ಫ್ಯಾಕ್ಟ್‌ಚೆಕ್‌: ಪಾಳುಬಿದ್ದ ಸೇತುವೆ ಭಾರತದ್ದು ಎಂದು ಹರಿದಾಡುತ್ತಿರುವ ಚಿತ್ರದಲ್ಲಿ ಸತ್ಯಾಂಶವಿಲ್ಲ

ಪಾಳುಬಿದ್ದ ಸೇತುವೆ ಭಾರತದ್ದು ಎಂದು ಹರಿದಾಡುತ್ತಿರುವ ಚಿತ್ರದಲ್ಲಿ ಸತ್ಯಾಂಶವಿಲ್ಲ

Update: 2024-09-30 06:17 GMT

Amtali Bridge

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರತದ ಪುಣೆ ಮುನ್ಸಿಪಲ್ ಕಾರ್ಪೊರೇಷನ್ ವಾಟರ್ ಟ್ಯಾಂಕರ್ ಬುಧ್ವರ್ ಪೇಠ್ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಗುಂಡಿಯೊಂದು ಕಾಣಿಸಿದ ವಿಡಿಯೋವೊಂದು ವೈರಲ್‌ ಆಗಿದೆ. ರಸ್ತೆಯಲ್ಲಿ ಕಾಣಿಸಿಕೊಂಡ ಗುಂಡಿಯಲ್ಲಿ ಒಂದು ದೊಡ್ಡ ಟ್ರಕ್‌ವೊಂದು ಕುಸಿಯುತ್ತಿರುವ ದೃಶ್ಯಾವಳಿಯಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ, ಟ್ರಕ್ ಚಾಲಕ ಸುರಕ್ಷಿತರಾಗಿದ್ದಾರೆ. ಇದೀಗ ಮುನ್ಸಿಪಲ್ ಅಧಿಕಾರಿಗಳು ರಸ್ತೆ ಕುಸಿದ ಕಾರಣವನ್ನು ತನಿಖೆ ನಡೆಸುತ್ತಿದ್ದಾರೆ, ಹಾಗೆ ಭವಿಷ್ಯದಲ್ಲಿ ಇಂತಹ ಘಟನೆಗಳು ಮತ್ತೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಿದ್ದಾರೆ.



 


ಇದೀಗ ಇದಕ್ಕೆ ಸಂಬಂಧಿಸಿದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಾಮಾಜಿಕ ಬಳಕೆದಾರರು ವೈರಲ್ ಚಿತ್ರವನ್ನು ಭಾರತ ಸರ್ಕಾರದ ಕಳಪೆ ನಿರ್ಮಾಣ ಕಾರ್ಯಕ್ಕೆ ಲಿಂಕ್ ಮಾಡಿ ಮಾಹಿತಿಯನ್ನು ಲಿಂಕ್‌ ಮಾಡಿ “ हमारी बराबरी क्या करेंगे चाइना वाले, वहां कांच का पुल है । और हमारे यहाँ जाली वाला पुल है । ಎಂದು ಹಿಂದಿಯಲ್ಲಿ ಶೀರ್ಷಿಕೆಯನ್ನೀಡಿ ಪೋಸ್ಟ್‌ ಮಾಡಿದ್ದಾರೆ.

ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಚೀನೀಯರು ನಮ್ಮೊಂದಿಗೆ ಹೇಗೆ ಸ್ಪರ್ಧಿಸಲಾಗುತ್ತದೆ? ಚೀನೀಯರು ಗಾಜಿನ ಸೇತುವೆಯನ್ನು ಹೊಂದಿದ್ದಾರೆ ಮತ್ತು ಇಲ್ಲಿ ನಾವು ಜಾಲರಿ ಸೇತುವೆಯನ್ನು ಹೊಂದಿದ್ದೇವೆ" ಎಂದು ಬರೆದು ಪೊಸ್ಟ್‌ ಮಾಡಿದ್ದರು.

ಮತ್ತೊಬ್ಬ ಬಳಕೆದಾರರು, #Ayodhy ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ

ಇನ್ನೊಬ್ಬ ಬಳಕೆದಾರ "Arunachal engineers, officers , contractors , their skill" ಎಂಬ ಶೀರ್ಷಿಕೆಯೊಂದಿಗೆ ವೈರಲ್ ಚಿತ್ರವನ್ನು ಹಂಚಿಕೊಂಡಿದ್ದಾರೆ.


