ಫ್ಯಾಕ್ಟ್‌ಚೆಕ್‌: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ವಿಸ್ತರಿಸಲಾಗಿಲ್ಲ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ವಿಸ್ತರಿಸಲಾಗಿಲ್ಲ

Update: 2024-08-13 14:41 GMT

IT Returns

ಜುಲೈ 31, 2024ರ ಒಳಗೆ ಅಂದರೆ, 2024-25 ಹಣಕಾಸು ವರ್ಷಕ್ಕೂ ಮುನ್ನ ತಮ್ಮ ತಮ್ಮ ಐಟಿ ರಿಟರ್ನ್ಸ್ ಅನ್ನು ಸಲ್ಲಿಸುವಂತೆ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಸಲಹೆ ನೀಡಿದೆ. ವಾರ್ಷಿಕ ವರ್ಷ 2024-25 ಗಾಗಿ 6.5 ಕೋಟಿ ಐಟಿಆರ್‌ನ್ನು ಜುಲೈ 30 ರೊಳಗೆ ಸಲ್ಲಿಸಬೇಕು ಎಂದು ಇಲಾಖೆ ವೈರಲ್‌ ಆದ ಹೇಳಿಕೆಯಲ್ಲಿ ತಿಳಿಸಿದೆ. ಜುಲೈ 30ರ ವೇಳೆಗೆ ಐಟಿಆರ್ ಸಲ್ಲಿಸಿದವರ ಸಂಖ್ಯೆ 45 ಲಕ್ಷ ದಾಟಿದೆ. ಕಳೆದ ವರ್ಷದಂತೆ ಈ ವರ್ಷ ಸರ್ಕಾರ ಗಡುವನ್ನು ವಿಸ್ತರಿಸಿಲ್ಲ. ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಲು ಬಳಕೆದಾರರು ತೊಂದರೆಗಳನ್ನು ಎದುರಿಸುತ್ತಿರುವುದರಿಂದ ಗಡುವನ್ನು ವಿಸ್ತರಿಸಲಾಗುವುದು ಎಂದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ.

X ಮತ್ತು WhatsApp ಸಾಮಾಜಿಕ ಮಾಧ್ಯಮ ಬಳಕೆದಾರರು, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಆಗಸ್ಟ್ 31, 2024 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿಕೆಯನ್ನು ಹೊಂಡಿರುವ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೆಲವು ಬಳಕೆದಾರರು ಡೆಪ್ಯುಟಿ ಪ್ರೆಸ್ ರಿಜಿಸ್ಟ್ರಾರ್ ಜನರಲ್ ರಂಜಿತ್ ಚಂದನ್ ಸಹಿ ಮಾಡಿರುವ ಅಡ್ವೈಜರಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಪೋಸ್ಟ್‌ಗೆ "ಐಟಿಆರ್ ದಿನಾಂಕವನ್ನು ವಿಸ್ತರಿಸಿ"ಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಬಳಕೆದಾರರು ಹಂಚಿಕೊಂಡಿದ್ದಾರೆ.

ಪೋಸ್ಟ್‌ಗಳನ್ನು ಹಿಂದಿಯಲ್ಲಿ "ITR भीन की तिही भुद गीयी ... ... अभ न तिही 31 की गी गीयी गीयी". " ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ ಮಾಡಿದ್ದಾರೆ.


ಫ್ಯಾಕ್ಟ್‌ಚೆಕ್‌

ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಆದಾಯ ತೆರಿಗೆ ಇಲಾಖೆ ಐಟಿ ರಿಟರ್ನ್ಸ್ ಗಡುವನ್ನು ವಿಸ್ತರಿಸಲಿಲ್ಲ.

ನಾವು ವೈರಲ್‌ ಆದ ಸಂದೇಶವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ಭಾರತದ ಆದಾಯ ತೆರಿಗೆ ಇಲಾಖೆಯಿಂದ ಹೊರಡಿಸಲಾಗಿಲ್ಲ. ಆದರೆ ಈ ಪೋಸ್ಟ್‌ ರಿಜಿಸ್ಟ್ರಾರ್ ಜನರಲ್ ಆಫ್ ಪ್ರೆಸ್ ಆಫ್ ಇಂಡಿಯಾದಿಂದ ಹೊರಡಿಸಲಾಗಿದೆ ಎಂದು ನಾವು ಕಂಡುಕೊಂಡೆವು.

ಇದೇ ಸುಳಿವಾಗಿ ತೆಗೆದುಕೊಂಡು ನಾವು ಪಿಆರ್‌ಜಿಐ ವೆಬ್‌ಸೈಟ್‌ನಲ್ಲಿ ಹುಡುಕಿದೆವು. ನಮಗೆ ವೆಬ್‌ಸೈಟ್‌ನಲ್ಲಿ ವೈರಲ್‌ ಆದ ಅಡ್ವೈಜರಿಯೊಂದನ್ನು ನಾವು ಕಂಡುಕೊಂಡೆವು.

