ಫ್ಯಾಕ್ಟ್‌ಚೆಕ್‌:ಬಿಜೆಡಿ ಶಾಸಕ ಪ್ರದೀಪ್ ಕುಮಾರ್ ಅಮತ್ ಚುನಾವಣೆಯಲ್ಲಿ ಸೋತ ನಂತರ ತಮ್ಮ ಜೀವನವನ್ನು ಕೊನೆಗೊಡಿಸಿಕೊಂಡಿದ್ದಾರಾ?

ಬಿಜೆಡಿ ಶಾಸಕ ಪ್ರದೀಪ್ ಕುಮಾರ್ ಅಮತ್ ಚುನಾವಣೆಯಲ್ಲಿ ಸೋತ ನಂತರ ತಮ್ಮ ಜೀವನವನ್ನು ಕೊನೆಗೊಡಿಸಿಕೊಂಡಿದ್ದಾರಾ?

Update: 2024-06-27 18:19 GMT

ಒಡಿಶಾದಲ್ಲಿ 2024ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯ ಪರಿವರ್ತನೆಯನ್ನು ನೋಡಬಹುದು. 24 ವರ್ಷಗಳ ಅಧಿಕಾರದ ನಂತರ ಬಿಜೆಡಿ (ಬಿಜು ಜನತಾ ದಳ) ಅನ್ನು ಸೋಲಿಸಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಚುನಾವಣೆಯಲ್ಲಿ ಗೆದ್ದಿದೆ. 147 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 78 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತದೊಂದಿಗೆ ಗೆಲುವನ್ನು ಸಾಧಿಸಿದೆ. ಇದೇ ಸಮಯದಲ್ಲಿ ಬಿಜೆಪಿ ಕೇವಲ 51 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಪ್ರಮುಖ ಬಿಜೆಪಿ ಅಭ್ಯರ್ಥಿಗಳ ಪೈಕಿ ಒಂದು ವರ್ಷ ಸಚಿವರಾಗಿ ಸೇವೆ ಸಲ್ಲಿಸಿದ ಕೆಲವರು ಸೋತಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಮೇಯ ಒಡಿಯಾ ಪತ್ರಿಕೆಯಲ್ಲಿ ವಾಟರ್‌ಮಾರ್ಕ್ ಮತ್ತು ಲೇಔಟ್‌ನೊಂದಿಗೆ ವೃತ್ತಪತ್ರಿಕೆ ಕ್ಲಿಪ್ಪಿಂಗ್‌ನಂತೆ ಕಾಣುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಚಲಾವಣೆಯಲ್ಲಿದೆ. ಒಡಿಯಾ ಶೀರ್ಷಿಕೆಯೊಂದಿಗಿರುವ ಕ್ಲಿಪ್ಪಿಂಗ್‌ನಲ್ಲಿ, ಹಿರಿಯ ಬಿಜೆಡಿ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಪ್ರದೀಪ್ ಕುಮಾರ್ ಅಮತ್ ಅವರ ಭಾವಚಿತ್ರವಿದೆ. ವೈರಲ್ ಪೇಪರ್ ಕ್ಲಿಪ್‌ನ ಶೀರ್ಷಿಕೆಯ ಪ್ರಕಾರ, "ಪ್ರದೀಪ್ ಅಮತ್ ಬಾವಿಗೆ ಹಾರಿ ತನ್ನ ಜೀವನವನ್ನು ಕೊನೆಗೊಳಿಸಿದನು."

