ಫ್ಯಾಕ್ಟ್‌ಚೆಕ್‌: ಬೆಂಗಳೂರಿನಲ್ಲಿರುವ ಬೆಂಗಳೂರು ತಿಂಡೀಸ್‌ ರೆಸ್ಟೋರೆಂಟ್‌ ರಸ್ತೆಬದಿಯಲ್ಲಿ 3ಡಿ ಬಿಲ್‌ಬೋರ್ಡ್‌ ಜಾಹೀರಾತನ್ನು ನೀಡಿಲ್ಲ

ಬೆಂಗಳೂರಿನಲ್ಲಿರುವ ಬೆಂಗಳೂರು ತಿಂಡೀಸ್‌ ರೆಸ್ಟೋರೆಂಟ್‌ ರಸ್ತೆಬದಿಯಲ್ಲಿ 3ಡಿ ಬಿಲ್‌ಬೋರ್ಡ್‌ ಜಾಹೀರಾತನ್ನು ನೀಡಿಲ್ಲ

Update: 2024-10-04 04:30 GMT

Bengaluru Tindies restaurant

ಪ್ರತಿಯೊಂದು ಕಂಪನಿ ತಮ್ಮ ಬ್ಯಾಂಡ್‌ನ ಉತ್ಪನ್ನಗಳನ್ನು, ಕಂಪನಿಯ ಬಗ್ಗೆ ಪ್ರಚಾರ ಮಾಡಿ ಗ್ರಾಹಕರನ್ನು ಆರ್ಷಿಸಲು ಸಾಮಾಜಿಕ ಜಾಲತಾಣದಲ್ಲಿ ಅಥವಾ ವಿವಿಧ ಮಾಧ್ಯಮಗಳಲ್ಲಿ ವಿಭಿನ್ನವಾದ ಜಾಹಿರಾತುಗಳನ್ನು ನೀಡಿ ಗ್ರಾಹಕರನ್ನು ಆರ್ಷಿಸಲು ಪ್ರಯತ್ನಿಸುತ್ತಿರುತ್ತದೆ. ಕೆಲವೊಂದು ಕಂಪನಿಗಳಂತೂ ಎಷ್ಟು ಕ್ರಿಯೇಟಿವ್‌ ಆಗಿ ಜಾಹಿರಾತುಗಳನ್ನು ಮಾಡುತ್ತಾರೆಂದರೆ ನೋಡಿದ ಕೂಡಲೇ ಆ ಸ್ಥಳಕ್ಕೆ ಅಥವಾ ಆ ಪದಾರ್ಥವನ್ನು ಕೊಂಡುಕೊಳ್ಳಲು ಹೋಗಬೇಕು ಎನ್ನುವ ಇಚ್ಛೆ ಬರುವ ಹಾಗೆ ಕ್ರಿಯೇಟಿವಾಗಿ ಜನರ ಮನಗಳಲ್ಲಿ ಸ್ಥಾನವನ್ನು ಸಂಪಾದಿಸುತ್ತಾರೆ.

