ಫ್ಯಾಕ್ಟ್‌ಚೆಕ್: 2024ರ ಸಾರ್ವತ್ರಿಕ ಚುನಾವಣೆಯಿಂದಾಗಿ ಹೊಸ ಸಂವಹನ ನಿಯಮಗಳನ್ನು ಜಾರಿಗೆ ತರುವುದಿಲ್ಲ ಎಂದಿರುವ ಕೇಂದ್ರ ಸರ್ಕಾರ
2024ರ ಸಾರ್ವತ್ರಿಕ ಚುನಾವಣೆಯಿಂದಾಗಿ ಹೊಸ ಸಂವಹನ ನಿಯಮಗಳನ್ನು ಜಾರಿಗೆ ತರುವುದಿಲ್ಲ ಎಂದಿರುವ ಕೇಂದ್ರ ಸರ್ಕಾರ
ಭಾರತೀಯ ಚುನಾವಣಾ ಆಯೋಗವು 2024 ರ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಿಂದಾಗಿ ದೇಶಾದ್ಯಂತ ಮುಂದಿನ ದಿನಗಳಲ್ಲಿ ಹೊಸ ಸಂವಹನ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಾಗಿದೆ. ಇದರೊಂದಿಗೆ, ಎಂಸಿಸಿಯಿಂದಾಗಿ ಮತದಾರರಿಗೆ ಇಷ್ಟವಾಗುವ ಹಣ, ಮದ್ಯ, ಡ್ರಗ್ಸ್, ಉಡುಗೊರೆಗಳು ಮತ್ತು ಇತರ ವಸ್ತುಗಳ ಚಲನವಲನದ ಮೇಲೆ ನಿಗಾ ಇರಿಸುವುದರ ಜೊತೆಗೆ ಯಾವುದೇ ಉಲ್ಲಂಘನೆಗಳನ್ನು ಮಾಡದೆ ತಡೆಗಟ್ಟಲು ಜಾಗರೂಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಮುಂಬರುವ ಚುನಾವಣೆಯ ಕಾರಣ ಭಾರತದಲ್ಲಿ ಹೊಸ ಸಂವಹನ ನಿಯಮಗಳು ಜಾರಿಯಾಗಲಿವೆ ಎಂದು ವಾಟ್ಸಾಪ್‌ನಲ್ಲಿ ಸಂದೇಶವೊಂದು ಹರಿದಾಡುತ್ತಿದೆ. ಹೊಸ ಸಂವಹನ ನಿಯಮದಿಂದಾಗಿ ಇನ್ನು ಮುಂದೆ ಎಲ್ಲಾ ಕರೆಗಳನ್ನು ರೆಕಾರ್ಡ್ ಮಾಡಲಾಗುತ್ತದೆ ಮತ್ತು ಆ ರೆಕಾರ್ಡಿಂಗ್‌ಗಳನ್ನು ಹಾಗೆ ದಾಖಲಿಸಲಾಗುತ್ತದೆ. ಅಷ್ಟೇ ಅಲ್ಲ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ಬರೆದಿರುವ ಸುದ್ದಿ ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿದೆ.
ವಾಟ್ಸ್‌ಪ್‌ನಲ್ಲಿ ಒಂದು ಟಿಕ್ ಬಂದರೆ ನಾವು ಸಂದೇಶವನ್ನು ಕಳುಹಿಸಿದ್ದೇವೆ ಎಂದು ಅರ್ಥ, ಎರಡು ಟಿಕ್ ಬಂದರೆ, ನಾವು ಕಳುಹಿಸಿದ ಸಂದೇಶ ತಲುಪಿದೆ ಎಂದು ಅರ್ಥ. ನಾವು ಕಳುಹಿಸಿದ ಸಂದೇಶವನ್ನು ಓದಿದ್ದರೆ ನೀಲಿ ಟಿಕ್ ಮಾರ್ಕ್ ಬರುತ್ತದೆ. ಆದರೆ ಹೊಸ ನಿಯಮಗಳ ಪ್ರಕಾರ ಮೂರು ನೀಲಿ ಟಿಕ್‌ಗಳು ಬಂದರೆ, ಸರ್ಕಾರದವು ನಿಮ್ಮ ಸಂದೇಶವನ್ನು ರವಾಣಿಸಿದೆ ಎಂಬರ್ಥ. ಅದೇ ಎರಡು ನೀಲಿ ಒಂದು ಕೆಂಪು ಟಿಕ್ ಮಾರ್ಕ್ ಬಂದರೆ ಸರ್ಕಾರ ಆ ವಾಟ್ಸ್‌ಪ್‌ನ ಬಳಕೆದಾರರ ವಿರುದ್ಧ ಕ್ರಮವನ್ನು ತೆಗೆದುಕೊಂಡಿದ್ದಾರೆ ಎಂದರ್ಥ. ಒಂದು ನೀಲಿ, ಎರಡು ಕೆಂಪು ಟಿಕ್ ಮಾರ್ಕ್ ಬಂದರೆ ನೀವು ಕಳುಹಿಸಿದ ಸಂದೇಶವನ್ನು ಸರ್ಕಾರ ಪರೀಕ್ಷಿಸುತ್ತಿದೆ ಎಂದರ್ಥ. ಅದೇ ಮೂರೂ ಕೆಂಪು ಟಿಕ್ ಮಾರ್ಕ್‌ಗಳು ಬಂದರೆ ಸರ್ಕಾರ ಬಳಕೆದಾರರ ಮೇಲೆ ಕ್ರಮವನ್ನು ಕೈಗೊಂಡು, ಆತನನ್ನು ನ್ಯಾಯಲಯಕ್ಕೆ ಕರೆತರಲಾಗುವುದು ಎಂದರ್ಥ ಎಂಬ ಸುದ್ದಿ ಸಾಮಾಜಿಕ ಮಾಧ್ಯವವಾದ ವಾಟ್ಸಾಪ್‌ನಲ್ಲಿ ಸಂದೇಶ ಹರಿದಾಡುತ್ತಿದೆ.
ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಸಂದೇಶವೇನೆಂದರೆ,
ವೈರಲ್ ಆದ ಸುದ್ದಿಯನ್ನು ಕನ್ನಡಕ್ಕೆ ಅನುವಾದಿಸಿದಾಗ: ಮುಂಬರುವ ಚುನಾವಣೆಯ ದೃಷ್ಟಿಯಿಂದಾಗಿ, ನಾಳೆಯಿಂದ WhatsApp ಮತ್ತು ಫೋನ್ ಕರೆಗಳಿಗೆ ಹೊಸ ಸಂವಹನ ನಿಯಮಗಳು ಅನ್ವಯವಾಗುತ್ತವೆ.
01. ನಿಮ್ಮ ಎಲ್ಲಾ ಕರೆಗಳನ್ನು ರೆಕಾರ್ಡ್ ಮಾಡಲಾಗುತ್ತದೆ.
02. ಎಲ್ಲಾ ಕರೆ ರೆಕಾರ್ಡಿಂಗ್‌ಗಳನ್ನು ಹಾಗೆ ಸೇವ್ ಅಥವಾ ಉಳಿಸಲಾಗುತ್ತದೆ.
03. ವಾಟ್ಸ್‌ಪ್, ಫೇಸ್‌ಬುಕ್, ಎಕ್ಸ್ ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇಡಲಾಗುವುದು.
04. ಈ ಮಾಹಿತಿ ಯಾರಿಗೆ ಗೊತ್ತಿಲ್ಲವೋ ಎಲ್ಲರಿಗೂ ತಿಳಿಸಿ.
05. ನಿಮ್ಮ ಎಲ್ಲಾ ಮಾಧ್ಯಮಗಳು ಸಂವಾಹನಗಳು ಸಚಿವಾಲಯಕ್ಕೆ ವರ್ಗಾವಣೆಯಾಗುತ್ತದೆ.
06. ಹೀಗಾಗಿ, ದಯವಿಟ್ಟು ಯಾರಿಗೂ ನೀವು ತಪ್ಪು ಸಂದೇಶಗಳನ್ನು ಕಳುಹಿಸದಂತೆ ಎಚ್ಚರಿಕೆ ವಹಿಸಿ .
07. ನಿಮ್ಮ ಮಕ್ಕಳು , ಸಹೋದರರು , ಸಂಬಂಧಿಕರು , ಸ್ನೇಹಿತರು , ಪರಿಚಯಸ್ಥರಿಗೆ ಹೇಳಿ, ನೀವು ಜಾಗರೂಕರಾಗಿರಿ ಮತ್ತು ಕಡಿಮೆ ಸಾಮಾಜಿಕ ಜಾಲತಾಣಗಳನ್ನು ಬಳಸಬೇಕೆಂದು ತಿಳಿಸಿ .
08. ಈಗಿನ ಪ್ರಚಲಿತ ವಿದ್ಯಮಾನದಲ್ಲಿ ಪೋಸ್ಟ್‌ಗಳು, ವೀಡಿಯೊಗಳು, ರಾಜಕೀಯ, ಸರ್ಕಾರ ಅಥವಾ ಪ್ರಧಾನ ಮಂತ್ರಿ ಇತರ ಅಧಿಕಾರಿಗಳ ಬಗ್ಗೆ ಯಾವುದೇ ತಪ್ಪು ಸಂದೇಶಗಳನ್ನು ಕಳುಹಿಸಬೇಡಿ.
