ಫ್ಯಾಕ್ಟ್‌ ಚೆಕ್: ಹಮಾಸ್ ಉಗ್ರಗಾಮಿಗಳು ಪ್ಯಾರಾಚೂಟ್‌ಗಳ ಮೂಲಕ ಇಸ್ರೇಲ್‌ಗೆ ಪ್ರವೇಶಿಸುತ್ತಿದ್ದಾರೆ ಎನ್ನುವ ಸುದ್ದಿ ಸುಳ್ಳು

ಹಮಾಸ್ ಉಗ್ರಗಾಮಿಗಳು ಪ್ಯಾರಾಚೂಟ್‌ಗಳ ಮೂಲಕ ಇಸ್ರೇಲ್‌ಗೆ ಪ್ರವೇಶಿಸುತ್ತಿದ್ದಾರೆ ಎನ್ನುವ ಸುದ್ದಿ ಸುಳ್ಳು;

facebooktwitter-grey
Update: 2023-10-20 07:30 GMT
gaza israel war, israel attack on gaza, hamas, hamas militant, egypt, Gaza News, urdu fact check, telugupost,
  • whatsapp icon

ಒಂದಡೆ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಯುದ್ದ ನಡೆಯುತ್ತಿದ್ದರೆ, ಇನ್ನೋಂದಡೆ ಹಮಾಸ್ ಭಯೋತ್ಪಾದಕರು ಪ್ಯಾರಾಚೂಟ್‌ನ ಸಹಾಯದಿಂದ ಇಸ್ರೇಲ್‌ಗೆ ಪ್ರವೇಶಿಸುತ್ತಿದ್ದಾರೆಂಬ ವೀಡಿಯೋ ವೈರಲ್‌ ಆಗುತ್ತಿದೆ.

@sam ಎನ್ನುವ ಖಾತೆದಾರರು ತಮ್ಮ X ಖಾತೆಯಲ್ಲಿ ʼಪ್ಯಾಲೇಸ್ಟಿನಿಯನ್ ಸ್ವಾತಂತ್ರ್ಯ ಯೋಧರು ಇಸ್ರೇಲ್‌ಗೆ ಪ್ರವೇಶಿಸುತ್ತಿದ್ದಾರೆʼ ಎಂದು ಕ್ಯಾಪ್ಷನ್ ನೀಡಿ ಪೋಸ್ಟ್‌ನ್ನು ಶೇರ್‌ಮಾಡಿದ್ದಾರೆ.


ಫ್ಯಾಕ್ಟ್‌ ಚೆಕ್ ‌

ಹಲವು ಖಾತೆದಾದರು ವೈರಲ್ ಆಗುತ್ತಿರುವ ವೀಡಿಯೋ ಇಸ್ರೇಲ್‌ಗೆ ಸಂಬಂಧಿಸಿದ್ದಲ್ಲ ಖಚಿತಪಡಿಸಿದ್ದಾರೆ.

ಈ ವೀಡಿಯೋ ಈಜಿಪ್ಟ್ ನಲ್ಲಿ ಸೇನಾ ತರಬೇತಿಯ ಭಾಗವಾಗಿ ತೆಗೆದಂತಹ ವಿಡಿಯೋ.


ವೈರಲ್‌ ಆದ ವೀಡಿಯೋದಲ್ಲಿ ಕಾಣುವ ಕಟ್ಟಡದ ಮೇಲಿರುವ ಪದಗಳನ್ನು ಗೂಗಲ್ ಲೆನ್ಸ್ ಮೂಲಕ ಅನುವಾದಿಸಿದಾಗ, ಭವನದ ಮೇಲೆ "ಮಿಲಿಟರಿ ಕಾಲೇಜು" ಎಂದು ಬರೆದಿತ್ತು.

 


ನಾವು Google ಮ್ಯಾಪ್‌ ಮೂಲಕ ಈ ಸ್ಥಳ ಯಾವುದೆಂದು ಹುಡುಕಿದಾಗ, ನಮಗೆ ಕಂಡು ಬಂದಿದ್ದು ಈ ಸ್ಥಳ ಈಜಿಪ್ಟ್‌ನಲ್ಲಿರುವ ಮಿಲಿಟರಿ ತರಬೇತಿ ಅಕಾಡೆಮಿಗೆ ಸಂಬಂಧಿಸಿದ್ದು ಎಂದು. ನಂತರ ವೈರಲ್‌ ಆದ ವೀಡಿಯೋ ಮತ್ತು ಇಜಿಪ್ಟ್‌ನ ಮಿಲಿಟರಿ ಅಕಾಡೆಮಿಯ ಚಿತ್ರವನ್ನು ಹೋಲಿಸಿದಾಗ ಇವೆರಡು ಒಂದೇ ಚಿತ್ರ ಎಂದು ಗಮನಿಸಿದ್ದವು.

 


ಯಾವ ಸಂದರ್ಭದಲ್ಲಿ ಈ ವೀಡಿಯೋ ತೆಗೆದಿದ್ದಾರೆಂಬುದು ನಮಗೆ ಕಂಡುಹಿಡಿಯಲು ಸಾಧ್ಯವಾಗದಿದ್ದರೂ, ವೈರಲ್ ಆದ ವೀಡಿಯೊ ಇಸ್ರೇಲ್‌ಗೆ ಸಂಬಂಧಿಸಿಲ್ಲ ಎನ್ನುವುದಂತು ಖಚಿತ ಪಡಿಸಿಕೊಂಡೆವು. ಈಜಿಪ್ಟ್‌ನ ಸೇನಾ ತರಬೇತಿಯ ಭಾಗವಾಗಿ ಮಾಡಿದಂತಹ ವೀಡಿಯೋವನ್ನು, ಹಮಾಸ್ ಉಗ್ರಗಾಮಿಗಳು ಪ್ಯಾರಾಚೂಟ್‌ಗಳನ್ನು ಬಳಸಿ ಇಸ್ರೇಲ್‌ಗೆ ಪ್ರವೇಶಿಸುತ್ತಿದ್ದಾರೆಂದು ತಪ್ಪು ಮಾಹಿತಿಯನ್ನು ಕೆಲವು ಖಾತೆದಾರರು ಹಂಚಿಕೊಳ್ಳುತ್ತಿದ್ದಾರೆ.

Claim :  Hamas militants entering Israel in parachutes
Claimed By :  Twitter
Fact Check :  False
Tags:    

Similar News