ಫ್ಯಾಕ್ಟ್‌ಚೆಕ್: ದೀಪಾಲಂಕಾರದಿಂದ ಕೂಡಿದ ಈ ಸ್ಥಳ ಅಯೋಧ್ಯದಲ್ಲಿನ ಶ್ರೀರಾಮ ಮಂದಿರವಲ್ಲ ಬದಲಿಗೆ ದುರ್ಗಾ ಪೂಜೆಯ ಸಮಯದಲ್ಲಿ ನಿರ್ಮಿಸಿದಂತಹ ಸೆಟ್
ದೀಪಾಲಂಕಾರದಿಂದ ಕೂಡಿದ ಈ ಸ್ಥಳ ಅಯೋಧ್ಯದಲ್ಲಿನ ಶ್ರೀರಾಮ ಮಂದಿರವಲ್ಲ ಬದಲಿಗೆ ದುರ್ಗಾ ಪೂಜೆಯ ಸಮಯದಲ್ಲಿ ನಿರ್ಮಿಸಿದಂತಹ ಸೆಟ್
ಜನವರಿ 24, 2024ರಂದು ಉದ್ಘಾಟನೆಗೊಳ್ಳಲಿರುವ ರಾಮಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. 2.7 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುವ ಮಂದಿರ 161 ಅಡಿ ಉದ್ದ, ಮೂರು ಮಹಡಿಗಳು ಮತ್ತು ಐದು ಮಂಟಪಗಳನ್ನು ಒಳಗೊಂಡಿದೆ. ಜನವರಿ 22,2024ರಂದು ರಾಮಾಲಯದ ಗರ್ಭಗುಡಿಯಲ್ಲಿ ಸ್ವಾಮಿಯ ಪ್ರತಿಷ್ಠಾಪನೆಯಾಗಲಿದೆ. ಈ ಶುಭಕಾರ್ಯವನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಭಕ್ತರ ದಂಡೇ ಹರಿದು ಬರಲಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ರಾಮಮಂದಿರದ ನಿರ್ಮಾಣ ಪೂರ್ಣಗೊಂಡಿದೆ. ದೇವಸ್ಥಾನದ ಸುತ್ತ ಭಕ್ತಾಧಿಗಳು ನಿಂತಿರುವುದನ್ನು ನೋಡಬಹುದು ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಹಿಂದಿಯಲ್ಲಿ “श्रीराम मंदिर अयोध्या में विद्युत कार्य परीपूर्ण अलौकिक जगमगाहट...*जय श्री राम..!!!* ಎಂಬ ಶೀರ್ಷಿಕೆಯನ್ನೀಡಿ ಪೋಸ್ಟ್ ಮಾಡಲಾಗಿದೆ.
*राम मंदिर में विद्युत कार्य पूर्ण 🙏 अलौकिक जगमगाहट 💐*
— ज्ञान सिंह (अखंड भारत ) 🚩🚩🇮🇳🇮🇳 (@gyan_rajawat01) December 16, 2023
*जय श्री राम 🙏* pic.twitter.com/9kDUudPifb
*श्रीराम मंदिर में विद्युत कार्य पूर्ण*
— tripathi yatin (@yatintripathi) December 16, 2023
*****अलौकिक जगमगाहट*****
।।जय जय श्री राम।। pic.twitter.com/bZIqsVzlWg
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವಿಡಿಯೋದಲ್ಲಿ ಕಾಣಿಸುವುದು ಅಯೋಧ್ಯೆಯ ರಾಮಮಂದಿರವಲ್ಲ ಬದಲಿಗೆ ದುರ್ಗಾ ಪೂಜೆಯ ಸಮಯದಲ್ಲಿ ಕೊಲ್ಕತ್ತಾದಲ್ಲಿರುವ ಅಯೋಧ್ಯೆಯ ರಾಮ ಮಂದಿರದ ಪ್ರತಿರೂಪದಂತೆ ಕೃತಕವಾಗಿ ನಿರ್ಮಿಸಿರುವಂತಹ ಸೆಟ್.
ನಾವು ವಿಡಿಯೋದಲ್ಲಿನ ಕೆಲವು ಪ್ರಮುಖ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ರೀಸರ್ಚ್ ಮಾಡಿದೆವು. ಹುಡುಕಾಟದಲ್ಲಿ ನಮಗೆ ಕೆಲವು ಭಕ್ತಾದಿಗಳು ದುರ್ಗಾ ಪೂಜೆಯ ಸಮಯದಲ್ಲಿ ಚಿತ್ರೀಕರಿಸಿರುವಂತಹ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು.
ಅನಂತ್ ಎನ್ನು ಯೂಟ್ಯೂಬ್ ಖಾತೆದಾದ ತನ್ನ ಖಾತೆಯಲ್ಲಿ ಅಕ್ಟೋಬರ್ 23,2023ರಂದು ಸಂತೋಷ್ ಮಿತ್ರಾ ಚೌಕದ ಪೂಜಾ ಸಮಿತಿಯಿಂದ ನಡೆದ ದುರ್ಗಾಪೂಜೆ ಸಮಯದಲ್ಲಿ ನಿರ್ಮಿಸಿರುವ ಅಯೋಧ್ಯೆಯ ರಾಮಮಂದಿರದ ಪ್ರತಿರೂಪವವೆಂಬ ಶೀರ್ಷಿಕೆಯನ್ನಿಡಿ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರು.
