ಫ್ಯಾಕ್ಟ್‌ಚೆಕ್: ತೆಲಂಗಾಣದಲ್ಲಿ ಮತದಾರರು ಕಾಂಗ್ರೆಸ್ ಸರ್ಕಾರದ ಭರವಸೆಯನ್ನು ನಂಬುವುದನ್ನು ನಿಲ್ಲಿಸಿದ್ದಾರೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.
ತೆಲಂಗಾಣದಲ್ಲಿ ಮತದಾರರು ಕಾಂಗ್ರೆಸ್ ಸರ್ಕಾರದ ಭರವಸೆಯನ್ನು ನಂಬುವುದನ್ನು ನಿಲ್ಲಿಸಿದ್ದಾರೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.
ತೆಲಂಗಾಣದಲ್ಲಿ ಚುನಾವಣೆಗೆ ಇನ್ನೇನು ಎರಡೇ ದಿನ ಬಾಕಿ ಇರುವಾಗಲೇ ಚುನಾವಣೆಯ ಬಿಸಿ ಗರಿಗೆದರಿದೆ.
ಎಲ್ಲಾ ಪಕ್ಷದ ನಾಯಕರು ಗೆಲುವನ್ನು ಸಾಧಿಸಲು ಹೊಚ್ಚ ಹೊಸಾ ಸಂಚನ್ನು ರೂಪಿಸುತ್ತಿದ್ದಾರೆ. ಚುನಾವಣೆಯಲ್ಲಿ ಭಾಗವಹಿಸುತ್ತಿರುವ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವೆ ಪೈಪೋಟಿ ಜೋರಾಗಿದೆ.
ಈ ನಡುವೆ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರೇವಂತ್ ರೆಡ್ಡಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ರೇವಂತ್ ರೆಡ್ಡಿ ಮತದಾರರಿಗೆ ಹೀಗೆ ಹೇಳಿದ್ದಾರೆ "ಕಾಂಗ್ರೆಸ್ ಪಕ್ಷದ ಭರವಸೆಗಳನ್ನು ಜನರು ನಂಬದ ಕಾರಣ, ತೆಲಂಗಾಣದ ಜನರಿಗೆ ಒಂದು ಮತಕ್ಕೆ 10,000 ರೂಪಾಯಿ ಮದ್ಯದ ಬಾಟಲಿಗಳನ್ನು ವಿತರಿಸಲು ನಿರ್ಧರಿಸಿದ್ದೇವೆ" ಎಂದು ಹೇಳಿರುವ ವಾಕ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತೆಲುಗುನಲ್ಲಿ "“కాంగ్రెస్ హామీలను ఎవరు నమ్మడం లేదని పబ్లిక్ గా ఒప్పుకున్న రేవంత్ రెడ్డి” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು. ಮೇಲಿರುವ ಶೀರ್ಷಿಕೆಯನ್ನು ಅನುವಾದಿಸಿದಾಗ ನಮಗೆ ತಿಳಿದು ಬಂದಿದ್ದು " ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ನೀಡಿದ ಭರವಸೆಗಳನ್ನು ಜನರು ನಂಬುವುದಿಲ್ಲ ಎಂದು ರೇವಂತ್ ರೆಡ್ಡಿ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿತ್ತು.
ಈ ಚುನಾವಣೆಯಲ್ಲಿ ಗೆಲ್ಲಲು ವೋಟಿಗೆ 10 ಸಾವಿರ ಹಾಗೂ 2 ಮಧ್ಯದ ಬಾಟಲ್‌ನ್ನು ಮತದಾರರಿಗೆ ಹಂಚಲಾಗುತ್ತದೆ ಎಂದು ರೇವಂತ್ ರೆಡ್ಡಿ ಹೇಳಿರುವಂತಹ ಹೇಳಿಕೆಯನ್ನು ಈ ವೀಡಿಯೋದಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಕಾಂಗ್ರೇಸ್ ಪಕ್ಷ ಹಣವನ್ನು ಹಂಚಲಿದ್ದಾರೆ ಎಂದು ರೇವಂತ್ ರೆಡ್ಡಿ ಹೇಳಿಕೆಯನ್ನು ನೀಡಲಿಲ್ಲ.