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಇಂಥದೊಂದು 3D ಜಾಹೀರಾತಿನ ವಿಡಿಯೋವೊಂದು ವೈರಲ್‌ ಆಗಿದೆ. ಈ 3D ಜಾಹೀರಾತನ್ನು ನೋಡಿದ ಕೂಡಲೇ ಜಾಹೀರಾತನ್ನು ಕ್ರಿಯೇಟ್‌ ಮಾಡಿದ ತಲೆಗೆ ಸಲಾಮ್‌ ಮಾಡಬೇಕು ಎನಿಸುತ್ತದೆ. 3D ಜಾಹೀರಾತು ಎಂದಾಕ್ಷಣ ನಮಗೆ ಸಾಮಾನ್ಯವಾಗಿ ಅಮೆರಿಕಾ ಅಥವಾ ಚೀನಾ ನೆನಪಾಗುತ್ತದೆ. ಆದರೆ ಇದೀಗ ಬೆಂಗಳೂರಿನಲ್ಲಿ ಟೀಗೆ ಸಂಬಂಧಿಸಿದ ಜಾಹೀರಾತೊಂದು ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಏನಿದೆಯೆಂದರೆ, ಟ್ರಾಫಿಕ್‌ ಇರುವ ರಸ್ತೆ ಬದಿಯಲ್ಲಿರುವ ಹೋರ್ಡಿಂಗ್‌ನಲ್ಲಿ ಹೋಟೆಲ್‌ನ ವ್ಯಕ್ತಿಯೊಬ್ಬರು ಟೀ ಮಾಡಿ ತಿರುಗಿ ನಮ್ಮ ಕಡೆಗೆ ಟೀ ಗ್ಲಾಸ್‌ನ್ನು ನೀಡುವ ಹಾಗೆ 3D ಜಾಹೀರಾತನ್ನು ರೂಪುಗೊಳಿಸಿದ್ದಾರೆ. ಈ ವಿಡಿಯೋವನ್ನು ನೋಡಿದರೆ, ವಿಡಿಯೋದಲ್ಲಿ ಕಾಣುವ ವ್ಯಕ್ತಿ ನಮಗೆ ಟೀ ಕೊಡಲು ಮುಂದಾಗಿದ್ದಾರೆ ಎಂಬಂತೆ ಕಾಣುತ್ತಿದೆ. ಹಾಗೆ ಈ ಹೊರ್ಡಿಂಗ್‌ನಲ್ಲಿ ಹೋಟಲ್‌ ಮಳಿಗೆಯ ಹೆಸರು ʼಬೆಂಗಳೂರು ತಿಂಡಿಸ್‌ ಮತ್ತು ಹೋಟೆಲ್‌ ಕುಮಾರ ಪಾರ್ಕ್‌, ಶೇಶಾದ್ರಿಪುರಂ ಮತ್ತು ಮಾನ್ಯಾತಾ ಟೆಕ್‌ ಪಾರ್ಕ್‌ನಲ್ಲಿ ಈ ಹೋಟಲ್‌ಗಳನ್ನು ಶೀಘ್ರವೇ ತೆರೆಯಲಿದ್ದೇವೆ ಎಂದು ಬರೆದಿರುವುದನ್ನು ನಾವು ವಿಡಿಯೋಲ್ಲಿ ಕಾಣುವ ಹೋರ್ಡಿಂಗ್‌ನಲ್ಲಿ ನೋಡಬಹುದು

ಇದೇ ವಿಡಿಯೋವನ್ನು ಸೆಪ್ಟಂಬರ್‌ 20, 2024ರಂದು ʼಸೂಪರ್‌ ವಿಹಾರಿʼ ಎಂಬ ಯೂಟ್ಯೂಬ್‌ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು "Next level Advertising" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು.

Full View

ಸೆಪ್ಟಂಬರ್‌ 30,2024ರಂದು nenewstv ಎಂಬ ಯೂಟ್ಯೂಬ್‌ ಖಾತೆಯಲ್ಲಿ "ಬೆಂಗಳೂರಿನ 3D ಬಿಲ್‌ಬೋರ್ಡ್‌ ವೈರಲ್‌" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗೆ ವಿಡಿಯೋವಿನಲ್ಲಿ "Bengaluru Billoardʼs 3D AD Becomes a social media sensation" ಎಂಬ ಕ್ಯಾಪ್ಷನ್‌ನ್ನು ವಿಡಿಯೋದಲ್ಲಿ ನಾವು ನೋಡಬಹುದು

ಕ್ಯಾಪ್ಷನ್‌ನ್ನು ಕನ್ನಡಕ್ಕೆ ಅನುವಾದಿಸಿದಾಗ "ಬೆಂಗಳೂರಿನಲ್ಲಿ ಕಾಣುವ 3D ಹೊರ್ಡಿಂಗ್‌ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ " ಎಂಬ ಕ್ಯಾಪ್ಷನ್‌ ಜೊತೆಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ

Full View


ಅಕ್ಟೋಬರ್‌ 1,2024ರಂದು ಮಾರ್ಕೆಟಿಂಗ್‌ ಮೈಂಡ್‌ ಎಂಬ ಫೇಸ್‌ಬುಕ್‌ ಖಾತೆದಾರ ವಿಡಿಯೋನ್ನು ಹಂಚಿಕೊಂಡು "

Just when you think you’ve seen it all, Bengaluru’s 3D billboard takes things to a whole new level! Watching filter coffee pour off the screen feels so real, you might find yourself eaching for a cup. Bangalore Thindies, this is pure brilliance! This one’s too good to miss! #MarketingMind #Billboards #Creativity #BangaloreThindies ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದನ್ನು ನಾವು ಕಂಡುಕೊಂಡೆವು.

ಇಂಗ್ಲೀಷ್‌ನಲ್ಲಿ ಕಾಣುವ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದೆವು. ಬೆಂಗಳೂರಿನಲ್ಲಿ ಕಾಣುವ 3D ಬಿಲ್‌ಬೋರ್ಡ್‌ ಜಾಹಿರಾತು ಈಗ ಹೊಸ ಮಟ್ಟಕ್ಕೆ ತಲುಪಿದೆ ಎಂದು ಹೇಳಬಹುದು. ಬಿಲ್‌ಬೋರ್ಡ್‌ನಲ್ಲಿ ಮಾಡುತ್ತಿರುವ ಫಿಲ್ಟರ್‌ ಕಾಫಿಯನ್ನು ನೋಡುತ್ತಿದ್ದರೆ ತುಂಬಾ ನೈಜವಾಗಿದೆ. ಬೆಂಗಳೂರು ತಿಂಡೀಸ್‌ ನಿಮ್ಮ ಐಡಿಯಾ ತುಂಬಾ ಚೆನ್ನಾಗಿದೆ"ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು

Full View

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್‌ ಆದ ವಿಡಿಯೋವನ್ನು ವಿಎಫ್‌ಎಕ್ಸ್‌ ಮತ್ತು ಸಿಜಿಐ ತಂತ್ರಜ್ಞಾನದ ಮೂಲಕ ರಚಿಸಲಾಗಿದೆ.

ನಾವು ವೈರಲ್‌ ಆದ ವಿಡಿಯೋವಿನಲ್ಲಿರುವ ಕೆಲವು ಕೀಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಕನ್ನಡ ಮಾಧ್ಯಮ ಸಂಸ್ಥೆ ಟಿವಿ9, ಬೋಲ್ಡ್‌ ಸ್ಕೈ, ನಮ್ಮ ಕೂಡ್ಲ ನ್ಯೂಸ್‌ ಪ್ರಚರಿಸಿದ ವರದಿಯನ್ನು ಕಂಡುಕೊಂಡೆವು.

