ಫ್ಯಾಕ್ಟ್‌ಚೆಕ್‌: ಕರ್ನಾಟಕದಲ್ಲಿ ಮುಸ್ಲಿಮರಿಗೆ ಚಲನ್‌ ನೀಡದಿದ್ದಕ್ಕೆ ಪೊಲೀಸರನ್ನು ಥಳಿಸಿದ್ದಾರೆ

ಕರ್ನಾಟಕದಲ್ಲಿ ಮುಸ್ಲಿಮರಿಗೆ ಚಲನ್‌ ನೀಡದಿದ್ದಕ್ಕೆ ಪೊಲೀಸರನ್ನು ಥಳಿಸಿದ್ದಾರೆ

Update: 2024-10-17 05:10 GMT

ಕರ್ನಾಟಕದಲ್ಲಿ ಮುಸ್ಲಿಮರು ಪೊಲೀಸರನ್ನು ಹೊಡೆದಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ನಾವು ನೋಡಿದರೆ, ಹಸಿರು ಬಣ್ಣದ ಉಡುಪನ್ನು ತೊಟ್ಟ ಮಹಿಳೆ ಚಪ್ಪಲಿಯಿಂದ ಪೊಲೀಸರನ್ನು ಧಳಿಸುತ್ತಿರುವುದನ್ನು ನೋಡಬಹುದು. ಅಲ್ಲೆ ನೆರೆದಿದ್ದ ಕೆಲವರು ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಸಹ ನೋಡಬಹುದು. ಕೆಲವರು ಇದೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕರ್ನಾಟಕದಲ್ಲಿ ಮುಸ್ಲಿಮರಿಗೆ ಪೊಲೀಸರು ಚಲನ್‌ ನೀಡದ ಕಾರಣ ಪೊಲೀಸರನ್ನು ಧಳಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ʼವಿನಿʼ ಎಂಬ ಎಕ್ಸ್‌ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು "कर्नाटक न्यूज! कांग्रेस शासित प्रदेश कर्नाटक में पुलिस द्वारा चालान काटने पर मुसलमानो ने उनकी पिटाई की । यह सीधे कानून को चुनौती है । यह विडियो बताता है कि आगे हिन्दुस्तान मे क्या क्या होगा, कौन देश चलायेगा, और सबका भविष्य क्या होगा । कडवा सच यह है कि देश को बाहर से कहीं अधिक अन्दर से बहुत ज्यादा खतरा है| " ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನೋಡಬಹುದು.

ವೈರಲ್‌ ಆದ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಕರ್ನಾಟಕದ ಸುದ್ದಿ! ಕಾಂಗ್ರೆಸ್‌ ಆಡಳಿತವಿರುವ ಕರ್ನಾಟಕದಲ್ಲಿ ಮುಸ್ಲಿಮರು ಪೊಲೀಸರು ಚಲನ್‌ ನೀಡದಿದ್ದಕ್ಕೆ ಥಳಿಸಿದ್ದಾರೆ. ಇಲ್ಲಿ ಕಾನೂನನ್ನೇ ಎದುರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭಾರತವನ್ನು ಯಾರು ನಡೆಸುತ್ತಾರೋ, ಭಾರತ ದೇಶದ ಭವಿಷ್ಯ ಏನಾಗುತ್ತದೋ. ಕಹಿ ಸತ್ಯ ಏನೆಂದರೆ ಭಾರತಕ್ಕೆ ಹೊರಗಿನಿನವರಿಂದ ಅಲ್ಲ ಒಳಗಿನವರಿಂದಲೇ ಸಾಕಷ್ಟು ಬೆದರಿಕೆಯನ್ನು ಎದುರಿಸುವ ದುಸ್ಥಿತಿ ಬಂದಿದೆ" ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದರು.

ಅಕ್ಟೋಬರ್‌ 01,2024ರಂದು ʼಕಟರ್‌ ಹಿಂದೂ ಸಾಮ್ರಾಜ್ಯ್‌ʼ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲೂ ಇದೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ಕಾಣಬಹುದು.