ವಿಡಿಯೋದಲ್ಲಿ ಬರುವ ಕೆಲವು ಕೀಫ್ರೇಮ್‌ಗಳನ್ನು ಉಪಯೋಗಿಸಿಕೊಂಡು ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ಹುಡುಕಲು ಹೊರೆಟೆವು. ವೀಡಿಯೋದಲ್ಲಿ ಬರುವ ಕೆಲವು ಚಿತ್ರಗಳನ್ನು ಉಪಯೋಗಿಸಿಕೊಂಡು ಹುಡುಕಿದಾಗ ರೇವಂತ್ ರೆಡ್ಡಿ ಚುನಾವಣೆಯ ಭಾಗವಾಗಿ ತುಂಗಾತೀರ್ಥಿಯಲ್ಲಿ ಅವರ ಮೂಲ ಭಾಷಣವನ್ನು ಕಂಡುಕೊಂಡೆವು. ನವಂಬರ್ 24,2023ರಂದು ಹಲವು ಮಾಧ್ಯಮ ಸಂಸ್ಥೆಗಳು ರೇವಂತ್‌ರೆಡ್ಡಿ ಮಾಡಿರುವಂತಹ ಚುನಾವಣೆಯ ಪ್ರಚಾರವನ್ನು ಕಂಡುಕೊಂಡೆವು.
ನವೆಂಬರ್ 24, 2023 ರಂದು ಎಬಿಎನ್ ತೆಲುಗು ಸ್ಟ್ರೀಮ್ ಮಾಡಿದ ವೀಡಿಯೊವಿನಲ್ಲಿ ರೇವಂತ್ ರೆಡ್ಡಿ ಹೇಳಿಕೆಯನ್ನು ನೋಡಬಹುದು. “ನಿನ್ನೆ ಸಂಜೆ ಕೆಸಿಆರ್ ಪ್ರಗತಿ ಭವನದಲ್ಲಿ ತುರ್ತು ಸಭೆಯನ್ನು ಏರ್ಪಾಟು ಮಾಡಿದ್ದರು.ತೆಲಂಗಾಣದಲ್ಲಿ ನಡೆಯುವ ಚುನಾವಣೆಯಲ್ಲಿ ನಾವು ನೀಡಿದ ಭರವಸೆಯನ್ನು ಜನರು ನಂಬಲಿಲ್ಲ. ಹೀಗಾಗಿ ಕೆಸಿಆರ್ ಪ್ರತಿ ವೋಟಿಗೆ 10,000 ರೂಪಾಯಿ ನೀಡಿ ಎರಡು ಫುಲ್ ಬಾಟಲ್ ನೀಡಿ ಮತ ಖರೀದಿಸಲು ನಿರ್ಧರಿಸಿದ್ದಾರೆ” ಎಂದು ರೇವಂತ್ ರೆಡ್ಡಿ ಚುನಾವಣೆಯ ಪ್ರಚಾರದ ಭಾಗವಾಗಿ ಹೇಳಿದ್ದರು.
ಎಬಿಎನ್ ತೆಲುಗು ಪ್ರಕಟಿಸಿದ 59.41 ನಿಮಿಷಗಳ ಲೈವ್ ಸ್ಟ್ರೀಮ್ ವೀಡಿಯೊ ಇಲ್ಲಿದೆ
MIC ಟಿವಿ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವಂತಹ ವಿಡಿಯೋ ಇಲ್ಲಿದೆ. ಈ ವಿಡಿಯೋವಿನಲ್ಲಿ 2 ಗಂಟೆ 34.50 ನಿಮಿಷಗಳಲ್ಲಿ ನೋಡಬಹುದು.
ಯೋಯೋ ಟಿವಿ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿರುವ ವಿಡಿಯೋ ಇಲ್ಲಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಎಡಿಟ್ ಮಾಡುವ ಮೂಲಕ ರೇವಂತ್ ರೆಡ್ಡಿ ಹೇಳಿಕೆಯನ್ನು ಬದಲಾಯಿಸಲಾಗಿದೆ. ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ.