ಫ್ಯಾಕ್ಟ್‌ಚೆಕ್‌: ಚುನಾವಣಾಯ ಪ್ರಚಾರದ ವೇಳೆ ಸಿಎಂ ಜಗನ್ ಮೋಹನ್ ರೆಡ್ಡಿ ಅಳುತ್ತಾ ಮಾತನಾಡಲಿಲ್ಲ

ಚುನಾವಣಾಯ ಪ್ರಚಾರದ ವೇಳೆ ಸಿಎಂ ಜಗನ್ ಮೋಹನ್ ರೆಡ್ಡಿ ಅಳುತ್ತಾ ಮಾತನಾಡಲಿಲ್ಲ

Update: 2024-05-15 20:04 GMT

Jagan    

ಮೇ 13ರಂದು ಲೋಕಸಭೆ ಚುನಾವಣೆ ಜತೆಗೆ ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಿತು.

2024ರ ಸಾರ್ವತ್ರಿಕ ಚುನಾವಣೆಯ ನಾಲ್ಕನೇ ಹಂತದ ಭಾಗವಾಗಿ 175 ವಿಧಾನಸಭಾ ಸ್ಥಾನಗಳು ಮತ್ತು 25 ಲೋಕಸಭಾ ಸ್ಥಾನಗಳಲ್ಲಿ ಮೇ 13 ರಂದು ಚುನಾವಣೆ ನಡೆಯಲಿದೆ. 2019 ರಲ್ಲಿ ಜಗನ್ ಮೋಹನ್‌ ರೆಡ್ಡಿಯ ವೈಎಸ್ಆರ್ ಕಾಂಗ್ರೆಸ್ ಪಕ್ಷವು 151 ಸ್ಥಾನಗಳನ್ನು ಗೆದ್ದು ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ರಾಜ್ಯದ 25 ಲೋಕಸಭಾ ಸ್ಥಾನಗಳಲ್ಲಿ 22 ಅನ್ನು ಗೆದ್ದು ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ವೈಎಸ್‌ಆರ್‌ಸಿಪಿಗೆ ಪೈಪೋಟಿ ನೀಡಲು ಟಿಡಿಪಿ, ಬಿಜೆಪಿ ಮತ್ತು ಜನಸೇನೆ ಮೈತ್ರಿ ಮಾಡಿಕೊಂಡಿದ್ದವು.

ಚುನಾವಣಾ ಪ್ರಚಾರದ ಭಾಗವಾಗಿ ಎಪಿ ಸಿಎಂ ಜಗನ್ಮೋಹನ್ ರೆಡ್ಡಿ ಚುನಾವಣಾ ಪ್ರಚಾರದ ವೇಳೆ ನೋವಿನಿಂದ ಅಳುತ್ತಾ ಮಾತನಾಡಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ "ಈ ಸಲ ಚುನಾವಣೆ ಸುಗಮವಾಗಿ ನಡೆಯುವುದು ಅನುಮಾನವಾಗಿದೆ, ಅಧಿಕಾರಿಗಳನ್ನು ಮನಸೋ ಇಚ್ಛೆ ಬದಲಾಯಿಸುತ್ತಿದ್ದಾರೆ, ಬಡವರಿಗೆ ಸಿಗಬೇಕಾದ ಸವಲತ್ತುಗಳು ಸಿಗುತ್ತಿಲ್ಲ. ವೈಎಸ್‌ಆರ್‌ಸಿಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಇಷ್ಟೆಲ್ಲಾ ಮಾಡುತ್ತಿದ್ದಾರೆ" ಎಂದು ಜಗನ್‌ ಹೇಳುವುದನ್ನು ನಾವು ವೈರಲ್‌ ವಿಡಿಯೋದಲ್ಲಿ ನೋಡಬಹುದು.

Full View


ಫ್ಯಾಕ್ಟ್‌ಚೆಕ್‌:

ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಮೂಲ ವಿಡಿಯೋದಲ್ಲಿ ಜಗನ್ ಅಳುತ್ತಿಲ್ಲ, ಅವರು ತಮ್ಮ ಸಹಜ ಧ್ವನಿಯಲ್ಲೇ ಮಾತನಾಡಿದ್ದಾರೆ.

ನಾವು ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವೀಡಿಯೊದಿಂದ ಕೀಫ್ರೇಮ್‌ಗಳನ್ನು ತೆಗೆದುಕೊಂಡೆವು ಹಾಗೆ ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಮೂಲಕ ಹುಡುಕಾಟವನ್ನು ನಡೆಸಿದೆವು.

ಮಚಲಿಪಟ್ಟಣದಲ್ಲಿ ವೈಸಿಪಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ತೋರಿಸಿರುವುದನ್ನು ನಾವು ಕಂಡುಕೊಂಡಿದ್ದೇವೆ. ವೈರಲ್ ವೀಡಿಯೊದಲ್ಲಿ ನಾವು ಮಚಲಿಪಟ್ಟಣದಿಂದ ಸ್ಪರ್ಧಿಸುತ್ತಿರುವ ವೈಎಸ್‌ಆರ್‌ಸಿ ಪಕ್ಷದ ಶಾಸಕ ಪೆರ್ನಿ ಕಿಟ್ಟು ಅವರನ್ನು ಸಹ ನೋಡಬಹುದು.

