ಫ್ಯಾಕ್ಟ್‌ಚೆಕ್‌: ಭಾರತ ಮಾತಾಕಿ ಜೈ ಎಂದಿದ್ದಕ್ಕೆ ಜಮ್ಮು ಕಾಶ್ಮೀರದ ಬಿಜೆಪಿ ಶಾಸಕರನ್ನು ಹೊರಹಾಕಿಲ್ಲ

ಭಾರತ ಮಾತಾಕಿ ಜೈ ಎಂದಿದ್ದಕ್ಕೆ ಜಮ್ಮು ಕಾಶ್ಮೀರದ ಬಿಜೆಪಿ ಶಾಸಕರನ್ನು ಹೊರಹಾಕಿಲ್ಲ

Update: 2024-11-16 13:15 GMT

ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಮತ್ತು 35-ಎ ಮರುಸ್ಥಾಪನೆಗೆ ಸಂಬಂಧಿಸಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನಿರ್ಣಾಯವನ್ನು ಅಂಗೀಕರಿಸಲಾಯಿತು. ಇದರ ಬೆನ್ನೆಲ್ಲೇ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ 44 ಸೆಕೆಂಡ್‌ಗಳನ್ನು ಒಳಗೊಂಡಿರುವ ವಿಡಿಯೋವೊಂದು ವೈರಲ್‌ ಆಗುತ್ತಿದೆ. ವೈರಲ್‌ ವಿಡಿಯೋವನ್ನು ಗಮನಿಸಿದರೆ, ವಿಧಾನಸಭೆಯಲ್ಲಿ ವ್ಯಕ್ತಿಯೊಬ್ಬರು ಭಾರತ್‌ ಮಾತಾ ಕೀ ಜೈ ಎಂದು ಹೂಗುತ್ತಿರುವುದನ್ನು ನಾವು ಗಮನಿಸಬಹುದು. ಜಮ್ಮು ಕಾಶ್ಮೀರದಲ್ಲಿ ಈ ಘೋಷಣೆಯನ್ನು ಕೂಗಿದ್ದಕ್ಕಾಗಿ ಬಿಜೆಪಿ ಶಾಸಕರನ್ನು ಹೊರಹಾಕಲಾಯಿತು ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹಂಚಿಕೊಳ್ಳುತ್ತಿದ್ದಾರೆ.

ನವಂಬರ್‌ 12, 2024ರಂದು ʼಹಿಂದು ಸಾಮ್ರಾಟ್‌ ಧರ್ಮ ಸೇನೆʼ ಫೇಸ್‌ಬುಕ್‌ನ ಖಾತೆಯಲ್ಲಿ ʼಜಮ್ಮು ಕಾಶ್ಮೀರದ ಸದನದಲ್ಲಿ ಭಾರತ್ ಮಾತಾಕಿ ಜೈ ಘೋಷಣೆ ಮಾಡಿದಕ್ಕೆ ಸದನದಿಂದ ಹೊರ ಹಾಕಿದರು! ಕಾರಣ ಮುಸ್ಲಿಂ ಬಾಹುಳ್ಯ!!!!ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ

Full View

ನವಂಬರ್‌ 11, 2024ರಂದು ಎಕ್ಸ್‌ ಖಾತೆದಾರರೊಬ್ಬರು ʼThree Hindu MLAs being physically thrown out of the Jammu & Kashmir Assembly for protesting with "Bharat Mata Ki Jai" slogans. The chaos started when the National Conference introduced a new resolution for the reinstatement of Special Status for Kashmir. In response, the BJP members rushed to the well of the House and called for the withdrawal of the resolution." ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಜಮ್ಮು ಮತ್ತು ಕಾಶ್ಮೀರ ಅಸೆಂಬ್ಲಿಯಲ್ಲಿ "ಭಾರತ್ ಮಾತಾ ಕೀ ಜೈ" ಎಂಬ ಘೋಷಣೆಗಳೊಂದಿಗೆ ಪ್ರತಿಭಟಿಸಿದ್ದಕ್ಕಾಗಿ ಮೂವರು ಹಿಂದೂ ಶಾಸಕರನ್ನು ಹೊರಹಾಕಲಾಯಿತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಲು ನ್ಯಾಷನಲ್ ಕಾನ್ಫರೆನ್ಸ್ ಹೊಸ ನಿರ್ಣಯದ ಬಗ್ಗೆ ಮಾತನಾಡಿದಾಗ ವಿಧಾನಸಭೆಯಲ್ಲಿ ಗೊಂದಲ ಶುರುವಾಗಿದೆ. ಎಂದು ಬರೆದು ಪೊಸ್ಟ್‌ ಮಾಡಿರುವುದನ್ನು ನಾವು ಕಾಣಬಹುದು.