ಇದೇ ವಿಡಿಯೋವನ್ನು ಕೆಲವರು ತಮ್ಮ ಯೂಟ್ಯೂಬ್‌ ಖಾತೆಯಲ್ಲಿ ಬೇರೆಬೇರೆ ದಿನಾಂಕದೊಂದಿಗೆ ಹಂಚಿಕೊಂಡಿರುವುದನ್ನು ನೋಡಬಹುದು.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್‌ ಆದ ವಿಡಿಯೋದಲ್ಲಿ ಕಂಡುಬರುವ ಪೊಲೀಸರು ಕರ್ನಾಟಕದವರಲ್ಲ, 2018ರಲ್ಲಿ ಆಧಾರ್‌ ಕಾರ್ಡ್‌ಗೆ ಸಂಬಂಧಿಸಿ ಗಾಜಿಯಾಬಾದ್‌ನ ಪೊಲೀಸರಿಗೆ ಥಳಿಸಿದ ಘಟನೆಯದು.

ವೈರಲ್‌ ಆದ ಸುದ್ದಿಯಲ್ಲಿನಲ್ಲಿರುವ ನಿಜಾಂಶವನ್ನು ತಿಳಿಯಲು ವೈರಲ್‌ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್‌ ರಿವರ್ಸ್‌ ಸರ್ಚ್‌ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಜನವರಿ 21, 2021ರಂದು ಬರೇಲಿಯ ಪೊಲೀಸರು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವುದನ್ನು ಕಂಡುಕೊಂಡೆವು. ಪೊಸ್ಟ್‌ನಲ್ಲಿ "उक्त वीडियो की जांच के क्रम में वीडियो लगभग दो वर्ष पुराना है, जो गाजियाबाद जिले से सम्बन्धित है । जिसमें गाजियाबाद पुलिस द्वारा कार्यवाही की जा चुकी है ।" ಎಂಬ ಶೀರ್ಷಿಕೆಯೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ವೈರಲ್‌ ಆದ ವಿಡಿಯೋವನ್ನು ತನಿಖೆ ಮಾಡುವಾಗ ವೈರಲ್‌ ಆದ ವಿಡಿಯೋ ಗಾಜಿಯಾಬಾದ್‌ ಜಿಲ್ಲೆಗೆ ಸಂಬಂಧಿಸಿದ, ಎರಡು ವರ್ಷಗಳಷ್ಟು ಹಳೆಯದ್ದು, ಗಾಜಿಯಾಬಾದ್‌ ಪೊಲೀಸರು ಈಗಾಗಲೇ ಈ ಕುರಿತು ಕ್ರಮವನ್ನು ಕೈಗೊಂಡಿದ್ದಾರೆ.

ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ವೈರಲ್‌ ಆದ ಸುದ್ದಿಗೆ ಸಂಬಂಧಿಸಿದ ಕೆಲವು ಮಾಹಿತಿಯ ಆಧಾರದ ಮೇಲೆ ಹುಡುಕಾಟ ನಡೆಸಿದಾಗ ನಮಗೆ 2018ರಲ್ಲಿ ಗಾಜಿಯಾಬಾದ್‌ನ ಎಸ್‌ಎಸ್‌ಪಿ ವೈಷ್ಣವ್‌ ಕೃಷ್ಣ ಅವರು ಗಾಜಿಯಾಬಾದ್‌ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ವಿಡಿಯೋವಿಗೆ ಶೀರ್ಷಿಕೆಯಾಗಿ "#Ghaziabadpolice ~ सोशल मीडिया पर वायरल थाना लोनी बॉर्डर क्षेत्र की वीडियो जिसमे 'पुलिसकर्मी के साथ महिला/युवक द्वारा बदतमीजी/मारपीट' की जा रही है। उक्त सम्बन्ध में जानकारी देते हुए @SspGhaziabad की वीडियो बाईट। @dgpup @Uppolice @adgzonemeerut @igrangemeerut @upcoprahul" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೋ ಲೋಣಿ ಪೊಲೀಸ್‌ ಠಾಣಾ ವ್ಯಾಪ್ತಿಗೆ ಸಂಬಂಧಿಸಿದ್ದು. ಬ್ಯಾಂಕ್‌ನಲ್ಲಿ ನಡೆದ ಜಗಳದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅಲ್ಲಿಗೆ ಬಂದಂತಹ ಪೊಲೀಸರನ್ನು ಥಳಿಸಿರುವುದನ್ನು ನಾವು ನೋಡಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ" ಎಂದು ಎಸ್‌ಎಸ್‌ಪಿ ಕೃಷ್ಣ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ..