2014ರ ಚುನಾವಣೆಯಲ್ಲಿ ಬೌದ್ ಜಿಲ್ಲೆಯ ಮಾಜಿ ಶಾಸಕ ಪ್ರದೀಪ್ ಕುಮಾರ್ ಅಮತ್ ಸೋತ ನಂತರ ಜನರು ನಾಚಿಕೆಯಿಂದ ಬಾವಿಗೆ ಹಾರಿದ್ದಾರೆ ಎಂದು ಒಡಿಯಾ ಭಾಷೆಯಲ್ಲಿ ಲೇಖನದಲ್ಲಿ ಪ್ರಕಟವಾದ ಪಠ್ಯವನ್ನು ನಾವು ಕಂಡುಕೊಂಡಿದ್ದೇವೆ“ ବୌଦ୍ଧ ଜିଲ୍ଲାର ପୂର୍ବତନ ବିଧାୟକ ପ୍ରଦୀପ କୁମାର ଅମାତ ୨୦୨ १०१४ ନିର୍ବାଚନରେ ହାରିବା ପରେ ଲୋକ ଲଜ୍ୟାରେ କୂଅକୁ ଡେଇଁ ପଡ଼ିଲେ। ଆପଣ ଠିକ୍ ଶୁଣିଛନ୍ତି ପ୍ରଦୀପ କୁମାର ଅମାତ ୨୦୨୪ ନିର୍ବାଚନରେ ବିଜେପିର ପ୍ରାର୍ଥୀ ସରୋଜ କୁମାର ପ୍ରଧାନଙ୍କ ଠାରୁ ହାରିବା ପରେ ଆଜି ସନ୍ଧ୍ୟା ୫ଟା.୩୦ ମିନିଟରେ ବାରିପଟରେଥ‌ିବା କୂଅକୁ ଦେଇପଡ଼ିଲେ। ବହୁ କଷ୍ଟରେ ତାଙ୍କୁ କୂଅରୁ ବାହାରକରି ଆମ୍ବୁଲାନ୍ସ ଯୋଗେ ବୌଦ୍ଧ ଜିଲ୍ଲା ମୁଖ୍ୟ ଚିକିତ୍ସାଳୟକୁ ନିଆଯାଇଥିଲା । ଡାକ୍ତର ସେଠାରେ ତାକୁ ମୃତ ଘୋଷଣା କରିଥିଲେ। ଏ ନେଇ ବୌଦ୍ଧ ପୋଲିସ ଅପମୃତ୍ଯୁ ମାମଲା ରଜୁ କରିଥିବା ଜଣାପଡିଛି ।

ನಾವು ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ: “2024 ರ ಚುನಾವಣೆಯಲ್ಲಿ ಸೋತ ನಂತರ, ಬೌಧ್ ಕ್ಷೇತ್ರದ ಬಿಜೆಡಿ ಶಾಸಕ ಪ್ರದೀಪ್ ಕುಮಾರ್ ಅಮತ್ ಅವಮಾನದಿಂದ ಬಾವಿಗೆ ಸಾವನಪ್ಪಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸರೋಜ್ ಕುಮಾರ್ ಪ್ರಧಾನ್ ವಿರುದ್ಧ ಸೋತ ನಂತರ ಪ್ರದೀಪ್ ಕುಮಾರ್ ಅಮತ್ ಸಂಜೆ 5:30 ರ ಸುಮಾರಿಗೆ ಬಾವಿಗೆ ಹಾರಿ ಪ್ರಾಣವನ್ನು ತೆಗೆದುಕೊಂಡಿದ್ದಾರೆ. ಬಹಳ ಕಷ್ಟಪಟ್ಟು ಅವರನ್ನು ಬಾವಿಯಿಂದ ರಕ್ಷಿಸಿ ಆಂಬುಲೆನ್ಸ್‌ನಲ್ಲಿ ಬೌದ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಬೌದ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಕ್ಲಿಪ್ಪಿಂಗ್ ಅನ್ನು “କୂଅକୁ ଡେଇଁପଡିଲେ ପ୍ରଦୀପ ଅମାତ....” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು.

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ಪತ್ರಿಕೆಯನ್ನು ಗಮನಿಸಿದಾಗ ಅದು ಜೂನ್‌, 4ರಂದು ಪ್ರಕಟಿಸಲಾಗಿತ್ತು. ಇದನ್ನು ನಾವು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ನಮಗೆ ಅಂತಹ ಯಾವುದೇ ಲೇಖನ ಕಂಡು ಬಂದಿಲ್ಲ.

ನಾವು ಜೂನ್ 4, 2024ರ ಪತ್ರಿಕೆಗಾಗಿ ಹುಡುಕಿದಾಗ , ವೈರಲ್ ವಿಷಯಕ್ಕೆ ಸಂಬಂಧಿಸಿದ ಯಾವುದೇ ಸುದ್ದಿ ನಮಗೆ ಸಿಗಲಿಲ್ಲ.

ಅಷ್ಟೇ ಅಲ್ಲ, ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ನಮಗೆ ಜೂನ್ 5, 2024 ರಂದು ಪ್ರಕಟಿಸಿದ ವಿವರವಾದ ಲೇಖನವನ್ನು ಕಂಡುಕೊಂಡೆವು, ಅಲ್ಲಿ ವೈರಲ್ ಪೋಸ್ಟ್ ನಕಲಿ ಎಂದು ಬರೆಯಲಾಗಿತ್ತು.