09. ಪ್ರಸ್ತುತ ಯಾವುದೇ ರಾಜಕೀಯ ಅಥವಾ ಧಾರ್ಮಿಕ ವಿಷಯದ ಬಗ್ಗೆ ಸಂದೇಶಗಳನ್ನು ಬರೆಯುವುದು ಅಥವಾ ಕಳುಹಿಸುವುದು ಅಪರಾಧ. ವಾರಂಟ್ ಇಲ್ಲದೆಯೇ ನಿಮ್ಮನ್ನು ಬಂಧಿಸಬಹುದು.
10. ಮೊದಲು ಪೊಲೀಸರು ಅಧಿಸೂಚನೆ ಹೊರಡಿಸುತ್ತಾರೆ , ನಂತರ ಸೈಬರ್ ಕ್ರೈಮ್ ನಂತರವೂ ನೀವು ಎಚ್ಚೆತ್ತು ಕೊಳ್ಳದಿದ್ದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು.
11. ದಯವಿಟ್ಟು ಈ ಸಂದೇಶವನ್ನು ನಿಮ್ಮ ಎಲ್ಲಾ ಗುಂಪಿನ ಸದಸ್ಯರು ನಿಮ್ಮ ತಿಳಿದವರಿಗೆ ದಯವಿಟ್ಟು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಳುಹಿಸಿ.
12. ಯಾವುದೇ ತಪ್ಪು ಸಂದೇಶವನ್ನು ಕಳುಹಿಸದಂತೆ ಜಾಗರೂಕರಾಗಿರಿ.
13. ದಯವಿಟ್ಟು ಇದನ್ನು ಶೇರ್ ಮಾಡಿ. ನಿಮ್ಮ ಗುಂಪುಗಳು ಹೆಚ್ಚು ಜಾಗರೂಕರಾಗಿರಬೇಕು.!
ಗ್ರೂಪ್‌ನಲ್ಲಿರುವ ಸದಸ್ಯರಿಗಾಗಿ ವಾಟ್ಸಾಪ್ ಕುರಿತು ಪ್ರಮುಖ ಮಾಹಿತಿ ಈ ಕೆಳಗಿನಂತೆ,
ವಾಟ್ಸಾಪ್‌ನಲ್ಲಿ ಮಾಹಿತಿ
01. = ಸಂದೇಶವನ್ನು ಕಳುಹಿಸಲಾಗಿದೆ.
02. = ಸಂದೇಶವನ್ನು ತಲುಪಿಸಲಾಗಿದೆ ..
03. ಎರಡು ನೀಲಿ = ಸಂದೇಶವನ್ನು ಓದಲಾಗಿದೆ ..
04. ಮೂರು ನೀಲಿ = ಸರ್ಕಾರವು ಸಂದೇಶವನ್ನು ಟಿಪ್ಪಣಿ ಮಾಡುತ್ತದೆ.
05. ಎರಡು ನೀಲಿ ಮತ್ತು ಒಂದು ಕೆಂಪು = ಸರ್ಕಾರವು ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು ..
06. ಒಂದು ನೀಲಿ ಮತ್ತು ಎರಡು ಕೆಂಪು = ಸರ್ಕಾರವು ನಿಮ್ಮ ಮಾಹಿತಿಯನ್ನು ಪರಿಶೀಲಿಸುತ್ತಿದೆ
07. ಮೂರು ಕೆಂಪು = ಸರ್ಕಾರ ಬಳಕೆದಾರರ ಮೇಲೆ ಕ್ರಮವನ್ನು ಕೈಗೊಂಡು, ಆತನನ್ನು ನ್ಯಾಯಲಯಕ್ಕೆ ಕರೆತರಲಾಗುವುದು ಎಂದರ್ಥ
ನೀವು ಜವಾಬ್ದಾರಿಯುತ ನಾಗರಿಕರಾಗಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಈ ಸಂದೇಶವನ್ನು ಹಂಚಿಕೊಳ್ಳಿ ..
ಇದೇ ಸಂದೇಶವನ್ನು ಎಕ್ಸ್‌ನ ಕೆಲವು ಬಳಕೆದಾರರು ಹಂಚಿಕೊಂಡಿದ್ದಾರೆ.
