ಫ್ಯಾಕ್ಟ್‌ಚೆಕ್: ಪಾಕ್-ಭಾರತದ ನಡುವೆ ನಡೆದ ವಿಶ್ವಕಪ್ ಸಮಯದಲ್ಲಿ ಕ್ರಿಕೆಟ್ ಅಭಿಮಾನಿಗಳು ಹನುಮಾನ್ ಚಾಲೀಸ ಪಠಿಸಿದ್ದಾರೆ ಎಂಬ ವೀಡಿಯೋದ ಅಸಲಿಯತ್ತೇನು?
ಪಾಕ್-ಭಾರತದ ನಡುವೆ ನಡೆದ ವಿಶ್ವಕಪ್ ಸಮಯದಲ್ಲಿ ಕ್ರಿಕೆಟ್ ಅಭಿಮಾನಿಗಳು ಹನುಮಾನ್ ಚಾಲೀಸ ಪಠಿಸಿದ್ದಾರೆ ಎಂಬ ವೀಡಿಯೋದ ಅಸಲಿಯತ್ತೇನು?
ಅಕ್ಟೋಬರ್ 14,2023ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದ ಸಮಯದಲ್ಲಿ ಕ್ರಿಕೆಟ್ ಅಭಿಮಾನಿಗಳು ಹನುಮಾನ್ ಚಾಲೀಸ್ ವಾಚನೆಯನ್ನು ಪಠಣೆ ಮಾಡಿದ್ದರು ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂದ್ರ ಚೌದರಿ07 ಎಂಬ X ಖಾತೆದಾರ "ವಿಶ್ವಕಪ್ ನಡೆಯುತ್ತಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹನುಮಾನ್ ಚಾಲಿಸ್ ಪಠಣೆ" ಎಂಬ ಶೀರ್ಷಿಕೆಯಡಿಯಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದರು.
ಝಿ ನ್ಯೂಸ್‌ನ ವರದಿಯಲ್ಲೂ ಸಹ ಕ್ರಿಕೆಟ್ ಅಭಿಮಾನಿಗಳು ಹನುಮಾನ್ ಚಾಲಿಸ್ ಪಠಿಸಿದ್ದಾರೆ ಎಂದು ವರದಿ ಮಾಡಲಾಗಿತ್ತು.
opindia ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯಲ್ಲಿ "ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್‌ಗೂ ಮುನ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 1.3 ಲಕ್ಷ ಜನರು ಒಟ್ಟಾಗಿ ಹನುಮಾನ್ ಚಾಲೀಸವನ್ನು ಪಠಿಸಿದರು" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು.
ಫ್ಯಾಕ್ಟ್‌ಚೆಕ್
ಇತ್ತೀಚೆಗೆ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಕೊನೆಯ ಹಂತಕ್ಕೆ ತಲುಪಿತ್ತು. ವಿಶ್ವಕಪ್ ಗೆಲ್ಲಲು ಭಾರತದ ಕ್ರಿಕೆಟ್ ಅಭಿಮಾನಿಗಳು ನರೇಂದ್ರಮೋದಿ ಸ್ಟೇಡಿಯಂನಲ್ಲಿ ಹನುಮಾನ್ ಚಾಲಿಸವನ್ನು ಪಠಿಸಲಿಲ್ಲ. ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.
ವೀಡಿಯೋವಲ್ಲಿರುವ ಕೆಲವು ಕೀ ಫ್ರೇಮ್ಸ್ ಬಳಸಿಕೊಂಡು ರಿವರ್ಸ್ ಇಮೇಜ್ ಮೂಲಕ ವೈರಲ್ ಆದ ಸುದ್ದಿಯಲ್ಲಿ ಏನಾದರೂ ಸತ್ಯಾಂಶವಿದೆಯಾ ಎಂದು ಪರಿಶೀಲಿಸಿದಾಗ ವೀಡಿಯೋದಲ್ಲಿರುವ ಕೆಲವು ಸ್ಕ್ರೀನ್ ಶಾಟ್‌ಗಳಿರುವ ರೆಡ್ಡಿಟ್.ಕಾಂ ಎಂಬ ವೆಬ್‌ಸೈಟ್‌ಗೆ ನಿರ್ದೇಶಿಸಿತು. ವೈರಲ್ ಆದ ವೀಡಿಯೋ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಪಂದ್ಯದಲ್ಲ ಎಂದು ಕೆಲವು ಬಳಕೆದಾರರು ಕಮೆಂಟ್ ಹಾಕಿದ್ದರು.