ಟಿವಿ9 ವೆಬ್‌ಸೈಟ್‌ನಲ್ಲಿ "ಇದಪ್ಪಾ ಕ್ರಿಯೆಟಿವಿಟಿ ಅಂದ್ರೆ, ವೈರಲ್‌ ಆಗುತ್ತಿದೆ ಬೆಂಗಳೂರಿನ 3D ಬಿಲ್‌ಬೋರ್ಡ್‌" ಎಂಬ ಶೀರ್ಷಿಕೆಯೊಂದಿಗಿರುವ ವರದಿಯನ್ನು ನಾವು ಕಂಡುಕೊಂಡೆವು. ವರದಿಯಲ್ಲಿ ʼಬೆಂಗಳೂರು ತಿಂಡೀಸ್‌ʼ ರೆಸ್ಟೋರೆಂಟ್‌ ಕ್ರಿಯೇಟಿವ್‌ ಜಾಹೀರಾತೊಂದನ್ನು ನೀಡಿದೆ, ವೈರಲ್‌ ವಿಡಿಯೋದಲ್ಲಿ ರಸ್ತೆಬದಿಯಲ್ಲಿನ 3D ಬಿಲ್‌ ಬೋರ್ಡ್‌ನಲ್ಲಿ ಹೊಟೇಲ್‌ ಉದ್ಯೋಗಿಯೊಬ್ಬರು ಟೀಯನ್ನು ಗಾಜಿನ ಲೋಟಕ್ಕೆ ಸುರಿದು ಸರ್ವ್‌ ಮಾಡುವಂತಹ ದೃಶ್ಯವನ್ನು ನೋಡಬಹುದು. ಈ ವಿಡಿಯೋಗೆ ಕೆಲವರು ವಿಶುವಲ್‌ ಇಫೆಕ್ಟ್‌ (VFX) ಮತ್ತು ಕಂಪ್ಯೂಟರ್‌ ಜನರೇಟೆಡ್‌ ಇಮೇಜರಿ (CGI) ತಂತ್ರಜ್ಞಾನದಿಂದ ಮಾಡಿದ ವಿಡಿಯೋ ಮಾಡಲಾಗಿದ್ದಾರೆ ಎಂದು ಕೆಲವರು, ಇನ್ನು ಕೆಲವರು ಈ ಜಾಹೀರಾತನ್ನು ನೋಡಿದರೆ ನಿಜವಾಗಿರುವ ಜಾಹಿರಾತಿನಂತೆ ಕಾಣುತ್ತಿಲ್ಲ ನಕಲಿಯದ್ದಿದ್ದಂಗಿದೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ನಾವು ವೈರಲ್‌ ಸುದ್ದಿಯ ಅಸಲಿಯತ್ತನ್ನು ತಿಳಿಯಲು ಬೌರಿಸ್‌ ರಸ್ತೆಯಲ್ಲಿರುವ ʼಬೆಂಗಳೂರು ತಿಂಡೀಸ್‌ʼ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಶರತ್‌ ಎನ್ನುವವರನ್ನು ನಾವು ಸಂಪರ್ಕಿಸಿದೆವು. ಶರತ್‌ ನೀಡಿರುವ ಮಾಹಿತಿಯ ಪ್ರಕಾರ ಜಗತ್ತಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಪೈಪೋಟಿ ಇದೆ, ಗ್ರಾಹಕರನ್ನು ಮೆಚ್ಚಿಸಲು, ಗಮನ ಸೆಳೆಯಲು ಕೆಲವು ಮಾರ್ಕೆಟಿಂಗ್‌ ಸ್ಕಿಲ್ಸ್‌ನ ಮೂಲಕ ಕ್ರಿಯೆಟಿವ್‌ ಆಗಿ 3D ಅಡ್ವರ್‌ಟೈಸ್‌ಮೆಂಟ್‌ ಜಾಹಿರಾತನ್ನು ನಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದೇವೆ. ವೈರಲ್‌ ಆದ ವಿಡಿಯೋವನ್ನು ವಿಶುವಲ್‌ ಇಫೆಕ್ಟ್‌ (VFX) ಮತ್ತು ಕಂಪ್ಯೂಟರ್‌ ಜನರೇಟೆಡ್‌ ಇಮೇಜರಿ (CGI) ತಂತ್ರಜ್ಞಾನದಿಂದ ಮಾಡಲಾಗಿದೆ ಎಂದು ವಿವರಿಸಿದರು.

ಬೆಂಗಳೂರು ತಿಂಡಿಸ್‌ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ 701ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.

ಹೀಗಾಗಿ ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್‌ ಆದ ವಿಡಿಯೋವನ್ನು ವಿಎಫ್‌ಎಕ್ಸ್‌ ಮತ್ತು ಸಿಜಿಐ ತಂತ್ರಜ್ಞಾನದ ಮೂಲಕ ರಚಿಸಲಾಗಿದೆ.

Claim :  ಬೆಂಗಳೂರಿನಲ್ಲಿರುವ ಬೆಂಗಳೂರು ತಿಂಡೀಸ್‌ ರೆಸ್ಟೋರೆಂಟ್‌ ರಸ್ತೆಬದಿಯಲ್ಲಿ 3ಡಿ ಬಿಲ್‌ಬೋರ್ಡ್‌ ಜಾಹೀರಾತನ್ನು ನೀಡಿಲ್ಲ
Claimed By :  Social Media Users
Fact Check :  False
Tags:    

Similar News