ಮತ್ತೊಬ್ಬ ಎಕ್ಸ್‌ ಖಾತೆಯಲ್ಲಿ "जम्मू-कश्मीर विधानसभा में स्पीकर के आदेश पर बीजेपी विधायकों को मार्शल आउट किया गया| भारत माता के नारे लगाने पर ये करवाई कि गई" ಎಂದು ಬರೆದು ಪೊಸ್ಟ್‌ ಮಾಡಿದ್ದರು .


ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತದೆ. ವಾಸ್ತವಾಗಿ ವಿಧಾನಸಭೆಯ ಅಧಿವೇಶನದಲ್ಲಿ 370 ನೇ ವಿಧಿಯ ಗದ್ದಲದ ನಂತರ ಸ್ಪೀಕರ್ ಆದೇಶದ ಮೇರೆಗೆ ಮಾರ್ಷಲ್‌ಗಳಿಂದ ಇವರನ್ನು ಹೊರಹಾಕಲಾಯಿತು.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್‌ನಲ್ಲಿ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟದಲ್ಲಿ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಎಐಎನ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ʼJ&K Assembly turns into ‘Akhada’, BJP MLAs entering the well marshalled out on speaker’s ordersʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು.

ವಿಡಿಯೋ ವರದಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಗದ್ದಲ ಉಂಟುಮಾಡಿ ಬಾವಿಗೆ ಪ್ರವೇಶಿಸಿದ ಬಿಜೆಪಿ ಶಾಸಕರನ್ನು ಸ್ಪೀಕರ್ ಆದೇಶದ ಮೇರೆಗೆ ಮಾರ್ಷಲ್‌ಗಳು ಹೊರಗೆ ಕರೆದೊಯ್ದಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ʼ370 ನೇ ವಿಧಿಯನ್ನು ತೆಗೆದುಹಾಕುವ ಬಗ್ಗೆ ನವೆಂಬರ್ 8 ರಂದು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಕೋಲಾಹಲ ಮುಂದುವರೆದಿದೆ. ಕುಪ್ವಾರದ ಪಿಡಿಪಿ ಶಾಸಕ ಆರ್ಟಿಕಲ್ 370 ರ ಮರುಸ್ಥಾಪನೆಯ ಬ್ಯಾನರ್ ಅನ್ನು ತೋರಿಸಿದ ನಂತರ ಸದನದಲ್ಲಿ ಕೋಲಾಹಲ ಉಂಟಾಯಿತು, ಇದರ ಜೊತೆಗೆ ಅದೇ ಸಮಯದಲ್ಲಿ ಬಿಜೆಪಿ ಶಾಸಕರು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗಿದಾಗ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಅವರ ಆದೇಶದ ಮೇರೆಗೆ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಅಧಿವೇಶನದ 5ನೇ ದಿನದಂದು ಬಿಜೆಪಿ ಶಾಸಕರನ್ನು ಮಾರ್ಷಲ್‌ಗಳು ಹೊರಹಾಕಿದರುʼ. ಜೊತೆಗೆ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದ ಸಂಸದ, ಇಂಜಿನಿಯರ್ ರಶೀದ್ ಸಹೋದರ ಖುರ್ಷಿದ್ ಅಹ್ಮದ್ ಶೇಖ್‌ರನ್ನು ಮಾರ್ಷಲ್‌ಗಳು ವಿಧಾನಸಭೆಯಿಂದ ಹೊರಗೆ ಕರೆದೊಯ್ದರು. ಈ ಸಮಯದಲ್ಲಿ ಸದನದಲ್ಲಿ ತಳ್ಳಾಟ ಹಾಗೂ ಗದ್ದಲವುಂಟಾಯಿತು ಎಂದು ವರದಿಯಲ್ಲಿದೆ.

