ಫ್ಯಾಕ್ಟ್ ಚೆಕ್ : ಫೇಸ್‌ಬುಕ್ ಫಾಲೋವರ್‍ಗಳಿಗೆ ಕ್ರಿಪ್ಟೊಕರೆನ್ಸಿ ದಾನ ಮಾಡುವ ಎಲಾನ್ ಮಸ್ಕ್ ಆಹ್ವಾನ ಸುಳ್ಳು
ಫೇಸ್‌ಬುಕ್ ಫಾಲೋವರ್‍ಗಳಿಗೆ ಕ್ರಿಪ್ಟೊಕರೆನ್ಸಿ ನೀಡಲಿ ಆಹ್ವಾನಿಸಿರುವ ಎಲಾನ್ ಮಸ್ಕ್ ಪೋಸ್ಟ್ ನಕಲಿ
ಟೆಸ್ಲಾ ಮೋಟರ್ಸ್‌ನ ಸಿಇಒ ಎಲಾನ್ ಮಸ್ಕ್ ಅವರ ಅಧಿಕೃತ ಫೇಸ್‌ಬುಕ್ ಪೇಜ್ ಎಂದು ಹೇಳಿಕೊಂಡು, ಆಹ್ವಾನವೊಂದನ್ನು ಹರಿಬಿಟ್ಟಿದೆ. ಇದರಲ್ಲಿ ಎಲಾನ್ ಮಸ್ಕ್ ತಮ್ಮ ಸ್ಥಾನದಿಂದ ಕೆಳಗಿಳಿಯುತ್ತಿರುವುದರಿಂದ ಫೇಸ್‌ಬುಕ್‌ನ ತಮ್ಮ ಫಾಲೋವರ್‍ಗಳಿಗೆ ಕ್ರಿಪ್ಟೊಕರೆನ್ಸಿ ವಿತರಿಸುತ್ತಿರುವುದಾಗಿ ಈ ಪೋಸ್ಟ್ ಹೇಳಿದ್ದು, ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದಾಗಿ ಹೇಳಿದೆ.
ಈ ಪೋಸ್ಟ್ ಪ್ರಕಾರ, ಮಸ್ಕ್, ಟೆಸ್ಲಾದ ಸಿಇಒ ಸ್ಥಾನವನ್ನು ತೊರೆಯುವುದಕ್ಕೆ ಮನಸ್ಸು ಮಾಡಿದ್ದು, ಅವರಿಗೆ ಟ್ವಿಟರ್ ಮೂಲಕ ಡಿಜಿಟಲ್ ಕರೆನ್ಸಿಯನ್ನು ಜನಪ್ರಿಯಗೊಳಿಸುವ ಬಗ್ಗೆ ಆಸಕ್ತಿ ಮೂಡಿಸಿದೆ ಎಂದು ಪ್ರತಿಪಾದಿಸಿದೆ. ಇದರಲ್ಲಿ, "ಟೆಸ್ಲಾ ನಿರ್ದೇಶಕ ಸ್ಥಾನವನ್ನು ತೊರೆದಿದ್ದೇನೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು" ಎಂದಿದೆ. ಪೋಸ್ಟ್ ಲಿಂಕ್ ಇಲ್ಲಿದೆ
ಫ್ಯಾಕ್ಟ್ ಚೆಕ್
ಮೊದಲನೆಯದಾಗಿ, ಎಲಾನ್ ಮಸ್ಕ್ ಸಿಇಒ ಸ್ಥಾನದಿಂದ ಕೆಳಗಿಳಿಯುತ್ತಿರುವ ಬಗ್ಗೆ ಯಾವುದೇ ಅಧಿಕೃತ ಹೇಳಿಕ ಪ್ರಕಟವಾಗಿಲ್ಲ. ಈ ಸುದ್ದಿ ನಿಜವಾಗಿದ್ದರೆ, ಅಧಿಕೃತವಾದ ಘೋಷಣೆ ಹೊರಬೀಳುತ್ತಿತ್ತು ಮತ್ತು ಮಾಧ್ಯಮಗಳಲ್ಲಿ ವರದಿಯಾಗಿರುತ್ತಿತ್ತು. ಇದರ ಜೊತೆಗೆ ಮಸ್ಕ್ ಕ್ರಿಪ್ಟೊಕರೆನ್ಸಿ ವಿತರಣೆಯ ಕುರಿತೂ ಯಾವುದೇ ಅಧಿಕೃತ ಹೇಳಿಕೆಯೂ ಹೊರಬಿದ್ದಿಲ್ಲ.
ಎರಡನೆಯದಾಗಿ, ಎಲಾನ್ ಮಸ್ಕ್ ಅವರ ಫೇಸ್‌ಬುಕ್ ಖಾತೆ ಇಲ್ಲ. 2018ರಲ್ಲೇ ಟ್ವೀಟ್‌ವೊಂದಕ್ಕೆ ಉತ್ತರಿಸುತ್ತಾ ಮಸ್ಕ್ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
ಇಂತಹ ಪೋಸ್ಟ್‌ಗಳು ವಾಸ್ತವದಲ್ಲಿ ವ್ಯಕ್ತಿಗತ ಮಾಹಿತಿಯನ್ನು ಕಲೆ ಹಾಕಿ ದುರ್ಬಳಕೆ ಮಾಡುವ ಉದ್ದೇಶ ಹೊಂದಿರುತ್ತವೆ ಎಂಬುದನ್ನು ಗಮನಿಸಬೇಕು. ಹಾಗಾಗಿ ಈ ವೈರಲ್ ಪೋಸ್ಟ್ ನಕಲಿ.