*⚡ త్వరలో జరగనున్న ఎన్నికల నేపథ్యంలో వాట్సాప్ మరియు ఫోన్ కాల్స్ కోసం కొత్త కమ్యూనికేషన్ నియమాలు రేపటి నుండి వర్తిస్తాయి.*
— kesava mohan (@kesavamohan2) March 28, 2024
*01. మీ అన్ని కాల్లు రికార్డింగ్ అవుతాయి.*
*02. అన్ని కాల్ రికార్డింగ్లు సేవ్ చేయబడతాయి.*
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ತೆಲುಗುಪೋಸ್ಟ್ ವೈರಲ್ ಆದ ಈ ಸಂದೇಶದ ಕುರಿತು ಹುಡುಕಾಟ ನಡೆಸಿದಾಗ ನಮಗೆ, ಈ ಸಂದೇಶವು 2020ರಿಂದ ಆನ್‌ಲೈನ್‌ನಲ್ಲಿ ಈ ಮೆಸೇಜ್ ಹರಿದಾಡುತ್ತಿದೆ ಎನ್ನುವುದನ್ನು ನಾವು ಕಂಡುಕೊಂಡೆವು. ಈ ಸಂದೇಶವನ್ನು ಕೇಂದ್ರ ಸರ್ಕಾರ ಅಥವಾ ಚುನಾವಣಾ ಆಯೋಗ ಇಂಥಹ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಸರ್ಕಾರಿ ಏಜೆನ್ಸಿಗಳ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲೂ ನಮಗೆ ವೈರಲ್ ಆದ ಸುದ್ದಿಗೆ ಸಂಬಂಧಿಸಿದ ಯಾವುದೇ ಅಧಿಕೃತ ಮಾಹಿತಿ ನಮಗೆ ಕಂಡುಬಂದಿಲ್ಲ. 2020ರಲ್ಲಿ PIB ಫ್ಯಾಕ್ಟ್‌ಚೆಕ್‌ನ ಫೇಸ್‌ಬುಕ್ ಹ್ಯಾಂಡಲ್‌ನಲ್ಲಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದರು.
ಪಿಐಬಿ ಪೋಸ್ಟ್‌ನಲ್ಲಿ ಏನಿದೆಯೆಂದರೆ “ಇಂತಹ ವಂಚನೆಯ ಬಗ್ಗೆ ಎಚ್ಚರದಿಂದಿರಿ! ಹರಿದಾಡುತ್ತಿರುವ ತಪ್ಪು ವಾಟ್ಸಾಪ್ ಸಂದೇಶಗಳಿಗೆ ಮರುಳಾಗಬೇಡಿ. ವೈರಲ್ ಆದ ಸುದ್ದಿಯಲ್ಲಿರುವ ಹಾಗೆ ಸರ್ಕಾರ ಯಾವುದೇ ರೀತಿಯ ಹೊಸ ನಿಯಮಗಳನ್ನು ಹೊರಡಿಸಿಲ್ಲ ಎಂದು ಪೋಸ್ಟ್ ಮಾಡಿದ್ದರು.
ಇಂಡಿಯಾ ಟಿವಿ ನ್ಯೂಸ್ ಕೂಡ ವೈರಲ್ ಸಂದೇಶವನ್ನು ತಳ್ಳಿಹಾಕಿದೆ ಮತ್ತು ಈ ಸುಳ್ಳು ಎಂದು ದೃಢಪಡಿಸಿದೆ. ವಾಟ್ಸ್‌ಪ್‌ನಲ್ಲಿ ಟ್ರಿಪಲ್ ಟಿಕ್‌ಗಳಿಗೆ ಸಂಬಂಧಿಸಿದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಟ್ಸ್‌ಪ್‌ನಲ್ಲಿ ಒಂದು ಟಿಕ್ ಬಂದರೆ ನಾವು ಸಂದೇಶವನ್ನು ಕಳುಹಿಸಿದ್ದೇವೆ ಎಂದು ಅರ್ಥ, ಎರಡು ಟಿಕ್ ಬಂದರೆ, ನಾವು ಕಳುಹಿಸಿದ ಸಂದೇಶ ತಲುಪಿದೆ ಎಂದು ಅರ್ಥ. ನಾವು ಕಳುಹಿಸಿದ ಸಂದೇಶವನ್ನು ಓದಿದ್ದರೆ ನೀಲಿಯ ಟಿಕ್ ಮಾರ್ಕ್ ಬರುತ್ತದೆ. ಕರೆ ಮಾನಿಟರಿಂಗ್ ಮಾಡಲು ಸರ್ಕಾರ ಟ್ರಿಪಲ್ ಟಿಕ್‌ಗಳನ್ನು ಪರಿಚಯ ಮಾಡಿದೆ ಎಂಬ ಸುದ್ದಿಯ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ.
ಹೆಚ್ಚಿನ ವಿವರಗಳಿಗಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಲೇಖನದಲ್ಲಿ ನಾವು ಓದಬಹುದು .
ಆದ್ದರಿಂದ, ವೈರಲ್ ಆದ ಸಂದೇಶವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಕೇಂದ್ರ ಸರ್ಕಾರವಾಗಲೀ ಅಥವಾ ಭಾರತೀಯ ಚುನಾವಣಾ ಆಯೋಗವಾಗಲೀ ಯಾವುದೇ ರೀತಿಯ ಹೊಸ ಸಂವಹನ ನಿಯಮಗಳನ್ನು ಹೊರಡಿಸಿಲ್ಲ ಎಂದು ಸಾಭೀತಾಗಿದೆ.