ಪ್ರಮೇಯ ಪತ್ರಿಕೆಯ ಹಿರಿಯ ಅಪರಾಧ ವರದಿಗಾರ ಶ್ರೀ ದಿಲೀಪ್ ಕುಮಾರ್ ರೌತ್ ಅವರು ಈ ಪೇಪರ್ ಕ್ಲಿಪ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ “ଏହି ଖବରଟି ମିଛ । କେହି ଅସାମାଜିକ ବ୍ୟକ୍ତି ପ୍ରମେୟ ଲୋଗକୁ ବ୍ୟବହାର କରି ମିଛ ଖବର ସୋସିଆଲ ମିଡିଆରେ ସେୟାର କରୁଛନ୍ତି” । ಬರೆದು ಪೋಸ್ಟ್‌ ಮಾಡಿದ್ದರು.

ವೈರಲ್‌ ಸುದ್ದಿಯನ್ನು ಕನ್ನಡಕ್ಕೆ ಅನುವಾದಿಸಿದಾಗ, ಅದು ಹೀಗಿದೆ: “ಈ ಲೇಖನವು ಸಂಪೂರ್ಣವಾಗಿ ನಕಲಿಯಾಗಿದೆ, ಯಾರೋ ಪ್ರಮೇಯ ಲೋಗೋ ಮತ್ತು ವಾಟರ್‌ಮಾರ್ಕ್ ಬಳಸಿ ಈ ಸುಳ್ಳು ಮಾಹಿತಿಯನ್ನು ಹರಡಿದ್ದಾರೆ”.

ಅಷ್ಟೇ ಅಲ್ಲ, ನಾವು ಜೂನ್ 6, 2024 ರಂದು, ಸಂಸ್ಥೆಯು ಸೈಬರ್ ಸೆಲ್‌ನಲ್ಲಿ ಎಫ್‌ಐಆರ್ ದಾಖಲಿಸಿದೆ ಎಂದು ಪ್ರಮೇಯ ಲೇಖನವನ್ನು ಪ್ರಕಟಿಸಿರುವುದನ್ನು ನಾವು ಕಂಡುಕೊಂಡೆವು.

ಒಡಿಶಾದ ಹಿರಿಯ ಪತ್ರಕರ್ತ ಸುರೇಂದ್ರ ಪಾತ್ರಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ, ಪ್ರದೀಪ್ ಅಮತ್ ಅವರ ಆತ್ಮೀಯ ಸ್ನೇಹಿತ ಅಮತ್ ಅವರು ಆರೋಗ್ಯವಾಗಿದ್ದಾರೆ ಮತ್ತು ಜೀವಂತವಾಗಿದ್ದಾರೆ ಪ್ರಸಾರವಾಗುವ ಪೇಪರ್ ಕ್ಲಿಪ್ ಅನ್ನು ನಂಬಬೇಡಿ ಎಂದು ಅವರು ಎಲ್ಲರಿಗೂ ವಿನಂತಿಸಿ ಪೋಸ್ಟ್‌ ಮಾಡಿದ್ದರು.

Full View

ಹೀಗಾಗಿ ವೈರಲ್ ಆಗಿರುವ ಪೇಪರ್ ಕ್ಲಿಪ್ ಸುಳ್ಳು ಎಂಬುದು ಸಾಬೀತಾಗಿದೆ. ಬಿಜೆಡಿ ನಾಯಕ ಪ್ರದೀಪ್ ಕುಮಾರ್ ಅಮತ್ ಕುರಿತ ಲೇಖನವನ್ನು ಪ್ರಮೇಯ ಪ್ರಕಟಿಸಿಲ್ಲ. 

Claim :  ಬಿಜೆಡಿ ಶಾಸಕ ಪ್ರದೀಪ್ ಕುಮಾರ್ ಅಮತ್ ಚುನಾವಣೆಯಲ್ಲಿ ಸೋತ ನಂತರ ತಮ್ಮ ಜೀವನವನ್ನು ಕೊನೆಗೊಡಿಸಿಕೊಂಡಿದ್ದಾರಾ?
Claimed By :  Social Media Users
Fact Check :  False
Tags:    

Similar News