Full View

ಮನಿ ಕಂಟ್ರೋಲ್‌ ಎಂಬ ಯೂಟ್ಯೂಬ್‌ ಖಾತೆಯಲ್ಲಿ ʼJ&K Assembly Live Today | Article 370 J&K News | J&K Assembly Session Live | BJP | Congress | N18Gʼ ಎಂಬ ಶೀರ್ಷಿಕೆಯೊಂದಿಗಿರುವ 3.47.10 ನಿಮಿಷದ ಸುದೀರ್ಘವಾದ ವಿಡಿಯೋವನ್ನು ನಾವು ಕಂಡುಕೊಂಡೆವು. ವೈರಲ್‌ ಆದ ಕ್ಲಿಪ್‌ 33ರಿಂದ 38 ನಿಮಿಷಗಳವರೆಗೆ ಇರುವುದನ್ನು ನಾವು ಕಾಣಬಹುದು. ವಿಡಿಯೋವನ್ನು ಗಮನಿಸಿದರೆ, ಸದನದಲ್ಲಿ ಒಂದಡೆ, ಸಾಸಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದರೆ ಮತ್ತೊಂದು ಕಡೆ ಬಿಜೆಪಿ ಶಾಸಕರು ಘೋಷಣೆಗಳನ್ನು ಕೂಗುತ್ತಿರುವುದನ್ನು ನಾವು ನೋಡಬಹುದು. ವಿಡಿಯೋವನ 37.35 ನಿಮಿಷಗಳ ನಂತರ ಸ್ಪೀಕರ್‌ ಶಾಸಕನನ್ನು ಹೊರಗಾಕಲು ಆದೇಶಿಸಿದರು

Full View

ಇಂಡಿಯಾ ಟುಡೇ ವರದಿಯಲ್ಲಿ ʼMLAs come to blows in J&K Assembly for second day over Article 370ʼ ಎಂಬ ಶೀರ್ಷಿಕೆಯೊಂದಿಗೆ ವರದಿಯಾಗಿದೆ.


ನವಂಬರ್‌ 9, 2024ರಂದು ʼಬಿಬಿಸಿ ಹಿಂದಿʼ ವೆಬ್‌ಸೈಟ್‌ನಲ್ಲಿ "आर्टिकल 370 को लेकर जम्मू कश्मीर विधानसभा में पास प्रस्ताव और हंगामे के मायने क्या हैं?" ಎಂಬ ಶೀರ್ಷಿಕೆಯೊಂದಿಗೆ ವರದಿಯಾಗಿರುವುದನ್ನು ನಾವು ಕಂಡುಕೊಂಡೆವು.


ಹೀಗಾಗಿ ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತದೆ. ವಾಸ್ತವಾಗಿ ವಿಧಾನಸಭೆಯ ಅಧಿವೇಶನದಲ್ಲಿ 370 ನೇ ವಿಧಿಯ ಗದ್ದಲದ ನಂತರ ಸ್ಪೀಕರ್ ಆದೇಶದ ಮೇರೆಗೆ ಮಾರ್ಷಲ್‌ಗಳಿಂದ ಇವರನ್ನು ಹೊರಹಾಕಲಾಯಿತು.

Claim :  ಭಾರತ ಮಾತಾಕಿ ಜೈ ಎಂದಿದ್ದಕ್ಕೆ ಜಮ್ಮು ಕಾಶ್ಮೀರದ ಬಿಜೆಪಿ ಶಾಸಕರನ್ನು ಹೊರಹಾಕಿಲ್ಲ
Claimed By :  Social Media Users
Fact Check :  False
Tags:    

Similar News