ಫ್ಯಾಕ್ಟ್‌ಚೆಕ್‌: ಹಿಂದೂ ದೇವತೆಗಳಿಗೆ ನಮಸ್ಕರಿಸುತ್ತಿರುವ ವ್ಯಕ್ತಿ ನ್ಯೂಜಿಲ್ಯಾಂಡ್‌ನ ಗೃಹ ಸಚಿವರಲ್ಲ.

ಹಿಂದೂ ದೇವತೆಗಳಿಗೆ ನಮಸ್ಕರಿಸುತ್ತಿರುವ ವ್ಯಕ್ತಿ ನ್ಯೂಜಿಲ್ಯಾಂಡ್‌ನ ಗೃಹ ಸಚಿವರಲ್ಲ.

Update: 2024-02-04 05:00 GMT

Brent Goble, homeminister, newzealand, sanatan dharma 

ನ್ಯೂಜಿಲಾಂಡ್‌ನ ಗೃಹ ಮಂತ್ರಿ ಹಿಂದೂ ಧರ್ಮವನ್ನು ಸ್ವೀಕರಿಸುತ್ತಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೈರಲ್‌ ಆದ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಹಿಂದೂ ದೇವಾನು ದೇವತೆಗಳಿಗೆ ನಮಸ್ಕರಿಸುತ್ತಿರುವುದನ್ನು ನೋಡಬಹುದು. ಅಷ್ಟೇ ಅಲ್ಲ, ವಿಡಿಯೋದಲ್ಲಿ ಆಲದಮರದ ಎಲೆಯ ಮೇಲೆ ಸ್ವಸ್ತಿಕ್‌ ಬರೆದಿರುವ ಎಲೆಗಳ ಜೊತೆಗೆ ದೀಪಗಳಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋವಿಗೆ "ಯುಗ್‌ ರಾಮ್‌ ರಾಜ್‌ ಕಾ ಆ ಗಯಾ" ಎಂಬ ಹಾಡನ್ನು ಸೇರಿಸಿ ವಿಡಿಯೋ ಮಾಡಲಾಗಿದೆ. ಈ ಹಾಡನ್ನು ಅಯೋಧ್ಯ ರಾಮಮಂದಿರದ ಪ್ರಾರಂಭೋತ್ಸವದ ಸಲುವಾಗಿ ರಚಿಸಲಾಗಿತ್ತು.

Full View


ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿವಿಡಿಯೋದಲ್ಲಿ ಕಾಣಿಸುವ ವ್ಯಕ್ತಿ ನಟಿ ಆಶಿಕಾ ಗೊರಾಡಿಯಾ ಪತಿ, ಆತ ಯೋಗ ಶಿಕ್ಷಕ.

ನಾವು ವಿಡಿಯೋವನ್ನು ಗಮನಿಸಿದಾಗ ನಮಗೆ ಇನ್‌ಸ್ಟಾಗ್ರಾಮ್‌ನಲ್ಲಿರುವ ವಿಡಿಯೋವಿನಲ್ಲಿ ವಾಟರ್‌ಮಾರ್ಕ್‌ ಜೊತೆಗೆ @ಏಬ್ರೆಂಟ್‌ಗ್ಲೋಬ್‌ ಎಂದು ಬರೆಯಲಾಗಿತ್ತು. ಈ ಕುರಿತು ಮಾಹಿತಿಯನ್ನು ಕಲೆಹಾಕಲು ನಾವು ಮತ್ತಷ್ಟು ಹುಡುಕಾಟ ನಡೆಸಿದೆವು. @ಏಬ್ರೆಂಟ್‌ಗ್ಲೋಬ್‌ ಎಂಬ ಹೆಸರಿನಲ್ಲಿರುವ ಖಾತೆ ಯಾರದು ಎಂದು ನಾವು ಕಂಡು ಹಿಡಿದೆವು. @ಏಬ್ರೆಂಟ್‌ಗ್ಲೋಬ್‌ ಖಾತೆಯಲ್ಲಿ ಆತನ ಬಯೋವಿನಲ್ಲಿ ಆತನ ಹೆಸರು ಬ್ರೆಂಟ್‌ ಗೊಬುಲ್‌, ಯೋಗಾ ಶಿಕ್ಷಕ ಎಂದು ಬರೆಯಲಾಗಿತ್ತು.

