲವು ಪ್ರಮುಖ ಫ್ರೇಮ್‌ಗಳನ್ನು ಉಪಯೋಗಿಸಿ ನಾವು ಗೂಗಲ್‌ನ ಮೂಲಕ ರಿವರ್ಸ್ ಇಮೇಜ್ ರಿಸರ್ಚ್ ಮಾಡಿದೆವು. ವೈರಲ್ ಆದ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಮೇ 4,2021ರಂದು "A rare video of Andean Condor" ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾಗಿತ್ತು. ಅಷ್ಟೇ ಅಲ್ಲ ಈ ವಿಡಿಯೋದಲ್ಲಿ ರಣಹದ್ದುಗಳು ಹಾರುತ್ತಿರುವುದನ್ನು ಸಹ ನಾವು ಗಮನಿಸಿದೆವು.
ಏಪ್ರಿಲ್ 8,2023ರಂದು ಗುಡ್ಡು ಮೌರ್ಯ ಸರ್ಪ್ ಮಿತ್ರಾ ಎಂಬ ಯೂಟ್ಯೂಬ್ ಖಾತೆದಾರ "ಮೊಟ್ಟ ಮೊದಲ ಬಾರಿ ಭಾರತದಲ್ಲಿ ಕಾಣಿಸಿಕೊಂಡ ಹಿಮಾಲಯನ್ ಗ್ರೀಫನ್ ರಣಹದ್ದುಗಳು" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರು. ವಿಡಿಯೋದಲ್ಲಿ ಕಾಣುವ ರಣಹದ್ದುವನ್ನು ಉತ್ತರ ಪ್ರದೇಶದ ಅಜಂಗಢ ಎಂಬ ಪ್ರದೇಶದಲ್ಲಿ ರಕ್ಷಿಸಲಾಗಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ವೈರಲ್ ಆದ ಮೂರನೇ ಚಿತ್ರದಲ್ಲಿ ಕಾಣಿಸುವ ಚಿತ್ರವನ್ನು ನಾವು ನ್ಯಾಷನಲ್ ಜಿಯಾಗ್ರಾಫಿಕ್ ವೆಬ್‌ಸೈಟ್‌ನಲ್ಲಿರುವುದನ್ನು ನಾವು ಕಂಡುಕೊಂಡೆವು. "this is full blown crisiś̤ Fighting vulture poisining in Kenya." ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದರು. ಕೆಬ್ಯಾದಲ್ಲಿ ರಣ ಹದ್ದುಗಳಿಗೆ ವಿಷವನ್ನುಳಿಸಿದ್ದಾರೆ, ಈ ಹದ್ದು ಬದುಕು ಸಾವಿನ ನಡುವೆ ಪರದಾಡುತ್ತಿದೆ. ವಿಷಪೂರಿತ ಹೈನಾವಿನ ಮೃತದೇಹವನ್ನು ತಿಂದು ಈ ಹದ್ದುವಿನ ಆರೋಗ್ಯ ಆಳಾಗಿದೆ ಎಂದು ವರದಿಯಲ್ಲಿ ಬರೆಯಲಾಗಿತ್ತು.
ಮ್ಯಾಕ್‌ವ್ಲಾಗ್‌ಮೆರ್ಸಿ ಜೇಮ್ಸ್ ಎಂಬ ಯೂಟ್ಯೂಬ್ ಖಾತೆದಾರ ತನ್ನು ಖಾತೆಯಲ್ಲಿ ಜಟಾಯು (ಆಂಗ್ರಿ ಬರ್ಡ್) ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿತ್ತು.ಕೇರಳಾದ ಸದಾಯಮಂಗಲಂ ಎಂಬ ಪ್ರಾಂತದಲ್ಲಿ ಚಿತ್ರೀಕರಿಸಿರುವ ಮೂಲ ವಿಡಿಯೋವನ್ನು ನಾವು ಕಂಡುಕೊಂಡೆವು.
ಹೀಗಾಗಿ ವೈರಲ್ ಅದ ವಿಡಿಯೊದಲ್ಲಿ ಯಾವುದೇ ಸತ್ಯಾಂಶವಿಲ್ಲ. ತೆಲುಗು ಪೋಸ್ಟ್ ಫ್ಯಾಕ್ಟ್‌ಚೆಕ್ ತಂಡ ನಡೆಸಿದ ವರದಿಯಲ್ಲಿ ವೈರಲ್ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಿಳಿದುಬಂದಿದೆ. ವೈರಲ್ ಆದ ವಿಡಿಯೋವಿನಲ್ಲಿ ಕಾಣಿಸುವ ದೃಶ್ಯಗಳು ವಿವಿಧ ಸಂದರ್ಭದಲ್ಲಿ ವಿವಿಧ ಸ್ಥಳಗಳಲ್ಲಿ ಚಿತ್ರಿಸಲಾಗಿದೆ. ಹಳೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.