ಪ್ರೆಸ್‌ ರಿಜಿಸ್ಟ್ರಾರ್‌ ಜನರಲ್‌ ಆಫ್‌ ಇಂಡಿಯಾ ಎಂಬುವುದು ಪಿಆರ್‌ಪಿ ಕಾಯ್ದೆ 2023ರ ಅಡಿಯಲ್ಲಿ ವಾರ್ತಾ ಪತ್ರಿಕೆ ಮತ್ತು ಪತ್ರಿಕೆಗಳನ್ನು ರಿಜಿಸ್ಟರ್‌ ಮಾಡಿಕೊಳ್ಳುವ ಪೋರ್ಟಲ್‌. ಇದು ಪ್ರಕಾಶಕರು ಸಲ್ಲಿಸಿದ ವಾರ್ಷಿಕ ಪ್ರಕಟಣೆಗಳನ್ನು ಒಟ್ಟುಗೂಡಿಸಿ ಮತ್ತು ವಿಶ್ಲೇಷಣೆಯನ್ನು ಒದಗಿಸುತ್ತದೆ. ಈ ಪ್ರಕಟಣೆಗಳು ವಾರ್ಷಿಕ ವರದಿಯಾದ ʼಪ್ರೆಸ್ ಆಫ್ ಇಂಡಿಯಾʼ ಅನ್ನು ಆಧರಿಸಿ ರೂಪಿಸಲಾಗಿದೆ, ಇದು ದೇಶದಲ್ಲಿ ಮುದ್ರಣ ಮಾಧ್ಯಮದ ಸಮಗ್ರ ಸ್ನ್ಯಾಪ್‌ಶಾಟ್ ಅನ್ನು ಒದಗಿಸುತ್ತದೆ.

ಮುದ್ರಣ ಮಾಧ್ಯಮದ ಪ್ರಕಾಶಕರು ವಾರ್ಷಿಕ ಸ್ಟೇಟ್‌ಮೆಂಟ್‌ಗಳನ್ನು ಸಲ್ಲಿಸಲು ಆಹ್ವಾನಿಸುವ ಪಿಆರ್‌ಜಿಐನ್ನು ಕುರಿತು ಈ ಹಿಂದೆ ಪ್ರಕಟಿಸಲಾದ ಮತ್ತೊಂದು ಸಲಹೆಯನ್ನು ಸಹ ನಾವು ಕಂಡುಕೊಂಡೆವು. 2023-24 ರ ಆರ್ಥಿಕ ವರ್ಷಕ್ಕೆ ಪ್ರೆಸ್ ಸೇವಾ ಪೋರ್ಟಲ್ ಮೂಲಕ ವಾರ್ಷಿಕ ಸ್ಟೇಟ್‌ಮೆಂಟ್‌ಗಳ ಇ-ಫೈಲಿಂಗ್ 03.05.2024 ರಂದು ಪ್ರಾರಂಭವಾಗುತ್ತದೆ ಎಂದು ಪ್ರಕಟಿಸಲಾಗಿದೆ. ಆದ್ದರಿಂದ, ಪಿಆರ್‌ಜಿಐ (RNI) ನಲ್ಲಿ ನೋಂದಾಯಿಸಲಾದ ಪಿರಿಯಾಡಿಕಲ್ಸ್‌ನ್ನು ಹೊಂದಿರುವ ಪ್ರಕಾಶಕರು ಪ್ರೆಸ್ ಸೇವಾ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ವಾರ್ಷಿಕ ಸ್ಟೇಟ್‌ಮೆಂಟ್‌ನ್ನು ಸಲ್ಲಿಸಬೇಕು, ”ಎಂದು ಸೂಚಿಸಲಾಗಿದೆ.

ಪಿಐಬಿ ಫ್ಯಾಕ್ಟ್ ಚೆಕ್ ಮೂಲಕ, ವೈರಲ್ ಆಗುತ್ತಿರುವ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಪಿಐಬಿ ತನ್ನ X ಖಾತೆಯಲ್ಲಿ “An advisory of Office of Press Registrar General of India shared on social media is being misconstrued as extension of due date for filing ITR. The advisory is NOT related to extension of date of filing ITR. The due date for filing ITR is 31 July 2024” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ.

ಈ ಪೋಸ್ಟ್‌ನ್ನು ಭಾರತದ ಆದಾಯ ತೆರಿಗೆ ಇಲಾಖೆ ತನ್ನ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಹೀಗಾಗಿ, ವೈರಲ್ ಆದ ಪೋಸ್ಟ್‌ನಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾಭೀತಾಗಿದೆ. ITR ನ ಇ-ಫೈಲಿಂಗ್ ದಿನಾಂಕವನ್ನು ವಿಸ್ತರಿಸುವ ಬಗ್ಗೆ ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿಯಿಲ್ಲ.

Claim :  ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ವಿಸ್ತರಿಸಲಾಗಿಲ್ಲ
Claimed By :  X users
Fact Check :  False
Tags:    

Similar News