ಆಗಸ್ಟ್‌ 27, 2018ರಂದು ʼದೈನಿಕ್‌ ಜಾಗರಣ್‌ʼ ಎಂಬ ವೆಬ್‌ಸೈಟ್‌ನಲ್ಲಿ "संशोधित::) लोनी में महिला ने पुलिसकर्मी को चप्पल से पीटा" ಎಂಬ ಶೀರ್ಷಿಕೆಯೊಂದಿಗೆ ವರದಿಯೊಂದನ್ನು ನಾವು ಕಂಡುಕೊಂಡೆವು. "ಬಲರಾಮ್‌ ನಗರ ಕಾಲೋನಿಯಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಹೊರಗೆ ಮಹಿಳೆ ಮತ್ತು ಆಕೆಯ ಸಹಚರರು ಪೊಲೀಸ್‌ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ ವಿಡಿಯೋ ಇದೀಗ ಪೊಲೀಸ್‌ ಇಲಾಖೆಯಲ್ಲಿ ಕೋಲಾಹಲ ಸೃಷ್ಟಿಸಿದೆ. ಬ್ಯಾಂಕ್‌ನಲ್ಲಿ ಆಧಾರ್‌ ಕಾರ್ಡ್‌ ಮಾಡಿಸುವ ವಿಚಾರದಲ್ಲಿ ಯುವಕ ಹಾಗೂ ಬ್ಯಾಂಕ್‌ ಉದ್ಯೋಗಿಗಳ ನಡುವೆ ಜಗಳ ನಡೆದಿದೆ. ಜಗಳವೆಲ್ಲಾ ಆಡಿದ ನಂತರ, ಯುವಕ ತನಗೆ ಸಂಬಂಧಿಸಿದ ಕೆಲವರಿಗೆ ಕರೆ ಮಾಡಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ. ಎಸ್‌ಬಿಐ ಬ್ರಾಂಚ್‌ನ ವ್ಯವಸ್ಥಾಪಕ ಅರುಣ್ ಕುಮಾರ್ ಬಕ್ಷಿ ನೀಡಿದ ದೂರಿನ್ನು ಆಧಾರಿಸಿ ಪೊಲೀಸರು ವರದಿಯನ್ನು ದಾಖಲಿಸಿಕೊಂಡು ನಾಲ್ವರನ್ನು ಆರೋಪಿಗಳನ್ನು ಬಂಧಿಸಿದ್ದಾರೆ" ಎಂದು ವರದಿಯಾಗಿರುವುದನ್ನು ಕಾಣಬಹುದು.


ಹೀಗಾಗಿ ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದ್ದಾರೆ. ವೈರಲ್‌ ಆದ ವಿಡಿಯೋ 2018ರ ಗಾಜಿಯಾಬಾದ್‌ನದ್ದು ಎಂಬುದು ಸ್ಪಷ್ಟವಾಗಿದೆ. ವೈರಲ್‌ ಆದ ವಿಡಿಯೋದಲ್ಲಿ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ವಿವಾದದಲ್ಲಿ ಕೆಲವರು ಪೊಲೀಸರಿಗೆ ಅಲ್ಲಿನ ಯುವಕರು ಥಳಿಸಿದ ಘಟನೆಯಿದು. ಈ ವೀಡಿಯೊವಿಗೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ.

Claim :  ಕರ್ನಾಟಕದಲ್ಲಿ ಮುಸ್ಲಿಮರಿಗೆ ಚಲನ್‌ ನೀಡದಿದ್ದಕ್ಕೆ ಪೊಲೀಸರನ್ನು ಥಳಿಸಿದ್ದಾರೆ
Claimed By :  Social Media Users
Fact Check :  False
Tags:    

Similar News