ಕೆಲವು ಕೀವರ್ಡ್‌ಗಳ ಮೂಲಕ ಹುಡಕಾಟ ನಡೆಸಿದಾಗ ನಮಗೆ ಯೂಟ್ಯೂಬ್‌ನಲ್ಲಿ ಅಕ್ಟೋಬರ್ 27,2023ರಂದು ಅಪ್‌ಲೋಡ್ ಆದಂತಹ ವೀಡಿಯೋವನ್ನು ನಾವು ಕಂಡುಕೊಂಡೆವು. ವೀಡಿಯೋವಿಗೆ "ಹನುಮಾನ ಚಾಲೀಸ ಇನ್ ನರೇಂದ್ರ ಮೋದಿ ಸ್ಟೇಡಿಯಂ" ಎಂಬ ಶೇರ್ಷಿಕೆಯಡಿಯಲ್ಲಿ ವೀಡಿಯೋ ಅಪ್‌ಲೋಡ್ ಮಾಡಲಾಗಿತ್ತು.
ವೀಡಿಯೋವಿನಲ್ಲಿ ಬರುವ ಒಂದ ಕೀ ಫ್ರೇಮ್‌ನ್ನು ಗಮನಿಸಿದಾಗ ಅಹಮದಾಬಾದ್ ಸ್ಟೇಡಿಯಂನ ಪರದೆಯ ಮೇಲೆ ಗಾಯಕ ದರ್ಶನ್ ರಾವಲ್ ಹಾಡುತ್ತಿರುವ ದೃಶ್ಯವನ್ನು ನೋಡಬಹುದು. ಗಾಯಕ ದರ್ಶನ್ ರಾವಲ್ ಅಕ್ಟೋಬರ್ 14ರಂದು ಭಾರತ ಮತ್ತು ಪಾಕಿಸ್ತಾನದ ಪಂದ್ಯದ ವೇಳೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ರದರ್ಶನವನ್ನು ನೀಡಿದ್ದರು.
ಹೆಚ್ಚಿನ ಮಾಹಿತಿಯನ್ನು ಕಲೆಹಾಕಲು ಇನ್ವಿಡ್‌ನ ಕೆಲವು ಕೀಫ್ರೇಮ್‌ಗಳ ಮೂಲಕ ಹುಡುಕಾಟ ನಡೆಸಿದಾಗ ನಮಗೆ ನವಂಬರ್ 9ರಂದು ಇನ್‌ಸ್ಟ್ರಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿರುವಂತಹ ವೀಡಿಯೋವೊಂದು ಕಾಣಿಸಿತು. ಸನಾತನ ಸ್ಯಾನ್ಸ್‌ಕ್ರಿತ್ ಮತ್ತು ಕತಾರ್ ಹಿಂದೂ ಮಹಾಕಾಳ್ ಎಂಬ ಖಾತೆಯಲ್ಲಿ ದೊರೆತ ವೀಡಿಯೋವಿನಲ್ಲಿ ಬಳಕೆದಾರ ಜೈಪುರದಲ್ಲಿ ನಡೆದ ಹನುಮಾನ್ ಚಾಲೀಸಾ ಕಂಠಪಾಠ ಸಮಾರಂಭವನ್ನು ಚಿತ್ರೀಕರಿಸಿದ್ದ. ವೈರಲ್ ಆದ ವೀಡಿಯೋವಿನಲ್ಲಿ ಬರುವ ಆಡಿಯೋ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರ ಅಪ್‌ಲೋಡ್ ಮಾಡಿದ ವೀಡಿಯೋವಿನಲ್ಲಿ ಬರುವ ಆಡಿಯೋ ಒಂದೇ ಎಂದು ಕಂಡುಕೊಂಡೆವು.
ವೈರಲ್ ಆದ ವೀಡಿಯೋದಲ್ಲಿ ಬರುವುದು ಜೈಪುರ ಹನುಮಾನ್ ಚಾಲೀಸಾ ಮಹಾಸಮ್ಮೇಳನದ ಆಡಿಯೋ ಎಂದು ಬಳಕೆದಾರರು ಕಮೆಂಟ್ ಮಾಡಿದ್ದರು
ಇದೇ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಾಕಷ್ಟು ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು.
ಏಬಿಪಿ ನ್ಯೂಸ್‌ನಲ್ಲೂ ಜೈಪುರದಲ್ಲಿ ನಡೆದ ಹನುಮಾನ್ ಚಾಲಿಸ ಕುರಿತು ವರದಿಯಾಗಿತ್ತು.
ಹೀಗಾಗಿ ವೈರಲ್ ಆದ ವೀಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ.ಅಕ್ಟೋಬರ್ 14, 2023 ರಂದು ನಡೆದ ಪಾಕ್-ಭಾರತ ಪಂದ್ಯದ ವಿಡಿಯೋಗೆ ಜೈಪುರದ ಜೋಹ್ರೀ ಬಜಾರ್‌ನಲ್ಲಿ ನಡೆದ ಹನುಮಾನ್ ಚಾಲೀಸ್ ವಾಚನೆಯ ಆಡಿಯೋವನ್ನು ಸೇರಿಸಿ ವೈರಲ್ ಮಾಡಲಾಗಿದೆ.