ಫ್ಯಾಕ್ಟ್‌ಚೆಕ್: ಮನೀಶ್ ಸಿಸೋಡಿಯಾ ಮೇಲೆ ತಾವು ಯಾವುದೇ ಆರೋಪ ಮಾಡಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ
ಮನೀಶ್ ಸಿಸೋಡಿಯಾ ಮೇಲೆ ತಾವು ಯಾವುದೇ ಆರೋಪ ಮಾಡಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ
ಮಾರ್ಚ್ 21, 2024 ರಂದು ಜಾರಿ ನಿರ್ದೇಶನಾಲಯ (ಇಡಿ) ಈಗ ರದ್ದುಪಡಿಸಿದ ಅಬಕಾರಿ ನೀತಿಗೆ ಸಂಬಂಧಿಸಿದ ಹಣ-ಲಾಂಡರಿಂಗ್ ಪ್ರಕರಣದಲ್ಲಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ಬಂಧಿಸಿತು. ಆರಂಭದಲ್ಲಿ ವಿಚಾರಣಾ ನ್ಯಾಯಾಲಯದಿಂದ ಜಾಮೀನು ನೀಡಲಾಯಿತು, ಆದರೆ ನಂತರ ಜಾಮೀನನ್ನು ದೆಹಲಿ ಹೈಕೋರ್ಟ್ ತಡೆಯಿತು. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರಿ ಸಿಬಿಐ ಸಲ್ಲಿಸಿದ ಮನವಿಯ ಮೇರೆಗೆ ವಿಶೇಷ ನ್ಯಾಯಾಧೀಶರಾದ ಸುನೇನಾ ಶರ್ಮಾ ಅವರು ಜೂನ್ 28, 2024 ರಂದು ತಮ್ಮ ಆದೇಶವನ್ನು ಕಾಯ್ದಿರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ 1.24 ಸೆಕೆಂಡ್‌ಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ,ಸಾಮಾಜಿಕ ಬಳಕೆದಾರರು ತಮ್ಮ ಪೋಸ್ಟ್‌ಗಳಲ್ಲಿ ತನ್ನನ್ನು ಉಳಿಸಿಕೊಳ್ಳಲು ಕೇಜ್ರಿವಾಲ್ ಅವರು ಮದ್ಯದ ಹಗರಣದ ಸಂಪೂರ್ಣ ಆರೋಪವನ್ನು ತಮ್ಮ ಪಕ್ಷದ ಸಚಿವ ಮನೀಶ್ ಸಿಸೋಡಿಯಾ ಅವರ ಮೇಲೆ ಹಾಕಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಬಳಕೆದಾರರು ಈ ವೀಡಿಯೊವನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿಭಿನ್ನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “ಅರವಿಂದ್ ಕೇಜ್ರಿವಾಲ್ ದೆಹಲಿ ಮದ್ಯ ಹಗರಣದ ಸಂಪೂರ್ಣ ಹೊಣೆಯನ್ನು ಮನೀಶ್ ಸಿಸೋಡಿಯಾ ಅವರ ಮೇಲೆ ಹೊರಿಸಿ ತನ್ನನ್ನು ತಾನು ನಿರಪರಾಧಿಯೆಂದು ಸಾಭೀತು ಮಾಡಿಕೊಳ್ಳಲಿದ್ದಾರೆ. ಸಿಸೋಡಿಯಾ ಕೊ ಬಾಲಿ ಕಾ ಬಕ್ರಾ ಬನಾ ದಿಯಾ @ಅರವಿಂದ್ ಕೇಜ್ರಿವಾಲ್” ಎಂದು ವಿಜಯ್ ನಾಯರ್ ಅತಿಶಿ ಮತ್ತು ಸೌರಭ್ ಭಾರದ್ವಾಜ್ ವರದಿ ಮಾಡಿರುವುದನ್ನು ನಾವು ಪೋಸ್ಟ್‌ಗಳಲ್ಲಿ ನೋಡಬಹುದು
Arvind Kejriwal puts the entire blame for the Delhi Liquor Scam on Manish Sisodia and washes his hands off the matter. He even said Vijay Nair reported to Atishi and Saurabh Bhardwaj.
— BALA (@erbmjha) June 26, 2024
Sisodia ko bali ka bakra bana diya @ArvindKejriwal ne 😂☠️ pic.twitter.com/FgYjQpT2f4
Arvind Kejriwal puts the entire blame for the Delhi Liquor Scam on Manish Sisodia and washes his hands off the matter. He even said Vijay Nair reported to Atishi and Saurabh Bhardwaj.
— BALA (@erbmjha) June 26, 2024
Sisodia ko bali ka bakra bana diya @ArvindKejriwal ne 😂☠️ pic.twitter.com/FgYjQpT2f4
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ನಾವು ಕಂಡುಕೊಂಡೆವು. ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ 'I said I am innocent, Manish Sisodia is innocent, AAP is also innocent.'" ಎಂದು ಹೇಳಿಕೆ ನೀಡಿರುವುದನ್ನು ನಾವು ಕಂಡುಕೊಂಡಿದ್ದೇವೆ.
ಎಎಪಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟೀಕರಣವನ್ನು ಹಂಚಿಕೊಂಡಿದ್ದಾರೆ: "CBI की तरफ से मीडिया में प्लांट किया जा रहा है कि मैंने सारा दोष मनीष सिसोदिया पर डाल दिया है, मैंने ऐसा कोई बयान नहीं दिया है, मैंने कहा है मैं भी निर्दोष हूं। मनीष सिसोदिया भी निर्दोष हैं, AAP निर्दोष है। कोर्ट में जज ने भी माना- केजरीवाल ने ऐसा कोई बयान नहीं दिया जो CBI दावा कर रही है।" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
"ನಾನು ಮನೀಷ್ ಸಿಸೋಡಿಯಾ ಅವರ ಮೇಲೆ ಎಲ್ಲಾ ಆರೋಪಗಳನ್ನು ಹೊರಿಸಿದ್ದೇನೆ ಎಂದು ಸಿಬಿಐನಿಂದ ಮಾಧ್ಯಮಗಳಲ್ಲಿ ನೀಡಲಾಗುತ್ತಿದೆ, ನಾನು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ, ನಾನು ಕೂಡ ನಿರಪರಾಧಿ ಎಂದು ಹೇಳಿದ್ದೇನೆ. ಮನೀಶ್ ಸಿಸೋಡಿಯಾ ಸಹ ನಿರಪರಾಧಿ, ಎಎಪಿ ನಿರಪರಾಧಿ ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾರೆ. ಎಂದು - ಕೇಜ್ರಿವಾಲ್ ಸಿಬಿಐ ಹೇಳುವಂತೆ ಯಾವುದೇ ಹೇಳಿಕೆಯನ್ನು ನೀಡಲಿಲ್ಲ.
BJP की CBI द्वारा प्लांट की गई झूठी खबर को मुख्यमंत्री @ArvindKejriwal जी ने कोर्ट में किया EXPOSE👇
— AAP (@AamAadmiParty) June 26, 2024
👉CBI की तरफ से मीडिया में प्लांट किया जा रहा है कि मैंने सारा दोष मनीष सिसोदिया पर डाल दिया है, मैंने ऐसा कोई बयान नहीं दिया है
👉मैंने कहा है मैं भी निर्दोष हूं। मनीष सिसोदिया… pic.twitter.com/l4yCWARXMh
ಕೇಜ್ರಿವಾಲ್ ಸಂಪೂರ್ಣ ಆರೋಪವನ್ನು ಮನೀಶ್ ಸಿಸೋಡಿಯಾ ಮೇಲೆ ಹಾಕಿದ್ದಾರೆ ಎಂದು ಸಿಬಿಐ ಸುಳ್ಳು ಮಾಹಿತಿಯನ್ನು ಹರಡುತ್ತಿದೆ. ಕೇಜ್ರಿವಾಲ್ ತಮ್ಮ ಹೇಳಿಕೆಯಲ್ಲಿ, "ನಾನು ನಿರಪರಾಧಿ, ಮನೀಶ್ ಸಿಸೋಡಿಯಾ ನಿರಪರಾಧಿ, ಎಎಪಿ ಕೂಡ ನಿರಪರಾಧಿ" ಎಂದು ಹೇಳಿದ್ದಾರೆ. ಸಿಬಿಐ ಹೇಳಿರುವ ಹೇಳಿಕೆಯನ್ನು ಅರವಿಂದ್ ಕೇಜ್ರಿವಾಲ್ ನೀಡಿಲ್ಲ ಎಂದು ನ್ಯಾಯಾಲಯದ ನ್ಯಾಯಾಧೀಶರು ಸಹ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಮತ್ತಷ್ಟು ಮಾಹಿತಿಯನ್ನು ನಾವು ಹುಡುಕಿದಾಗ ನಮಗೆ "ಲೈವ್ ಲಾ ಇಂಡಿಯಾ ಪೋಸ್ಟ್ ಅನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು: “ಅರವಿಂದ್ ಕೇಜ್ರಿವಾಲ್ ನ್ಯಾಯಾಲಯವನ್ನು ಉದ್ದೇಶಿಸಿ: ನನ್ನ ಎಲ್ಲಾ ಸ್ನೇಹಿತರಿಗೆ ಮನೀಶ್ ಸಿಸೋಡಿಯಾ ತಪ್ಪಿತಸ್ಥರೆಂದು ನಾನು