Full View

ಫ್ಯಾಕ್ಟ್‌ಚೆಕ್‌

ವೈರಲ್ ಚಿತ್ರವು ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿ ಎಳೆಯುವ ಕೆಲಸವನ್ನು ಮಾಡುತ್ತಿದೆ. ವೈರಲ್‌ ಆದ ಚಿತ್ರ ಭಾರತಕ್ಕೆ ಯಾವುದೇ ಸಂಬಂಧಿಸಿದಲ್ಲ.

ನಾವು ವೈರಲ್‌ ಆದ ಚಿತ್ರದಲ್ಲಿರುವ ನಿಜಾಂಶವನ್ನು ತಿಳಿಯಲು ಚಿತ್ರವನ್ನು ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಸಅಮಾಜಿಕ ಮಾಧ್ಯಮದಲ್ಲಿ ಹಲವಾರು ಚಿತ್ರಗಳು ಕಂಡುಬಂದವು.

ಸೆಪ್ಟಂಬರ್‌ 19 2022ರಂದು ಬಾಂಗ್ಲಾದ ಡಿಜಿಟಲ್‌ ಮಿಡಿಯಾವಾದ ʼಡೈಲಿ ಸ್ವದಿನ್‌ ಬಾಂಗ್ಲಾʼ ಎಂಬ ವೆಬ್‌ಸೈಟ್‌ನಲ್ಲಿ 'Amtali's Connecting Bridge is Like a Death Trap.' ಎಂಬ ಹೆಡ್‌ಲೈನ್‌ನೊಂಡಿಗೆ ವರದಿ ಮಾಡಿರುವುದನ್ನು ನಾವು ಕಂಡುಕೊಂಡೆವು.

ಇದೇ ಸುದ್ದಿಯನ್ನು ʼMzaminʼ ಎಂಬ ವೆಬ್‌ಸೈಟ್‌ನಲ್ಲಿ "19 ಡೇಂಜರಸ್ ಬ್ರಿಡ್ಜಸ್ ಇನ್ ಅಮ್ಟಾಲಿ" ಎಂಬ ಹೆಡ್‌ಲೈನ್‌ನೊಂದಿಗೆ ಚಿತ್ರದೊಂದಿಗಿರುವ ವರದಿಯೊಂದನ್ನು ಪ್ರಕಟಿಸಿದೆ,

ವರದಿಯ ಪ್ರಕಾರ, "ಅಮ್ತಾಲಿಯ ಅರ್ಪಾಂಗಾಶಿಯಾ ಯೂನಿಯನ್‌ನಲ್ಲಿ ಜುಗಿಯಾ ಖಾಲ್ ಮೇಲೆ 40 ಮೀಟರ್ ಸೇತುವೆಯನ್ನು 2002 ಮತ್ತು 2006 ರ ನಡುವೆ ನಿರ್ಮಿಸಲಾಗಿತ್ತು. ಇದುವರೆಗೂ ಈ ರಸ್ತೆಯನ್ನು ರಿಪೇರಿ ಮಾಡಿಲ್ಲ. ಹೀಗಾಗಿ ಈಗ ಇಂತಹ ಗಂಭೀರ ಸ್ಥಿತಿಯನ್ನು ಎದುರಿಸಬೇಕಾಗುತ್ತಿದೆ. ಆಗಾಗ ಈ ಪ್ರಾಂತದಲ್ಲಿ ಅಪಘಾತಗಳು ಮತ್ತು ರಸ್ತೆ ಕುಸಿತ ಉಂಟಾಗುತ್ತದೆ. .ಈ ರಸ್ತೆ ಹಲವಾರು ಹಳ್ಳಿಗಳ ನಡುವಿನ ಸಂಪರ್ಕವನ್ನು ಅಡ್ಡಿಪಡಿಸುತ್ತದೆ ಎಂದು ವರದಿಯಲ್ಲಿದೆ.

ದಿ ಡೈಲಿ ಸ್ಟಾರ್‌ ಎಂಬ ವೆಬ್‌ಸೈಟ್‌ನಲ್ಲಿ "'Shaky Bridge a Trouble to Locals." ಎಂಬ ಶೀರ್ಷಿಕೆಯೊಂದಿಗೆ ವರದಿಯೊಂದನ್ನು ನಾವು ಕಂಡುಕೊಂಡೆವು.