Full View

ಸಾಕ್ಷಿ ಟಿವಿ ಲೈವ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ "ಮಚಲಿಪಟ್ಟಣದಲ್ಲಿ ನಡೆದ ಸಭೆಯಲ್ಲಿ ಜಗನ್‌ನ ಪ್ರಚಾರದ ವೇಳೆ ಮಾಡಿದ ಭಾಷಣವನ್ನು ನಾವು ಯೂಟ್ಯೂಬ್ ಚಾನೆಲ್‌ನಲ್ಲಿ ಕಂಡುಕೊಂಡೆವು. ವಿಡಿಯೋವಿಗೆ ಶೀರ್ಷಿಕೆಯಾಗಿ CM YS Jagan Introducing Machilipatnam MP & MLA Candidate | Perni Kittu | Simhadri Chandrasekhar" ನೀಡಿ ಪೋಸ್ಟ್‌ ಮಾಡಿದ್ದರು.

Full View 

ಕೆಕೆಆರ್‌ ಮೀಡಿಯಾ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಜಗನ್‌ ನಡೆಸಿದ ಸಭೆಯಲ್ಲಿ ಚಿತ್ರೀಕರಿಸಿದ 13 ನಿಮಿಷಗಳ ವಿಡಿಯೋವನ್ನು ನೋಡಬಹುದು. ವಿಡಿಯೋವಿಗೆ ಶೀರ್ಷಿಕೆಯಾಗಿ “సీఎం శ్రీ వైయస్ జగన్ మచిలీపట్నం మీటింగ్ మచిలీపట్నం సిద్ధం!” ಪೋಸ್ಟ್‌ ಮಾಡಲಾಗಿತ್ತು.

Full View 

ಮತ್ತಷ್ಟು ಹುಡುಕಾಟ ನಡೆಸಿದಾಗ ಮೇ 6, 2024 ರಂದು ಸಾಕ್ಷಿ ಟಿವಿ ಲೈವ್ ಪ್ರಕಟಿಸಿದ ಮಚಿಲಿಪಟ್ಟಣಂ ವೈಸಿಪಿ ಸಾರ್ವಜನಿಕ ಸಭೆಯ ಲೈವ್ ವೀಡಿಯೊವೊಂದು ನಮಗೆ ಕಾಣಿಸಿತು. AP CM YS Jagan Public meeting at Machilipatnam I AP elections 2024 I Krishna District" ಎಂಬ ಟೈಟಲ್‌ನೊಂಡಿಗೆ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿತ್ತು. ಸಾರ್ವಜನಿಕ ಸಭೆಯಲ್ಲಿ ಚಿತ್ರೀಕರಿಸಿದ ಮೂಲ ವಿಡಿಯೋ ವಿಡಿಯೋ 56 ನಿಮಿಷಗಳಿದೆ ನಾವು ಕಂಡುಕೊಂಡಿದ್ದೇವೆ.

Full View 

ವೈಎಸ್ ಜಗನ್ ಮೋಹನ್ ರೆಡ್ಡಿ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲೂ ಸಾರ್ವಜನಿಕ ಸಭೆಯಲ್ಲಿ ಸಿಎಂ ಜಗನ್ ಮಾತನಾಡುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ, ವಿಡಿಯೋವಿನಲ್ಲಿ ಪ್ರತಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಹೊಗಳಿದ್ದಾರೆ. ಅಷ್ಟೇ ಅಲ್ಲ ಕೆಲವು ಟಿವಿ ಚಾನೆಲ್‌ಗಳು ಅವರ ಬಗ್ಗೆಯೂ ಸಭೆಯಲ್ಲಿ ಮಾತನಾಡಿರುವುದನ್ನು ನಾವು ನೋಡಬಹುದು.

ಹೆಚ್‌ಎಮ್‌ಟಿವಿ ವೆಬ್‌ಸೈಟ್‌ನ ವರದಿಯ ಪ್ರಕಾರ ಮಾಧ್ಯಮ ವರದಿಗಳೂ ಸಹ ಜಗನ್‌ ಅಳುತ್ತಿದ್ದಾರೆಂಬ ಬಗ್ಗೆ ವರದಿಯನ್ನು ಮಾಡಲಿಲ್ಲ.

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಜನರಿಂದ ಸಹಾನುಭೂತಿ ಪಡೆಯಲು ವೈಎಸ್ ಜಗನ್ಮೋಹನ್ ರೆಡ್ಡಿ ಅಳುತ್ತಿದ್ದಾರೆಂಬ ಸುದ್ದಿಯಲ್ಲಿ ಅಸಲಿಯತ್ತಿಲ್ಲ. ಮಚಲಿಪಟ್ಟಣದಲ್ಲಿ ಜಗನ್ ಚುನಾವಣಾ ಪ್ರಚಾರದ ವಿಡಿಯೋದಲ್ಲಿ ಬರುವ ಮೂಲ ಆಡಿಯೋವಿಗೆ ಬೇರೆ ಆಡಿಯೋವನ್ನು ಸೇರಿಸಿ ಎಡಿಟ್‌ ಮಾಡಲಾಗಿದೆ.

Claim :  ಜನರಿಂದ ಸಹಾನುಭೂತಿ ಪಡೆಯಲು ವೈಎಸ್ ಜಗನ್ಮೋಹನ್ ರೆಡ್ಡಿ ಅಳುತ್ತಿದ್ದಾರೆಂಬ ಸುದ್ದಿಯ ಅಸಲಿಯತ್ತೇನು?
Claimed By :  Social Media Users
Fact Check :  False
Tags:    

Similar News