ಇದನ್ನೇ ಸುಳಿವಾಗಿ ತೆಗೆದುಕೊಂಡು "“Ayodhya Ram Mandir Durga Puja Pandal Santosh Mitra Square” ಎಂದು ಹುಡಿಕಿದೆವು ಕನ್ನಡಕ್ಕೆ ಅನುವಾದಿಸಿದರೆ "ಸಂತೋಶ್ ಮಿತ್ರಾ ಚೌಕ ಅಯೋಧ್ಯೆಯ ರೀತಿಯಲ್ಲಿ ನಿರ್ಮಿಸಿದ ಪೆಂಡಳ್" ಎಂದು ಹುಡುಕಿದಾಗ ನಮಗೆ ಸಾಕಷ್ಟು ಫೊಟೋಗಳು ನಮಗೆ ಕಾಣಿಸಿತು.
ವೈಯರ್.ಕಾಂ ವರದಿಯ ಪ್ರಕಾರ ಸಂತೋಷ್ ಮಿತ್ರ ಸ್ಕ್ವೇರ್ ಸರ್ಬೋಜನಿನ್ ದುರ್ಗೋತ್ಸಾಬ್ ಸಮಿತಿ ಪ್ರತಿ ವರ್ಷವೂ ವಿಭಿನ್ನ ರೀತಿಯ ಮಂಟಪಗಳನನ್ನು ನಿರ್ಮಿಸುತ್ತಾರೆ ಈ ವರ್ಷ ರಾಮಮಂದಿರದರ ರೀತಿಯಲ್ಲಿ ಈ ಮಂಟಪವನ್ನು ಸ್ಥಾಪಿಸಲಾಗಿದೆ ಎಂದು ವರದಿ ಮಾಡಿತ್ತು. ಕೇವಲ ರಾಮಮಂದಿರವಲ್ಲ ಅಯೋಧ್ಯೆಯ ದಡದಲ್ಲಿ ಧಾರ್ಮಿಕ ಕಾರ್ಯವನ್ನು ನಡೆಸುವುದರ ಜೊತೆಗೆ ಅಯೋಧ್ಯೆಯಲ್ಲಿ ಕಂಡುಬರುವ ಶ್ರೀರಾಮ ಮತ್ತು ಹನುಮಂತನ ಮೂತ್ರಿಯನ್ನೂ ಸಹ ಸ್ಥಾಪಿಸಲಾಗಿತ್ತು. ಈ ಮಂಟಪಕ್ಕೆ ಭಕ್ತರಿಂದ ಭಾರಿ ಪ್ರಶಂಸೆಯ ಜೊತೆಗೆ ನಿರ್ಮಿಸಿದ ಮಂಟಪನ್ನು ಚಿತ್ರೀಕರಿಸಿ ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಕೊಲ್ಕತ್ತಾಟೇಲ್ಸ್.ಇನ್ ವರದಿಯ ಪ್ರಕಾರ ಸಂತೋಷ್ ಮಿತ್ರ ಚೌಕವನ್ನು ಸಾಮಾನ್ಯವಾಗಿ ಲೆಬುಟಾಲಾ ಪಾರ್ಕ್ ಎಂದು ಕರೆಯುತ್ತಾರೆ. ಈ ಪ್ರದೇಶ ಕೊಲ್ಕತ್ತಾದಲ್ಲಿ ಅತ್ಯಂತ ಜನನಿಬಿಡ ಪ್ರದೇಶವೂ ಆಗಿದೆ. 2023ರಲ್ಲಿ ಶ್ರೀರಾಮ ಮಂದಿರವನ್ನು ಹೋಲುವ ಮಂಟಪವನ್ನು ನಿರ್ಮಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದು ವರದ ಮಾಡಲಾಗಿದೆ.
ಇನ್ನಷ್ಟು ಮಾಹಿತಿಯನ್ನು ಕಲೆ ಹಾಕಲು ನಾವು ಅಯೋಧ್ಯೆಯ ರಾಮಮಂದಿರ ಚಿತ್ರಗಳಿಗಾಗಿ ಹುಡುಕಾಡಿದಾಗ ನಮಗೆ ರಾಮಮಂದಿರದ ಕಾರ್ಯ ಇನ್ನು ಪ್ರಗತಿಯಲ್ಲಿದೆ ಎಂಬುದು ತಿಳಿದು ಬಂದಿತು.
ಟೈಮ್ಸ್ ಆಫ್ ಇಂಡಿಯಾ.ಕಾಂ ವರದಿಯ ಪ್ರಕಾರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಮಾಣ ಕಾರ್ಯದ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದ್ದು ಇನ್ನು ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ ಇಲ್ಲಿಯವರೆಗೆ ಶೇ 90%ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಸ್ಪಷ್ಟನೆ ನೀಡಲಾಗಿದೆ. ಶ್ರೀ ರಾಮ ಮಂದಿರದಲ್ಲಿ ರಾಮನ ಪ್ರತಿಷ್ಠಾಪನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗುವ ಸಾದ್ಯತೆಯಿದೆ ಎಂದು ವರದಿ ಮಾಡಲಾಗಿದೆ.
ನ್ಯೂಸ್18 ವರದಿಯಲ್ಲಿ ರಾಮ ಮಂದಿರ ನಿರ್ಮಾಶ ಕಾರ್ಯಕ್ಕೆ ಸಂಬಂಧಿಸಿದ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಹೀಗಾಗಿ ವೈರಲ್ ಆದ ವಿಡಿಯೋದಲ್ಲಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ಅಯೋಧ್ಯೆಯ ರಾಮ ಮಂದಿರದಲ್ಲ ಬದಲಿಗೆ ದುರ್ಗಾ ಪೂಜೆಯ ಸಮಯದಲ್ಲಿ ನಿರ್ಮಿಸಿದಂತಹ ಸೆಟ್‌ನ ದೃಶ್ಯವಿದು.