ಹೇಳಿದ್ದೇನೆ ಎಂದು ನಾನು ಹೇಳಿಕೆಯನ್ನು ನೀಡಿದ್ದೇನೆ ಎಂದು ಸಿಬಿಐ ಮೂಲಗಳಿಂದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಮನೀಶ್ ಸಿಸೋಡಿಯಾ ತಪ್ಪಿತಸ್ಥ ಎಂದು ನಾನು ಯಾವುದೇ ಹೇಳಿಕೆ ನೀಡಿಲ್ಲ. ನಾನು ಮನೀಶ್ ಸಿಸೋಡಿಯಾ ನಿರಪರಾಧಿಗಳು, ಎಎಪಿ ನಿರಪರಾಧಿ, ನಾನು ನಿರಪರಾಧಿ ಎಂದು ಮಾತ್ರ ಹೇಳಿದ್ದೇನೆ. ಆದರೆ ಮಾಧ್ಯಗಳಲ್ಲಿ ಬೇರೇನೋ ಹೇಳಿಕೆಗಳು ಬರುತ್ತಿದೆ. ನಾನು ಯಾವುದೇ ಹೇಳಿಕೆಯನ್ನು ನೀಇಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Chaudhari: Volume of their voice cannot validate their argument. #ArvindKejriwal #CBI
— Live Law (@LiveLawIndia) June 26, 2024
ಇತ್ತೀಚಿನ ಕಾನೂನು ಸುದ್ದಿ ಪೂರೈಕೆದಾರ ಬಾರ್ & ಬೆಂಚ್ ಪ್ರಕಟಿಸಿರುವ ಲೇಖನದಲ್ಲಿ: “ಕೇಜ್ರಿವಾಲ್: ಮನೀಶ್ ಸಿಸೋಡಿಯಾ ತಪ್ಪಿತಸ್ಥ ಎಂದು ನಾನು ಯಾವುದೇ ಹೇಳಿಕೆಯನ್ನು ನೀಡಿಲ್ಲ. ಮನೀಶ್ ಸಿಸೋಡಿಯಾ ನಿರಪರಾಧಿ, ಎಎಪಿ ನಿರಪರಾಧಿ, ನಾನು ನಿರಪರಾಧಿ. ಅವರ ಸಂಪೂರ್ಣ ಯೋಜನೆ ಮಾಧ್ಯಮವನ್ನು ನಾಶ ಮಾಡುವುದು ಎಂದು ಹೇಳಿಕೆ ನೀಡಿರುವುದು ವರದಿ ಮಾಡಲಾಗಿದೆ.
Kejriwal addresses the court in person.
— Bar and Bench (@barandbench) June 26, 2024
ಎಬಿಪಿ ನ್ಯೂಸ್ ಅದರ ಬಗ್ಗೆ "ಮನೀಶ್ ಸಿಸೋಡಿಯಾ ನಿರಪರಾಧಿ' ಎಂಬ ಶೀರ್ಷಿಕೆಯೊಂದಿಗೆ ಲೇಖನವನ್ನು ಪ್ರಕಟಿಸಿದೆ: ಅರವಿಂದ್ ಕೇಜ್ರಿವಾಲ್ ಎಎಪಿ ನಾಯಕರ ವಿರುದ್ಧ ಸಿಬಿಐ ಹೇಳಿಕೆಯನ್ನು ನಿರಾಕರಿಸಿದ್ದಾರೆ"
ಮಿಂಟ್ ಪ್ರಕಟಿಸಿದ ಲೇಖನದ ಪ್ರಕಾರ: ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ, "ಸಿಬಿಐ ಮೂಲಗಳನ್ನು ಉಲ್ಲೇಖಿಸಿ, ನಾನು ಹೇಳಿಕೆಯಲ್ಲಿ ಸಂಪೂರ್ಣ ಆರೋಪವನ್ನು ಮನೀಶ್ ಸಿಸೋಡಿಯಾ ಅವರ ಮೇಲೆ ಹೊರಿಸಿದ್ದೇನೆ ಎಂದು ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ. ನಾನು ಸಿಸೋಡಿಯಾ ತಪ್ಪಿತಸ್ಥ ಅಥವಾ ಯಾರನ್ನೂ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ನಾನು ಹೇಳಿರುವುದೇನೆಂದರೆ, ನಾನು ನಿರಪರಾಧಿ, ಸಿಸೋಡಿಯಾ ನಿರಪರಾಧಿ, ಎಎಪಿ ನಿರಪರಾಧಿ ಎಂದು ಮಾತ್ರ ಎಂದು ವರದಿ ಮಾಡಿದ್ದಾರೆ.
ಇದರಿಂದ ಸಾಭೀತಾಗಿದ್ದೇನೆಂದರೆ, ತನಿಖೆ ಮತ್ತು ವಿವಿಧ ಮಾಧ್ಯಮಗಳ ಪ್ರಕಟಣೆಗಳ ಆಧಾರದ ಮೇಲೆ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶಿಲ್ಲವೆಂದು ಸಾಭೀತಾಗಿದೆ. ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅಂತಹ ಹೇಳಿಕೆ ನೀಡಿಲ್ಲ.