ವರದಿಯಲ್ಲಿ "ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಬರ್ಗುನಾದ ಅಮ್ತಾಲಿ ಮೇಲ್ದಂಡೆಯ ಪಶ್ಚಿಮ ಚುನಖಾಲಿ ಕಾಲುವೆಯ ಮೇಲಿನ ಸೇತುವೆಯಿಂದಾಗಿ ಅನಾನುಕೂಲತೆಯನ್ನು ಎದುರಿಸುತ್ತದ್ದಾರೆ. ಮೂರು ವರ್ಷಗಳ ಹಿಂದೆ ಈ ಸೇತುವೆಯ ಒಂದು ಭಾಗವು ಕುಸಿದಿದೆ. 1996ರಲ್ಲಿ ಲೋಕಲ್‌ ಗೌರ್ನಮೆಂಟ್‌ ಎಂಜಿನಿಯರಿಂಗ್ ಡಿಪಾರ್ಟ್‌ಮೆಂಟ್‌ (ಎಲ್‌ಜಿಇಡಿ) ಅಮ್ತಾಲಿ ಉಪಜಿಲಾ ಅಡಿಯಲ್ಲಿ ಕುಕುವಾ ಯೂನಿಯನ್‌ನಲ್ಲಿ ಪಶ್ಚಿಮ್ ಚುನಾಖಾಲಿ ಕಾಲುವೆಯ ಮೇಲೆ ಸೇತುವೆಯನ್ನು ನಿರ್ಮಿಸಿದ್ದರು, ಈ ಬ್ರಿಡ್ಜ್‌ ಪಶ್ಚಿಮ ಚುನಾಖಲಿ ಮತ್ತು ಪುರ್ಬೋ ಚುನಖಾಲಿ ಗ್ರಾಮಗಳಿಗೆ ಸಂಪರ್ಕವನ್ನು ಸುಲಭಗೊಳಿಸಿತ್ತು" ಎಂದು ವರದಿ ಮಾಡಿರುವುದನ್ನು ನಾವು ಕಂಡುಕೊಂಡೆವು.

ಟಿಡಿಎಸ್ ವರದಿಯಲ್ಲಿ "ಮೂರು ವರ್ಷಗಳ ಹಿಂದೆ ಭಾರೀ ಮಳೆಯ ನಡುವೆ ಸೇತುವೆಯ ಒಂದು ಭಾಗವು ಕುಸಿದಿದ್ದರಿಂದ, ಗ್ರಾಮಸ್ಥರು ಮರದ ಹಲಗೆಯನ್ನು ಹಾಕಿ ಬಳಸುತ್ತಿದ್ದರು. ಈಗ ನೂರಾರು ಶಾಲಾ-ಕಾಲೇಜುಗಳು ಸೇರಿದಂತೆ ಅಲ್ಲಿನ ಸ್ಥಳೀಯರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೇತುವೆಯನ್ನು ದಾಟುತ್ತಾರೆ ಎಂದು ಪಶ್ಚಿಮ ಚುನಖಾಲಿ ಗ್ರಾಮದ ನಿವಾಸಿ, ಎಂಡಿ ಅಲ್ತಾಫ್ ಹೊಸೈನ್ ಹೇಳಿದ್ದಾರೆ.

ಹೀಗಾಗಿ ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ಸುದ್ದಿ ಓದುಗರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನವನ್ನು ಮಾಡುತ್ತಿದೆ. ವಾಸ್ತವವಾಗಿ ನೋಡುವುದಾದರೆ ವೈರಲ್‌ ಆದ ಚಿತ್ರ ಭಾರತಕ್ಕೆ ಸಂಬಂಧಿಸಿದಲ್ಲ. ಬದಲಿಗೆ ಬಾಂಗ್ಲಾದೇಶದ ಬರ್ಗುನಾ ಜಿಲ್ಲೆಯ ಅಮ್ತಾಲಿಗೆ ಸಂಬಂಧಿಸಿದ್ದು.

Claim :  ಪಾಳುಬಿದ್ದ ಸೇತುವೆ ಭಾರತದ್ದು ಎಂದು ಹರಿದಾಡುತ್ತಿರುವ ಚಿತ್ರದಲ್ಲಿ ಸತ್ಯಾಂಶವಿಲ್ಲ
Claimed By :  Social Media Users
Fact Check :  False
Tags:    

Similar News