ವೈರಲ್‌ ಆದ ವಿಡಿಯೋ ನವಂಬರ್‌ 2,2023ರಂದು ಖಾತೆಯಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು. ತನ್ನ ಮಗ ಅಲೆಕ್ಸ್‌ ನಾಮಕರಣದ ಅಂಗವಾಗಿ ಮಾಡಿರುವಂತಹ ವಿಡಿಯೋವಿದು. ವಿಡಿಯೋವಿನ ಶೀರ್ಷಿಕೆಯಲ್ಲಿ ಆದ ಹಿಂದೂ ಧರ್ಮದ ಬಗ್ಗೆ ಅತನಿಗಿರುವ ಗೌರವ ಮತ್ತು ಭಕ್ತಿಯನ್ನು ತೋರುತ್ತದೆ. ಆತನಿಗೆ ಹಿಂದೂ ಧರ್ಮದಲ್ಲಿ ಮಾಡುವ ಪೂಜಾ ವಿಧಾನಗಳಲ್ಲಿ ಭಾರವಹಿಸಲು ಇಷ್ಟ ಎಂದು ಬರೆದಿದ್ದರು. ತನ್ನ ಮಗ ದೊಡ್ಡವನಾಗಲಿ, ಕಷ್ಟಗಳನ್ನೆಲ್ಲಾ ಮೆಟ್ಟಿ ನಿಲ್ಲಲಿ, ಎಲ್ಲರಿಗೂ ಪ್ರೀತಿ ಪಾತ್ರರಾಗಿರಲಿ ಎಂದು ಬರೆದು ಪೋಸ್ಟ್‌ ಮಾಡಿದ್ದರು.

Full View

ವೈರಲ್‌ ಆದ ವಿಡಿಯೋದಲ್ಲಿ ಕಾಣಿಸುವ ವ್ಯಕ್ತಿ ನಟಿ ಆಶಿಕಾ ಗೋರಾಡಿಯಾ ಪತಿ. ನವಂಬರ್‌ 2023ರಲ್ಲಿ ಈ ದಂಪತಿಗಳಿಗೆ ಗಂಡು ಮಗುವಾಗಿತ್ತು. ಬ್ರೆಂಟ್‌ ಗೊಬುಲ್‌ ಅಮೇರಿಕಾದಿಂದ ಬಂದು ಭಾರತದಲ್ಲಿ ನೆಲೆಸಿರುವ ವ್ಯಕ್ತಿ ಈಗ ಯೋಗಾ ಶಿಕ್ಷಕನಾಗಿ ಯೋಗ ತರಬೇತಿ ಕೊಡುತ್ತಿರುತ್ತಾರೆ ಎಂದು ಆತನ ಇನ್‌ಸ್ಟಾಗ್ರಾಮ್‌ ಬಯೋವಿನಲ್ಲಿ ನೋಡಬಹುದು.

ನ್ಯೂಜಿಲ್ಯಾಂಡ್‌ನ ಸರ್ಕಾರದ ಅಧಿಕೃತ ವೆಬ್‌ಸೈಟ್‌ನ ಪ್ರಕಾರ ನ್ಯೂಜಿಲ್ಯಾಂಡ್‌ನ ಗೃಹ ಸಚಿವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿರಲಿಲ್ಲ. ಜನವರಿ 26,2024ರಲ್ಲಿ ಪ್ರಕಟಿಸಿಲಾಗಿರುವ ಸಚಿವಾಲಯಗಳ ಪಟ್ಟಿಯ ಪ್ರಕಾರ ಬ್ರೆಂಟ್‌ ಗೋಬಲ್‌ ಹೆಸರಿನಲ್ಲಿ ಯಾವುದೇ ವಿಷಯಗಳು ಸಚಿವಾಲಯದಲ್ಲಿ ಉಲ್ಲೇಖವಾಗಿಲ್ಲ.

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋದಲ್ಲಿ ಕಾಣಿಸುವ ವ್ಯಕ್ತಿ ನ್ಯೂಜಿಲ್ಯಾಂಡ್‌ ಗೃಹ ಸಚಿವರಲ್ಲ. ವಿಡಿಯೋದಲ್ಲಿ ಕಾಣಿಸುವ ವ್ಯಕ್ತಿ ನಟಿ ಆಶಿಕಾ ಗೊರಾಡಿಯಾ ಪತಿ, ಆತ ಯೋಗ ಶಿಕ್ಷಕ.

Claim :  Home Minister of New Zealand adopts Sanatan Dharma
Claimed By :  Social Media Users
Fact Check :  False
Tags:    

Similar News