ಫ್ಯಾಕ್ಟ್‌ಚೆಕ್‌: ಒಡಿಶಾ ಸರ್ಕಾರ ಮದ್ಯ ಮಾರಾಟವನ್ನು ನಿಷೇಧಿಸುವುದಾಗಿ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ.

ಒಡಿಶಾ ಸರ್ಕಾರ ಮದ್ಯ ಮಾರಾಟವನ್ನು ನಿಷೇಧಿಸುವುದಾಗಿ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ.

Update: 2024-06-27 23:16 GMT

ಒಡಿಶಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡರು. ಸಾರ್ವಜನಿಕ ಅನುಮೋದನೆಯೊಂದಿಗೆ ಹಲವು ಪ್ರಮುಖ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಎಂ ಮಾಝಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಕ್ಷಣಗಳ ನಂತರ ಪತ್ರಕರ್ತರನ್ನು ಲೋಕಸಭೆ ಭವನಕ್ಕೆ ಆಹ್ವಾನಿಸಿ ಸಭೆಯೊಂದನನ್ನು ಏರ್ಪಾಡಿಸಿದ್ದರು. ನಾಲ್ಕು ವರ್ಷಗಳ ಹಿಂದೆ ನವೀನ್ ಪಟ್ನಾಯಕ್ ಸರ್ಕಾರವು ಪತ್ರಕರ್ತರನ್ನು ಲೋಕಸಭೆ ಭವನಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿತ್ತು.

ಪ್ರಮಾಣ ವಚನದ ದಿನ ಸಂಜೆ ಮೋಹನ್ ಮಾಝಿ ತಮ್ಮ ಮೊದಲ ಕ್ಯಾಬಿನೆಟ್ ಸಭೆ ನಡೆಸಿದರು. ಬ್ರೀಫಿಂಗ್ ಸಮಯದಲ್ಲಿ, ಕೆಲವು ವರ್ಷಗಳ ಹಿಂದೆ ಮುಚ್ಚಲಾಗಿದ್ದ ಶ್ರೀ ಮಂದಿರದ ನಾಲ್ಕು ಬಾಗಿಲುಗಳನ್ನು ಜೂನ್ 13, 2024ರ ಬೆಳಿಗ್ಗೆ ಪುನಃ ತೆರೆಯಲು ಅವರು ಆದೇಶವನನ್ನು ಹೊರಡಿಸಿದ್ದರು. ಒಡಿಶಾದ ನೂತನ ಮುಖ್ಯಮಂತ್ರಿ, ಇದು ಆರಂಭವಷ್ಟೇ, ನಾವು ಸಾರ್ವಜನಿಕ ಸೇವೆಗೆ ಮುಡಿಪಾಗಿರುತ್ತೇವೆ ಮತ್ತು ಜನರ ಅನುಕೂಲಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳುವುದನ್ನು ನಾವು ನೋಡಬಹುದು.

ಇದರ ಜೊತೆಗೆ ಟಿವಿ ನ್ಯೂಸ್ ಸ್ಕ್ರೀನ್‌ಶಾಟ್‌ನಂತೆ ಕಾಣುವ ಗ್ರಾಫಿಕ್ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“ଓଡ଼ିଶାରେ ଦେଶୀ ବିଦେଶୀ ମଦ ବନ୍ଦ, ଓଡ଼ିଶା ସରକାରର ବଡ଼ ନିଷ୍ପତ୍ତି ସ୍ୱାଧୀନତା ଦିବସ ଠାରୁ ଓଡ଼ିଶାରେ ମଦ ବନ୍ଦ | ಎಂದು ಒಡಿಯಾ ಪಠ್ಯದಲ್ಲಿ ಲೇಖನವೊಂದನ್ನು ಪ್ರಕಟಿಸಿತ್ತು.

“ಒಡಿಶಾದಲ್ಲಿ ನಾವು ಎಲ್ಲಾ ರೀತಿಯ ಮದ್ಯವನ್ನು ನಿಷೇಧಿಸುತ್ತೇವೆ. ಮುಂಬರುವ ಸ್ವಾತಂತ್ರ್ಯ ದಿನದ ನಂತರ ಒಡಿಶಾದಲ್ಲಿ ಎಲ್ಲಾ ರೀತಿಯ ಮದ್ಯವನ್ನು ನಿಷೇಧಿಸಲಾಗುವುದು ಎಂದು ಒಡಿಶಾ ಸರ್ಕಾರ ಘೋಷಿಸಿದೆ ಎಂದು ಕೆಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ವೈರಲ್‌ ಆದ ಪೋಸ್ಟ್‌ನಲ್ಲಿ ʼನ್ಯೂಸ್ 18ʼ ಮಾಧ್ಯಮದ ಲೋಗೋ ಮತ್ತು ಹೊಸ ಮುಖ್ಯಮಂತ್ರಿಯ ಫೋಟೋವನ್ನು ನಾವು ನೋಡಬಹುದು.ಇದೇ ಪೋಸ್ಟ್‌ನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ವಿವಿಧ ವೇದಿಕೆಗಳಲ್ಲಿ ಪೋಸ್ಟ್‌ನ್ನು ಹಂಚಿಕೊಳ್ಳುತ್ತಿದ್ದಾರೆ. "ಮೋಹನ್ ಸರ್ಕಾರದಿಂದ ಮತ್ತೊಂದು ಮಾಸ್ಟರ್ ಸ್ಟ್ರೋಕ್." ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ನ್ನು ಹಂಚಿಕೊಳ್ಳುತ್ತಿದ್ದಾರೆ.

Full View

Full View

ಫ್ಯಾಕ್ಟ್‌ಚೆಕ್‌

ವೈರಲ್ ಆದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ.

ಒಡಿಶಾ ರಾಜ್ಯ ಸರ್ಕಾರ ಮದ್ಯ ನಿಷೇಧದ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ನ್ಯೂಸ್ 18 ಕೂಡ ಮದ್ಯ ನಿಷೇಧದ ಬಗ್ಗೆ ಅಂತಹ ಸುದ್ದಿಯನ್ನು ಪ್ರಕಟಿಸಲಿಲ್ಲ.

ವೈರಲ್‌ ಆದ ಪೋಸ್ಟ್‌ನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ, ವೈರಲ್ ಚಿತ್ರದಲ್ಲಿ ನ್ಯೂಸ್ 18 ಒಡಿಯಾ ಲೋಗೋ ಸ್ವಲ್ಪ ಮಸುಕಾಗಿ ಕಾಣಿಸುತ್ತದೆ.

ಒಡಿಶಾ ಮುಖ್ಯಮಂತ್ರಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹುಡುಕಾಟ ನಡೆಸಿದಾಗ ಮದ್ಯ ನಿಷೇಧಕ್ಕೆ ಸಂಬಂಧಿಸಿದ ಯಾವುದೇ ಅಧಿಸೂಚನೆಗಳು ನಮಗೆ ಕಂಡುಬಂದಿಲ್ಲ.ಒಡಿಶಾ ಅಬಕಾರಿ ಇಲಾಖೆಯು ತಮ್ಮ ವೆಬ್‌ಸೈಟ್ ಅಥವಾ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಯಾವುದೇ ಅಧಿಸೂಚನೆಗಳನ್ನು ಬಿಡುಗಡೆ ಮಾಡಿಲ್ಲ.

ವೈರಲ್‌ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ನಡೆಸಿದೆವು. ಚಿತ್ರದ ಹುಡುಕಾಟದಲ್ಲಿ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಅದೇ ಗ್ರಾಫಿಕ್ ಅನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು ಆದರೆ ಆ ಪೋಸ್ಟ್‌ಗೆ ಶೀರ್ಷಿಕೆಯಾಗಿ ʼಫೇಕ್‌ʼ ಎಂಬ ಶೀರ್ಷಿಕೆಯಿರುವುದನ್ನು ನಾವು ನೋಡಬಹುದು.

“ସାମାଜିକ ଗଣମାଧ୍ୟମରେ ପ୍ରସାରିତ ହେଉଥିବା ଏହିଭଳି ଫେକ୍ ନ୍ୟୁଜ୍ ପ୍ରତି ସଚେତନ ରୁହନ୍ତୁ। ସବୁବେଳେ ସରକାରୀ ସୂତ୍ରରୁ ପ୍ରଦତ୍ତ ତଥ୍ୟ ଉପରେ ଗୁରୁତ୍ବ ଦିଅନ୍ତୁ। ଏହିଭଳି ମିଥ୍ୟାଗୁଜବ ପ୍ରସାରଣରୁ ନିବୃତ୍ତ ରୁହନ୍ତୁ। ଏହା ବେଆଇନ ଅଟେ”| ಎಂದು ಶೀರ್ಷಿಕೆಯನ್ನಿಡಿ ಪೋಸ್ಟ್‌ ಮಾಡಲಾಗಿದೆ.

ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಂತಹ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರವಾಗಿರಿ. ಅಧಿಕೃತ ಖಾತೆಗಳಿಂದ ಹೊರಬಂದಂತಹ ಮಾಹಿತಿಗಳನ್ನು ಮಾತ್ರ ನಂಬಿ.

ದಯವಿಟ್ಟು ಇಂತಹ ಸುಳ್ಳು ವದಂತಿಗಳನ್ನು ಹಬ್ಬಿಸುವುದನ್ನು ತಪ್ಪಿಸಿ. ಇದು ಕಾನೂನುಬಾಹಿರ" ಎಂದು ಬರೆದು ಪೋಸ್ಟ್‌ ಮಾಡಿರುವುದನ್ನು ನಾವು ಕಂಡುಕೊಂಡೆವು.

ನ್ಯೂಸ್ 18 ಒಡಿಯಾ ವೈರಲ್‌ ಆದ ಸುದ್ದಿಯನ್ನು ತಾವು ಪ್ರಸಾರ ಮಾಡಿಲ್ಲ ಎಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. "ಒಡಿಶಾದಲ್ಲಿ ಮದ್ಯದ ನಿಷೇಧಿಸುತ್ತಿರುವ ಬಗ್ಗೆ ಬಂದಂತಹ ಸುದ್ದಿ ಸುಳ್ಳು, ನ್ಯೂಸ್ 18 ಒಡಿಯಾ ಅಂತಹ ಯಾವುದೇ ಸುದ್ದಿಯನ್ನು ಪ್ರಕಟಿಸಿಲ್ಲ" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಅನ್ನು ಹಂಚಿಕೊಂಡಿತ್ತು.

ನ್ಯೂಸ್ 18 ಒಡಿಯಾ ವರದಿಗಾರ ದೀಪಕ್ ಕುಮಾರ್ ಸಮಲ್ ಕೂಡ ವೈರಲ್ ಪೋಸ್ಟ್ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ಈ ರೀತಿಯ ವೈರಲ್ ಚಿತ್ರಗಳ ಬಗ್ಗೆ ಜಾಗರೂಕರಾಗಿರಿ, ನ್ಯೂಸ್ 18 ಒಡಿಯಾ ಲೋಗೋವನ್ನು ಬಳಸಿಕೊಂಡು ಸುಳ್ಳು ಮಾಹಿತಿಯನ್ನು ಕೆಲವರು ಹರಡುತ್ತಿದ್ದಾರೆಂದು ಬರೆದು ಪೋಸ್ಟ್‌ ಮಾಡಿರುವುದನ್ನು ನಾವು ಕಂಡಕೊಂಡೆವು.

ಒಡಿಶಾ ಟಿವಿ ಕೂಡ "ಒಡಿಶಾದಲ್ಲಿ ಮದ್ಯ ನಿಷೇಧವಿಲ್ಲ, I & PR ಇಲಾಖೆ ನಕಲಿ ಸುದ್ದಿಗಳನ್ನು ಖಂಡಿಸುತ್ತದೆ" ಎಂಬ ಶೀರ್ಷಿಕೆಯೊಂದಿಗೆ ಲೇಖನವನ್ನು ಪ್ರಕಟಿಸಿರುವುದನ್ನು ನೋಡಬಹುದು.

ರಾಜ್ಯದಲ್ಲಿ ಮದ್ಯ ನಿಷೇಧದ ಬಗ್ಗೆ ಸುಳ್ಳು ಸುದ್ದಿ ವೈರಲ್ ಆಗುತ್ತಿದೆ ಎಂದು ಕಳಿಂಗ ಟಿವಿ ಕೂಡ ಸ್ಪಷ್ಟಪಡಿಸಿದೆ.

ಹಾಗಾಗಿ ವೈರಲ್ ಆಗುತ್ತಿರುವ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಸಾಭೀತಾಗಿದೆ. ಒಡಿಶಾ ರಾಜ್ಯ ಸರ್ಕಾರ ಮದ್ಯ ನಿಷೇಧವನ್ನು ಘೋಷಿಸಿಲ್ಲ. ಹಾಗೆ ನ್ಯೂಸ್ 18 ಒಡಿಯಾ ಕೂಡ ಈ ವಿಷಯದ ಬಗ್ಗೆ ಯಾವುದೇ ಸುದ್ದಿಯನ್ನು ಪ್ರಕಟಿಸಲಿಲ್ಲ.

Claim :  ಒಡಿಶಾ ಸರ್ಕಾರ ಮದ್ಯ ಮಾರಾಟವನ್ನು ನಿಷೇಧಿಸುವುದಾಗಿ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ.
Claimed By :  X users
Fact Check :  False
Tags:    

Similar News